MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ‘ಕಮಲಿ’ ಸೆಟ್‌ನಲ್ಲೇ ನಿರಂಜನ್-ಅಮೂಲ್ಯ ಪ್ರೀತಿಯ ಸುಳಿವಿತ್ತು! ರೀಲ್‌ ಅಪ್ಪ ಮೈಕೋ ಮಂಜುನಾಥ್ ಓಪನ್ ಟಾಕ್

‘ಕಮಲಿ’ ಸೆಟ್‌ನಲ್ಲೇ ನಿರಂಜನ್-ಅಮೂಲ್ಯ ಪ್ರೀತಿಯ ಸುಳಿವಿತ್ತು! ರೀಲ್‌ ಅಪ್ಪ ಮೈಕೋ ಮಂಜುನಾಥ್ ಓಪನ್ ಟಾಕ್

Mico Manjunath: ಕನ್ನಡ ಕಿರುತೆರೆಯ ಜನಪ್ರಿಯ ಹಿರಿಯ ನಟ ಮೈಕೋ ಮಂಜುನಾಥ್ ಜೀ ಕನ್ನಡದ 'ಜಗದಾತ್ರಿ' ಧಾರಾವಾಹಿ ಮೂಲಕ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ. ಈ ವೇಳೆ 'ಕಮಲಿ' ಖ್ಯಾತಿಯ ನಿರಂಜನ್ ಮತ್ತು ಅಮೂಲ್ಯ ಅವರ ಶೂಟಿಂಗ್ ಸೆಟ್‌ನ ಪ್ರೀತಿಯ ಗುಟ್ಟನ್ನ ಮುಕ್ತವಾಗಿ ಹಂಚಿಕೊಂಡಿದ್ದಾರೆ.

2 Min read
Author : Ashwini HR
Published : Sep 27 2026, 11:30 AM IST
Share this Photo Gallery
  • FB
  • TW
  • Linkdin
  • Whatsapp
15
‘ಜಗದಾತ್ರಿ’ ಮೂಲಕ ಕಂ ಬ್ಯಾಕ್
Image Credit : Facebook

‘ಜಗದಾತ್ರಿ’ ಮೂಲಕ ಕಂ ಬ್ಯಾಕ್

‘ಜಗದಾತ್ರಿ’ ಮೂಲಕ ಕಂ ಬ್ಯಾಕ್
ಕನ್ನಡ ರಂಗಭೂಮಿ, ಹಿರಿತೆರೆ ಹಾಗೂ ಕಿರುತೆರೆಯಲ್ಲಿ ತಮ್ಮ ವಿಶಿಷ್ಟ ಅಭಿನಯದ ಮೂಲಕ ಪ್ರೇಕ್ಷಕರ ಮನಗೆದ್ದಿರುವ ಹಿರಿಯ ನಟ ಮೈಕೋ ಮಂಜುನಾಥ್, ಸುಮಾರು ಎರಡು ವರ್ಷಗಳ ನಂತರ ಮತ್ತೆ ಕನ್ನಡ ಕಿರುತೆರೆಗೆ ಮರಳಿದ್ದಾರೆ. ಜೀ ಕನ್ನಡದ ಜನಪ್ರಿಯ ‘ಕಮಲಿ’ ಧಾರಾವಾಹಿಯ ನಂತರ ತೆಲುಗು ಸೀರಿಯಲ್‌ನಲ್ಲಿ ಬ್ಯುಸಿಯಾಗಿದ್ದ ಅವರು, ಇದೀಗ ಜೀ ಕನ್ನಡ ವಾಹಿನಿಯ ನೂತನ ಧಾರಾವಾಹಿ ‘ಜಗದಾತ್ರಿ’ ಮೂಲಕ ಮತ್ತೆ ಕನ್ನಡಿಗರ ಮನೆ-ಮನ ತಲುಪಲು ಸಜ್ಜಾಗಿದ್ದಾರೆ. ಈ ಸಂದರ್ಭದಲ್ಲಿ ಖಾಸಗಿ ವಾಹಿನಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಮ್ಮ ಹೊಸ ಪಾತ್ರ, ‘ಕಮಲಿ’ ಜೋಡಿಯ ಮದುವೆ ಹಾಗೂ 30 ವರ್ಷಗಳ ಕಲಾ ಪಯಣದ ರೋಚಕ ನೆನಪುಗಳನ್ನು ಹಂಚಿಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ರಿಷಿ-ಅಮೂಲ್ಯ ಮದುವೆ
Image Credit : Social Media

ರಿಷಿ-ಅಮೂಲ್ಯ ಮದುವೆ

ರಿಷಿ-ಅಮೂಲ್ಯ ಮದುವೆ
‘ಕಮಲಿ’ ಧಾರಾವಾಹಿಯಲ್ಲಿ ರಿಷಿ (ನಿರಂಜನ್) ಪಾತ್ರಕ್ಕೆ ತಂದೆಯಾಗಿ ನಟಿಸಿದ್ದ ಮೈಕೋ ಮಂಜುನಾಥ್, ನಾಯಕ-ನಾಯಕಿ ನಿರಂಜನ್ ಮತ್ತು ಅಮೂಲ್ಯ ಗೌಡ ಅವರ ರಿಯಲ್ ಲೈಫ್ ಮದುವೆ ಬಗ್ಗೆ ಸಂತಸ ವ್ಯಕ್ತಪಡಿಸಿದರು. "ಅವರಿಬ್ಬರೂ ಅತ್ಯಂತ ಒಳ್ಳೆಯ ಮನಸ್ಸಿನ ವ್ಯಕ್ತಿಗಳು. ನಾವು ಕಮಲಿ ಶೂಟಿಂಗ್ ಮಾಡುವಾಗಲೇ ಅವರಿಬ್ಬರ ನಡುವೆ ಕೇವಲ ಸ್ನೇಹ ಮಾತ್ರವಲ್ಲ, ಪ್ರೀತಿಯೂ ಇದೆ ಎಂಬ ಸಣ್ಣ ಸುಳಿವು ('ವಾಸನೆ') ನಮಗೆ ಸಿಗುತ್ತಿತ್ತು. ಆದರೆ, ಅವರೆಂದೂ ಎಲ್ಲೆ ಮೀರಿ ವರ್ತಿಸಿದವರಲ್ಲ. ರೂಮ್‌ನಲ್ಲಿ ಕೂತು ಹರಟುತ್ತಿದ್ದರೂ ತುಂಬಾ ಪ್ಯೂರ್ ಆದ ಸ್ನೇಹ ಅವರದ್ದಾಗಿತ್ತು. ಆ ಸ್ನೇಹ ಇಂದು ಪ್ರೀತಿಗೆ ತಿರುಗಿ ಮದುವೆಯಾಗುತ್ತಿರುವುದು ನೋಡಿ ತುಂಬಾ ಖುಷಿಯಾಗಿದೆ, ಅವರು ಸದಾ ಚೆನ್ನಾಗಿರಲಿ" ಎಂದು ಹಾರೈಸಿದರು.

Related Articles

Related image1
"ಬಿಗ್ ಬಾಸ್ ಸ್ಕ್ರಿಪ್ಟೆಡ್ ಶೋನಾ"? ತಾಂಡವ್ ಎಲಿಮಿನೇಷನ್ ಹೊತ್ತಲ್ಲೇ ಎಡಿಟಿಂಗ್, ಟಾಸ್ಕ್, ಮನೆ ರಹಸ್ಯ ಬಿಚ್ಚಿಟ್ಟ ಕೀರ್ತಿ
Related image2
ಟಾಕ್ ಆಫ್ ದಿ ಟೌನ್ ಆಯ್ತು ‘ಜಗದ್ಧಾತ್ರಿ’... ಜಾಣ ವೀಕ್ಷಕರು ಹೇಳಿದ್ದು ಅದೊಂದೇ ಕಿವಿ ಮಾತು
35
ತಂತ್ರಜ್ಞಾನವನ್ನು ಮಿಸ್ಯೂಸ್ ಮಾಡಿಕೊಳ್ಳಬಾರದು
Image Credit : Facebook

ತಂತ್ರಜ್ಞಾನವನ್ನು ಮಿಸ್ಯೂಸ್ ಮಾಡಿಕೊಳ್ಳಬಾರದು

ತಂತ್ರಜ್ಞಾನವನ್ನು ಮಿಸ್ಯೂಸ್ ಮಾಡಿಕೊಳ್ಳಬಾರದು
ತಮ್ಮ 30 ವರ್ಷಗಳ ಅಭಿನಯ ಪಯಣವನ್ನು ಮೆಲುಕು ಹಾಕಿದ ಅವರು, ಮಾಧ್ಯಮಗಳ ಬದಲಾವಣೆಯ ಬಗ್ಗೆ ಹೀಗೆ ವಿವರಿಸಿದರು.. "ರಂಗಭೂಮಿಯಲ್ಲಿ ಪ್ರತಿ ಪ್ರದರ್ಶನವೂ ಒಂದು ಹೊಸ ಪ್ರಯೋಗ. 40 ವರ್ಷದ ಅನುಭವವಿದ್ದರೂ ರಿಹರ್ಸಲ್ ಇಲ್ಲದೆ ನಾಟಕ ಮಾಡಲು ಸಾಧ್ಯವೇ ಇಲ್ಲ. 19ನೇ ವಯಸ್ಸಿನಲ್ಲಿ ಮಾಡಿದ 'ಹಯವದನ' ನಾಟಕದ ಪಾತ್ರವನ್ನು 41ನೇ ವಯಸ್ಸಿನವರೆಗೂ ನೂರಾರು ಬಾರಿ ಮಾಡಿದ್ದೇನೆ."

"ಹಿಂದೆ ಸಿನಿಮಾಗಳಲ್ಲಿ ರೀಲ್ ಓಡುವ ಶಬ್ದ ಕೇಳಿದರೆ ನಮಗೆ ನಡುಕ ಶುರುವಾಗುತ್ತಿತ್ತು. ಡಾ. ರಾಜ್‌ಕುಮಾರ್, ಅಂಬರೀಷ್ ಅವರಂತಹ ದಿಗ್ಗಜರ ಜೊತೆ ನಟಿಸುವಾಗ ರೀಲ್ ವೇಸ್ಟ್ ಆಗಿ ಪ್ರೊಡ್ಯೂಸರ್‌ಗೆ ನಷ್ಟವಾಗಬಾರದು ಎಂಬ ಭಯವಿರುತ್ತಿತ್ತು. ಆದರೆ ಇಂದು ಡಿಜಿಟಲ್ ಕಾಲದಲ್ಲಿ ತಂತ್ರಜ್ಞಾನ ಬೆಳೆದಿದೆ. ಆದರೆ, 11 ಟೇಕ್ ತೆಗೆದುಕೊಂಡರೂ ಗಿಲ್ಟ್ ಇಲ್ಲದ ಇಂದಿನ ಕೆಲವರ ಧೋರಣೆ ಸರಿಯಲ್ಲ, ತಂತ್ರಜ್ಞಾನವನ್ನು ಮಿಸ್ಯೂಸ್ ಮಾಡಿಕೊಳ್ಳಬಾರದು."

45
ಶಿವಣ್ಣ, ಸುದೀಪ್, ಯಶ್, ಅನಂತ್ ನಾಗ್ ಜೊತೆ ನಟನೆ
Image Credit : Facebook

ಶಿವಣ್ಣ, ಸುದೀಪ್, ಯಶ್, ಅನಂತ್ ನಾಗ್ ಜೊತೆ ನಟನೆ

ಶಿವಣ್ಣ, ಸುದೀಪ್, ಯಶ್, ಅನಂತ್ ನಾಗ್ ಜೊತೆ ನಟನೆ
ತಮ್ಮ ಚಲನಚಿತ್ರ ಪಯಣದ ಬಗ್ಗೆ ಮಾತನಾಡುತ್ತಾ, ‘ಹಗಲುವೇಷ’ದಿಂದ ಹಿಡಿದು ಶಿವಣ್ಣ, ಸುದೀಪ್, ಯಶ್ ಮತ್ತು ಅನಂತ್ ನಾಗ್ ಅವರೊಂದಿಗೆ ನಟಿಸಿದ ದಿನಗಳನ್ನು ಸ್ಮರಿಸಿದರು. ಇತ್ತೀಚೆಗೆ ತೆರೆಕಂಡ ‘ದರ್ಜಿ’ ಚಿತ್ರದಲ್ಲಿ ಲೀಡ್ ರೋಲ್ ಮಾಡಿದ್ದನ್ನು ಉಲ್ಲೇಖಿಸಿದ ಅವರು, "ನನಗೆ ಯಾವುದೇ ಬೌಂಡರಿ ಇಲ್ಲ. ಸಾಯುವ ತನಕ, ನನ್ನ ಕೊನೆಯ ಉಸಿರಿರುವವರೆಗೂ ನಾಟಕ, ಸಿನಿಮಾ ಅಥವಾ ಸೀರಿಯಲ್ ಯಾವುದಾದರೊಂದು ಮಾಧ್ಯಮದಲ್ಲಿ ನಟಿಸುತ್ತಿರಬೇಕು ಎಂಬುದಷ್ಟೇ ನನ್ನ ಆಸೆ" ಎಂದು ಅಭಿಮಾನಿಗಳ ಆಶೀರ್ವಾದ ಕೋರಿದರು.

55
‘ಜಗದಾತ್ರಿ’ಯಲ್ಲಿ ಅಸಹಾಯಕ ತಂದೆಯ ಪಾತ್ರ
Image Credit : Facebook

‘ಜಗದಾತ್ರಿ’ಯಲ್ಲಿ ಅಸಹಾಯಕ ತಂದೆಯ ಪಾತ್ರ

‘ಜಗದಾತ್ರಿ’ಯಲ್ಲಿ ಅಸಹಾಯಕ ತಂದೆಯ ಪಾತ್ರ
ತಮ್ಮ ಕಂಬ್ಯಾಕ್ ಪಾತ್ರದ ಬಗ್ಗೆ ಮಾತನಾಡಿದ ಮೈಕೋ ಮಂಜುನಾಥ್, "ಜಗದಾತ್ರಿ ಧಾರಾವಾಹಿಯಲ್ಲಿ ನಾನೊಬ್ಬ ಅಸಹಾಯಕ ತಂದೆಯ ಪಾತ್ರ ಮಾಡುತ್ತಿದ್ದೇನೆ. ಈ ಹಿಂದೆ ನಡೆದ ಕೆಟ್ಟ ಘಟನೆಯೊಂದರಲ್ಲಿ ಪತ್ನಿ ದೇಶದ್ರೋಹದ ಸುಳ್ಳು ಆರೋಪ ಹೊತ್ತು ತೀರಿಕೊಂಡಿರುತ್ತಾಳೆ. ಆಕೆಯ ಸಾವಿಗೆ ತಾನೇ ಕಾರಣ ಎಂದು ಪತಿ (ಪಾತ್ರ) ಜೈಲುಪಾಲಾಗಿ, ಸರ್ಕಾರಿ ಕೆಲಸ ಕಳೆದುಕೊಂಡು, ಕಾಲಿನ ಸ್ವಾಧೀನವನ್ನೂ ಕಳೆದುಕೊಂಡಿರುತ್ತಾನೆ. ಹೆಂಗಸರ ದರ್ಬಾರಿನ ಮನೆಯಲ್ಲಿ ಮಗಳಿಗೆ ನೇರವಾಗಿ ಬೆಂಬಲ ನೀಡಲಾಗದ ಅಸಹಾಯಕತೆಯಲ್ಲೂ ಪ್ರೀತಿ ತೋರುವ ತಂದೆಯ ಪಾತ್ರವಿದು. 28-30 ವರ್ಷಗಳ ಸ್ನೇಹಿತ, ನಿರ್ದೇಶಕ ಮಹೇಶ್ ಅವರ ಕರೆಯ ಮೇರೆಗೆ ಈ ಪಾತ್ರ ಒಪ್ಪಿಕೊಂಡೆ" ಎಂದು ತಿಳಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಟಿವಿ ಶೋ
ಮನರಂಜನಾ ಸುದ್ದಿ
 

Latest Videos
Recommended Stories
Recommended image1
Bigg Boss ತಾಂಡವ್ ಫೇಕ್​ ಎಕ್ಸಿಟ್? ಇನ್​ಸ್ಟಾಗೆ ನುಗ್ಗಿದ ಫ್ಯಾನ್ಸ್​- ವಿದೇಶದಿಂದಲೂ ಹರಿದುಬಂದ ಅಭಿಮಾನಿಗಳು
Recommended image2
Bigg Boss: ಈ ವಾರ ದೊಡ್ಮನೆಗೆ 5 ಜನ 'ವೈಲ್ಡ್‌ ಕಾರ್ಡ್‌' ಎಂಟ್ರಿ ಕೊಡಲಿದ್ದಾರಾ? ಯಾರೆಲ್ಲಾ ಹೋಗೋ ಚಾನ್ಸ್..?!
Recommended image3
ಮಿಡ್ ನೈಟ್ ಹೊರಬಿದ್ದಿರುವ ತಾಂಡವ್ ಮತ್ತೆ ಬಿಗ್‌ ಬಾಸ್‌ ಮನೆಯೊಳಕ್ಕೆ ಬರ್ತಾರಾ? ಈ ಸುಳಿವು ಕೊಟ್ಟಿದ್ಯಾರು?
Related Stories
Recommended image1
"ಬಿಗ್ ಬಾಸ್ ಸ್ಕ್ರಿಪ್ಟೆಡ್ ಶೋನಾ"? ತಾಂಡವ್ ಎಲಿಮಿನೇಷನ್ ಹೊತ್ತಲ್ಲೇ ಎಡಿಟಿಂಗ್, ಟಾಸ್ಕ್, ಮನೆ ರಹಸ್ಯ ಬಿಚ್ಚಿಟ್ಟ ಕೀರ್ತಿ
Recommended image2
ಟಾಕ್ ಆಫ್ ದಿ ಟೌನ್ ಆಯ್ತು ‘ಜಗದ್ಧಾತ್ರಿ’... ಜಾಣ ವೀಕ್ಷಕರು ಹೇಳಿದ್ದು ಅದೊಂದೇ ಕಿವಿ ಮಾತು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved