- Home
- Entertainment
- TV Talk
- ಸೆಲೆಬ್ರಿಟಿ ಮಗಳೆಂಬ ಹಿಂಜರಿಕೆ ಬೇಡ 'ನೀನು ಹೊಡೆದು ಬಾ ಮಗಳೇ': ಪುತ್ರಿಗೆ ಧೈರ್ಯ ತುಂಬಿದ ಹಿರಿಯ ನಟಿ!
ಸೆಲೆಬ್ರಿಟಿ ಮಗಳೆಂಬ ಹಿಂಜರಿಕೆ ಬೇಡ 'ನೀನು ಹೊಡೆದು ಬಾ ಮಗಳೇ': ಪುತ್ರಿಗೆ ಧೈರ್ಯ ತುಂಬಿದ ಹಿರಿಯ ನಟಿ!
ಮಲಯಾಳಂ ನಟಿ ಮಂಜು ಪಿಳ್ಳೈ ಅವರ ಪುತ್ರಿ ದಯಾ, ಕೆಟ್ಟದಾಗಿ ವರ್ತಿಸಿದ ವ್ಯಕ್ತಿಯೊಬ್ಬರಿಗೆ ಹೊಡೆಯುವ ಬಗ್ಗೆ ಅಸಹಾಯಕತೆ ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಮಂಜು, ‘ಹೊಡೆದು ಬಾ, ಉಳಿದದ್ದನ್ನು ನಾನು ನೋಡಿಕೊಳ್ಳುತ್ತೇನೆ’ ಎಂದು ಹೇಳುವ ಮೂಲಕ ಮಗಳಿಗೆ ಧೈರ್ಯ ತುಂಬಿದ್ದಾಳೆ.

ನಟಿ ಮಂಜು ಪಿಳ್ಳೈ ಮತ್ತು ಅವರ ಪುತ್ರಿ ದಯಾ
ಸಾಮಾನ್ಯವಾಗಿ ಸಿನಿಮಾ ತಾರೆಯರು ಮತ್ತು ಅವರ ಮಕ್ಕಳು ಸದಾ ಸಾರ್ವಜನಿಕವಾಗಿ ತಮ್ಮ ಘನತೆಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಮಾಧ್ಯಮಗಳ ಕಣ್ಣು ಸದಾ ಅವರ ಮೇಲಿರುವುದರಿಂದ, ಯಾವುದೇ ವಿವಾದಗಳಿಗೆ ಸಿಲುಕದಂತೆ ಎಚ್ಚರಿಕೆ ವಹಿಸುತ್ತಾರೆ. ಆದರೆ, ಮಲಯಾಳಂ ಚಿತ್ರರಂಗದ ಖ್ಯಾತ ನಟಿ ಮಂಜು ಪಿಳ್ಳೈ ಮತ್ತು ಅವರ ಪುತ್ರಿ ದಯಾ ವಿಷಯದಲ್ಲಿ ಇದು ಸ್ವಲ್ಪ ಭಿನ್ನವಾಗಿದೆ.
ತಪ್ಪು ಮಾಡಿದವರಿಗೆ ತಕ್ಕ ಪಾಠ ಕಲಿಸಲು ಸ್ಟಾರ್ ಪಟ್ಟ ಅಡ್ಡಿಯಾಗಬಾರದು ಎಂದು ಮಂಜು ಪಿಳ್ಳೈ ನೀಡಿರುವ ಖಡಕ್ ಸಂದೇಶ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚಲನ ಮೂಡಿಸಿದೆ.
ಮಗಳ ಇನ್‌ಸ್ಟಾಗ್ರಾಮ್ ಪೋಸ್ಟ್ ಮತ್ತು ಆಕ್ರೋಶ:
ಮಂಜು ಪಿಳ್ಳೈ ಅವರ ಪುತ್ರಿ ದಯಾ, ಮಾಡೆಲಿಂಗ್ ಕ್ಷೇತ್ರದಲ್ಲಿ ತನ್ನದೇ ಆದ ಗುರುತು ಮೂಡಿಸುತ್ತಿದ್ದಾರೆ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ದಯಾ ಹಂಚಿಕೊಂಡಿದ್ದ ಪೋಸ್ಟ್ ಒಂದು ಎಲ್ಲರ ಗಮನ ಸೆಳೆದಿತ್ತು. ಅದರಲ್ಲಿ ಅವರು ತಮ್ಮ ಸಿಟ್ಟು ಮತ್ತು ಅಸಹಾಯಕತೆಯನ್ನು ಹೊರಹಾಕಿದ್ದರು. 'ಯಾರದೋ ಒಬ್ಬರ ಕೆಟ್ಟ ನಡವಳಿಕೆಯನ್ನು ಕಂಡು ಅವರ ಮುಖಕ್ಕೆ ಜೋರಾಗಿ ಬಾರಿಸಬೇಕು ಎಂದು ನನಗನ್ನಿಸುತ್ತಿದೆ.
ಸೆಲೆಬ್ರಿಟಿಯ ಮಗಳು
ಆದರೆ ನಿಮಗೆ ಗೊತ್ತಲ್ಲ... ನನ್ನ ಅಪ್ಪ ಮತ್ತು ಅಮ್ಮ ಇಬ್ಬರೂ ಪ್ರಸಿದ್ಧ ವ್ಯಕ್ತಿಗಳು (Celebrities). ನಾನು ಏನಾದರೂ ಪ್ರತಿಕ್ರಿಯೆ ನೀಡಿದರೆ ಅಥವಾ ಅವರ ಮೇಲೆ ಕೈ ಮಾಡಿದರೆ, ಅಂತಿಮವಾಗಿ ಮೀಡಿಯಾದವರು ನನ್ನನ್ನೇ ದೂಷಿಸುತ್ತಾರೆ' ಎಂದು ದಯಾ ಬರೆದುಕೊಂಡಿದ್ದರು. ಜೊತೆಗೆ 'ಅವಸ್ಥೆ' ಎನ್ನುವ ಕ್ಯಾಪ್ಷನ್ ನೀಡಿ ಬೇಸರ ವ್ಯಕ್ತಪಡಿಸಿದ್ದರು.
ತಾಯಿಯ ದಿಟ್ಟ ಪ್ರತಿಕ್ರಿಯೆ:
ಮಗಳ ಈ ಪೋಸ್ಟ್ ಅನ್ನು ಗಮನಿಸಿದ ತಾಯಿ ಮಂಜು ಪಿಳ್ಳೈ, ಮಾಮೂಲಿ ಪೋಷಕರಂತೆ 'ಸುಮ್ಮನಿರು, ಗಲಾಟೆ ಬೇಡ' ಎಂದು ಬುದ್ಧಿವಾದ ಹೇಳುವ ಬದಲು, ಮಗಳಿಗೆ ಪೂರ್ಣ ಬೆಂಬಲ ನೀಡುವ ಮೂಲಕ ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿಸಿದ್ದಾರೆ. ದಯಾ ಅವರ ಪೋಸ್ಟ್‌ಗೆ ಕಾಮೆಂಟ್ ಮಾಡಿರುವ ಮಂಜು, 'ನೀನು ಹೋಗಿ ಅವನ ಮುಖಕ್ಕೆ ಹೊಡೆದು ಬಾ. ಉಳಿದ ವಿಚಾರಗಳನ್ನು ನಾನು ನೋಡಿಕೊಳ್ಳುತ್ತೇನೆ. ಎದುರಿಗಿರುವವರ ಸ್ವಭಾವ ಅಥವಾ ನಡವಳಿಕೆ ಕೆಟ್ಟದಾಗಿದ್ದಾಗ, ನಾವು ನಮ್ಮ ಸೆಲೆಬ್ರಿಟಿ ಸ್ಟೇಟಸ್ ಅಥವಾ ಸ್ಥಾನಮಾನವನ್ನು ನೋಡಿಕೊಂಡು ಸುಮ್ಮನೆ ಕೂರಬೇಕಾಗಿಲ್ಲ' ಎಂದು ಬರೆದಿದ್ದಾರೆ.
ವೈರಲ್ ಆದ ಕಾಮೆಂಟ್:
ಮಂಜು ಪಿಳ್ಳೈ ಅವರ ಈ ರಿಯ್ಯಾಕ್ಷನ್ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ. 'ಒಬ್ಬ ತಾಯಿ ತನ್ನ ಮಗಳಿಗೆ ನೀಡಬೇಕಾದ ನಿಜವಾದ ಧೈರ್ಯ ಇದೇ' ಎಂದು ಹಲವರು ಶ್ಲಾಘಿಸಿದ್ದಾರೆ. 'ಇದು ಅಸಲಿ ತಾಯಿ-ಮಗಳ ಕಾಂಬೋ' ಎನ್ನುವ ಕಾಮೆಂಟ್‌ಗಳು ಹರಿದುಬರುತ್ತಿವೆ. ಸೆಲೆಬ್ರಿಟಿ ಮಕ್ಕಳು ಎನ್ನುವ ಕಾರಣಕ್ಕೆ ಎಲ್ಲವನ್ನೂ ಸಹಿಸಿಕೊಳ್ಳಬೇಕಿಲ್ಲ ಎನ್ನುವ ಮಂಜು ಅವರ ನಿಲುವು ಅನೇಕರಿಗೆ ಇಷ್ಟವಾಗಿದೆ.
ಇನ್ನು ಮಂಜು ಪಿಳ್ಳೈ ಅವರು ಮಲಯಾಳಂ ಚಿತ್ರರಂಗದ ಅತ್ಯಂತ ಪ್ರತಿಭಾವಂತ ನಟಿಯರಲ್ಲಿ ಒಬ್ಬರು. ಕಾಮಿಡಿ ಮತ್ತು ಗಂಭೀರ ಪಾತ್ರಗಳ ಮೂಲಕ ಮನೆಮಾತಾಗಿರುವ ಅವರು, ಈಗ ವೈಯಕ್ತಿಕ ಜೀವನದಲ್ಲೂ ಮಗಳ ಹಕ್ಕುಗಳ ಪರವಾಗಿ ನಿಲ್ಲುವ ಮೂಲಕ 'ರಿಯಲ್ ಲೈಫ್ ಹೀರೋಯಿನ್' ಎನಿಸಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

