- Home
- Entertainment
- TV Talk
- Bigg Boss ಬಳಿಕ ಮೊದಲ ವ್ಲಾಗ್ನಲ್ಲೇ ಫ್ಯಾನ್ಸ್ಗೆ ಭರ್ಜರಿ ಆಫರ್ ಕೊಟ್ಟ ರಕ್ಷಿತಾ ಶೆಟ್ಟಿ! ಪ್ರಶ್ನೆಗಳ ಸುರಿಮಳೆ
Bigg Boss ಬಳಿಕ ಮೊದಲ ವ್ಲಾಗ್ನಲ್ಲೇ ಫ್ಯಾನ್ಸ್ಗೆ ಭರ್ಜರಿ ಆಫರ್ ಕೊಟ್ಟ ರಕ್ಷಿತಾ ಶೆಟ್ಟಿ! ಪ್ರಶ್ನೆಗಳ ಸುರಿಮಳೆ
ಬಿಗ್ಬಾಸ್ 12ರ ರನ್ನರ್ ಅಪ್ ರಕ್ಷಿತಾ ಶೆಟ್ಟಿ, ಶೋ ನಂತರ ಮತ್ತೆ ತಮ್ಮ ವ್ಲಾಗಿಂಗ್ ಆರಂಭಿಸಿದ್ದಾರೆ. ತಮ್ಮ ಮೊದಲ ವ್ಲಾಗ್ ಅನ್ನು ಅಭಿಮಾನಿಗಳಿಗೆ ಅರ್ಪಿಸಿದ್ದು, ಬಿಗ್ಬಾಸ್ ಕುರಿತ ಯಾವುದೇ ಪ್ರಶ್ನೆಗಳನ್ನು ಕೇಳುವಂತೆ ಆಹ್ವಾನಿಸಿದ್ದಾರೆ. ಅಭಿಮಾನಿಗಳಿಂದ ಈಗಾಗಲೇ ಪ್ರಶ್ನೆ ಹರಿದುಬಂದಿದೆ.

ಬಿಗ್ಬಾಸ್ನಿಂದ ಖ್ಯಾತಿ
ಬಿಗ್ಬಾಸ್ 12 (Bigg Boss 12) ರಲ್ಲಿ ರನ್ನರ್ ಅಪ್ ಆಗುವ ಮೂಲಕ, ಭಾರಿ ಖ್ಯಾತಿ ಗಳಿಸಿರುವ ಮಂಗಳೂರು ಪುಟ್ಟಿ ರಕ್ಷಿತಾ ಶೆಟ್ಟಿ ಅವರಿಗೆ ಈಗ ಎಲ್ಲಿಲ್ಲದ ಡಿಮಾಂಡ್. ಇದಾಗಲೇ ಬಿಗ್ಬಾಸ್ ಖ್ಯಾತಿಯಿಂದಾಗಿ ಹಲವಾರು ಕಡೆಗಳ ಕಾರ್ಯಕ್ರಮಗಳು, ಪ್ರಮೋಷನ್ಗಳಲ್ಲಿ ಈಕೆಯದ್ದೇ ಹವಾ.
ನಟಿಯಾಗೋ ಆಸೆ ಇಲ್ಲ
ಸಿನಿಮಾ, ಕಿರುತೆರೆಯಲ್ಲಿ ನಟಿಯಾಗುವ ಹಂಬಲವಂತೂ ಇಲ್ಲವೇ ಇಲ್ಲ, ನಾನು ನನ್ನ ಬುಡವಾಗಿರುವ ವ್ಲಾಗ್ ಮೂಲಕವೇ ಮುಂದುವರೆಯುತ್ತೇನೆ, ಉಳಿದದ್ದು ಯಾವುದೂ ನನಗೆ ಇಂಟರೆಸ್ಟ್ ಇಲ್ಲ ಎನ್ನುವ ಮೂಲಕ ರಕ್ಷಿತಾ ಶೆಟ್ಟಿ ತಮ್ಮ ಭವಿಷ್ಯದ ಯೋಜನೆಗಳ ಕುರಿತೂ ಹೇಳಿಯಾಗಿದೆ.
ಫ್ರೀ ಆದ್ರಾ ರಕ್ಷಿತಾ?
ಬಿಗ್ಬಾಸ್ನಲ್ಲಿ ರನ್ನರ್ ಅಪ್ ಆದ ಬಳಿಕ, ಹಲವಾರು ಫಂಕ್ಷನ್, ಸಂದರ್ಶನಗಳು ಎಂದೆಲ್ಲಾ ಬಿಜಿಯಾಗಿದ್ದ ರಕ್ಷಿತಾ ಶೆಟ್ಟಿ (Bigg Boss Rakshita Shetty) ಇದೀಗ ಸ್ವಲ್ಪ ಫ್ರೀ ಆದಂತಿದೆ. ಅದಕ್ಕಾಗಿಯೇ ವ್ಲಾಗ್ನಲ್ಲಿ ಕೆಲಸ ಮುಂದುವರೆಸುತ್ತಿದ್ದಾರೆ.
ಅಭಿಮಾನಿಗಳಿಗಾಗಿ
ಬಿಗ್ಬಾಸ್ ಮುಗಿಸಿದ ಬಳಿಕ ಮೊದಲ ವ್ಲಾಗ್ ಮಾಡುತ್ತಿದ್ದೇನೆ ಎಂದು ಹೇಳಿದ ರಕ್ಷಿತಾ, ಈ ವ್ಲಾಗ್ ಫುಲ್ ಅಭಿಮಾನಿಗಳಿಗೆ ಇರುವುದಾಗಿ ಹೇಳಿದ್ದಾರೆ.
ಪ್ರಶ್ನೆ ಕೇಳಿ
ನೀವು ಬಿಗ್ಬಾಸ್ ಬಗ್ಗೆ ಏನೇ ಪ್ರಶ್ನೆ ಕೇಳಿ, ನಾನು ಅವುಗಳಿಗೆ ಉತ್ತರಿಸಲು ಟ್ರೈ ಮಾಡುತ್ತೇನೆ. ನಿಮ್ಮೆಲ್ಲಾ ಪ್ರಶ್ನೆಗಳನ್ನು ಬರೆಯಿರಿ. ಬಿಗ್ಬಾಸ್ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ನಾನು ಉತ್ತರ ಕೊಡುತ್ತೇನೆ. ಥ್ಯಾಂಕ್ಯೂ ಸೋ ಮಚ್ ಎಂದಿದ್ದಾರೆ.
ಪ್ರಶ್ನೆಗಳ ಸುರಿಮಳೆ
ಇದಾಗಲೇ ಅಭಿಮಾನಿಗಳಿಂದ ಪ್ರಶ್ನೆಗಳ ಸುರಿಮಳೆಯೇ ಹರಿದು ಬಂದಿದೆ. ನಿಮಗೆ ಬಿಗ್ಬಾಸ್ ಮನೆಯ ಸ್ವಿಮ್ಮಿಂಗ್ ಫೂಲ್ ಯಾಕೆ ಇಷ್ಟ ಎಂದು ಒಬ್ಬರು ಕೇಳಿದ್ದು, ನಮ್ಮೂರಿಗೂ ಬನ್ನಿ ಎಂದು ಹಲವರು ಕಮೆಂಟ್ನಲ್ಲಿ ಹೇಳಿದ್ದಾರೆ. ಸೀರಿಯಲ್ಗಳಲ್ಲಿ ಆ್ಯಕ್ಟ್ ಮಾಡಿ, ನಿಮಗೆ ಸಿಕ್ಕಾಪಟ್ಟೆ ಟ್ಯಾಲೆಂಟ್ ಇದೆ ಎಂದು ಮತ್ತೆ ಕೆಲವರು ಹೇಳುತ್ತಿದ್ದಾರೆ. ಗಿಲ್ಲಿ ಮೇಲೆ ನಿಮಗೆ ಪ್ರೀತಿ ಇದ್ಯಾ ಎಂದು ಒಬ್ಬರು ಪ್ರಶ್ನಿಸಿದ್ದಾರೆ. ರಕ್ಷಿತಾ ಹೇಗೆ ಉತ್ತರಿಸುತ್ತಾರೆ ಎಂದು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

