ಸಾಮಾಜಿಕ ಜಾಲತಾಣದ ಇನ್‌ಫ್ಲುಯೆನ್ಸರ್ ರೇಷ್ಮಾ ಆಂಟಿ, ಪ್ರೀತಿಸಿ ಮದುವೆಯಾದ ಕಾರಣಕ್ಕೆ ತವರಿನಿಂದ ದೂರವಾಗಿದ್ದರು. ಈ ಸಂತಸದ ವಿಷಯವನ್ನು ವಿಡಿಯೋ ಮೂಲಕ ಹಂಚಿಕೊಂಡು ಭಾವುಕರಾಗಿದ್ದಾರೆ. ತಾಯಿಯನ್ನು ಭೇಟಿಯಾಗಲು ಹಾಸನಕ್ಕೆ ತೆರಳುತ್ತಿರುವುದಾಗಿ ತಿಳಿಸಿದ್ದಾರೆ.
ಬೆಂಗಳೂರು: ಹಾಯ್ ಫ್ರೆಂಡ್ಸ್ ಅಂತ ಸಾಮಾಜಿಕ ಜಾಲತಾಣದ ಮೂಲಕ ಮನರಂಜನೆ ನೀಡುತ್ತಿದ್ದ ರೇಷ್ಮಾ ಆಂಟಿ ಇಂದು ಸಂತೋಷದ ಕಣ್ಣೀರು ಹಾಕಿದ್ದಾರೆ. ಈ ಬಗ್ಗೆ ವಿಡಿಯೋ ಪೋಸ್ಟ್ ಮಾಡಿಕೊಂಡಿರುವ ರೇಷ್ಮಾ, ಸಂತೋಷಕ್ಕೆ ಕಾರಣ ಏನು ಎಂಬುದನ್ನು ತಮ್ಮ ಅಭಿಮಾನಿಗಳೊಂದಿಗೆ ಹೇಳಿಕೊಂಡಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರು ಸಹ ರೇಷ್ಮಾ ಅವರಿಗೆ ಶುಭ ಹಾರೈಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ರೇಷ್ಮಾ ಆಂಟಿ ಅಂತಾನೇ ಜನಪ್ರಿಯತೆ ಹೊಂದಿರುವ ಇನ್‌ಫ್ಲುಯೆನ್ಸರ್ ಆಗಿದ್ದಾರೆ.
ಬೆಂಗಳೂರಿನಲ್ಲಿ ವಾಸವಾಗಿರುವ ರೇಷ್ಮಾ, ಖಾಸಗಿ ವಾಹಿನಿಯ ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದರು. ತದನಂತರ ಮತ್ತೋರ್ವ ಇನ್‌ಫ್ಲುಯೆನ್ಸರ್ ನವೀನ್ ಎಂಬವರೊಂದಿಗೆ ರೀಲ್ಸ್ ಮಾಡಿಕೊಂಡಿರುವ ರೇಷ್ಮಾ ಅತಿಹೆಚ್ಚು ಟ್ರೋಲ್ ಆಗುತ್ತಿರುತ್ತಾರೆ. ಟ್ರೋಲ್ ಮಾಡೋರೇನು ನಮಗೆ ಊಟ ತಂದು ಹಾಕಲ್ಲ ಎಂದು ನೇರ ಉತ್ತರ ನೀಡುತ್ತಲೇ ತಮ್ಮ ಕೆಲಸಗಳಲ್ಲಿ ರೇಷ್ಮಾ ತೊಡಗಿಕೊಂಡಿದ್ದಾರೆ.
ಕಣ್ಣೀರು ಹಾಕಿದ್ಯಾಕೆ ರೇಷ್ಮಾ ಆಂಟಿ?
ರೇಷ್ಮಾ ಪ್ರೀತಿಸಿ ಮದುವೆಯಾಗಿದ್ದರಿಂದ ತವರಿನ ಸಂಬಂಧ ಕಳೆದುಕೊಂಡಿದ್ದಾರೆ. ಇಷ್ಟು ಮಾತ್ರವಲ್ಲ ರೀಲ್ಸ್ ಮಾಡೋದು ತನ್ನ ಕುಟುಂಬದ ಬಹುತೇಕರಿಗೆ ಇಷ್ಟವಿಲ್ಲ ಎಂಬುದನ್ನು ಸಹ ರೇಷ್ಮಾ ಹಲವು ಬಾರಿ ಹೇಳಿಕೊಂಡಿದ್ದಾರೆ. ತನ್ನೊಂದಿಗೆ ತಾಯಿ-ತಂದೆ ಮಾತನಾಡಲ್ಲ ಎಂದು ಸಂದರ್ಶನವೊಂದರಲ್ಲಿ ರೇಷ್ಮಾ ದುಃಖದಿಂದ ಕಣ್ಣೀರು ಹಾಕಿದ್ದರು. ಆದ್ರೆ ಇದೀಗ ತಾಯಿ ಕರೆ ಮಾಡಿರುವ ವಿಷಯ ತಿಳಿಸಿರುವ ರೇಷ್ಮಾ ಸಂತೋಷದಿಂದ ಭಾವುಕರಾಗಿದ್ದಾರೆ.
ಅಮ್ಮಾ ಫೋನ್ ಮಾಡಿದ್ರು, ಹಾಸನಕ್ಕೆ ಹೋಗ್ತಿದ್ದೀನಿ
ಇಂದು ಬೆಳಗ್ಗೆ ಅಳುತ್ತಲೇ ವಿಡಿಯೋ ಮಾಡಿರುವ ರೇಷ್ಮಾ ಆಂಟಿ, ಇಂದು ಬೆಳ್ಳಂಬೆಳಗ್ಗೆ ನಮ್ಮ ತಾಯಿ ಕಾಲ್ ಮಾಡಿದರು. ಈ ವಿಷಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಖುಷಿಯಾಗುತ್ತಿದೆ. ಯಾರಿಗೆ ಆಗಲಿ ತಾಯಿ ಜೀವನದಲ್ಲಿ ಮುಖ್ಯ. ಸಂತೋಷ ಅಥವಾ ದುಃಖ ಇರಲಿ ಮೊದಲಿಗೆ ತಾಯಿ ಜೊತೆ ಹಂಚಿಕೊಳ್ಳುತ್ತಾರೆ. ಮದುವೆಯಾದ ಬಳಿಕವೂ ಈ ಬಾಂಧವ್ಯ ಹೆಚ್ಚಾಗುತ್ತದೆ. ಆದ್ರೆ ಮದುವೆಯಾದ್ಮೇಲೆ ನಾನು ತಾಯಿಯಿಂದ ದೂರವಾಗಿದ್ದೆ. ಈಗ ಅಮ್ಮ ಫೋನ್ ಮಾಡಿದ್ದು, ಹಾಸನಕ್ಕೆ ಹೋಗುತ್ತಿದ್ದೇನೆ ಎಂದು ರೇಷ್ಮಾ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಆನ್‌ಲೈನ್‌ನಲ್ಲಿ ಫುಡ್ ಆರ್ಡರ್ ಮಾಡಿದ ಭಿಕ್ಷುಕ: ಡೆಲಿವರಿ ಬಾಯ್‌ಗೆ ಕೊಟ್ಟ ಟಿಪ್ಸ್ ಎಷ್ಟು? ವಿಡಿಯೋ ವೈರಲ್
ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ರೇಷ್ಮಾ, ಇನ್‌ಸ್ಟಾಗ್ರಾಂನಲ್ಲಿ 2 ಲಕ್ಷದವರೆಗೆ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ತಮ್ಮ ದಿನನಿತ್ಯದ ಜೀವನವನ್ನು ವ್ಲಾಗ್ ಮಾಡಿಕೊಳ್ಳುತ್ತಿದ್ದ ರೇಷ್ಮಾ ಅವರನ್ನು ಇಡೀ ಕರುನಾಡು ಗುರುತಿಸುತ್ತದೆ. ನವೀನ್ ಜೊತೆಗಿನ ರೇಷ್ಮಾ ಅವರ ರೀಲ್ಸ್‌ಗಳು ಲಕ್ಷಕ್ಕೂ ಅಧಿಕ ವ್ಯೂವ್ ಪಡೆದುಕೊಳ್ಳುತ್ತವೆ.
ಇದನ್ನೂ ಓದಿ: 2010ರಲ್ಲಿ ಆರ್ಡರ್ ಮಾಡಿದ ನೋಕಿಯಾ ಫೋನ್ 16 ವರ್ಷ ಬಳಿಕ ಡೆಲಿವರಿ,ಕಂಗಾಲಾದ ಗ್ರಾಹಕ


