- Home
- Entertainment
- TV Talk
- Krishna Rukku Serial: ಫಸ್ಟ್ ದ್ವೇಷ, ಆಮೇಲೆ ಪ್ರೀತಿ, ಪಕ್ಕದಮನೆ ಚಾರು ಈಗ ರುಕ್ಕು: ಈ ಆಯ್ಕೆ ಯಾಕೆ?
Krishna Rukku Serial: ಫಸ್ಟ್ ದ್ವೇಷ, ಆಮೇಲೆ ಪ್ರೀತಿ, ಪಕ್ಕದಮನೆ ಚಾರು ಈಗ ರುಕ್ಕು: ಈ ಆಯ್ಕೆ ಯಾಕೆ?
Krishna Rukku Kannada Serial: ಜೀ ಕನ್ನಡ ವಾಹಿನಿಯಲ್ಲಿ ಪ್ರೀತಿ, ಪ್ರತೀಕಾರ ಮತ್ತು ವಿಧಿಯಾಟದ ಸುತ್ತ ನಡೆಯುವ ಹೊಚ್ಚಹೊಸ ಧಾರಾವಾಹಿ 'ಕೃಷ್ಣ ರುಕ್ಕು' ಇದೇ ಮಾರ್ಚ್ 9 ರಿಂದ 6:30 ಕ್ಕೆ ಪ್ರಸಾರ ಆಗಲಿದೆ.

ಈ ಧಾರಾವಾಹಿ ಕಥೆ ಏನು?
ಕುಟುಂಬದ ಒಗ್ಗಟ್ಟು, ಜವಾಬ್ದಾರಿ, ಪ್ರೀತಿ, ಅನಿರೀಕ್ಷಿತ ತಿರುವುಗಳು ಕೂಡ ಕೃಷ್ಣ-ರುಕ್ಕು ಧಾರಾವಾಹಿಯಲ್ಲಿ ಕಾಣಸಿಗಲಿದೆ. ಅಣ್ಣನ ಅಕಾಲಿಕ ನಿಧನದ ನಂತರ ತನ್ನ ಇಡೀ ಕುಟುಂಬದ ಜವಾಬ್ದಾರಿಯನ್ನು ತನ್ನ ಹೆಗಲಮೇಲೆ ಹಾಕಿಕೊಂಡ ರುಕ್ಕು ಏನೆಲ್ಲಾ ಸವಾಲುಗಳನ್ನು ಎದುರಿಸುತ್ತಾಳೆ ಎಂಬುದನ್ನು ಇಲ್ಲಿ ಸುಂದರವಾಗಿ ತೋರಿಸಲಾಗಿದೆ.
ಪ್ರೀತಿ, ದ್ವೇಷ ಮತ್ತು ವಿಧಿಯಾಟದ ನಡುವೆ ಕೃಷ್ಣ-ರುಕ್ಕುವಿನ ಜೀವನ ಹೀಗೆ ಸಾಗಲಿದೆ ಎನ್ನುವುದು ಈ ಧಾರಾವಾಹಿಯ ಮತ್ತೊಂದು ಕುತೂಹಲಕಾರಿ ಅಂಶ.
ತಾರಾ ಬಳಗದಲ್ಲಿದ್ದಾರೆ?
ಮೌನ ಗುಡ್ಡೇಮನೆ ರುಕ್ಕು ಆಗಿ ನಟಿಸಿದರೆ, ಅಕ್ಷಯ್ ನಾಯಕ್ ಕೃಷ್ಣನ ಪಾತ್ರ ನಿರ್ವಹಿಸಲಿದ್ದಾರೆ. ಅಷ್ಟೇ ಅಲ್ಲದೇ ನಿರ್ದೇಶಕ, ನಟ ಎಸ್.ನಾರಾಯಣ್ ಸೂರ್ಯ ಪ್ರಕಾಶ್ ಎಂಬ ಮಹತ್ವದ ಪಾತ್ರ ನಿರ್ವಹಿಸುತ್ತಿದ್ದಾರೆ. ಹಲವು ವರ್ಷಗಳ ನಂತರ ಕನ್ನಡ ಕಿರುತೆರೆಗೆ ಕಮ್ ಬ್ಯಾಕ್ ಆಗಿದ್ದಾರೆ ಖ್ಯಾತ ನಟಿ ಸುಚಿತ್ರಾ, ಗಾಯಕ ನವೀನ ಸಜ್ಜು ಹೀಗೆ ಮುಂತಾದ ಅತ್ಯದ್ಭುತ ಕಲಾವಿದರುಗಳು ನಟಿಸಿರುವುದು ಈ ಧಾರಾವಾಹಿಯ ತೂಕವನ್ನು ಹೆಚ್ಚಿಸುತ್ತದೆ.
ನಿರ್ಮಾಣ ಯಾರದ್ದು?
ಧೃತಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ದಿಲೀಪ್ ರಾಜ್ ಹಾಗೂ ಶ್ರೀ ವಿದ್ಯಾ ನಿರ್ಮಿಸಿರುವ ಕೃಷ್ಣ ರುಕ್ಕು ಧಾರಾವಾಹಿಯಲ್ಲಿ ಮನಸೆಳೆಯುವ ಕಥೆ ಮತ್ತು ಭಾವನಾತ್ಮಕ ಅಭಿನಯಗಳು ಪ್ರೇಕ್ಷಕರಿಗೆ ಕಾಣಸಿಗಲಿದೆ.
ಸೀರಿಯಲ್ ವಿಶೇಷ ಏನು?
ಕೃಷ್ಣ-ರುಕ್ಕು ಧಾರಾವಾಹಿ ಬಗ್ಗೆ ಮಾತನಾಡಿದ ಜೀ಼ ಕನ್ನಡ ವಾಹಿನಿಯ ಚೀಫ್ ಚಾನೆಲ್ ಆಫೀಸರ್ ದೀಪಕ್ ಶ್ರೀರಾಮುಲು ಅವರು ಜೀ ಕನ್ನಡ ವಾಹಿನಿ ಯಾವಾಗಲೂ ಪ್ರೇಕ್ಷಕರ ಮನಸ್ಸಿಗೆ ಹತ್ತಿರವಾಗುವ ನೈಜ ಭಾವನೆಗಳು ಮತ್ತು ಕೌಟುಂಬಿಕ ಮೌಲ್ಯಗಳನ್ನೊಳಗೊಂಡ ಕಥೆಗಳನ್ನು ವೀಕ್ಷಕರಿಗೆ ತಲುಪಿಸಲು ಇಚ್ಚಿಸುತ್ತದೆ.
ವೀಕ್ಷಕರ ಮನಸ್ಸು ಗೆಲ್ಲುತ್ತೆ
'ಕೃಷ್ಣ ರುಕ್ಕು' ಧಾರಾವಾಹಿಯು ಪ್ರೀತಿ, ಜವಾಬ್ದಾರಿ ಮತ್ತು ವಿಧಿಯಾಟದ ಸುತ್ತ ನಡೆಯುವ ಒಂದು ಸುಂದರವಾದ ಕಥೆಯಾಗಿದೆ. ಈ ಧಾರಾವಾಹಿಯಲ್ಲಿನ ವೈವಿಧ್ಯಮಯ ಪಾತ್ರಗಳು ಮತ್ತು ಕುತೂಹಲಕಾರಿ ಕಥೆಯು ವೀಕ್ಷಕರ ಮನಸ್ಸನ್ನು ಗೆಲ್ಲುವುದಲ್ಲದೆ, ನಮ್ಮ ಕಾರ್ಯಕ್ರಮಗಳನ್ನು ಇನ್ನಷ್ಟು ಬಲಪಡಿಸಲಿದೆ ಎಂಬ ನಂಬಿಕೆ ನಮಗಿದೆ" ಎಂದಿದ್ದಾರೆ ದೀಪಕ್ ಶ್ರೀರಾಮುಲು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

