- Home
- Entertainment
- TV Talk
- Naa Ninna Bidalaare ರೋಚಕ ಟ್ವಿಸ್ಟ್: ಭೂತಕಾಲಕ್ಕೆ ಹೋದ ದೆವ್ವ! ಇನ್ನು ನಡೆಯಲ್ಲ ಮಾಳವಿಕಾ ಆಟ
Naa Ninna Bidalaare ರೋಚಕ ಟ್ವಿಸ್ಟ್: ಭೂತಕಾಲಕ್ಕೆ ಹೋದ ದೆವ್ವ! ಇನ್ನು ನಡೆಯಲ್ಲ ಮಾಳವಿಕಾ ಆಟ
'ನಾ ನಿನ್ನ ಬಿಡಲಾರೆ' ಧಾರಾವಾಹಿಯಲ್ಲಿ, ದೆವ್ವವಾಗಿರುವ ಅಂಬಿಕಾ ತನ್ನ ಸಾವಿನ ರಹಸ್ಯವನ್ನು ಭೇದಿಸಲು ಭೂತಕಾಲಕ್ಕೆ ಹೋಗುತ್ತಾಳೆ. ಅಲ್ಲಿ ತನ್ನ ಸಾವಿಗೆ ಮಾಯಾ ಮತ್ತು ಅತ್ತೆ ಮಾಳವಿಕಾ ಕಾರಣ ಎಂದು ತಿಳಿದುಬರುತ್ತದೆ.

ನಾ ನಿನ್ನ ಬಿಡಲಾರೆ ಸೀರಿಯಲ್
ದೆವ್ವ, ಭೂತ, ಪಿಶಾಚಿ ಇರುವ ಸೀರಿಯಲ್ಗಳನ್ನು, ಸಿನಿಮಾಗಳನ್ನು ನೋಡಲು ಇಷ್ಟಪಡುವ ದೊಡ್ಡ ವರ್ಗವೇ ಇದೆ. ಇದೇ ಕಾರಣಕ್ಕೆ ಜೀ ಕನ್ನಡದ ನಾ ನಿನ್ನ ಬಿಡಲಾರೆ ಸೀರಿಯಲ್ ಕೂಡ ಸಕತ್ ಫೇಮಸ್ ಆಗುತ್ತಿದೆ. ಇದರಲ್ಲಿ ಇರುವ ಕ್ಯೂಟ್ ದೆವ್ವ ಅಂಬಿಕಾ ಎಲ್ಲರ ಫೆವರೆಟ್ ಆಗಿದ್ದಾಳೆ.
ಶಂಭುವಿನಿಂದ ಶಕ್ತಿ
ಇದೀಗ ತನ್ನ ಸಾವಿಗೆ ಯಾರು ಕಾರಣ ಎನ್ನುವುದನ್ನು ಕಂಡುಹಿಡಿಯಲು ಅಂಬಿಕಾ ನಿರ್ಧರಿಸಿದ್ದಾಳೆ. ಆ ಶಕ್ತಿಯನ್ನು ಅವಳ ಅಪ್ಪ ಶಂಭು ಅಂಬಿಕಾಗೆ ನೀಡಿದ್ದಾನೆ.
ಭೂತಕಾಲಕ್ಕೆ ಸರಿದ ಅಂಬಿಕಾ
ಈ ಮೂಲಕ, ದೆವ್ವ ಆಗಿರೋ ಅಂಬಿಕಾ, ಈಗ ಭೂತ ಕಾಲಕ್ಕೆ ಹೋಗಿದ್ದಾಳೆ. ತನ್ನ ಸಾವಿಗೆ ಯಾರು ಕಾರಣ ಎಂದು ತಿಳಿದುಕೊಳ್ಳಲು ತಾನು ಬೆಂಕಿಯಲ್ಲಿ ಬೆಂದು ಹೋಗಿರುವ ದಿನಕ್ಕೆ ಸರಿದಿದ್ದಾಳೆ.
ಸತ್ಯ ತಿಳಿದ ದೆವ್ವ
ಅಲ್ಲಿ ಅವಳಿಗೆ ಮಾಯಾ ಮತ್ತು ಮಾಳವಿಕಾ ಕುತಂತ್ರದಿಂದ ಸಾಯಿಸಿರುವುದು ತಿಳಿದಿದೆ. ಮಾಯಾ ಬೆಂಕಿ ಕಡ್ಡಿ ಗೀರಿ ಮನೆಯನ್ನು ಭಸ್ಮ ಮಾಡಿದ್ದರೆ, ಮಾಳವಿಕಾ ಅವಳಿಗೆ ನೆರವಾಗ್ತಿರೋದು ಅಂಬಿಕಾಗೆ ಕಂಡಿದೆ.
ಅಂಬಿಕಾ ಕೋಪ
ಇದೀಗ ಭೂತಕಾಲದಲ್ಲಿಯೇ ಇರುವ ಅಂಬಿಕಾ ಕೊತಕೊತ ಕುದಿಯುತ್ತಿದ್ದಾಳೆ. ಇಷ್ಟು ದಿನ ಅತ್ತೆ ಮಾಳವಿಕಾ ತುಂಬಾ ಒಳ್ಳೆಯವಳು ಅಂದುಕೊಂಡಿದ್ದಳು ಅವಳು. ಅದರೆ ಇದೀಗ ಬಣ್ಣ ಬಯಲಾಗಿದೆ.
ಮಾಳವಿಕಾಳಿಗೆ ಪಾಠ
ಈಗ ಮಾಳವಿಕಾ ಮತ್ತು ಮಾಯಾಳ ಕಥೆ ಮುಗಿಸಲು ಪಣ ತೊಟ್ಟಿದ್ದಾಳೆ ಅಂಬಿಕಾ, ಭೂತಕಾಲದಲ್ಲಿಯೇ ಮಾಳವಿಕಾಳ ಬ*ಲಿ ತೆಗೆದುಕೊಳ್ಳಲು ನೋಡುತ್ತಿದ್ದಾಳೆ.ಆದರೆ ತಂತ್ರ ಮಂತ್ರ ವಿದ್ಯೆ ಗೊತ್ತಿರೋ ಮಾಳವಿಕಾ ಅಷ್ಟು ಸುಲಭದಲ್ಲಿ ಸಾಯುವವಳು ಅಲ್ಲ, ಆಕೆ ಸತ್ತರೆ ಸೀರಿಯಲ್ ಮುಗಿಯುವ ಕಾರಣ, ನಿರ್ದೇಶಕರು ಆಕೆಯನ್ನು ಸಾಯಿಸುವುದೂ ಇಲ್ಲ. ಆದ್ದರಿಂದ ಇದೀಗ ಸೀರಿಯಲ್ ಮತ್ತಷ್ಟು ಕುತೂಹಲ ಕೆರಳಿಸುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

