Laughter Chefs Unlimited Entertainment season 3: ಪೈಲ್ವಾನ್‌ನ ಜೊತೆ ಕುಸ್ತಿ ಮಾಡು ಎಂದು ಪತ್ನಿಯನ್ನೇ ನಟನೋರ್ವ ಮುಂದೆ ಬಿಟ್ಟ ಘಟನೆ ರಿಯಾಲಿಟಿ ಶೋವೊಂದರಲ್ಲಿ ನಡೆದಿದೆ. ಅಂದಹಾಗೆ ಪತ್ನಿ ಕೂಡ ಪೈಲ್ವಾನ್‌ ಮೈಮೇಲೆ ಹಾರಿ ಕೂತ ವಿಡಿಯೋ ಬಗ್ಗೆ ಈಗ ಎಲ್ಲ ಕಡೆ ಚರ್ಚೆ ನಡೆಯುತ್ತಿದೆ. 

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ‘ಲಾಫರ್‌ ಶೆಫ್ಸ್‌’ ಶೋ ಪ್ರಸಾರ ಆಗುತ್ತಿದೆ. ಇತ್ತೀಚೆಗೆ ‘ಲಾಫರ್‌ ಶೆಫ್ಸ್ ಅಖಾಡ’ ಎಂಬ ಎಪಿಸೋಡ್‌ ಪ್ರಸಾರ ಆಗಿದೆ. ಅದರಲ್ಲಿ ಪೈಲ್ವಾನ್‌ ಆಗಮನವಾಗಿದೆ. ದೇಶದ ಪೈಲ್ವಾನ್‌ರು ಈ ವೇದಿಕೆಗೆ ಬಂದಿದ್ದಾರೆ. ಆ ವೇಳೆ ಪೈಲ್ವಾನ್‌ನ್ನು ಮಣಿಸು ಎಂದು ಖ್ಯಾತ ನಟನೋರ್ವ ತನ್ನ ಪತ್ನಿಯನ್ನು ಮುಂದೆ ಬಿಟ್ಟ ವಿಡಿಯೋ ಈಗ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸ್ಪರ್ಧಿಗಳು ಯಾರು ಯಾರು?

ಅಂಕಿತಾ ಲೋಖಂಡೆ, ವಿಕ್ಕಿ ಜೈನ್, ಅಲಿ ಗೋನಿ, ಕರಣ್ ಕುಂದ್ರಾ, ಕೃಷ್ಣ ಅಭಿಷೇಕ್ , ಕಾಶ್ಮೀರಾ ಶಾ, ನಿಯಾ ಶರ್ಮಾ, ಸುದೇಶ್ ಲಹರಿ, ಅಭಿಷೇಕ್ ಕುಮಾರ್, ಸಮರ್ಥ್ ಜುರೆಲ್, ಎಲ್ವಿಶ್ ಯಾದವ್, ಕರಣ್ ಕುಂದ್ರಾ , ತೇಜಸ್ವಿ ಪ್ರಕಾಶ್, ಅರ್ಮಾನ್‌ ಮಲಿಕ್‌‌

ಪೈಲ್ವಾನ್‌ ನೋಡಿ ಕಂಗಾಲಾದ ಸ್ಪರ್ಧಿಗಳು

ಪೈಲ್ವಾನ್‌ಗಳ ಶಕ್ತಿ, ಸಾಮರ್ಥ್ಯ ನೋಡಿ ಅನೇಕರು ಕಂಗಾಲಾಗಿದ್ದಾರೆ.ನಿಶ್ರಿನ್‌ ಪಾರೀಖ್‌ ಅವರು ಏಷ್ಯಾ, ಜಾಗತಿಕ ಬಾಡಿ ಬಿಲ್ಡಿಂಗ್‌ನಲ್ಲಿ ಭಾಗವಹಿಸುತ್ತಾರೆ. ಇವರಿಗೆ 60 ವರ್ಷವಂತೆ. ಕಿರಣ್‌ ದೆಂಬ್ಲಾ ಅವರು 51 ವರ್ಷದವರಾಗಿದ್ದು, 20 ವರ್ಷಗಳಿಂದ ಬಾಡಿ ಬಿಲ್ಡಿಂಗ್‌ನಲ್ಲಿ ಸಕ್ರಿಯವಾಗಿದ್ದಾರೆ. ಅನುಷ್ಕಾ ಶೆಟ್ಟಿ, ಎಸ್‌ ಎಸ್‌ ರಾಜಮೌಳಿ, ತಾಪ್ಸಿಗೂ ಕೂಡ ಪರ್ಸನಲ್‌ ಟ್ರೇನರ್‌ ಕೂಡ ಹೌದು.

ಅಡುಗೆಗೆ ಸಹಾಯ ಮಾಡಬೇಕು

ಸ್ಪರ್ಧಿಗಳು ಅಡುಗೆ ಮಾಡುತ್ತಾರೆ, ಇಲ್ಲಿ ಒಂದಿಷ್ಟು ತರಲೆ, ತಮಾಷೆ ಕೂಡ ಇರುತ್ತದೆ. ಇವರಿಗೆ ಪೈಲ್ವಾನ್‌ಗಳು ಸಹಾಯ ಕೂಡ ಮಾಡುತ್ತಾರೆ. ಪೈಲ್ವಾನ್‌ಗಳು ಕಲ್ಲಿನಲ್ಲಿ ಅರೆದು ಚಟ್ನಿ ಮಾಡಿಕೊಟ್ಟಿದ್ದಾರೆ.

ಪೈಲ್ವಾನನ ಮೇಲೆ ಹಾರಿ ಕೂತ ಕಾಶ್ಮೇರಾ

ಪೈಲ್ವಾನ್‌ಗಳ ಜೊತೆ ಸ್ಪರ್ಧಿಗಳು ಕುಸ್ತಿ ಮಾಡಲು ಮುಂದಾಗಿದ್ದಾರೆ. ಆ ವೇಳೆ ಹಾಸ್ಯನಟ ಕೃಷ್ಣ ಅಭಿಷೇಕ್‌ ಅವರೇ ತಮ್ಮ ಪತ್ನಿ ಕಾಶ್ಮೇರಾ ಶಾ ಅವರನ್ನು ಮುಂದೆ ಬಿಟ್ಟಿದ್ದಾರೆ. ಕಾಶ್ಮೇರಾ ಶಾ ಅವರಂತೂ ಪೈಲ್ವಾನನ ಮೈಮೇಲೆ ಹಾರಿ ಕೂತಿದ್ದಾರೆ. ಇದನ್ನು ನೋಡಿ ಅಲ್ಲಿದ್ದವರೆಲ್ಲ ಕಂಗಾಲಾಗಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ

ಪೈಲ್ವಾನ್‌ ಜೊತೆ ಹೋರಾಡು ಎಂದು ಕೃಷ್ಣ ಅಭಿಷೇಕ್‌ ಕಳಿಸಿರೋ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ. ಯಾವಾಗಲೂ ಕಾಮಿಡಿ ಮಾಡುತ್ತ, ಪತ್ನಿಯ ಕಾಲೆಳೆಯುತ್ತಿದ್ದ ಕೃಷ್ಣ, ಈಗ ಪತ್ನಿಯನ್ನು ಕುಸ್ತಿ ಮಾಡು ಎಂದು ಕಳಿಸಿರೋದು ಎಲ್ಲರಿಗೂ ಆಶ್ಚರ್ಯ ತಂದಿದೆ. ಕೃಷ್ಣ ಅಭಿಷೇಕ್‌ ತರ ಇದ್ದರೆ ಯಾವ ಪತ್ನಿಗೂ ಮಾನಸಿಕ ಸಮಸ್ಯೆ ಆಗೋದಿಲ್ಲ, ಸಂಶಯ ಪಡೋರು ಕೂಡ ಇರೋದಿಲ್ಲ ಎಂದು ಹೇಳಿದ್ದಾರೆ. ಇನ್ನೊಂದು ಕಡೆ ಈ ರೀತಿ ಗಂಡ ನಡೆದುಕೊಳ್ಳೋದು, ಹೆಂಡತಿಯನ್ನು ಹೀಗೆ ಫ್ರೀ ಬಿಡೋದು ಸರಿ ಅಲ್ಲ ಎಂದು ಹೇಳಿದ್ದಾರೆ. ನಮ್ಮ ಕಡೆ ಈ ರೀತಿ ಗಂಡ ಮಾಡಿದ್ರೆ ಚಪ್ಪಲಿಯಲ್ಲಿ ಬೀಳುತ್ತೆ ಎಂದು ಕೂಡ ಕೆಲವರು ಸೋಶಿಯಲ್‌ ಮೀಡಿಯಾದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.