ರಿಯಾಲಿಟಿ ಶೋದಿಂದ ಹೊರಗೆ ಬರ್ತಿದ್ದಂತೆ ಶೋ ಬಗ್ಗೆ ಕೆಲ ಕಂಟೆಸ್ಟೆಂಟ್ ಕೆಟ್ಟದಾಗಿ ಮಾತನಾಡ್ತಾರೆ. ಹಳ್ಳಿ ಪವರ್ ಬಗ್ಗೆಯೂ ಸಾಕಷ್ಟು ಆರೋಪ ಕೇಳಿ ಬಂದಿದೆ. ಇದು ಕೋಳಿ ರಮ್ಯಾ ಕೋಪಕ್ಕೆ ಕಾರಣವಾಗಿದೆ.
ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರುವ ಹಳ್ಳಿ ಪವರ್ ರಿಯಾಲಿಟಿ ಶೋ ಬಗ್ಗೆ ಸಾಕಷ್ಟು ವಾದ – ವಿವಾದಗಳು ಕೇಳಿ ಬರ್ತಿವೆ. ಶೋನಿಂದ ಹೊರಗೆ ಬಂದ ಕಂಟೆಸ್ಟೆಂಟ್, ಅಲ್ಲಿನ ಅವ್ಯವಸ್ಥೆ ಬಗ್ಗೆ ಮಾತನಾಡಿದ್ದಾರೆ. ಇದನ್ನು ಕೇಳಿದ ರಿಯಾಲಿಟಿ ಶೋ ಮೂಲಕವೇ ಪ್ರಸಿದ್ಧಿಗೆ ಬಂದಂತ ಕೋಳಿ ರಮ್ಯಾ, ಮಾಜಿ ಕಂಟೆಸ್ಟೆಂಟ್ ಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮುಂದೆ ರಿಯಾಲಿಟಿ ಶೋಗೆ ಹೋಗ್ತೇನೆ ಅನ್ನೋರಿಗೆ ರಮ್ಯಾ ಖಡಕ್ ಎಚ್ಚರಿಕೆ ನೀಡಿದ್ದಾರೆ. ಏನೆಲ್ಲ ಮಾಡ್ಬೇಕು, ಏನೆಲ್ಲ ಮಾಡ್ಬಾರದು ಅನ್ನೋದ್ರ ಬಗ್ಗೆ ರಮ್ಯಾ ಮಾಹಿತಿ ನೀಡಿದ್ದಾರೆ.
ರೊಚ್ಚಿಗೆದ್ದ ಕೋಳಿ ರಮ್ಯಾ :
ಇನ್ಸ್ಟಾಗ್ರಾಮ್ ನಲ್ಲಿ ಕೋಳಿ ರಮ್ಯಾ ವಿಡಿಯೋ ಒಂದನ್ನು ಪೋಸ್ಟ್ ಮಾಡಿದ್ದಾರೆ. ಇದ್ರಲ್ಲಿ ಹಳ್ಳಿ ಪವರ್ ರಿಯಾಲಿಟಿ ಶೋ ಬಗ್ಗೆ ಕೆಟ್ಟದಾಗಿ ಮಾತನಾಡಿದ ಕಂಟೆಸ್ಟೆಂಟ್ ಗೆ ಉತ್ತರ ನೀಡುವ ಪ್ರಯತ್ನ ಮಾಡಿದ್ದಾರೆ. ರಿಯಾಲಿಟಿ ಶೋ ಹಳ್ಳಿ ಪವರ್ ನಿಂದ ಹೊರಗೆ ಬಂದ ಮಾಜಿ ಕಂಟೆಸ್ಟೆಂಟ್ ರಿಯಾಲಿಟಿ ಶೋ ಬಗ್ಗೆ ಕೆಟ್ಟದಾಗಿ ಮಾತನಾಡಿದ ವಿಡಿಯೋವನ್ನು ನಾನು ನೋಡಿದ್ದೇನೆ. ಸರಿ – ತಪ್ಪಿನ ಬಗ್ಗೆ ನಾನು ಹೇಳೋದಿಲ್ಲ. ಆದ್ರೆ ರಿಯಾಲಿಟಿ ಶೋ ಬಗ್ಗೆ ಮಾತನಾಡ್ತೇನೆ ಅಂತ ಮಾತು ಶುರು ಮಾಡುವ ರಮ್ಯಾ, ರಿಯಾಲಿಟಿ ಶೋ ಬಗ್ಗೆ ಒಂದೊಂದೇ ವಿಷ್ಯ ಹೇಳಿದ್ದಾರೆ. ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ರಿಯಾಲಿಟಿ ಶೋ ಸೀಸನ್ ಒಂದರಲ್ಲಿ ರಮ್ಯಾ ಸ್ಪರ್ಧಿಯಾಗಿದ್ರು. ಅಲ್ಲಿಂದಲೇ ಅವರ ಹೆಸ್ರ ಹಿಂದೆ ಕೋಳಿ ಸೇರಿದ್ದು. ಅದ್ರ ಅನುಭವದ ಮೇಲೆ ರಿಯಾಲಿಟಿ ಶೋ ಬಗ್ಗೆ ರಮ್ಯಾ ಮಾತನಾಡಿದ್ದಾರೆ.
ರೋಚಕ ತಿರುವಿನಲ್ಲಿ Naa Ninna Bidalaare: ಕೊನೆಗೂ ಅಮ್ಮ-ಮಗಳ ಮಿಲನ; ಮುಂದಿದೆ ಭಾರಿ ಟ್ವಿಸ್ಟ್
ಆಡಿಷನ್ ಮೂಲಕ ಆಯ್ಕೆ – ಒತ್ತಾಯದಿಂದಲ್ಲ :
ರಮ್ಯಾ ಪ್ರಕಾರ, ಯಾರೂ ನಿಮ್ಮನ್ನು ರಿಯಾಲಿಟಿ ಶೋಗೆ ಬನ್ನಿ ಅಂತ ಒತ್ತಾಯ ಮಾಡೋದಿಲ್ಲ. ರಿಯಾಲಿಟಿ ಶೋಗೆ ಹೋಗೋದು ನಿಮ್ಮ ಸ್ವಂತ ಆಯ್ಕೆ. ನೀವು ಆಡಿಷನ್ಗಳಿಗೆ ಹೋದಾಗ ಅಲ್ಲಿ ಕಾಲು ಹಿಡಿದು ಯಾರೂ ನಿಮ್ಮನ್ನು ಬೇಡಿಕೊಳ್ಳೋದಿಲ್ಲ. ನೀವಿಲ್ಲ ಅಂದ್ರೆ ಶೋ ನಡೆಯೋದೇ ಇಲ್ಲ ಅಂತ ಯಾರೂ ಹೇಳೋದಿಲ್ಲ. ಸೋ ಆಯ್ಕೆ ನಿಮ್ಮದು ಅಂತ ರಮ್ಯಾ ಹೇಳಿದ್ದಾರೆ.
ಚಾನೆಲ್ ಏನು ಮಾಡ್ಬೇಕು? :
ರಮ್ಯಾ ಪ್ರಕಾರ, ಆಡಿಷನ್ ಗೆ ಬಂದ ಸ್ಪರ್ಧಿಗಳನ್ನು ಚಾನೆಲ್ ನವರು ಪರೀಕ್ಷೆ ಮಾಡ್ಬೇಕು. ದೈಹಿಕವಾಗಿ ಮತ್ತು ಮಾನಸಿಕವಾಗಿ ಫಿಟ್ ಆಗಿದ್ದಾರಾ ಟೆಸ್ಟ್ ಮಾಡ್ಬೇಕು. ಇವರು ಅದನ್ನು ಮಾಡ್ದೆ ಆಯ್ಕೆ ಮಾಡ್ತಾರೆ ಎನ್ನುವ ರಮ್ಯಾ, ನಾನು ಶೋಗೆ ಫಿಟ್ ಆಗಿದ್ದೀನಾ ಎಂಬುದನ್ನು ತಿಳಿಯದೆ ಸ್ಪರ್ಧಿಗಳು, ಹೆಸರು, ಪ್ರಸಿದ್ಧಿಗೆ ಶೋಗೆ ಬರ್ತಾರೆ ಎಂದಿದ್ದಾರೆ.
ಉಪ್ಪಿಲ್ಲದ ಊಟದಂತಾಗ್ತಿದ್ದ ಸೀರಿಯಲ್‌ಗೆ ಜೋಶ್ ತುಂಬಲು ಕಂಬ್ಯಾಕ್ ಮಾಡಿದ ಹಿರಿಯ ನಟಿ
ಕಂಟೆಸ್ಟೆಂಟ್ ಏನು ಮಾಡ್ಬೇಕು? :
ಮೊದಲು ಶೋಗೆ ಬರೋಕೆ ನಾನು ಸೂಟ್ ಆಗ್ತೆನಾ ನೋಡ್ಬೇಕು. ಅಗ್ರಿಮೆಂಟ್ ಸರಿಯಾಗಿ ಓದ್ಬೇಕು. ಅದಲ್ಲಿ ಎಲ್ಲ ವಿಷ್ಯ ಇರುತ್ತದೆ. ಅದನ್ನು ಸರಿಯಾಗಿ ತಿಳಿದಿರಬೇಕು. ಟಾಸ್ಕ್ ಸರಿಯಾಗಿ ಮಾಡಲಿಲ್ಲ ಅಂದಾಗ, ಚಾನೆಲ್ ಅಥವಾ ನಿರ್ಮಾಪಕರನ್ನು ದೂಷಿಸಬಾರದು. ರಿಯಾಲಿಟಿ ಶೋಗಳನ್ನು ನಿಮ್ಮ ತಾಳ್ಮೆ, ಶಕ್ತಿ ಮತ್ತು ಮನಸ್ಥಿತಿಯನ್ನು ಪರೀಕ್ಷಿಸಲು ವಿನ್ಯಾಸಗೊಳಿಸಲಾಗಿದೆ. ಸಹಜವಾಗಿ, ಹೋರಾಟ ಇರುತ್ತೆ. ಹೋರಾಟ ಇಲ್ದೆ ಗೆಲುವು ಸಾಧ್ಯವಿಲ್ಲ ಎಂದಿದ್ದಾರೆ ಕೋಳಿ ರಮ್ಯಾ. ರಿಯಾಲಿಟಿ ಶೋಗಳನ್ನು ಟಿಆರ್ ಪಿ ಗೋಸ್ಕರವೇ ನಡೆಸೋದು. ಅದ್ರಲ್ಲಿ ಎರಡು ಮಾತಿಲ್ಲ. ಶೋ ಚೆನ್ನಾಗಿ ಬರ್ಬೇಕು ಅನ್ನೋ ಕಾರಣಕ್ಕೆ ಒಂದಿಷ್ಟು ಚರ್ಚೆ ನಡೆದಿರುತ್ತೆ. ಆದ್ರೆ ಟಾಸ್ಕ್ ಮಾಡ್ದೆ, ಕಂಟೆಸ್ಟೆಂಟ್ ಜೊತೆ ಹೊಂದಿಕೊಳ್ದೆ ಕಿರೀಟ ಬೇಕು ಅಂದ್ರೆ ಹೇಗೆ ಸಾಧ್ಯ? ರಿಯಾಲಿಟಿ ಶೋ ನಿಮಗೆ ಟೀಂ ವರ್ಕ್, ಶಿಸ್ತನ್ನು ಕಲಿಸುತ್ತೆ. ನಿಮ್ಮ ವ್ಯಕ್ತಿತ್ವ ಮತ್ತು ಹೊಂದಿಕೊಳ್ಳುವ ನಿಮ್ಮ ಸಾಮರ್ಥ್ಯವನ್ನು ಪರೀಕ್ಷಿಸುತ್ತೆ. ಚಾನೆಲ್ ದೂಷಿಸುವ ಬದಲು, ಸೈನ್ ಮಾಡೋ ಬದಲು ನಿಮ್ಮ ಅರ್ಹತೆ ಏನು ತಿಳಿಯಿರಿ ಅಂತ ಕೋಳಿ ರಮ್ಯಾ ಖಡಕ್ ಉತ್ತರ ನೀಡಿದ್ದಾರೆ.
ಹಳ್ಳಿ ಪವರ್ : ಜೀ ಕನ್ನಡದಲ್ಲಿ ಹಳ್ಳಿ ಪವರ್ ರಿಯಾಲಿಟಿ ಶೋ ನಡೆಯುತ್ತಿದ್ದು, ಅಕುಲ್ ಬಾಲಾಜಿ ನಿರೂಪಣೆ ಮಾಡ್ತಿದ್ದಾರೆ. ಈ ಶೋಗೆ ಹೋಗಿಬಂದ ಕೆಲ ಕಂಟೆಸ್ಟೆಂಟ್ ಅಲ್ಲಿ ಆ ವ್ಯವಸ್ಥೆ ಇಲ್ಲ ಈ ವ್ಯವಸ್ಥೆ ಇಲ್ಲ ಎಂದಿದ್ದು ರಮ್ಯಾ ಕೋಪಕ್ಕೆ ಕಾರಣವಾಗಿದೆ.
