MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Talent Hunt: ನಿಮ್ಮ ನಟನಾ ಕನಸಿಗೆ ರೆಕ್ಕೆ ಇಲ್ಲಿದೆ: ಅಣ್ಣಯ್ಯ ಸೀರಿಯಲ್​ ತಂಡದಿಂದ ಹೊಸ ಪ್ರತಿಭೆಗಳಿಗೆ ಆಹ್ವಾನ

Talent Hunt: ನಿಮ್ಮ ನಟನಾ ಕನಸಿಗೆ ರೆಕ್ಕೆ ಇಲ್ಲಿದೆ: ಅಣ್ಣಯ್ಯ ಸೀರಿಯಲ್​ ತಂಡದಿಂದ ಹೊಸ ಪ್ರತಿಭೆಗಳಿಗೆ ಆಹ್ವಾನ

ನಟನಾ ಕ್ಷೇತ್ರದಲ್ಲಿ ಅವಕಾಶಗಳಿಲ್ಲದೆ ಕಷ್ಟಪಡುತ್ತಿರುವ ಪ್ರತಿಭಾವಂತರಿಗಾಗಿ ಜೀ ಕನ್ನಡ ವಾಹಿನಿಯು ಹೊಸ ಅವಕಾಶವನ್ನು ನೀಡುತ್ತಿದೆ. 'ಅಣ್ಣಯ್ಯ' ಧಾರಾವಾಹಿ ಖ್ಯಾತಿಯ ನಿರ್ಮಾಣ ಸಂಸ್ಥೆಯು ತಮ್ಮ ಹೊಸ ಪ್ರಾಜೆಕ್ಟ್‌ಗಾಗಿ 18 ರಿಂದ 25 ವರ್ಷದೊಳಗಿನ ನಾಯಕ-ನಾಯಕಿಯರ ಹುಡುಕಾಟದಲ್ಲಿದೆ. ಡಿಟೇಲ್ಸ್​ ಇಲ್ಲಿದೆ.

2 Min read
Author : Suchethana D
Published : Jul 15 2026, 01:04 PM IST
Share this Photo Gallery
  • FB
  • TW
  • Linkdin
  • Whatsapp
16
ನಟಿಸೋ ಆಸೆ ಇದ್ಯಾ?
Image Credit : Instagram

ನಟಿಸೋ ಆಸೆ ಇದ್ಯಾ?

ಧಾರಾವಾಹಿಗಳಲ್ಲಿ, ಸಿನಿಮಾಗಳಲ್ಲಿ ನಟಿಸುವ ಆಸೆ ಹೊತ್ತವರು ಅದೆಷ್ಟೋ ಮಂದಿ. ಇದೇ ಕಾರಣಕ್ಕೆ ಎಲ್ಲೆಲ್ಲೋ, ಯಾರ್ಯಾರಿಗೋ ದುಡ್ಡು ಕೊಟ್ಟು ಹಳ್ಳಕ್ಕೆ ಬಿದ್ದವರೂ ಇದ್ದಾರೆ, ಅದರಲ್ಲಿಯೂ ಅದೆಷ್ಟೋ ಯುವತಿಯರು ಯಾರದ್ದೋ ಮಾತು ನಂಬಿ, ಬಣ್ಣದ ಲೋಕಕ್ಕೆ ಕಾಲಿಡುವ ಆಸೆಯಿಂದ ಹೋಗಿ ತಮ್ಮ ಜೀವನವನ್ನೇ ಹಾಳು ಮಾಡಿಕೊಂಡಿದ್ದು ಇದೆ. ಇದರ ಹೊರತಾಗಿಯೂ ಅದೆಷ್ಟೋ ಮಂದಿಗೆ ಟ್ಯಾಲೆಂಟ್​ ಇದ್ದರೂ ಅವಕಾಶಗಳು ಸಿಗುವುದು ಕಡಿಮೆ. ಸಂಬಂಧಿಕರೋ, ಪರಿಚಯದವರೋ, ಅಪ್ಪ-ಅಮ್ಮನೋ ಹೀಗೆ ಯಾರೋ ಒಬ್ಬರು ಈ ಕ್ಷೇತ್ರದಲ್ಲಿ ಇದ್ದರೆ, ಅವರಿಗೆ ಅವಕಾಶಗಳು ಸಿಗುವುದು ಸುಲಭವಾಗಿರುತ್ತದೆ. ಆದರೆ ಸಾಮಾನ್ಯ ಜನರಿಗೆ, ಎಷ್ಟೇ ಪ್ರತಿಭೆ ಇದ್ದರೂ ಅವಕಾಶಗಳು ಅದೃಷ್ಟವಂತರಿಗೆ ಮಾತ್ರ ಸಿಗುತ್ತವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಅದೃಷ್ಟದ ಬಾಗಿಲು
Image Credit : Instagram

ಅದೃಷ್ಟದ ಬಾಗಿಲು

ಅಂಥವರಿಗಾಗಿ ಈಗ ಅದೃಷ್ಟದ ಬಾಗಿಲು ತೆರೆದಿದೆ. ಸೀರಿಯಲ್​ಗಳಲ್ಲಿ ನಟಿಸುವ ಆಸೆ ಇದ್ದವರಿಗೆ ಅರ್ಜಿ ಕರೆಯಲಾಗಿದೆ. ಇದಾಗಲೇ ಎಷ್ಟೋ ಸೀರಿಯಲ್​ ಕಲಾವಿದರು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿ ಸಿನಿಮಾಕ್ಕೂ ಹಾರಿದವರಿದ್ದಾರೆ. ಇಲ್ಲವೇ ಸೀರಿಯಲ್​ನಲ್ಲಿಯೇ ಉಳಿದು ಬಹುದೊಡ್ಡ ಹೆಸರು ಮಾಡಿದವರೂ ಇದ್ದಾರೆ. ಇಂಥವರಲ್ಲಿ ನೀವೂ ಒಬ್ಬರಾಗುವ ಅವಕಾಶವನ್ನು ಜೀ ಕನ್ನಡ ವಾಹಿನಿ ನಿಮಗಾಗಿ ತೆರೆದಿಟ್ಟಿದೆ.

Related Articles

Related image1
ಸೀರಿಯಲ್​ಗಳಲ್ಲಿ ನಟಿಸುವ ಆಸೆಯೆ? ನಿಮಗಾಗಿ ಬಂದಿದೆ ಬಿಗ್​ ಆಫರ್​: ಡಿಟೇಲ್ಸ್​ ಇಲ್ಲಿದೆ
Related image2
Dance Karnataka Dance: ಅಮ್ಮಂದಿರೇ ಡಾನ್ಸ್​ ಮಾಡಲು ಬರತ್ತಾ? ಇನ್ನೇಕೆ ತಡ- ನಿಮಗಾಗಿ ಕಾದಿದೆ ಅವಕಾಶ
36
ಹೊಸ ಪ್ರಾಜೆಕ್ಟ್​
Image Credit : Instagram

ಹೊಸ ಪ್ರಾಜೆಕ್ಟ್​

‘ಅಣ್ಣಯ್ಯ’ ಧಾರಾವಾಹಿ ತಂಡದಿಂದ ಹೊಸ ಪ್ರಾಜೆಕ್ಟ್​ ಶುರುವಾಗಲಿದ್ದು, ಹೊಸ ಮುಖದ ಹುಡುಕಾಟದಲ್ಲಿದೆ ತಂಡ. ಸಿನಿಮಾ ನಟ ಪ್ರಮೋದ್‌ ಶೆಟ್ಟಿ ಮತ್ತು ಪತ್ನಿ ನಟಿ ಸುಪ್ರಿತಾ ಶೆಟ್ಟಿ ಅವರ ಒಡೆತನದ ನಿರ್ಮಾಣ ಸಂಸ್ಥೆ ‘ಶಿವ್ಯೆ ಸ್ಟುಡಿಯೋಸ್‌’ ಹೊಸ ಪ್ರಾಜೆಕ್ಟ್ ಕೈಗೆತ್ತಿಕೊಂಡಿದ್ದು ನಾಯಕಿ ಮತ್ತು ನಾಯಕನಿಗೆ ಅರ್ಜಿ ಆಹ್ವಾನಿಸಿದೆ.

46
ಹೊಸಬರಿಗೆ ಅವಕಾಶ
Image Credit : Instagram

ಹೊಸಬರಿಗೆ ಅವಕಾಶ

ಜೀ ಕನ್ನಡ ವಾಹಿನಿಯಲ್ಲಿ ‘ಅಣ್ಣಯ್ಯ’ ಧಾರಾವಾಹಿ ಹಾಗೂ ಜೀ ಪವರ್‌ ವಾಹಿನಿಯಲ್ಲಿ ‘ಶುಭಸ್ಯ ಶೀಘ್ರಂ’ ಧಾರಾವಾಹಿಗೆ ಇವರು ಬಂಡವಾಳ ಹಾಕಿದ್ದರು. ಇದೀಗ ‘ಶುಭಸ್ಯ ಶೀಘ್ರಂ’ ಸೀರಿಯಲ್​ ಮುಗಿದಿದ್ದು, ಹೊಸ ಸೀರಿಯಲ್​ಗೆ ಹೊಸಬರಿಗೆ ಅವಕಾಶ ಸಿಗಲಿದೆ. ಪ್ರತಿಭೆ ಜೊತೆಗೆ ವಯಸ್ಸು ಪರ್ಫೆಕ್ಟ್ ಮ್ಯಾಚ್‌ ಆದ್ರೆ ನಿಮ್ಮ ಕನಸಿನ ಬಾಗಿಲು ತೆಗೆದಂತೆ.

56
ಆಡಿಷನ್‌ಗೆ ಅರ್ಹತೆ
Image Credit : Instagram

ಆಡಿಷನ್‌ಗೆ ಅರ್ಹತೆ

ಧಾರಾವಾಹಿಯ ನಾಯಕ, ನಾಯಕಿಯಾಗೋ ಮಹದಾಸೆ ಹೊಂದಿದ ಯುವಕ ಮತ್ತು ಯುವತಿ 18ರಿಂದ 25ವರ್ಷದೊಳಗಿನ ಕಲಾವಿದರಾಗಿರಬೇಕು. ಇವರು ಆಡಿಷನ್‌ಗೆ ಅರ್ಹರು. ನಿಮ್ಮ ಪ್ರೋಫೈಲ್‌ (Profile)ನ್ನು 7204661555 ಸಂಖ್ಯೆಗೆ ವಾಟ್ಸಾಪ್ ಮಾಡಿ. ಈ ಸಂಖ್ಯೆಗೆ ನೇರ ಕರೆ ಮಾಡಬೇಡಿ. ಕರೆಗೆ ಅವಕಾಶವಿಲ್ಲ. ಈ-ಮೇಲ್‌ ಐಡಿಗೂ ನಿಮ್ಮ ವಿವರವನ್ನ ಕಳುಹಿಸಬಹುದು, shivecasting@gmail.com ಈಮೇಲ್ ಮಾಡಿ. ನೇರ ಕರೆಗಳನ್ನು ಸ್ವೀಕರಿಸಲಾಗುವುದಿಲ್ಲ.

66
ಮೋಸ ಹೋಗಬೇಡಿ
Image Credit : Instagram

ಮೋಸ ಹೋಗಬೇಡಿ

ಹಾಗೇ ಇನ್ನೊಂದು ಮಾತು. ಇಂಥ ಕರೆಗಳು ಬಂದಾಗ ಇದನ್ನು ಮಿಸ್​ಯೂಸ್ ಮಾಡಿಕೊಂಡು ಫೇಕ್​ ಗಳಿಂದ ಕರೆ ಬರುವುದು ಇದೆ. ದುಡ್ಡು ಪೀಕುವ ಜಾಲವೇ ಹುಟ್ಟಿಕೊಳ್ಳುತ್ತದೆ. ವಾಹಿನಿಗಳಿಂದ ಕರೆ ಬಂದಾಗ ಯಾವುದೇ ದುಡ್ಡು ಇರುವುದಿಲ್ಲ. ಈ ಬಗ್ಗೆ ಕೇರ್​ಫುಲ್​ ಆಗಿರಿ. ವಾಹಿನಿಗಳ ಹೆಸರು ಹೇಳಿಕೊಂಡು ಮೋಸ ಮಾಡುವವರಿಗೆ ಮರುಳಾಗದಿರಿ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಟಿವಿ ಶೋ
ಮನರಂಜನಾ ಸುದ್ದಿ
ಜೀ ಕನ್ನಡ
ಕನ್ನಡ ಧಾರಾವಾಹಿ

Latest Videos
Recommended Stories
Recommended image1
Kannada TV Stars: ಭಾರ್ಗವಿನ ಬಿಟ್ಟು ಅಮ್ಮು ಜೊತೆ ಅರ್ಜುನ್ ಡುಯೆಟ್… ನಂದನ ಸೊಸೆಗೆ ಎಚ್ಚರಿಕೆ ಕೊಟ್ಟ ಫ್ಯಾನ್ಸ್
Recommended image2
ಹೊಕ್ಕುಳ ಮೇಲೆ ಫ್ರೂಟ್ ಸಲಾಡ್, ಐಸ್ ಕ್ಯೂಬ್; ಕನ್ನಡ ಸಿನಿಮಾಗಳ ಸೊಂಟದ ಗೀಳು ಬಿಚ್ಟಿಟ್ಟ ನಟಿ ಡೈಸಿ ಶಾ!
Recommended image3
ನಮ್ಮ ಮನೇಲಿ ದೇವರ ರೂಮ್‌ ಇದೆ, ಲವ್‌ ಜಿಹಾದ್‌ ಮಾಡ್ತಿಲ್ಲ: ಕನ್ನಡ ಯುಟ್ಯೂಬರ್‌ ಸ್ಯಾಮ್‌ ಸಮೀರ್‌
Related Stories
Recommended image1
ಸೀರಿಯಲ್​ಗಳಲ್ಲಿ ನಟಿಸುವ ಆಸೆಯೆ? ನಿಮಗಾಗಿ ಬಂದಿದೆ ಬಿಗ್​ ಆಫರ್​: ಡಿಟೇಲ್ಸ್​ ಇಲ್ಲಿದೆ
Recommended image2
Dance Karnataka Dance: ಅಮ್ಮಂದಿರೇ ಡಾನ್ಸ್​ ಮಾಡಲು ಬರತ್ತಾ? ಇನ್ನೇಕೆ ತಡ- ನಿಮಗಾಗಿ ಕಾದಿದೆ ಅವಕಾಶ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved