- Home
- Entertainment
- TV Talk
- Naa Ninna Bidalaare ಸೀರಿಯಲ್ನಿಂದ ಹೊರನಡೆದು ವೀಕ್ಷಕರಿಗೆ ಶಾಕ್ ಕೊಟ್ಟ ನಟಿ- ಕೋಳಿ ರಮ್ಯಾ ಎಂಟ್ರಿ
Naa Ninna Bidalaare ಸೀರಿಯಲ್ನಿಂದ ಹೊರನಡೆದು ವೀಕ್ಷಕರಿಗೆ ಶಾಕ್ ಕೊಟ್ಟ ನಟಿ- ಕೋಳಿ ರಮ್ಯಾ ಎಂಟ್ರಿ
ಜೀ ಕನ್ನಡದ ಜನಪ್ರಿಯ ಧಾರಾವಾಹಿ 'ನಾ ನಿನ್ನ ಬಿಡಲಾರೆ'ಯಲ್ಲಿ ಪ್ರಮುಖ ಬದಲಾವಣೆಯಾಗಿದೆ. ರುಹಾನಿ ಶೆಟ್ಟಿ ಸೀರಿಯಲ್ನಿಂದ ಹೊರನಡೆದಿದ್ದು, ಅವರ ಜಾಗಕ್ಕೆ 'ಕೋಳಿ ರಮ್ಯಾ' ಖ್ಯಾತಿಯ ನಟಿ ರಮ್ಯಾಶ್ರೀ ಬಾಲಕೃಷ್ಣ ಎಂಟ್ರಿ ಕೊಟ್ಟಿದ್ದಾರೆ.

ಟಾಪ್ನಲ್ಲಿರೋ ಸೀರಿಯಲ್
ವಾಸ್ತವಕ್ಕೆ ದೂರವಾದರೂ ಕೆಲವೊಮ್ಮೆ ಕೆಲವೊಂದು ಸಿನಿಮಾ ಅಥವಾ ಸೀರಿಯಲ್ಗಳು ವೀಕ್ಷಕರನ್ನು ಪುಳಕಿತರನ್ನಾಗಿ ಮಾಡುವುದು ಇದೆ. ಅಂಥ ಸೀರಿಯಲ್ಗಳಲ್ಲಿ ಒಂದು ಜೀ ಕನ್ನಡದ ನಾ ನಿನ್ನ ಬಿಡಲಾರೆ (Naa Ninna Bidalaare). ಆತ್ಮ, ಕಾಲಾ ಜಾದೂ, ಮಾಟ, ಮಂತ್ರ... ಹೀಗೆ ಏನೇನೋ ಸ್ಟೋರಿ ಇದ್ದರೂ ವೀಕ್ಷಕರು ಈ ಸೀರಿಯಲ್ ಅನ್ನು ಸಿಕ್ಕಾಪಟ್ಟೆ ಇಷ್ಟ ಪಡುತ್ತಿದ್ದಾರೆ.
ವೀಕ್ಷಕರ ಮೆಚ್ಚುಗೆ
ಇಲ್ಲಿರುವುದು ಕ್ಯೂಟ್ ಅಂಬಿಕಾ ಆತ್ಮ. ತುಂಬಾ ಒಳ್ಳೆಯ ಆತ್ಮ. ಮಾತ್ರವಲ್ಲದೇ ವಿಲನ್ಗಳ ಮಾಟ, ಮಂತ್ರಕ್ಕೆ ಯಾವಾಗಲೂ ಹಿನ್ನೆಡೆಯಾಗಿ ದೇವಿಯ ಮಹಾತ್ಮೆಯೇ ಮೇಲುಗೈ ಆಗುವುದರಿಂದಲೂ ಈ ಸೀರಿಯಲ್ ಅಂದರೆ ವೀಕ್ಷಕರಿಗೆ ತುಂಬಾ ಇಷ್ಟ.
ಸ್ತ್ರೀ ಪಾತ್ರಕ್ಕೆ ಮೆಚ್ಚುಗೆ
ಇದರಲ್ಲಿ ದುರ್ಗಾ, ಅಂಬಿಕಾ, ಮಾಯಾ, ಮಾಳವಿಕಾ ಸೇರಿದಂತೆ ಪುಟಾಣಿ ಹಿತಾವರೆಗೆ ಸ್ತ್ರೀ ಪಾತ್ರಗಳು ಕೂಡ ವೀಕ್ಷಕರನ್ನು ಅಷ್ಟೇ ಹಿಡಿದಿಟ್ಟುಕೊಂಡಿದೆ. ಅವರವರ ಪಾತ್ರಕ್ಕೆ ನ್ಯಾಯ ಒದಗಿಸುತ್ತಾ ಬಂದಿದ್ದಾರೆ ನಟಿಯರು.
ರಮ್ಯಾಶ್ರೀ ಬಾಲಕೃಷ್ಣ ಎಂಟ್ರಿ
ಆದರೆ, ಇದೀಗ ನೆಗೆಟಿವ್ ರೋಲ್ ಆಗಿರುವ ಮಾಯಾ ಪಾತ್ರದಲ್ಲಿ ನಟಿಸುತ್ತಿದ್ದ ರುಹಾನಿ ಶೆಟ್ಟಿ (Ruhani Shetty) ಹೊರ ನಡೆದಿದ್ದು, ಆ ಜಾಗಕ್ಕೆ ಕೋಳಿ ರಮ್ಯಾ ಎಂದೇ ಫೇಮಸ್ ಆಗಿರೋ ರಮ್ಯಾಶ್ರೀ ಬಾಲಕೃಷ್ಣ ಎಂಟ್ರಿ ಕೊಟ್ಟಿದ್ದಾರೆ.
ಕೋಳಿ ರಮ್ಯಾ ಆಗಿದ್ದು ಹೇಗೆ
ರಮ್ಯಾ ಅವರು ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ರಿಯಾಲಿಟಿ ಶೋದಲ್ಲಿ ಅತಿ ಕಡಿಮೆ ಸಮಯದಲ್ಲಿ ಹೆಚ್ಚು ಕೋಳಿ ಹಿಡಿದಿದ್ದರಿಂದ ಕೋಳಿ ರಮ್ಯಾ ಎನ್ನುವ ಹೆಸರು ಬಂದಿದೆ. ಅವರು ಹಲವಾರು ಕನ್ನಡ ಮತ್ತು ತೆಲುಗು ಧಾರಾವಾಹಿಗಳಲ್ಲಿ ನಟಿಸಿದ್ದಾರೆ ಮತ್ತು ವಿಲನ್ ಪಾತ್ರಗಳಲ್ಲಿ ಹೆಚ್ಚು ಪರಿಚಿತರಾಗಿದ್ದಾರೆ.
ಸೊಸೆ ತಂದ ಸೌಭಾಗ್ಯ ಮೂಲಕ ಎಂಟ್ರಿ
ಇನ್ನು ನಟಿಯ ಕುರಿತು ಹೇಳುವುದಾದರೆ, ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡ ರಮ್ಯಾ 14ನೇ ವಯಸ್ಸಿನಲ್ಲಿಯೇ ಕೆಲಸ ಮಾಡಲು ಪ್ರಾರಂಭಿಸಿದರು. ಅವರು "ಸೊಸೆ ತಂದ ಸೌಭಾಗ್ಯ" ಧಾರಾವಾಹಿಯ ಮೂಲಕ ಕಿರುತೆರೆಗೆ ಪ್ರವೇಶಿಸಿದರು.
ವಿಲನ್ ರೋಲ್ನಲ್ಲಿ ನಟಿ
ಅವರು ಹೆಚ್ಚಾಗಿ ವಿಲನ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ "ಮಿಥುನ ರಾಶಿ" ಸೀರಿಯಲ್ನಲ್ಲಿ ವಿಲನ್ ರೋಲ್ ಮಾಡಿದ್ದರು. ಇವರು ನಿರೂಪಕಿಯೂ ಆಗಿದ್ದಾರೆ ಮತ್ತು ಕನ್ನಡ, ತಮಿಳು ಹಾಗೂ ತೆಲುಗು ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ.