- Home
- Entertainment
- TV Talk
- Karna Serial Update: ಶೀಘ್ರದಲ್ಲಿ ನಿತ್ಯಾ ಪಾತ್ರಕ್ಕೆ ಹೊಸ ನಟಿ ಎಂಟ್ರಿ? ಧಾರಾವಾಹಿಯಿಂದ ಹೊರ ಬಂದ ನಮ್ರತಾ!
Karna Serial Update: ಶೀಘ್ರದಲ್ಲಿ ನಿತ್ಯಾ ಪಾತ್ರಕ್ಕೆ ಹೊಸ ನಟಿ ಎಂಟ್ರಿ? ಧಾರಾವಾಹಿಯಿಂದ ಹೊರ ಬಂದ ನಮ್ರತಾ!
Karna Serial Update: ಜೀ ಕನ್ನಡ ವಾಹಿನಿಯ ಜನಪ್ರಿಯ ‘ಕರ್ಣ’ ಧಾರಾವಾಹಿಯಿಂದ ನಟಿ ನಮ್ರತಾ ಗೌಡ ಹೊರ ಬಂದಿದ್ದು, ಆ ಪಾತ್ರಕ್ಕೆ ಹೊಸ ನಟಿಯ ಆಗಮನ ಆಗಲಿದೆ ಎನ್ನುವ ಮಾಹಿತಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆದರೆ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ಕರ್ಣ ಧಾರಾವಾಹಿ
ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾದ ‘ಕರ್ಣ’ ಧಾರಾವಾಹಿಯಲ್ಲಿ ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಾ, ಪ್ರೇಕ್ಷಕರ ಮನ ಗೆಲ್ಲುತ್ತಾ ಸಾಗುತ್ತಿದೆ. ಆದರೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುದ್ದಿಯೊಂದು ಅಭಿಮಾನಿಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಅದು ಏನೆಂದರೆ, ನಿತ್ಯಾ ಪಾತ್ರಕ್ಕೆ ಶೀಘ್ರದಲ್ಲೇ ಹೊಸ ನಟಿಯ ಎಂಟ್ರಿಯಾಗಲಿದೆಯೇ ಎನ್ನುವ ಪ್ರಶ್ನೆ.
ನಮ್ರತಾ ಗೌಡ
ಕರ್ಣ ಧಾರಾವಾಹಿಯಲ್ಲಿ ನಾಯಕಿಯಾಗಿ ನಮ್ರತಾ ಗೌಡ ನಟಿಸುತ್ತಿದ್ದರು. ನಿತ್ಯಾ ಪಾತ್ರದ ಮೂಲಕ ಗಮನ ಸೆಳೆದಿದ್ದರು. ಆದರೆ ಕಥೆಯಲ್ಲಿ ಬದಲಾವಣೆ ಬಂದು ನಮ್ರತಾ ಗೌಡ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇರಲಿಲ್ಲ. ಇನ್ನು ಕಳೆದ ಎರಡು ತಿಂಗಳಿಂದ ನಿತ್ಯಾ ಪಾತ್ರವೂ ಕಾಣಿಸಿಕೊಳ್ಳಲಿಲ್ಲ. ಹಾಗಾಗಿ ಈ ಪಾತ್ರದಿಂದ ನಮ್ರತಾ ಹೊರ ಬಂದಿದ್ದಾರೆ ಎನ್ನಲಾಗುತ್ತಿದೆ.
ಕರ್ಣ ಧಾರಾವಾಹಿಯಲ್ಲಿ ನಿತ್ಯಾ ಪಾತ್ರ
ಧಾರಾವಾಹಿಯಲ್ಲಿ ನಿತ್ಯಾ ಪಾತ್ರ ಪ್ರಮುಖ ತಿರುವುಗಳಿಗೆ ಕಾರಣವಾಗುವ ಪಾತ್ರಗಳಲ್ಲಿ ಒಂದಾಗಿದೆ. ಕಥೆಯ ಭಾವನಾತ್ಮಕ ಕ್ಷಣಗಳು ಹಾಗೂ ಕರ್ಣನ ಜೀವನದ ಹಲವು ನಿರ್ಣಾಯಕ ಸಂದರ್ಭಗಳಲ್ಲಿ ನಿತ್ಯಾ ಪಾತ್ರ ಹೈಲೈಟ್ ಆಗಿತ್ತು. ಇದೀಗ ನಿತ್ಯಾ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇಲ್ಲದ ಕಾರಣ, ನಮ್ರತಾ ಗೌಡ ಹೊರ ಬಂದಿದ್ದು, ಹೊಸ ನಟಿಯ ಎಂಟ್ರಿಯಾಗಲಿದೆ ಎನ್ನುವ ಮಾಹಿತಿ ಇದೆ.
ಯಾವ ನಟಿ ಎಂಟ್ರಿ ಕೊಡಲಿದ್ದಾರೆ
ಕರ್ಣ ಧಾರಾವಾಹಿ ನಿತ್ಯಾ ಪಾತ್ರಕ್ಕೆ ಹೊಸ ನಟಿಯ ಎಂಟ್ರಿ ಆಗಲಿದೆ ಎನ್ನುವುದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಸುದ್ದಿ ಅಷ್ಟೇ. ಸದ್ಯಕ್ಕೆ ವಾಹಿನಿ ಅಥವಾ ಧಾರಾವಾಹಿ ತಂಡದಿಂದ ಯಾವುದೇ ಅಧಿಕೃತ ಘೋಷಣೆ ಹೊರಬಂದಿಲ್ಲ. ಆದರೆ ಹೊಸ ಮುಖವೊಂದು ನಿತ್ಯಾ ಪಾತ್ರಕ್ಕೆ ಆಯ್ಕೆಯಾಗಬಹುದು ಎನ್ನುವ ಗುಸು ಗುಸು ಮಾತ್ರ ಕೇಳಿ ಬರುತ್ತಿದೆ.
ಪ್ರೇಕ್ಷಕರು ಈ ಬಗ್ಗೆ ಹೇಳುತ್ತಿರುವುದೇನು?
ನಿತ್ಯಾ ಪಾತ್ರಕ್ಕೆ ಹೆಚ್ಚಿನ ಮಹತ್ವ ಇಲ್ಲದೇ ಇದ್ದುದರಿಂದ ನಮ್ರತಾ ಗೌಡ ಆ ಪಾತ್ರದಿಂದ ಹೊರ ಬಂದಿದ್ದೇ ಒಳ್ಳೆಯದಾಯಿತು. ಅವರಿಗೆ ಇನ್ನಷ್ಟು ಹೆಚ್ಚಿನ ಅವಕಾಶಗಳು ದೊರೆಯಲಿ ಎನ್ನುತ್ತಿದ್ದಾರೆ ಫ್ಯಾನ್ಸ್. ಇನ್ನು ಕೆಲವರು, ನಿತ್ಯಾ ಪಾತ್ರಕ್ಕೆ ನಮ್ರತಾ ಮುಂದುವರೆಯಲಿ ಎಂದರೆ, ಮತ್ತೆ ಕೆಲವರು, ಯಾರು ಬಂದ್ರೂ ಧಾರಾವಾಹಿ ಓಡುತ್ತೆ ಎನ್ನುತ್ತಿದ್ದಾರೆ.
ಕೂತೂಹಲ ಹುಟ್ಟಿಸಿದ ವೈರಲ್ ಸುದ್ದಿ
‘ಕರ್ಣ’ ಧಾರಾವಾಹಿಯಲ್ಲಿ ನಿತ್ಯಾ ಪಾತ್ರಕ್ಕೆ ಹೊಸ ನಟಿಯ ಎಂಟ್ರಿ ಕುರಿತು ಅಧಿಕೃತ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ. ಆದರೆ ಈ ಗಾಳಿ ಸುದ್ದಿಯಿಂದಾಗಿ ಧಾರಾವಾಹಿಯ ಮೇಲಿನ ಕುತೂಹಲವ ಮತ್ತಷ್ಟು ಹೆಚ್ಚಾಗಿದೆ. ಮುಂದಿನ ಎಪಿಸೋಡ್‌ಗಳಲ್ಲಿ ನಿಜಕ್ಕೂ ಹೊಸ ನಟಿ ನಿತ್ಯಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆಯೇ? ಅನ್ನೋದನ್ನು ಕಾದು ನೋಡಬೇಕು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

