- Home
- Entertainment
- TV Talk
- Naa Ninna Bidalaare: ಮಗಳ ರಕ್ಷಣೆಗೆ ಕಾಳಿ ಅವತಾರವೆತ್ತಿದ ಶರತ್- ಮೈ ಝುಂ ಎನ್ನುವ ರೋಚಕ ಸಂಚಿಕೆ
Naa Ninna Bidalaare: ಮಗಳ ರಕ್ಷಣೆಗೆ ಕಾಳಿ ಅವತಾರವೆತ್ತಿದ ಶರತ್- ಮೈ ಝುಂ ಎನ್ನುವ ರೋಚಕ ಸಂಚಿಕೆ
ಮಾಳವಿಕಾ ತನ್ನ ಮಾಯಾಜಾಲದಿಂದ ಹಿತಾಳನ್ನು ಬಲಿ ಕೊಡಲು ಮುಂದಾಗುತ್ತಾಳೆ. ಈ ವೇಳೆ ಶರತ್ ಮೇಲೆ ಗೂಂಡಾಗಳು ದಾಳಿ ಮಾಡುವುದನ್ನು ಕಂಡು ಹಿತಾ 'ಅಪ್ಪಾ' ಎಂದು ಕೂಗಿ ಮೂರ್ಛೆ ಹೋಗುತ್ತಾಳೆ. ಮಗಳ ರಕ್ಷಣೆಗಾಗಿ ಶರತ್ ಕಾಳಿಯ ಅವತಾರ ತಾಳಿ, ಮಾಯಾಜಾಲವನ್ನು ಭೇದಿಸಲು ಸಿದ್ಧನಾಗುತ್ತಾನೆ.

ಮಾಯಾಜಾಲದಲ್ಲಿ ಎಲ್ಲರೂ
ನಾ ನಿನ್ನ ಬಿಡಲಾರೆ (Naa Ninna Bidalaare) ಸೀರಿಯಲ್ ರೋಚಕ ಘಟ್ಟ ತಲುಪಿದೆ. ಮಾಳವಿಕಾ ತನ್ನ ಮಾಯಾಜಾಲದಲ್ಲಿ ಅಂಬಿಕಾ, ದುರ್ಗಾ ಮತ್ತು ಹಿತಾಳನ್ನು ಬಂಧಿಸಿದ್ದಾಳೆ.
ಹಿತಾಳ ಬ*ಲಿ
ಹಿತಾಳ ಬ*ಲಿ ಕೊಡುವುದಕ್ಕಾಗಿ ಅವಳನ್ನು ಮಾಯಾಜಾಲದಲ್ಲಿ ಸಿಲುಕಿಸಿ, ಅಂಬಿಕಾ ದನಿಯಿಂದ ಅವಳನ್ನು ಕರೆದಿದ್ದಾಳೆ. ಅಮ್ಮನೇ ಕರೆಯುತ್ತಿದ್ದಾಳೆ ಎಂದುಕೊಂಡ ಹಿತಾ ಆ ದನಿ ಬಂದ ಕಡೆಗೆ ಹೋಗುತ್ತಿದ್ದಾಳೆ.
ತಡೆಯಲು ಬಂದ ಶರತ್
ಅಷ್ಟರಲ್ಲಿಯೇ ಹಿತಾ ಒಬ್ಬಳೇ ನಡೆದುಕೊಂಡು ಹೋಗುತ್ತಿರುವುದನ್ನು ನೋಡಿದ ಶರತ್ ಅವಳನ್ನು ತಡೆಯಲು ಹೋದಾಗ, ಅವಳು, ನಿನಗೆ ನನ್ನ ಅಮ್ಮನ ಜೊತೆ ಇರಲು ಇಷ್ಟವಿಲ್ಲ. ಅದಕ್ಕೇ ತಡೆಯುತ್ತಿರುವೆ ಎಂದು ಬೈದಿದ್ದಾಳೆ.
ಶರತ್ ಮೇಲೆ ದಾಳಿ
ಅದೇ ಸಮಯದಲ್ಲಿ ಮಾವಳಿಕಾ ಕಳುಹಿಸಿದ ಗೂಂಡಾಗಳು ಶರತ್ ಮೇಲೆ ಹಲ್ಲೆ ಮಾಡಿದಾಗ, ಆತ ಬೀಳುತ್ತಾನೆ. ಹಿತಾ ಜೋರಾಗಿ ಅಪ್ಪಾ ಎಂದು ಕೂಗಿ ಅವಳೂ ಮೂರ್ಚೆ ಹೋಗುತ್ತಾಳೆ.
ಅಪ್ಪಾ ಎಂದ ಹಿತಾ
ಅಪ್ಪಾ ಎಂಬ ದನಿ ಎಷ್ಟೋ ವರ್ಷಗಳ ಬಳಿಕ ಮಗಳ ಬಾಯಿಂದ ಕೇಳುತ್ತಲೇ ಶರತ್ಗೆ ದೇವಿಯ ಕರುಣೆ ಆಗುತ್ತದೆ. ಮಗಳನ್ನು ಕಾಪಾಡುವುದಕ್ಕಾಗಿ ಶರತ್ ಕಾಳಿಯ ಅವತಾರ ಎತ್ತುತ್ತಾನೆ.
ಅಮ್ಮನಾಗಿ ಕಾಳಿ ಅವತಾರ
ಕಾಳಿ ಎಂದರೆ ಸ್ತ್ರೀ ಎನ್ನುವ ಮಾತು ಇದ್ದರೂ, ಇಲ್ಲಿ, ಮಗಳ ರಕ್ಷಣೆಗೆ ಅಪ್ಪನೇ ಅಮ್ಮನಾಗಿ ಹಿತಾಳ ಪ್ರಾಣ ಕಾಪಾಡುವಂತೆ ತೋರಿಸಲಾಗಿದೆ. ಮೈ ನವಿರೇಳುವ ರೋಚಕ ಸಂಚಿಕೆ ಇದಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

