- Home
- Entertainment
- TV Talk
- Karna Serial: ಕರ್ಣ-ನಿಧಿ ಮಧ್ಯೆ ಬಂದ 'ಹಳೆ ಪ್ರೇಯಸಿ' ಸ್ಫೂರ್ತಿ ಯಾರು? ಇದೇನಿದು ಹೊಸ ಟ್ವಿಸ್ಟ್
Karna Serial: ಕರ್ಣ-ನಿಧಿ ಮಧ್ಯೆ ಬಂದ 'ಹಳೆ ಪ್ರೇಯಸಿ' ಸ್ಫೂರ್ತಿ ಯಾರು? ಇದೇನಿದು ಹೊಸ ಟ್ವಿಸ್ಟ್
'ಕರ್ಣ' ಧಾರಾವಾಹಿಯಲ್ಲಿ ಆಷಾಢದ ಕಾರಣ ಕರ್ಣ ಮತ್ತು ನಿಧಿ ದೂರವಾಗಿದ್ದಾರೆ. ಇದರ ನಡುವೆ ಕರ್ಣನ ಕಾಲೇಜು ಲವರ್ ಎಂದು ಹೇಳಿಕೊಂಡು ಸ್ಫೂರ್ತಿ ಎಂಬ ಯುವತಿ ಎಂಟ್ರಿ ಕೊಟ್ಟು, ನಿಧಿಯ ಕೋಪಕ್ಕೆ ಕಾರಣಳಾಗುತ್ತಾಳೆ. ಆದರೆ ಕೊನೆಗೆ ಇದೆಲ್ಲವೂ ಒಂದು ಪ್ರ್ಯಾಂಕ್ ವಿಡಿಯೋ ಎಂದು ತಿಳಿದುಬರುತ್ತದೆ.

ಆಷಾಢ ವಿರಹ
ಕರ್ಣ ಸೀರಿಯಲ್ನಲ್ಲಿ (Karna Serial) ಸದ್ಯ ನಿಧಿ ಮತ್ತು ಕರ್ಣನ ಮೊದಲ ರಾತ್ರಿಯ ಸಂಭ್ರಮ ನಡೆಯುತ್ತಿದೆ. ಆದರೆ ಅದರ ನಡುವೆಯೇ ಆಷಾಢವೂಬಂದಿದ್ದು ಇವರಿಬ್ಬರ ನಡುವೆ ವಿರಹ ವೇದನೆ ಶುರುವಾಗಿದೆ.
ಕರ್ಣ-ನಿಧಿ ಮಧ್ಯೆ ಸ್ಫೂರ್ತಿ
ಇದರ ಮಧ್ಯೆಯೇ, ನಿಧಿ ಮತ್ತು ಕರ್ಣನ ಮಧ್ಯೆ ಸ್ಫೂರ್ತಿ ಎನ್ನುವ ಯುವತಿ ಬಂದಿದ್ದಾಳೆ. ಇಬ್ಬರೂ ಪ್ರೀತಿಯಿಂದ ಮಾತನಾಡ್ತಿರೋದನ್ನು ನೋಡಿದ ನಿಧಿಗೆ ಕೋಪ ನೆತ್ತಿಗೇರಿದೆ. ಆ ಯುವತಿಯನ್ನು ಹಿಗ್ಗಾಮುಗ್ಗ ಬೈದಿದ್ದಾಳೆ.
ಕಾಲೇಜ್ ಲವರ್
ಆ ಬಳಿಕ, ಯುವತಿ ನೀವು ಬರುವ ಮೊದಲು ನಾನು ಇವರನ್ನು ಲವ್ ಮಾಡ್ತಿದ್ದೆ ಎಂದಿದ್ದಾಳೆ. ಕರ್ಣ ಕೂಡ ಹೌದು, ಕಾಲೇಜಿನ ಲವರ್ ಈಕೆ. ಆಮೇಲೆ ದೂರ ಆದ್ವಿ ಎಂದಿದ್ದಾನೆ.
ತಾರಕಕ್ಕೇರಿದ ಕೋಪ
ಬಳಿಕ ಸ್ಫೂರ್ತಿ, ನೀವು ಒಪ್ಪೋದಾದ್ರೆ ಇಬ್ಬರೂ ಒಂದೇ ಮನೆಯಲ್ಲಿ ಇರಬಹುದು. ನೀವು ನನ್ನ ತಂಗಿಯ ರೀತಿ. ಮದುವೆಯಾಗಿ ಒಟ್ಟಿಗೇ ಇರಬಹುದು ಎಂದಾಗ ನಿಧಿಯ ಕೋಪ ತಾರಕಕ್ಕೇರಿ, ಆ ಯುವತಿಯನ್ನು ಹೊಡೆಯಲು ಮುಂದು ಬಂದಿದ್ದಾಳೆ. ಕೊಲೆ ಮಾಡಲೂ ರೆಡಿ ಆಗಿದ್ದಾಳೆ.
ಪ್ರ್ಯಾಂಕ್ ವಿಡಿಯೋ
ಬಳಿಕ ಯುವತಿ, ಅಲ್ಲಿರುವ ಕ್ಯಾಮೆರಾ ತೋರಿಸಿ, ಇದು ಪ್ರ್ಯಾಂಕ್ ವಿಡಿಯೋ. ತಮಾಷೆಗಾಗಿ ಇದನ್ನು ಮಾಡಿರುವುದಾಗಿ ಹೇಳಿದ್ದಾಳೆ. ಅಲ್ಲಿಗೆ ನಿಧಿಯ ಹೊಟ್ಟೆ ಉರಿ ಕಡಿಮೆ ಆಗಿ ಹುಸಿಕೋಪ ಕರ್ಣನ ಮೇಲೆ ತಿರುಗಿದೆ.
ವೀಕ್ಷಕರ ಹಾರೈಕೆ
ಒಟ್ಟಿನಲ್ಲಿ ಕರ್ಣ ಮತ್ತು ನಿಧಿಯ ಕ್ಯೂಟ್ ಜೋಡಿ ವೀಕ್ಷಕರಿಗೆ ಮತ್ತಷ್ಟು ಹತ್ತಿರವಾಗುತ್ತಿದ್ದು, ಇವರಿಬ್ಬರಿಗೂ ಆಷಾಢ ಬೇಗ ಮುಗಿದು ಜೋಡಿ ಒಂದಾಗಲಿ ಎಂದು ವೀಕ್ಷಕರು ಹಾರೈಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

