- Home
- Entertainment
- TV Talk
- ಸೊಸೆಗೆ ಬೆನ್ನೆಲುಬಾಗಿ ನಿಂತ ಅತ್ತೆ ಕುಸುಮಾ… ಸೊಸೆ ಕೆಲಸ ಮಾಡಬಾರದು ಎನ್ನುವ ನಂದ… ಯಾರು ಸರಿ?
ಸೊಸೆಗೆ ಬೆನ್ನೆಲುಬಾಗಿ ನಿಂತ ಅತ್ತೆ ಕುಸುಮಾ… ಸೊಸೆ ಕೆಲಸ ಮಾಡಬಾರದು ಎನ್ನುವ ನಂದ… ಯಾರು ಸರಿ?
ಸೋಶಿಯಲ್ ಮೀಡಿಯಾದಲ್ಲಿ ನಂದಗೋಕುಲದ ನಂದ ಹಾಗೂ ಭಾಗ್ಯಲಕ್ಷ್ಮಿ ಧಾರಾವಾಹಿಯ ಕುಸುಮಾ ಪಾತ್ರದ ಬಗ್ಗೆ ಹೋಲಿಕೆ ನಡೆಯುತ್ತಿದೆ. ಅತ್ತೆ ಕುಸುಮಾ ಸೊಸೆಯ ಜೀವನಕ್ಕೆ ಬೆಳಕಾದರೆ, ಮತ್ತೊಂದೆಡೆ ನಂದ ತನ್ನ ಮಕ್ಕಳು ಹಾಗೂ ಸೊಸೆಯಂದಿರ ಜೀವನಕ್ಕೆ ಮುಳ್ಳಾಗುತ್ತಿದ್ದಾರೆ.

ನಂದಕುಮಾರ Vs ಕುಸುಮಾ
ಸೋಶಿಯಲ್ ಮೀಡಿಯಾದಲ್ಲಿ ನಂದ ಕುಮಾರ್ Vs ಕುಸುಮಾ ಬಗ್ಗೆ ಚರ್ಚೆ ನಡೆಯುತ್ತಿದೆ. ಯಾವ ನಂದ, ಯಾವ ಕುಸುಮಾ ಎಂದು ಪ್ರಶ್ನಿಸಬೇಡಿ. ನಂದಗೋಕುಲ ಧಾರಾವಾಹಿಯ ಅದೇ ನಂದ ಹಾಗೂ ಭಾಗ್ಯಲಕ್ಷ್ಮೀ ಧಾರಾವಾಹಿಯ ಭಾಗ್ಯ ಅತ್ತೆ ಕುಸುಮಾ. ಇವರಿಬ್ಬರಲ್ಲಿ ಯಾರು ಬೆಸ್ಟ್ ಎನ್ನುವ ಬಗ್ಗೆ ಚರ್ಚೆ ನಡೆಯುತ್ತಿದೆ.
ಸೋಶಿಯಲ್ ಮೀಡಿಯಾ ಪೋಸ್ಟ್
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಪೋಸ್ಟ್ ಒಂದರಲ್ಲಿ ಒಂದೆಡೆ ಸೊಸೆಗೆ ಸ್ವತಂತ್ರವಾಗಿ ಉದ್ಯೋಗ ಮಾಡಲು ಪಾಠ ಹೇಳಿ, ಎರಡನೇ ಮದುವೆ ಮಾಡಿಸಿದ ಅತ್ತೆ ಕುಸುಮಾ. ಇನ್ನೊಂದೆಡೆ ಕೆಲಸ ಮಾಡುತ್ತಿದ್ದ ಸೊಸೆಗೆ ಮದುವೆ ನಂತರ ಮನೆಯಲ್ಲಿಯೇ ಇರುವಂತೆ ಮಾಡುತ್ತಿರುವ ನಂದ ಎನ್ನುವಂತೆ ಇಬ್ಬರನ್ನು ಹೋಲಿಕೆ ಮಾಡಿ ಪೋಸ್ಟ್ ಮಾಡಲಾಗಿದೆ.
ಭಾಗ್ಯಲಕ್ಷ್ಮೀ
ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಆರಂಭದಲ್ಲಿ ಸೊಸೆಗೆ ಮನೆಕೆಲಸ ಮಾಡಬೇಕು ಎಂದು ಪೀಡಿಸುತ್ತಿದ್ದ ಅತ್ತೆ ಕುಸುಮಾ, ಯಾವಾಗ ತನ್ನ ಮಗ ಸೊಸೆಗೆ ಮೋಸ ಮಾಡಿ, ಬೇರೊಬ್ಬಳ ಜೊತೆ ಹೋಗುತ್ತಾಳೆ ಎನ್ನುವುದನ್ನು ತಿಳಿದರೋ, ಅಂದಿನಿಂದ ಸೊಸೆಗೆ ಬೆನ್ನೆಲುಬಾಗಿ ನಿಂತು, ಆಕೆಯ ಪ್ರತಿಯೊಂದು ಕೆಲಸದಲ್ಲಿ ಜೊತೆಯಾಗಿ, ಕೊನೆಗೆ ಸೊಸೆಯನ್ನು ಮದುವೆ ಮಾಡಿಸಿ, ಆಕೆಯ ಜೀವನದಲ್ಲಿ ಬೆಳಕಾದವರು ಕುಸುಮಾ.
ನಂದಗೋಕುಲ
ಇನ್ನು ನಂದಗೋಕುಲ ಧಾರಾವಾಹಿಯಲ್ಲಿ ನಂದಕುಮಾರ್ ತುಂಬಾನೆ ಸ್ಟ್ರಿಕ್ಟ್ ಆದ ಅಪ್ಪ. ಮಕ್ಕಳು ಎಲ್ಲಾ ಕೆಲಸದಲ್ಲಿ ಸರಿಯಾಗಿರಬೇಕು ಎಂದು ಬಯಸುವ ತಂದೆ. ಅಷ್ಟೇ ಅಲ್ಲ, ಸೊಸೆ ಅಮೂಲ್ಯ ವಲ್ಲಭನಿಗೆ ಸಹಾಯವಾಗುತ್ತೆ ಎಂದು ಟ್ಯೂಶನ್ ಕೊಡಲು ಮುಂದಾದರೆ ಅದನ್ನು ತಡೆದು, ಅದಕ್ಕೆ ಸಹಾಯ ಮಾಡಿದ ಮೀನಾಳಿಗೆ ಸಿಕ್ಕಾಪಟ್ಟೆ ಬೈದು, ಅಮೂಲ್ಯಳನ್ನು ಕೆಲಸದಿಂದ ಬಿಡಿಸಿದ್ದಾರೆ. ಇದೀಗ ಕುಸುಮ ಬೆಸ್ಟ್ ಅತ್ತೆಯೋ ಅಥವಾ ನಂದ ಕುಮಾರೋ ಎನ್ನುವ ಪ್ರಶ್ನೆ ವೀಕ್ಷಕರಲ್ಲಿ ಮೂಡಿದೆ.
ಇಬ್ಬರೂ ಒಳ್ಳೆಯವರೇ
ಮಗ ಕೆಟ್ಟವನು ಎಂದು ಗೊತ್ತಾದ ತಕ್ಷಣ ಸೊಸೆಗೆ ಬೆಂಬಲವಾಗಿ ನಿಂತು, ಭಾಗ್ಯ ಓದಿ ಕೆಲಸ ಮಾಡಿ, ಆಕೆಯನ್ನು ಒಳ್ಳೆಯ ಮನೆ ಸೇರುವಂತೆ ಮಾಡಿದ ಅತ್ತೆ ಕುಸುಮಾ ಬೆಸ್ಟ್ ಹೌದು. ಹಾಗಂತ ನಂದಕುಮಾರ್ ಖಂಡಿತವಾಗಿಯೂ ಕೆಟ್ಟವರಲ್ಲ. ನಂದನ ಮಾತು ಸ್ವಲ್ಪ ಒರಟು ಅಷ್ಟೇ. ಇದೀಗ ಮೀನಾ ಮುಂದೆ ಮಾವ ಕ್ಷಮೆ ಕೂಡ ಕೇಳಿದ್ದಾರೆ. ಅಮೂಲ್ಯ ಕೆಲಸಕ್ಕೆ ಹೋಗಬಾರದು ಅನ್ನೋದಕ್ಕೆ ಒಂದೇ ಒಂದು ಕಾರಣ ಅಂದ್ರೆ ಅದು ಅಮೂಲ್ಯ ಅಪ್ಪ ಮತ್ತು ಮನೆಯವರ ಕಾರಣಕ್ಕಾಗಿ. ಹಾಗಾಗಿ ತಮ್ಮ ಸೊಸೆ ಮನೆಯಲ್ಲಿಯೇ ಇರಬೇಕು ಎನ್ನುತ್ತಿದ್ದಾರೆ ನಂದಕುಮಾರ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

