- Home
- Entertainment
- TV Talk
- Bigg Boss ತಾಂಡವ್ ಫೇಕ್ ಎಕ್ಸಿಟ್? ಇನ್ಸ್ಟಾಗೆ ನುಗ್ಗಿದ ಫ್ಯಾನ್ಸ್- ವಿದೇಶದಿಂದಲೂ ಹರಿದುಬಂದ ಅಭಿಮಾನಿಗಳು
Bigg Boss ತಾಂಡವ್ ಫೇಕ್ ಎಕ್ಸಿಟ್? ಇನ್ಸ್ಟಾಗೆ ನುಗ್ಗಿದ ಫ್ಯಾನ್ಸ್- ವಿದೇಶದಿಂದಲೂ ಹರಿದುಬಂದ ಅಭಿಮಾನಿಗಳು
ಬಿಗ್‌ಬಾಸ್ 13ರಲ್ಲಿ ತಾಂಡವ್ ರಾಮ್ ಮತ್ತು ಗಗನ್ ಚಿನ್ನಪ್ಪ ಅವರ ಸ್ನೇಹ ವೀಕ್ಷಕರ ಗಮನ ಸೆಳೆದಿದೆ. ತಾಂಡವ್ ಅವರನ್ನು ದಿಢೀರ್ ಎಮರ್ಜೆನ್ಸಿ ಎಕ್ಸಿಟ್ ಮೂಲಕ ಹೊರಕಳುಹಿಸಿದ್ದು, ಇದು ಕೇವಲ ಟಿಆರ್‌ಪಿ ತಂತ್ರ ಎಂಬ ಅನುಮಾನ ಮೂಡಿದೆ. ಈ ಘಟನೆಯಿಂದ ಅವರ ಫಾಲೋವರ್ಸ್ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ.

ತಾಂಡವ್- ಗಗನ್ ದೋಸ್ತಿ
ಈ ಬಾರಿಯ ಬಿಗ್‌ಬಾಸ್ (Bigg Boss 13) ಹೆಚ್ಚು ಸುದ್ದಿ ಮಾಡುತ್ತಿದ್ದುದು ತಾಂಡವ್ ರಾಮ್ ಮತ್ತು ಗಗನ್ ಚಿನ್ನಪ್ಪ ಅವರ ದೋಸ್ತಿಯಿಂದಾಗಿ. ನಾಲ್ಕೈದು ವರ್ಷಗಳ ಹಿಂದೆ ಜೀ ಕನ್ನಡ ವಾಹಿನಿಯಲ್ಲಿ. ತಾಂಡವ್ ‘ಭೂಮಿಗೆ ಬಂದ ಭಗವಂತ’ ಧಾರಾವಾಹಿಗೆ ನಿರ್ಮಾಪಕರಾಗಿದ್ದರು. ಆಗ ಗಗನ್ ಚಿನ್ನಪ್ಪ, ನಾಯಕರಾಗಿದ್ದ ಸೀತಾರಾಮ ಧಾರಾವಾಹಿ ಕೂಡ ಲಾಂಚ್‌ಗೆ ಸಿದ್ದತೆ ಮಾಡಿಕೊಳ್ಳುತ್ತಿತ್ತು. ಆ ಸಮಯದಲ್ಲಿ ಪ್ರಮೋಷನ್ ಟೈಮ್‌ನಲ್ಲಿ ಇಬ್ಬರೂ ಪರಸ್ಪರ ಗೆಳೆಯರಾಗಿದ್ದರು. ಈಗ ಮತ್ತೆ ಬಿಗ್‌ಬಾಸ್‌ನಲ್ಲಿ ಒಂದಾಗಿದ್ದಾರೆ.
ಬಾಂಡಿಂಗ್ ಸಿಕ್ಕಾಪಟ್ಟೆ ವರ್ಕ್
ಇವರಿಬ್ಬರ ಬಾಂಡಿಂಗ್ ಸಿಕ್ಕಾಪಟ್ಟೆ ವರ್ಕ್ ಆಗ್ತಿದೆ. ತಾಂಡವ್ ರಾಮ್ ಅವರು ಫೈನಲಿಸ್ಟ್ ಎಂದೇ ಹೆಚ್ಚಿನ ವೀಕ್ಷಕರು ಅಂದುಕೊಳ್ಳುತ್ತಿದ್ದಾರೆ. ಅದರ ನಡುವೆಯೇ, ದಿಢೀರ್ ತಾಂಡವ್ ಅವರನ್ನು ಎಮರ್ಜೆನ್ಸಿ ಎಕ್ಸಿಟ್ ಹೆಸರಿನಲ್ಲಿ ಹೊರಕ್ಕೆ ಕಳುಹಿಸಲಾಗಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೀಕ್ಷಕರು ಗರಂ ಆಗಿದ್ದಾರೆ.
ಟಿಆರ್‌ಪಿ ಟ್ರಿಕ್ ಅಷ್ಟೇ?
ಆದರೆ, ಇದು ಟಿಆರ್‌ಪಿ ಟ್ರಿಕ್ ಅಷ್ಟೇ ಎನ್ನುವ ಸಂದೇಹವೂ ಇದೆ. ತಾಂಡವ್ ಅವರನ್ನು ಯಾವುದೇ ಕಾರಣಕ್ಕೂ ಇಷ್ಟು ಬೇಗ ಹೊರಕ್ಕೆ ಹಾಕುವುದಿಲ್ಲ ಎನ್ನುವುದು ದಿಟವೇ. ಜನರ ರೆಸ್‌ಪಾನ್ಸ್ ನೋಡುವ ತಂತ್ರವೂ ಇದಾಗಿದ್ದಿರಬಹುದು. ತಾಂಡವ್ ರಾಮ್ ಜರ್ನಿಗೆ ಸಂಬಂಧಿಸಿದ ವಿಡಿಯೋ ಪ್ರಸಾರ ಮಾಡಲು ಕಿಚ್ಚ ಸುದೀಪ್ ಮುಂದಾಗಿದ್ದಾರೆ. ಆದರೆ ಆ ವಿಡಿಯೋ ಪ್ರಸಾರವಾಗಲಿಲ್ಲ. ಇದೇ ಸಂದರ್ಭದಲ್ಲಿ ತಾಂಡವ್ ಜರ್ನಿ ಇನ್ನೂ ಪೂರ್ಣಗೊಂಡಿಲ್ಲ ಎಂಬ ಅರ್ಥದಲ್ಲಿ ಸುದೀಪ್ ಮಾತನಾಡಿರುವುದು ವೀಕ್ಷಕರ ಗಮನ ಸೆಳೆದಿದೆ.
ಬಿಕ್ಕಿ ಬಿಕ್ಕಿ ಅತ್ತ ಸ್ಪರ್ಧಿಗಳು
ಅದೇನೇ ಇದ್ದರೂ ತಾಂಡವ್ ಅವರನ್ನು ಹೊರಕ್ಕೆ ಕಳುಹಿಸಿದಾಗ, ಬಿಗ್‌ಬಾಸ್ ಮನೆಯಲ್ಲಿ ಸಿಕ್ಕಾಪಟ್ಟೆ ಮೌನವಾಗಿತ್ತು. ಎಲ್ಲರೂ ಬಿಕ್ಕಿ ಬಿಕ್ಕಿ ಅತ್ತಿದ್ದರು. ತಾಂಡವ್‌ಗೋಸ್ಕರ ಗಗನ್ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟ ಕ್ಷಣ ನೋಡಿ ವೀಕ್ಷಕರೂ ಕಣ್ಣೀರು ಆಗಿದ್ದಾರೆ.
ರಾತ್ರೋರಾತ್ರಿ ತಾಂಡವ್ ಹೀರೋ
ಕುತೂಲದ ವಿಷ್ಯ ಏನೆಂದರೆ, ರಾತ್ರೋರಾತ್ರಿ ತಾಂಡವ್ ಹೀರೋ ಆಗಿದ್ದಾರೆ. ಸೋಷಿಯಲ್ ಮೀಡಿಯಾ ಅಕೌಂಟ್‌ನಲ್ಲಿ ಇದ್ದಕ್ಕಿದ್ದಂತೆ ಫಾಲೋವರ್ಸ್ ಹೆಚ್ಚಾಗಿದ್ದು, ಈ ಕುರಿತು ಅವರ ಅಧಿಕೃತ ಖಾತೆಯಲ್ಲಿಯೇ ಬರೆದುಕೊಳ್ಳಲಾಗಿದೆ. ಅವರು ಔಟ್ ಆಗಿ ಹಂಗಾಮಾ ಆಗುತ್ತಲೇ ಅವರ ಅಕೌಂಟ್ ಹುಡುಕಿ ಫಾಲೋವರ್ಸ್ ಆಗುತ್ತಿದ್ದಾರೆ. 55 ಸಾವಿರಕ್ಕೂ ಹೆಚ್ಚು ಜನ ಫೋಲೋವರ್ಸ್‌ನ ಸಂಪಾದನೆ ಮಾಡಿದ್ದಾರೆ.
ವಿದೇಶದಲ್ಲಿಯೂ ಹವಾ
ವಿದೇಶದಲ್ಲಿರುವ ಕನ್ನಡಿಗರು ಬಿಗ್‌ಬಾಸ್ ನೋಡುವವರು ಇದ್ದಾರೆ. ತಾಂಡವ್ ರಾಮ್ ಎಮರ್ಜೆನ್ಸಿ ಎಕ್ಸಿಟ್ ಬಹಳ ಶಾಕ್ ನೀಡಿದೆ. ಅವರ ವೋಟುಗಳನ್ನ ಬೇರೆಯವರಿಗೆ ಕಸಿದುಕೊಳ್ಳುವಂತಹ ಚಟುವಟಿಕೆ ನೀಡಿದ್ದು, ನಿಜಕ್ಕೂ ವೀಕ್ಷಕರನ್ನ ಕೆರಳಿಸಿದೆ". ಎಂದು ತಮ್ಮ ಅಭಿಪ್ರಾಯಗಳನ್ನು ಹೊರಹಾಕುತ್ತಿದ್ದು, ವಿದೇಶದಲ್ಲಿಯೂ ತಾಂಡವ್ ಹವಾ ಸೃಷ್ಟಿಸುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

