Bigg Boss Kannada 12 ಮನೆಗೆ ಬಂದ ಐವರು ಮಾಜಿ ಸ್ಪರ್ಧಿಗಳು:ಯಾರಿಗೆಲ್ಲಾ ಕಾದಿದೆ ಶಾಕ್?
ಈ ವಾರ ಬಿಗ್‌ಬಾಸ್ ಮನೆಯು 'ಬಿಬಿ ಪ್ಯಾಲೇಸ್' ಆಗಿ ಮಾರ್ಪಟ್ಟಿದೆ. ಚೈತ್ರಾ ಕುಂದಾಪುರ, ರಜತ್ ಸೇರಿದಂತೆ ಐವರು ಮಾಜಿ ಸ್ಪರ್ಧಿಗಳು ಅತಿಥಿಗಳಾಗಿ ಆಗಮಿಸಿದ್ದು, ಹಾಲಿ ಸ್ಪರ್ಧಿಗಳು ಅವರಿಗೆ ಸಿಬ್ಬಂದಿಗಳಾಗಿ ಸೇವೆ ಸಲ್ಲಿಸಬೇಕಿದೆ. ಈ ಹೊಸ ಟಾಸ್ಕ್‌ನಿಂದ ಮನೆಯಲ್ಲಿ ಈಗಾಗಲೇ ಮಾತಿನ ಚಕಮಕಿಗಳು ಆರಂಭವಾಗಿವೆ.

ಬಿಬಿ ಪ್ಯಾಲೇಸ್
ಈ ವಾರ ಬಿಗ್‌ಬಾಸ್ ಮನೆ ಬಿಬಿ ಪ್ಯಾಲೇಸ್ ಆಗಿ ಬದಲಾಗಿದೆ. ಈ ಸುಂದರ ಪ್ಯಾಲೇಸ್‌ಗೆ ಅತಿಥಿಗಳಾಗಿ ಮಾಜಿ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದರು. ಈ ಹಿಂದಿನ ಸೀಸನ್‌ನಲ್ಲಿ ಇದೇ ಮಾದರಿಯ ಟಾಸ್ಕ್ ನೀಡಲಾಗಿತ್ತು. ಇದೀಗ ಮತ್ತೊಮ್ಮೆ ಈ ಚಟುವಟಿಕೆಯನ್ನು ಪುನಾರಾವರ್ತಿಸಲಾಗಿದೆ.
ಐವರು ಮಾಜಿ ಸ್ಪರ್ಧಿಗಳ ಎಂಟ್ರಿ
ಬಿಬಿ ಪ್ಯಾಲೇಸ್‌ಗೆ ಅತಿಥಿಗಳಾಗಿ ಚೈತ್ರಾ ಕುಂದಾಪುರ, ರಜತ್, ಉಗ್ರಂ ಮಂಜು, ಮೋಕ್ಷಿತಾ ಪೈ ಮತ್ತು ತ್ರಿವಿಕ್ರಮ್ ಆಗಮಿಸಿದ್ದಾರೆ. ಮನೆಯ ಸದಸ್ಯರು ಬಿಬಿ ಪ್ಯಾಲೇಸ್‌ನ ಸಿಬ್ಬಂದಿಗಳಾಗಿದ್ದು, ಆಗಮಿಸಿರುವ ಅತಿಥಿಗಳಿಗೆ ಸೇವೆಯನ್ನು ನೀಡಬೇಕಾಗುತ್ತದೆ. ಇಂದಿನ ಪ್ರೋಮೋ ನೋಡಿರುವ ನೆಟ್ಟಿಗರು, ಈಗ ಮಜಾ ಬಂತು ಅಂತ ಕಮೆಂಟ್ ಮಾಡಲು ಪ್ರಾರಂಭಿಸಿದ್ದಾರೆ.
ಚಮಕ್
ಗಿಲ್ಲಿ ಮುಂದೆಯೇ ಕಾವ್ಯಾ ಅವರಿಗೆ ರಜತ್, ಕಾವು ಎಂದು ಕರೆಯುತ್ತಾರೆ. ಇದಕ್ಕೆ ನೀವು ಕಾವು ಅಂದ್ರೆ ನನಗೆ ನೋವು ಆಗುತ್ತೆ ಅಂತ ಗಿಲ್ಲಿ ನಟ ಹೇಳಿದ್ದಾರೆ. ನೀನು ರೋಧನೆ ಆದ್ರೆ ನಾವುಗಳು ಎಕ್ಸ್ ರೋಧನೆ ಎಂದು ಗಿಲ್ಲಿಗೆ ರಜತ್ ತಿರುಗೇಟು ನೀಡಿದ್ದಾರೆ. ಪ್ಯಾಲೇಸ್‌ನ ಸಿಬ್ಬಂದಿಯಾಗಿರುವ ಅಶ್ವಿನಿ ಗೌಡ, ಸೌಮ್ಯವಾಗಿ ನನ್ನ ಧ್ವನಿ ನಿಮಗೆ ಹೊರಗೆ ಕೇಳಿಸಿಲ್ಲವಾ ಎಂದು ಚಮಕ್ ಕೊಟ್ಟಿದ್ದಾರೆ.
ಘಟಾನುಘಟಿ ಐವರು ಮಾಜಿ ಸ್ಪರ್ಧಿಗಳು
ಗೆಸ್ಟ್ ಆಗಿ ಬಂದಿರುವ ಘಟಾನುಘಟಿ ಐವರು ಮಾಜಿ ಸ್ಪರ್ಧಿಗಳು, ಮನೆಯಲ್ಲಿರೋ ಹಾಲಿ ಸ್ಪರ್ಧಿಗಳಿಗೆ ಯಾವೆಲ್ಲಾ ತೊಂದ್ರೆ ಕೊಡ್ತಾರೆ ಅನ್ನೋದು ಇಂದಿನ ಸಂಚಿಕೆಯಲ್ಲಿ ತಿಳಿಯಲಿದೆ. ಅತಿಥಿಗಳು ಒಂದು ದಿನ ಮಾತ್ರ ಇರ್ತಾರಾ ಅಥವಾ ಇಡೀ ವಾರ ಇರ್ತಾರಾ ಎಂಬುದರ ಬಗ್ಗೆ ತಿಳಿದು ಬಂದಿಲ್ಲ.
ಇದನ್ನೂ ಓದಿ: Bigg Boss Kannada: ಕಿಚ್ಚನ ಚಪ್ಪಾಳೆ ಸಿಗ್ತಿದ್ದಂತೆ ಮಹಾ ಎಡವಟ್ಟು ಮಾಡ್ಕೊಂಡ ರಕ್ಷಿತಾ ಶೆಟ್ಟಿ!
ನೆಟ್ಟಿಗರು ಹೇಳಿದ್ದೇನು?
ಪ್ರೋಮೋ ನೋಡಿದ ನೆಟ್ಟಿಗರು, ಧನರಾಜ್ ಮತ್ತು ಹನುಮಂತ್ ಅವರನ್ನು ಮಿಸ್ ಮಾಡಿಕೊಂಡಿದ್ದಾರೆ. ಚೈತ್ರಾ ಕುಂದಾಪುರ ಅವರನ್ನು ಒಂದು ವಾರ ಇಲ್ಲಿಯೇ ಬಿಡಿ ಉಸ್ತುವಾರಿ ಚೆನ್ನಾಗಿ ಮಾಡ್ತಾರೆ. ಉಗ್ರಂ ಮಂಜು ಯಾವೆಲ್ಲಾ ಕ್ವಾಟ್ಲೆ ಕೊಡ್ತಾರೆ ಅಂತ ನೋಡಬೇಕು ಎಂದು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Bigg Boss Kannada ನಾಮಿನೇಷನ್‌ನಲ್ಲಿ ಹೊಸ ತಿರುವು; ಹೊಸ ಅಧ್ಯಾಯದಲ್ಲಿ ಒಂದ್ಕಡೆ ಗಿಲ್ಲಿ, ಮತ್ತೊಂದ್ಕಡೆ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

