- Home
- Entertainment
- TV Talk
- ಜೀ ಕನ್ನಡದಲ್ಲಿ 5 ಹೊಚ್ಚ ಹೊಸ ಸೀರಿಯಲ್ಸ್: ಯಾವ್ಯಾವ ಧಾರಾವಾಹಿಗಳಿಗೆ ಬೀಳಲಿದೆ ತೆರೆ- Promo ಬಿಡುಗಡೆ
ಜೀ ಕನ್ನಡದಲ್ಲಿ 5 ಹೊಚ್ಚ ಹೊಸ ಸೀರಿಯಲ್ಸ್: ಯಾವ್ಯಾವ ಧಾರಾವಾಹಿಗಳಿಗೆ ಬೀಳಲಿದೆ ತೆರೆ- Promo ಬಿಡುಗಡೆ
ಜೀ ಕನ್ನಡದ ಜನಪ್ರಿಯ 'ಬ್ರಹ್ಮಗಂಟು' ಧಾರಾವಾಹಿ ಮುಕ್ತಾಯದ ಹಂತದಲ್ಲಿದ್ದು, ಅದರ ಸ್ಥಾನದಲ್ಲಿ 'ಜಗದ್ಧಾತ್ರಿ' ಪ್ರಸಾರವಾಗಲಿದೆ. ಇದರ ಜೊತೆಗೆ, ವಾಹಿನಿಯು 'ರಾಮ್ಲೀಲಾ', 'ಗೌರಿ ಪುತ್ರ' ಸೇರಿದಂತೆ ಐದು ಹೊಸ ಧಾರಾವಾಹಿಗಳನ್ನು ಘೋಷಿಸಿದ್ದು, ಯಾವ ಸೀರಿಯಲ್ ಅಂತ್ಯಗೊಳ್ಳಲಿವೆ ಎಂಬ ಕುತೂಹಲ ಮೂಡಿದೆ.

ಬ್ರಹ್ಮಗಂಟು ಮುಕ್ತಾಯ
ಜೀ ಕನ್ನಡದಲ್ಲಿ ಸದ್ಯ ಬ್ರಹ್ಮಗಂಟು ಸೀರಿಯಲ್ ಮುಕ್ತಾಯ ಆಗಲಿದೆ. ಇದಾಗಲೇ ಅಂತಿಮ ಸಂಚಿಕೆಗಳು ಆರಂಭವಾಗಿವೆ. ಸೌಂದರ್ಯಳ ವಂಚನೆ, ದಿಶಾಳ ಅಸಲಿಯತ್ತು ಎಲ್ಲವೂ ಚಿರುಗೆ ತಿಳಿದಿದೆ. ಸೌಂದರ್ಯ ಪತಿಗೂ ನೆನಪಿನ ಶಕ್ತಿ ಬರುತ್ತಿದ್ದು, ಆತನೂ ಸೌಂದರ್ಯ ಬಗ್ಗೆ ಹೇಳುತ್ತಾನೆ. ಇದಾಗಲೇ ಚಿರು ಸೌಂದರ್ಯ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದ್ದಾನೆ.
ಜಗದ್ಧಾತ್ರಿ ಸೀರಿಯಲ್ ಆರಂಭ
ಈ ಸ್ಟೋರಿ ಮುಗಿದ ಮೇಲೆ ಜಗದ್ಧಾತ್ರಿ ಸೀರಿಯಲ್ ಆರಂಭವಾಗಲಿದೆ. ಮೋಕ್ಷಿತಾ ಪೈ, ಕವಿತಾ ಗೌಡ ಅಭಿನಯದ ಇದರ ಪ್ರೊಮೋ ಇದಾಗಲೇ ಸಾಕಷ್ಟು ವೈರಲ್ ಆಗಿದ್ದು, ಸೀರಿಯಲ್ ನೋಡಲು ಸೀರಿಯಲ್ ಪ್ರೇಮಿಗಳು ಕಾತರದಿಂದ ಕಾಯುತ್ತಿದ್ದಾರೆ.
ಐದು ಹೊಸ ಧಾರಾವಾಹಿಗಳು
ಇದರ ನಡುವೆಯೇ ಐದು ಹೊಸ ಸೀರಿಯಲ್ಗಳನ್ನು ಜೀ ವಾಹಿನಿ ಘೋಷಿಸಿದೆ. ರಾಮ್ಲೀಲಾ, ಗೌರಿ ಪುತ್ರ, ಅರಸಿ, ಮಿಲನ, ಶಿವಶಕ್ತಿ ಈ ಐದು ಹೊಸ ಸೀರಿಯಲ್ಗಳು ಆರಂಭವಾಗಲಿವೆ ಎಂದು ವಾಹಿನಿ ಹೇಳಿದೆ.
ಯಾರ ಧಾರಾವಾಹಿ ಮುಗಿಯತ್ತೆ?
ಹಾಗಿದ್ದರೆ ಜೀ ಕನ್ನಡದಲ್ಲಿ ಐದು ಸೀರಿಯಲ್ಗಳು ಮುಗಿಯತ್ತಾ ಎನ್ನುವ ಬಗ್ಗೆ ವೀಕ್ಷಕರು ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ಇದ್ಯಾವ ಸೀರಿಯಲ್ಗಳು ಇರಬಹುದು ಎನ್ನುವ ಬಗ್ಗೆ ದೊಡ್ಡ ಮಟ್ಟದ ಚರ್ಚೆ ಶುರುವಾಗಿದೆ.
ಮಧ್ಯಾಹ್ನದ ಸೀರಿಯಲ್ಗಳು?
ಅಂದಹಾಗೆ, ಬಹುಶಃ ಇದ್ಯಾವುದೂ ರಾತ್ರಿಯ ಸೀರಿಯಲ್ಗಳಲ್ಲ ಎಂದೇ ಹಲವರು ಹೇಳುತ್ತಿದ್ದಾರೆ. ಮಧ್ಯಾಹ್ನ ಕೂಡ ಜೀ ವಾಹಿನಿ ಸೀರಿಯಲ್ಗಳನ್ನು ಪ್ರಸಾರ ಮಾಡುತ್ತದೆ. ಆ ಸೀರಿಯಲ್ಗಳ ಪೈಕಿ ಈ ಐದು ಹೊಸ ಸೀರಿಯಲ್ಗಳು ಬರಲಿವೆ ಎನ್ನುವುದು ವೀಕ್ಷಕರ ಅಭಿಮತ.
ಸ್ಪಷ್ಟತೆ ಕೊಟ್ಟಿಲ್ಲ
ಇದರ ಬಗ್ಗೆ ವಾಹಿನಿ ಇನ್ನೂ ಸ್ಪಷ್ಟತೆ ಕೊಟ್ಟಿಲ್ಲ. ಟೈಮಿಂಗ್ಸ್ ಕೂಡ ಹೇಳಲಿಲ್ಲ. ಆದರೆ ಶೀಘ್ರದಲ್ಲಿ ಎಂದು ಹೇಳಿರುವ ಕಾರಣ, ಯಾವ ಸೀರಿಯಲ್ ಮುಗಿಯತ್ತೆ ಎನ್ನುವ ಚರ್ಚೆ ಶುರುವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

