ಆಸ್ಪತ್ರೆಗೆ ದಾಖಲಾದ ರೀಲ್ಸ್‌ ರೇಷ್ಮಾ; ಸಣ್ಣಗಾಗೋಕೆ ಅನ್ನ ಬಿಟ್ಟಿದ್ದೇ ಕಾರಣವಾಯ್ತಾ?

20 ದಿನಗಳಿಂದ ಬಿಟ್ಟು ಬಿಟ್ಟು ಬಂತ ಬಳಿ ಜ್ವರ. ಆಸ್ಪತ್ರೆಗೆ ದಾಖಲಾದ ಗಿಚ್ಚಿ ಗಿಲಿ ಗಿಲಿ ರೀಲ್ಸ್‌ ರೇಶ್ಮಾ....

Colors Kannada Gicchi gili gili reels Reshma hospitalized due to fever vcs

ಇನ್‌ಸ್ಟಾಗ್ರಾಂನಲ್ಲಿ 'ಹಾಯ್‌ ಫ್ರೆಂಡ್ಸ್‌.... ಏನ್ ಗೊತ್ತಾ ಇವತ್ತು ಅಂತ' ವಿಡಿಯೋ ಮಾಡಿ ಟ್ರೆಂಡ್ ಆದ ರೇಶ್ಮಾ ಯಾಸಿನ್ ಈಗ ಗಿಚ್ಚಿ ಗಿಲಿ ಗಿಲಿ ಸೀಸನ್ 3ರ ಸ್ಪರ್ಧಿಯಾಗಿ ಇಡೀ ಕರ್ನಾಟಕಕ್ಕೆ ಫೇಮಸ್ ಆಗಿದ್ದಾರೆ. ದಿನದಿಂದ ದಿನಕ್ಕೆ ರೇಶ್ಮಾ ಅದ್ಭುತವಾಗಿ ಅಭಿನಯಿಸುತ್ತಿದ್ದಾರೆ ಎಂದು ತೀರ್ಪುಗಾರರಾದ ನಟಿ ಶ್ರುತಿ, ನಟ ಕೋಮಲ್ ಮತ್ತು ಸಾಧು ಕೋಕಿಲಾರವರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಕಳೆದ ಎಪಿಸೋಡ್‌ನಲ್ಲಿ ರೇಶ್ಮಾ ಕಾಣಿಸಲಿಲ್ಲ ಎಂದು ಹಲವರು ಮೆಸೇಜ್ ಮಾಡಿದ ಕಾರಣ ವಿಡಿಯೋ ಮೂಲಕ ತಮ್ಮ ಆರೋಗ್ಯದ ಬಗ್ಗೆ ಹಂಚಿಕೊಂಡಿದ್ದಾರೆ.

ಕಳೆದ 20 ದಿನಗಳಿಂದ ವಿಪರೀತ ಚಳಿ ಜ್ವರ ಕಾಣಿಸಿಕೊಳ್ಳುತ್ತಿದ್ದು ಆಗಾಗ ಡಾಕ್ಟರ್ ಬಳಿ ಹೋಗಿ ಇಂಜೆಕ್ಷನ್ ತೆಗೆದುಕೊಂಡು ಬರುತ್ತಿದ್ದ ರೇಶ್ಮಾ ಆರೋಗ್ಯದ ಬಗ್ಗೆ ತೀರಾ ನಿರ್ಲಕ್ಷ್ಯೆ ಮಾಡುತ್ತಿದ್ದರಂತೆ. ಈ ಸಮಯದಲ್ಲಿ ಹೊಟ್ಟೆ ನೋವು ಕೂಡ ಕಾಣಿಸಿಕೊಂಡಿದೆ, ಒಂದು ದಿನ ತಡೆಯಲಾಗದೆ ಪತಿಯನ್ನು ಕರೆದುಕೊಂಡು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಹೋಗಿ ದಾಖಲಾಗಿದ್ದಾರೆ. ಅಲ್ಲಿ ಮೊದಲು ಜ್ವರ ಚೆಕ್ ಮಾಡಿ ಆನಂತರ ಹೊಟ್ಟೆ ಸ್ಕ್ಯಾನ್ ಮಾಡಿದ್ದಾರಂತೆ. ಮೂತ್ರನಾಳದ ಸೋಂಕು ಕಾಣಿಸಿಕೊಂಡಿದೆ ಎಂದು ವೈದ್ಯರು ಹೇಳಿದ್ದಾರೆ.

22ನೇ ವಯಸ್ಸಿಗೆ ಮದ್ವೆ ಮಾಡಿಬಿಟ್ಟರು, ಸುಮಾರು ಒಡವೆ ಕಳೆದುಬಿಟ್ಟಿದ್ದೀನಿ: ನಟ ಕೋಮಲ್

'ನಾನು ಸಣ್ಣ ಆಗಬೇಕು ಎಂದು ವಿಪರೀತ ಡಯಟ್ ಮಾಡುತ್ತಿದ್ದೆ. ಅನ್ನ ತಿನ್ನುವುದನ್ನು ಬಿಟ್ಟುಬಿಟ್ಟಿದ್ದೆ. ಸಣ್ಣ ಆಗಿದ್ದೀನಿ ಅನ್ನೋ ಖುಷಿ ಇತ್ತು ಆದರೆ ನನ್ನ ದೇಹದ ಒಳಗೆ ಈ ರೀತಿ ಆಗುತ್ತಿದೆ ಎಂದು ಗೊತ್ತಿರಲಿಲ್ಲ. ಇದರಿಂದ ತುಂಬಾ ಬೇಸರ ಆಗಿದೆ. ಡಯಟ್ ಬಗ್ಗೆ ತಿಳಿದುಕೊಂಡವರು ಅಥವಾ ಮತ್ತೊಬ್ಬರಿಂದ ಸಲಹೆ ಪಡೆದು ಮಾತ್ರ ಡಯಟ್ ಮಾಡಬೇಕು ನಮ್ಮಂತವರು ಡಯಟ್ ಮಾಡಬಾರದು. ಈ ರೀತಿ ಆಸ್ಪತ್ರೆಗೆ ಬಂದು ಸೇರಿಕೊಳ್ಳುವಂತೆ ಆಯ್ತು. ಮೂರ್ನಾಲ್ಕು ದಿನ ಆಸ್ಪತ್ರೆಯಲ್ಲಿ ಚೆಕಿತ್ಸೆ ಪಡೆದು ಆಮೇಲೆ ಮನೆಗೆ ಹೋಗುತ್ತೀನಿ' ಎಂದು ವಿಡಿಯೋದಲ್ಲಿ ರೇಶ್ಮಾ ಮಾತನಾಡಿದ್ದಾರೆ. 

 

Latest Videos
Follow Us:
Download App:
  • android
  • ios