- Home
- Entertainment
- TV Talk
- Bigg Bossನಲ್ಲಿ ರೋಚಕ ಟ್ವಿಸ್ಟ್: ಸೂಟ್ಕೇಸ್ ಜೊತೆ ರವಿಚಂದ್ರನ್ ಎಂಟ್ರಿ- 15 ಲಕ್ಷ ಬೇಡ ಎಂದ ಸ್ಪರ್ಧಿ!
Bigg Bossನಲ್ಲಿ ರೋಚಕ ಟ್ವಿಸ್ಟ್: ಸೂಟ್ಕೇಸ್ ಜೊತೆ ರವಿಚಂದ್ರನ್ ಎಂಟ್ರಿ- 15 ಲಕ್ಷ ಬೇಡ ಎಂದ ಸ್ಪರ್ಧಿ!
ಬಿಗ್ ಬಾಸ್ ಫಿನಾಲೆಗೆ ಕ್ರೇಜಿ ಸ್ಟಾರ್ ರವಿಚಂದ್ರನ್ ಎಂಟ್ರಿ ಕೊಟ್ಟು, 15 ಲಕ್ಷ ರೂಪಾಯಿಗಳ ಆಫರ್ ನೀಡಿದ್ದಾರೆ. ಈ ಆಫರ್ ಅನ್ನು ಸ್ಪರ್ಧಿಗಳು ತಿರಸ್ಕರಿಸಿದ್ದು, ರವಿಚಂದ್ರನ್ ಅವರು ಕಾವ್ಯಾ ಶೈವ ಅವರನ್ನು ಮನೆಯಿಂದ ಹೊರಗೆ ಕರೆತಂದಿದ್ದಾರೆ.

ರವಿಚಂದ್ರನ್ ಎಂಟ್ರಿ
ಬಿಗ್ಬಾಸ್ ವಿಜೇತರು ಯಾರು ಎಂದು ಘೋಷಿಸಲು ಇನ್ನು ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ, ಕುತೂಹಲ ಎನ್ನುವಂತೆ ಕ್ರೇಜಿ ಸ್ಟಾರ್ ರವಿಚಂದ್ರನ್ ಮನೆಯೊಳಕ್ಕೆ ಎಂಟ್ರಿ ಕೊಟ್ಟಿದ್ದಾರೆ.
15 ಲಕ್ಷದ ಆಫರ್
ಇವರು ಕೈಯಲ್ಲಿ ಸೂಟ್ಕೇಸ್ ಹಿಡಿದು ಹೋಗಿದ್ದಾರೆ. 5 ಲಕ್ಷದಿಂದ 15 ಲಕ್ಷಗಳ ಆಫರ್ ಸ್ಪರ್ಧಿಗಳಿಗೆ ಒಡ್ಡಿದ್ದರೂ ಅದನ್ನು ಸ್ಪರ್ಧಿಗಳು ಬೇಡ ಎಂದಿದ್ದಾರೆ. ಇಲ್ಲೇ ಇರೋದು ಸಕತ್ ಇಂಟರೆಸ್ಟಿಂಗ್ ವಿಷ್ಯ.
ಕಾವ್ಯಾ ಹೊರಕ್ಕೆ
ಅದೇನೆಂದರೆ, ಬಿಗ್ಬಾಸ್ ಫಿನಾಲೆಯಿಂದ ಇದಾಗಲೇ ಗಿಲ್ಲಿ ನಟ ಅವರ ಕಾವು ಅರ್ಥಾತ್ ಕಾವ್ಯಾ ಶೈವ ಹೊರಕ್ಕೆ ಬಂದಿದ್ದಾರೆ. ನಟ ರವಿಚಂದ್ರನ್ ಅವರು ಕಾವ್ಯಾ ಅವರನ್ನು ಹೊರಕ್ಕೆ ಕರೆದುಕೊಂಡು ಬಂದಿದ್ದು, ಮತ್ತೆ ಯಾರು ಹೊರಕ್ಕೆ ಹೋಗಲು ಇಷ್ಟಪಡುತ್ತಾರೆಯೋ ಅವರಿಗೆ ಐದು ಲಕ್ಷದ ಆಫರ್ ನೀಡಿದರು. ಕೊನೆಗೆ ಅದನ್ನು 15 ಲಕ್ಷಕ್ಕೆ ಏರಿಸಲಾಯಿತು.
ಗೆಲುವು ಯಾರಿಗೆ?
ಆದರೆ, ಯಾರೂ ಕೂಡ ರವಿಚಂದ್ರನ್ ಅವರ ಆಫರ್ ಒಪ್ಪಲಿಲ್ಲ. ಈ ಹಂತದವರೆಗೆ ಬಂದು, ಅದನ್ನು ಸ್ಪರ್ಧಿಗಳು ಒಪ್ಪುವುದಾದರೂ ಹೇಗೆ? ಅಷ್ಟಕ್ಕೂ ಇದೀಗ ಕಣದಲ್ಲಿ ಗೌಡ, ರಕ್ಷಿತಾ ಶೆಟ್ಟಿ, ಗಿಲ್ಲಿ ನಟ ಇದ್ದಾರೆ. ಇವರಲ್ಲಿ ಗೆಲುವು ಯಾರಿಗೆ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.
37 ಕೋಟಿ ವೋಟ್
ಇದಾಗಲೇ ಬಿಗ್ಬಾಸ್ ಮನೆಯ ಹೊರಗೆ ಅಭಿಮಾನಿಗಳ ಗಲಾಟೆ ಜೋರಾಗಿ ನಡೆಯುತ್ತಿದೆ. ವಿನ್ನರ್ಗೆ 37ಕೋಟಿ ವೋಟ್ ನಿನ್ನೆಯೇ ಬಂದಿರುವ ಬಗ್ಗೆ ಸುದೀಪ್ ಘೋಷಿಸಿದ್ದರು. ಇನ್ನು ಕೆಲವೇ ಕ್ಷಣಗಳಲ್ಲಿ ಫಿನಾಲೆ ನಡೆಯಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

