- Home
- Entertainment
- TV Talk
- Bigg Boss ಮನೆಯಲ್ಲಿ ಪತ್ನಿ ನೋಡಿ ರಘು ಕಣ್ಣೀರು: ಆ ವಿಷ್ಯವನ್ನೇ ಮರೆತುಬಿಟ್ಟರು! ಬಿಗ್ಬಾಸ್ ಬಿಡಬೇಕಲ್ಲಾ?
Bigg Boss ಮನೆಯಲ್ಲಿ ಪತ್ನಿ ನೋಡಿ ರಘು ಕಣ್ಣೀರು: ಆ ವಿಷ್ಯವನ್ನೇ ಮರೆತುಬಿಟ್ಟರು! ಬಿಗ್ಬಾಸ್ ಬಿಡಬೇಕಲ್ಲಾ?
ಬಿಗ್ಬಾಸ್ ಮನೆಯಲ್ಲಿ ಕುಟುಂಬಸ್ಥರ ಮಿಲನದ ಭಾಗವಾಗಿ ಮ್ಯೂಟಂಟ್ ರಘು ಅವರ ಪತ್ನಿ ಗ್ರೀಷ್ಮಾ ಆಗಮಿಸಿದ್ದಾರೆ. ಪತ್ನಿಯನ್ನು ಕಂಡು ಭಾವುಕರಾದ ರಘು, ಆಕೆಯ ಹುಟ್ಟುಹಬ್ಬವನ್ನು ಮನೆಯಲ್ಲಿಯೇ ಅದ್ಧೂರಿಯಾಗಿ ಆಚರಿಸಿ ಸಂಭ್ರಮಿಸಿದರು.

ಕುಟುಂಬಸ್ಥರ ಮಿಲನ
ಇದೀಗ ಬಿಗ್ಬಾಸ್ (Bigg Boss) ಮನೆಯಲ್ಲಿ ಕುಟುಂಬಸ್ಥರ ಮಿಲನದ ಸಂಭ್ರಮ. ಇದಾಗಲೇ ಹಲವು ಸ್ಪರ್ಧಿಗಳ ಕುಟುಂಬದವರು ಆಗಮಿಸಿದ್ದಾರೆ. ಹಲವಾರು ದಿನಗಳಿಂದ ಕುಟುಂಬದವರನ್ನು ನೋಡದ ಸ್ಪರ್ಧಿಗಳು ಸಹಜವಾಗಿ ಕಣ್ಣೀರಾಗಿದ್ದಾರೆ. ಪತ್ನಿ- ಪತಿ, ಮಕ್ಕಳು, ಅಪ್ಪ-ಅಮ್ಮ, ಸಹೋದರರು... ಹೀಗೆ ತಮ್ಮ ಆತ್ಮೀಯರನ್ನು ಕಂಡು ಸ್ಪರ್ಧಿಗಳು ಭಾವುಕರಾಗಿದ್ದಾರೆ.
ರಘು ಪತ್ನಿ ಆಗಮನ
ಇದೀಗ ಮ್ಯೂಟಂಟ್ ರಘು (Bigg Boss Mutant Raghu) ಪತ್ನಿ ಗ್ರೀಷ್ಮಾ ಅವರು ಬಿಗ್ಬಾಸ್ ಮನೆಯೊಳಕ್ಕೆ ಬಂದಿದ್ದಾರೆ. ಯಾರು ಎಷ್ಟೇ ಬಲಿಷ್ಠರಾದರೂ, ತಮ್ಮ ಆತ್ಮೀಯರನ್ನು ಬಹಳ ದಿನಗಳ ಬಳಿಕ ನೋಡಿದಾಗ ಭಾವುಕರಾಗಿ, ಕಣ್ಣೀರಾಗುವುದು ಸಹಜ. ಅದೇ ರೀತಿ ರಘು ಉರ್ಫ್ ರಾಘವೇಂದ್ರ ಹೊಂಡದಕೇರಿ ಅವರು ಕೂಡ ಕಣ್ಣೀರಾಗಿ ಅರೆ ಕ್ಷಣ ಸೈಲೆಂಟ್ ಆಗಿ ಬಿಟ್ಟಿದ್ದಾರೆ.
ವಿಷ್ ಮಾಡಲು ಮರೆತರು!
ಪತ್ನಿಯನ್ನು ನೋಡಿದ ಖುಷಿಯಲ್ಲಿ ರಘು ಅವರು ಆ ಒಂದು ಮಹತ್ವ ವಿಷಯವನ್ನೇ ಮರೆತುಬಿಟ್ಟಿದ್ದರು. ಮರೆತುಬಿಟ್ಟಿದ್ದರು ಎನ್ನುವುದಕ್ಕಿಂತ ಪತ್ನಿಯನ್ನು ನೋಡಿದ ಖುಷಿಯಲ್ಲಿ ಪತ್ನಿಗೆ ವಿಷ್ ಮಾಡೋದನ್ನೇ ಮರೆತುಬಿಟ್ಟರು! ಅದು ಪತ್ನಿ ಗ್ರೀಷ್ಮಾ (Bigg Boss Mutant Raghus wife Greeshma) ಅವರ ಹುಟ್ಟುಹಬ್ಬ ಎನ್ನುವುದು! ಇದನ್ನು ಗ್ರೀಷ್ಮಾ ಅವರೇ ನೆನಪು ಮಾಡಿದಾಗ, ಆ ತಲ್ಲಣದಲ್ಲಿದ್ದ ರಘು ಅವರು ನನಗೆ ಗೊತ್ತು ಎಂದಿದ್ದಾರೆ.
ಭರ್ಜರಿ ಹುಟ್ಟುಹಬ್ಬ
ಬಳಿಕ ಪತ್ನಿಯನ್ನು ಆತ್ಮೀಯವಾಗಿ ಆಲಿಂಗನಮಾಡಿಕೊಂಡು ಭಾವುಕರಾಗಿದ್ದಾರೆ. ಬಳಿಕ ಬಿಗ್ಬಾಸ್ ಬಹುದೊಡ್ಡ ಸರ್ಪ್ರೈಸ್ ಮಾಡಿತ್ತು. ಅದೇ ಗ್ರೀಷ್ಮಾ ಅವರ ಹುಟ್ಟುಹಬ್ಬವನ್ನು ಬಿಗ್ಬಾಸ್ ಮನೆಯಲ್ಲಿಯೇ ಅದ್ಧೂರಿಯಾಗಿ ಆಚರಿಸಲಾಯಿತು.
ಕೊನೆಯ ಉಸಿರು ಇರುವವರೆಗೂ...
ಇಂಥ ಹುಟ್ಟುಹಬ್ಬವನ್ನು ನನ್ನ ಜನ್ಮದಲ್ಲಿ ಆಚರಿಸಿರಲಿಲ್ಲ. ಕೊನೆಯ ಉಸಿರು ಇರುವವರೆಗೂ ಇದನ್ನು ನೆನಪಿನಲ್ಲಿ ಇಟ್ಟುಕೊಳ್ಳುತ್ತೇನೆ ಎಂದರು ರಘು. ಅಂದಹಾಗೆ, ರಘು ಅವರು ಕಾಂತಾರ ಚಾಪ್ಟರ್ 1 ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸಿದ್ದರೆ, ಇವರ ಪತ್ನಿ ಗ್ರೀಷ್ಮಾ ಮಾಡೆಲ್ ಆಗಿದ್ದಾರೆ.
ಪತ್ನಿ ಗ್ರೀಷ್ಮಾ ಕುರಿತು
ಅನೇಕ ಜಾಹೀರಾತುಗಳಲ್ಲಿ ಕಾಣಿಸಿಕೊಳ್ತಿರೋ ಗ್ರೀಷ್ಮಾ ಸದ್ಯ ಫಿಟ್‌ನೆಸ್ ಟ್ರೇನಿಂಗ್ ಕೊಡುತ್ತಿದ್ದಾರೆ. ಚಂದನ್ ಶೆಟ್ಟಿ ಸೇರಿದಂತೆ ಕೆಲ ಸೆಲೆಬ್ರಿಟಿಗಳು ಕೂಡ ಇಲ್ಲಿ ಟ್ರೇನಿಂಗ್ ಪಡೆದು, ತೂಕ ಇಳಿಸಿಕೊಂಡಿದ್ದಾರೆ, ಸಿಕ್ಸ್ ಪ್ಯಾಕ್ ಕೂಡ ಮಾಡಿಕೊಂಡಿದ್ದಾರೆ. ಗ್ರೀಷ್ಮಾ ಅವರು ಈಗ ಚಿತ್ರರಂಗದಲ್ಲಿ ನಡೆಯುವ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಅಥವಾ ಇನ್ಯಾವುದೇ ಆಟವಿದ್ದಾಗಲೂ ಕೂಡ, ಅಲ್ಲಿ ಭಾಗವಹಿಸುತ್ತಾರೆ. ರಘು ಈಗ ಬಿಗ್ ಬಾಸ್ ಮನೆಯಲ್ಲಿ ಇರೋದರಿಂದ ಗ್ರೀಷ್ಮಾ ಅವರು ಜಿಮ್ ನೋಡಿಕೊಳ್ಳುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

