- Home
- Entertainment
- TV Talk
- ನನಗೆ 2ನೇ ಮದುವೆಯಾಗಿ 2 ವರ್ಷವಾಯ್ತು; ಗಂಡನ ಬಗ್ಗೆ Naa Ninna Bidalaare Serial ಕೋಳಿ ರಮ್ಯ ಮಾತು
ನನಗೆ 2ನೇ ಮದುವೆಯಾಗಿ 2 ವರ್ಷವಾಯ್ತು; ಗಂಡನ ಬಗ್ಗೆ Naa Ninna Bidalaare Serial ಕೋಳಿ ರಮ್ಯ ಮಾತು
Kannada Actress Koli Ramya News: ಕನ್ನಡದ ಕೆಲವು ರಿಯಾಲಿಟಿ ಶೋ, ಪುಟ್ಟಗೌರಿ ಮದುವೆ ಧಾರಾವಾಹಿ ಖ್ಯಾತಿಯ ನಟಿ ಕೋಳಿ ರಮ್ಯಾ ಅವರೀಗ ‘ನಾ ನಿನ್ನ ಬಿಡಲಾರೆ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಯುಟ್ಯೂಬ್ ಚಾನೆಲ್ ಹೊಂದಿರುವ ಅವರು ಆಗಾಗ ಪ್ರೇಕ್ಷಕರ ಪ್ರಶ್ನೆಗಳಿಗೆ ಉತ್ತರ ಕೊಡುತ್ತಿರುತ್ತಾರೆ.

ಮೊದಲ ಮದುವೆಗೆ ಡಿವೋರ್ಸ್ ಆಯ್ತು
ಅಂದಹಾಗೆ ಕಳೆದ ಎಂಟು ವರ್ಷಗಳ ಹಿಂದೆ ನಟಿ ರಮ್ಯಾ ಅವರಿಗೆ ಡಿವೋರ್ಸ್ ಆಗಿದೆ. ಈ ಹಿಂದೆ ಅವರು ಕನ್ನಡದ ಖ್ಯಾತ ಕಿರುತೆರೆ ನಟನನ್ನು ಪ್ರೀತಿಸಿ ಮದುವೆಯಾಗಿದ್ದರು. ಇವರಿಬ್ಬರು ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ ನಟಿಸಿದ್ದರು.
ದೂರ ಆಗಿ ಎಂಟು ವರ್ಷವಾಯ್ತು
ಮನಸ್ತಾಪ, ಭಿನ್ನಾಭಿಪ್ರಾಯ ಬಂದು ಈ ಜೋಡಿ ದೂರ ಆಗಿ ಎಂಟು ವರ್ಷಗಳಾಗಿವೆ. ಈಗಲೂ ಕೂಡ ವೀಕ್ಷಕರು ಇವರ ಮದುವೆ ಬಗ್ಗೆ ಪ್ರಶ್ನೆ ಮಾಡುತ್ತಾರಂತೆ. ಇದು ರಮ್ಯಾಗೆ ಬೇಸರ ತಂದಿದೆ.
ನಮ್ಮನ್ನು ನಮ್ಮ ಪಾಡಿಗೆ ಬಿಡಿ
“ನಾನು ದೂರ ಆಗಿ ಎಂಟು ವರ್ಷಗಳು ಆಗಿವೆ. ಜನರು ಈ ಬಗ್ಗೆ ಪ್ರಶ್ನೆ ಕೇಳ್ತಾರೆ, ಬೇಸರ ಆಗತ್ತೆ. ನಾನು ಮೂವ್ ಆನ್ ಆಗಿದೀನಿ, ಅವರು ಮೂವ್ ಆನ್ ಆಗಿದ್ದಾರೆ. ಅವರು ಚೆನ್ನಾಗಿದ್ದಾರೆ, ನಾನು ಚೆನ್ನಾಗಿದ್ದೀನಿ. ನಮ್ಮನ್ನು ನಮ್ಮ ಪಾಡಿಗೆ ಬಿಡಿ” ಎಂದು ರಮ್ಯಾ ಹೇಳಿದ್ದಾರೆ.
ಎರಡನೇ ಮದುವೆ ಆಗಿ ಎರಡು ವರ್ಷ
“ನನಗೆ ಎರಡನೇ ಮದುವೆ ಆಗಿ ಎರಡು ವರ್ಷಗಳಾಗಿವೆ. ವರದ ಎನ್ನುವ ಕೊರಿಯೋಗ್ರಾಫರ್‌ನ್ನು ಮದುವೆ ಆಗಿದ್ದೇನೆ. ನಾವು ಚೆನ್ನಾಗಿದ್ದೇವೆ, ನನ್ನ ವೈಯಕ್ತಿಕ ವಿಷಯವನ್ನು ಹೊರಗಡೆ ಹೇಳಲು ಇಷ್ಟವಿಲ್ಲ. ಹೀಗಾಗಿ ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕೋದಿಲ್ಲ” ಎಂದು ಅವರು ಹೇಳಿದ್ದಾರೆ.
ದೃಷ್ಟಿ ಬೀಳುವುದು
ವರದ ಜೊತೆ ಡ್ಯಾನ್ಸ್ ಮಾಡಿ, ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕಿ ಎಂದು ಕೆಲವರು ಹೇಳುತ್ತಾರೆ. ನನಗೆ ಇದೆಲ್ಲ ಈಗ ಇಷ್ಟ ಆಗುತ್ತಿಲ್ಲ. ನಾವು ಪೋಸ್ಟ್ ಹಾಕ್ತಿಲ್ಲ ಎಂದಮಾತ್ರಕ್ಕೆ ನಮ್ಮ ಮಧ್ಯೆ ಏನೋ ಆಗ್ತಿದೆ ಅಂತಲ್ಲ. ದೃಷ್ಟಿ ಬೀಳುವುದು ಎಂದು ಕೂಡ ಸುಮ್ಮನಿದ್ದೇನೆ. ನಾನು ನನ್ನ ಕುಟುಂಬದ ಜೊತೆ ಚೆನ್ನಾಗಿದ್ದೀನಿ ಎಂದು ರಮ್ಯಾ ಹೇಳಿದ್ದಾರೆ.
ವರದ ಮಾಸ್ಟರ್ ಯಾರು?
ಅಂದಹಾಗೆ ವರದ ಮಾಸ್ಟರ್ ಸದ್ಯ ಬೇರೆ ಭಾಷೆಯಲ್ಲಿ ಕೂಡ ಆಕ್ಟಿವ್ ಆಗಿದ್ದು, ಒಂದಲ್ಲ ಒಂದು ರಿಯಾಲಿಟಿ ಶೋಗಳಲ್ಲಿ ಬ್ಯುಸಿ ಆಗುತ್ತಲೇ ಇರುತ್ತಾರೆ.
ಕೋಳಿ ರಮ್ಯಾ ಕೂಡ ಬ್ಯುಸಿ
ಕೋಳಿ ರಮ್ಯಾ ಅವರು ಕನ್ನಡದ ಜೊತೆಗೆ ಬೇರೆ ಭಾಷೆಯ ಕಿರುತೆರೆಯಲ್ಲಿ ಕೂಡ ಆಕ್ಟಿವ್ ಆಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

