- Home
- Entertainment
- TV Talk
- ಕಾಲು ಮುರಿದರೂ 4 ತಿಂಗಳು ನಿಲ್ಲದ ಶೂಟಿಂಗ್: ವಿಡಿಯೋ ಶೇರ್ ಮಾಡಿದ Naa Ninna Bidalaare ಅಂಬಿಕಾ
ಕಾಲು ಮುರಿದರೂ 4 ತಿಂಗಳು ನಿಲ್ಲದ ಶೂಟಿಂಗ್: ವಿಡಿಯೋ ಶೇರ್ ಮಾಡಿದ Naa Ninna Bidalaare ಅಂಬಿಕಾ
'ನಾ ನಿನ್ನ ಬಿಡಲಾರೆ' ಸೀರಿಯಲ್ ಖ್ಯಾತಿಯ ನಟಿ ನೀತಾ ಅಶೋಕ್ ಶೂಟಿಂಗ್ ವೇಳೆ ಕಾಲು ಮುರಿದುಕೊಂಡಿದ್ದರು. ಆದರೂ ನಾಲ್ಕು ತಿಂಗಳ ಕಾಲ ವೀಲ್‌ಚೇರ್‌ನಲ್ಲೇ ಕುಳಿತು ಚಿತ್ರೀಕರಣದಲ್ಲಿ ಭಾಗವಹಿಸಿ, ಇದೀಗ ಚೇತರಿಸಿಕೊಂಡಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಕಾಲಿಗೆ ಫ್ರ್ಯಾಕ್ಚರ್
ನಾ ನಿನ್ನ ಬಿಡಲಾರೆ (Naa Ninna Bidalaare) ಸೀರಿಯಲ್ನಲ್ಲಿ ಕ್ಯೂಟ್ ದೆವ್ವ ಆಗಿ ಮಿಂಚುತ್ತಿರುವ ಅಂಬಿಕಾ ರಿಯಲ್ ಹೆಸರು ನೀತಾ ಅಶೋಕ್. ನೀತಾ ಅವರು ಶೂಟಿಂಗ್ ವೇಳೆ ನಡೆದ ಅವಘಡ ಸಂಭವಿಸಿ ಕಾಲಿಗೆ ಫ್ರ್ಯಾಕ್ಚರ್ ಮಾಡಿಕೊಂಡಿದ್ದರು. ಕಾಲಿನ ಆಪರೇಷನ್ ಆಗಿದ್ದರೂ ಆಸ್ಪತ್ರೆಯಲ್ಲಿಯೇ ಕೆಲವೊಂದು ಕ್ಲಿಪ್ಪಿಂಗ್ ಶೂಟ್ ಮಾಡಿದ್ದರು, ಬಳಿಕ ಮನೆಗೆ ಬಂದ ಮೇಲೂ ಮುರಿದ ಕಾಲಲ್ಲೇ ಶೂಟಿಂಗ್ ಮಾಡಿದ್ದರು.
ನಾಲ್ಕು ತಿಂಗಳು ನಿಲ್ಲದ ಶೂಟಿಂಗ್
ಕಾಲು ಮುರಿದು ನಾಲ್ಕು ತಿಂಗಳಾದರೂ ಅದೇ ನೋವಿನಲ್ಲೇ ಇದ್ದರೂ ವ್ಹೀಲ್ಚೇರ್ ಮೇಲೆಯೇ ಕುಳಿತು ಶೂಟಿಂಗ್ ನಡೆಸಿಕೊಟ್ಟವರು ನೀತಾ ಅಶೋಕ್. ಎಲ್ಲಿಯೂ ಸ್ವಲ್ಪವೂ ಡೌಟ್ ಬರದ ರೀತಿಯಲ್ಲಿ ಅದನ್ನು ತಂಡ ನಿಭಾಯಿಸಿತ್ತು. ಈ ನಾಲ್ಕು ತಿಂಗಳು ಸೂಕ್ಷ್ಮವಾಗಿ ಗಮನಿಸಿದರೆ ಅಂಬಿಕಾ ಪಾತ್ರಧಾರಿ ಎಲ್ಲಿಯೂ ಓಡಾಟ ಮಾಡದೇ ನಿಂತಲ್ಲಿಯೇ ಆ್ಯಕ್ಟಿಂಗ್ ಮಾಡಿದ್ದನ್ನು ಗಮನಿಸಬಹುದಾಗಿದೆ.
ಶ್ಲಾಘನೆಗಳ ಮಹಾಪೂರ
ಅದೇನೇ ಇದ್ದರೂ ಕಾಲಿಗೆ ನೋವಾಗಿದ್ದರೂ ಶೂಟಿಂಗ್ ಮಾಡಿದ ನಟಿಗೆ ಶ್ಲಾಘನೆಗಳ ಮಹಾಪೂರವೇ ಹರಿದು ಬರುತ್ತಿದೆ. ಅಂದಹಾಗೆ ಇದೀಗ ನಟಿ ಮತ್ತೊಂದು ವಿಡಿಯೋ ಶೇರ್ ಮಾಡಿದ್ದಾರೆ. ನಾಲ್ಕು ತಿಂಗಳ ನರಕದ ಬಳಿಕ, ಈಗ ಅವರ ಕಾಲು ಸರಿ ಹೋಗಿದ್ದು, ಚೆನ್ನಾಗಿ ನಡೆಯಬಲ್ಲೆ ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ.
ಆಗಿದ್ದೇನು?
ಅಷ್ಟಕ್ಕೂ ನಟಿಗೆ ಆಗಿದ್ದೇನೆ ಎಂದು ಈ ಹಿಂದೆ ಹೇಳಿಕೊಂಡಿದ್ದರು. ಅಂದು ಶೂಟಿಂಗ್ ನಡೆಯುತ್ತಿದ್ದಾಗ ಬಿಸಿಲು ಇದ್ದುದರಿಂದ ಹೋಗಿ ನೆರಳಿನಲ್ಲಿ ಕುಳಿತುಕೊಳ್ಳಿ ಎಂದರು. ಅಲ್ಲಿಗೆ ಎದ್ದು ಹೋಗಿ ಕುಳಿತುಕೊಳ್ಳುವಾಗ ಕಾಲು ಟ್ವಿಸ್ಟ್ ಆಯಿತು. ತುಂಬಾ ನೋವಾಯಿತು. ವೈದ್ಯರು ಕೂಡಲೇ ಪೇನ್ ಕಿಲ್ಲರ್ ಇಂಜೆಕ್ಷನ್ ಕೊಡಿಸಿ, ಕೂಡಲೇ ಎಕ್ಸ್ರೇ ಮಾಡಿಸಿ ಎಂದರು ಎಂದು ನಟಿ ನೆನಪಿಸಿಕೊಂಡಿದ್ದಾರೆ.
ಕಾಲು ಫ್ರ್ಯಾಕ್ಚರ್
ಎಕ್ಸ್ರೇ ಮಾಡಿದಾಗ ಫ್ರಾಕ್ಚರ್ ಆಗದೇ ಇರಲಿ ಎಂದು ದೇವರಲ್ಲಿ ತುಂಬಾ ಪ್ರಾರ್ಥಿಸಿಕೊಂಡೆ. ಆದರೆ ಬ್ಯಾಡ್ ಲಕ್, ಫ್ರ್ಯಾಕ್ಚರ್ ಆಗಿ ಹೋಗಿತ್ತು ಎಂದಿದ್ದಾರೆ ನೀತಾ ಅಶೋಕ್. ವೈದ್ಯರು ಕೂಡಲೇ ಸರ್ಜರಿ ಮಾಡಬೇಕು ಎಂದರು. ಸರ್ಜರಿ ಹೆಸರು ಕೇಳುತ್ತಿದ್ದಂತೆಯೇ ನನ್ನ ಮೀಟರ್ ಆಫ್ ಆಗೋಯ್ತು. ಆದರೂ ಎಲ್ಲರ ಒಪೀನಿಯನ್ ತೆಗೆದುಕೊಂಡು ಸರ್ಜರಿಗೆ ಓಕೆ ಎಂದೆ ಎಂದಿದ್ದಾರೆ.
ವೀಲ್ಚೇರ್ ಸಹಾಯ
ಸರ್ಜರಿಯ ಮೊದಲ ದಿನ ಸೀರಿಯಲ್ ತಂಡ ಕೆಲವೊಂದು ಕ್ಲೋಸ್ ಅಪ್ ಶಾರ್ಟ್ಸ್ ತೆಗೆದುಕೊಂಡು ಹೋಯಿತು. ತುಂಬಾ ಸಹಕರಿಸಿ ನನಗೆ ಎಲ್ಲಾ ರೀತಿಯ ಸಹಾಯ ಮಾಡಲಾಯಿತು ಎಂದು ನೆನಪಿಸಿಕೊಂಡಿದ್ದಾರೆ ನಟಿ. ಇದೀಗ ಮನೆಗೆ ನಟಿ ಹೋಗಿದ್ದು, ಅಲ್ಲಿಯೂ ವೀಲ್ಚೇರ್ ಸಹಾಯದಿಂದ ಶೂಟಿಂಗ್ ಮಾಡಲಾಗಿದೆ. ಆದರೆ ಎಲ್ಲಿಯೂ ಇದರ ಬಗ್ಗೆ ಜನರಿಗೆ ಗೊತ್ತಾಗದಂತೆ ನೋಡಿಕೊಳ್ಳಲಾಗಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

