- Home
- Entertainment
- TV Talk
- Bhagyalakshmi Serial: ಮೊದಲ ರಾತ್ರಿ ಮೊದಲೇ ಭಾಗ್ಯ ಎಡವಟ್ಟು- ಶೂಟಿಂಗ್ನಲ್ಲಿ ಮುಖ ಮುಚ್ಚಿಕೊಂಡ ನಟಿ
Bhagyalakshmi Serial: ಮೊದಲ ರಾತ್ರಿ ಮೊದಲೇ ಭಾಗ್ಯ ಎಡವಟ್ಟು- ಶೂಟಿಂಗ್ನಲ್ಲಿ ಮುಖ ಮುಚ್ಚಿಕೊಂಡ ನಟಿ
ಭಾಗ್ಯಲಕ್ಷ್ಮಿ ಸೀರಿಯಲ್ನಲ್ಲಿ ಭಾಗ್ಯ ಮತ್ತು ಆದಿ ಒಂದಾಗಿದ್ದು, ನಾದಿನಿಯರ ಕಾಟ ಶುರುವಾಗಿದೆ. ಇದರ ನಡುವೆ, ಶೂಟಿಂಗ್ ವೇಳೆ ನಡೆದ ತಮಾಷೆಯ ಘಟನೆಯೊಂದರಲ್ಲಿ, ಮೊದಲ ರಾತ್ರಿಗೂ ಮುನ್ನ ಭಾಗ್ಯ ಆದಿಯ ಟೋಪಿ ಕಿತ್ತ ವಿಡಿಯೋ ವೈರಲ್ ಆಗಿದೆ.

ಒಂದಾದ ಭಾಗ್ಯ- ಆದಿ
ಭಾಗ್ಯಲಕ್ಷ್ಮಿ ಸೀರಿಯಲ್ (Bhagyalakshmi Serial)ನಲ್ಲಿ ಸದ್ಯ ಭಾಗ್ಯ ಮತ್ತು ಆದಿ ಒಂದಾಗಿದ್ದಾರೆ. ಇದೀಗ ಭಾಗ್ಯ 2.0 ಶುರುವಾಗಿದೆ. ಸೀರಿಯಲ್ ಮುಗಿಯತ್ತೆ ಅಂದುಕೊಂಡಾಗಲೇ ಈಗ ಮತ್ತೊಂದು ಗೋಳಾಟ ಶುರುವಾಗುವ ಹಾಗಿದೆ.
ನಾದಿನಿಯರ ಕಾಟ
ಭಾಗ್ಯ ಮನೆಯ ಒಳಕ್ಕೆ ಕಾಲಿಡುತ್ತಲೇ ನಾದಿನಿಯರ ಕಾಟ ಶುರುವಾಗಿದೆ. ಭಾಗ್ಯ ಒಂದು ಕಡೆ ಹಿಂಸೆ ಪಟ್ಟಿದ್ದು ಸಾಲದು ಎನ್ನುವಂತೆ ಇದೀಗ ಮತ್ತೊಂದು ಮನೆಯಲ್ಲಿಯೂ ನರಕ ಶುರುವಾಗಿದ್ದು, ಮತ್ತೊಂದಿಷ್ಟು ವರ್ಷ ಈಕೆಯ ಇನ್ನೊಂದು ಗೋಳಾಟ ನೋಡಬೇಕಾ ಎನ್ನುವ ಹಾಗಿದೆ ಸ್ಥಿತಿ. ಅದೇ ಇನ್ನೊಂದೆಡೆ, ತಾಂಡವ್ ಕೂಡ ಭಾಗ್ಯಳ ಮೇಲೆ ಸೇಡು ತೀರಿಸಿಕೊಳ್ಳಲು ಕಾಯ್ತಿದ್ದು, ಆತನಿಗೆ ಕನ್ನಿಕಾ ಸಾಥ್ ಕೊಡಲಿದ್ದಾಳೆ.
ಗೋಳಿನ ನಡುವೆ ಫನ್ನಿ
ಇವೆಲ್ಲಾ ಗೋಳಿನ ನಡುವೆ ಫನ್ನಿ ವಿಡಿಯೋ ಒಂದು ವೈರಲ್ ಆಗಿದೆ. ಈಗ ಭಾಗ್ಯ ಮತ್ತು ಆದಿಯ ಮೊದಲ ರಾತ್ರಿ ನಡೆಯಬೇಕಿದೆ. ಭಾಗ್ಯಳನ್ನು ಮನೆ ತುಂಬಿಸಿಕೊಂಡು ಆಗಿದೆ.
ಆದಿಯ ಟೋಪಿ ಭಾಗ್ಯ ಕೈಯಲ್ಲಿ
ಆದರೆ ಶೂಟಿಂಗ್ ವೇಳೆ, ಆದಿಯ ಟೋಪಿ ಮತ್ತು ಹಾರವನ್ನು ಎಳೆದುಬಿಟ್ಟಿದ್ದಾರೆ ಭಾಗ್ಯ ಪಾತ್ರಧಾರಿ ಸುಷ್ಮಾ ಕೆ. ರಾವ್. ಅಯ್ಯೋ ಇದು ನನ್ನ ಕೈಗೆ ಹೇಗೆ ಬಂತು ಎಂದು ಪ್ರಶ್ನಿಸಿದ್ದಾರೆ.
ನಾನವಳಲ್ಲ, ನಾನವಳಲ್ಲ...
ಕಿತ್ತವಳು ನಾನಲ್ಲ, ನಾನವಳಲ್ಲ ಎಂದು ತಮಾಷೆ ಮಾಡಿದ್ದಾರೆ ಸುಷ್ಮಾ. ಅಷ್ಟಕ್ಕೂ ಸುಷ್ಮಾ ಅವರು ಶೂಟಿಂಗ್ ಟೈಮ್ನಲ್ಲಿ ಸಕತ್ ತಮಾಷೆ ಮಾಡುತ್ತಿರುತ್ತಾರೆ. ಇದೀಗಲೂ ಅಂಥದ್ದೇ ಒಂದು ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.
ಫಸ್ಟ್ನೈಟ್ಗೂ ಮೊದ್ಲೇ
ಅದಕ್ಕೆ ನೆಟ್ಟಿಗರು ಅಯಯ್ಯೋ ಫಸ್ಟ್ನೈಟ್ಗೂ ಮೊದ್ಲೇ ಎಲ್ಲಾ ಬಿಚ್ಚಿಬಿಟ್ರಾ ಎಂದು ನಟಿಯ ಕಾಲೆಳೆಯುತ್ತಿದ್ದಾರೆ. ಒಟ್ಟಿನಲ್ಲಿ ಭಾಗ್ಯಳ ಹೊಸ ಜೀವನ ಇನ್ನು ಹೇಗಿರುತ್ತೋ ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

