ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡುತ್ತಿರುವ ಯುಟ್ಯೂಬರ್ ಮಧು ಗೌಡ ಅವರು, ತಮ್ಮ ವಿಡಿಯೋಗಳಿಂದ ಗಳಿಸಿದ್ದೆಷ್ಟು ಗೊತ್ತಾ? ಇವರ ಆದಾಯ ಅಬ್ಬಬ್ಬಾ ಎನ್ನುವಂತಿದೆ. ಡಿಟೇಲ್ಸ್ ಇಲ್ಲಿದೆ ನೋಡಿ...
ಸೋಷಿಯಲ್ ಮೀಡಿಯಾ ಇಷ್ಟೊಂದು ಬೆಳೆದಿರುವ ಈ ದಿನಗಳಲ್ಲಿ, ಚಿತ್ರತಾರೆಯರಿಗಿಂತಲೂ ಹಲವು ಯುಟ್ಯೂಬರ್ಗಳೇ ಫೇಮಸ್ ಆಗುತ್ತಿದ್ದಾರೆ. ರೀಲ್ಸ್ ಮೂಲಕ, ಸಂದರ್ಶನಗಳ ಮೂಲಕ ಅಥವಾ ಇನ್ನಿತರ ಯಾವುದರೋ ಮೂಲಕವಾಗಿ ಲಕ್ಷಾಂತರ ಮಂದಿ ಅಭಿಮಾನಿಗಳನ್ನೂ ಪಡೆಯುತ್ತಿದ್ದಾರೆ ಯುಟ್ಯೂಬರ್ಗಳು ಅವರಲ್ಲಿ ಒಬ್ಬರು ಮಧು ಗೌಡ. ಯೂಟ್ಯೂಬ್ ವ್ಲಾಗರ್ ಆಗಿರುವ ಮಧು ಗೌಡ ಅವರು, ಸಭ್ಯತೆಯನ್ನು ಮೀರದೇ ಒಳ್ಳೆಯ ರೀತಿಯಲ್ಲಿ ರೀಲ್ಸ್ ಮಾಡುವ ಮೂಲಕ ಜನಪ್ರಿಯತೆ ಗಳಿಸಿದವರು. ಈ ಮೂಲಕವೇ ಅವರು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡುತ್ತಿದ್ದಾರೆ. ಇವರ ಜೊತೆಗೆ ಅಣ್ಣ ನಿಖಿಲ್, ತಂಗಿ ನಿಶಾ ಕೂಡ ಎಲ್ಲರಿಗೂ ಗೊತ್ತಿರುತ್ತೆ. ಈ ಮೂವರು ಹೀಗೆ ಭಿನ್ನ ವಿಭಿನ್ನವಾಗಿ ವಿಡಿಯೋಗಳನ್ನು ಕ್ರಿಯೇಟ್ ನೆಟ್ಟಿಗರಿಗೆ ಮನರಂಜನೆ ನೀಡುತ್ತಾ ಇರುತ್ತಾರೆ.
ಕಳೆದ ಅಕ್ಟೋಬರ್ ತಿಂಗಳಿನಲ್ಲಿ ನಿಖಿಲ್ ರವಿಂದ್ರ ಅವರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ ಮಧು. ಇವರ ಮದುವೆ ಫಿಕ್ಸ್ ಆದಾಗಲೇ ಐಷಾರಾಮಿ ವಸ್ತುಗಳನ್ನು ಖರೀದಿ ಮಾಡುವ ಮೂಲಕ ಭಾರಿ ಸದ್ದು ಮಾಡಿದ್ದರು. ಅಷ್ಟಕ್ಕೂ ಯುಟ್ಯೂಬರ್ಗಳ ಗ್ರಹಗತಿ ಚೆನ್ನಾಗಿದ್ದರೆ ಕೋಟ್ಯಧೀಶ್ವರರೂ ಆಗಬಲ್ಲರು. ಅವರು ಕೊಡುವ ಕಂಟೆಂಟ್, ಅವರ ಫಾಲೋವರ್ಸ್ ಎಲ್ಲವನ್ನೂ ಲೆಕ್ಕಹಾಕಿದರೆ ಇದಾಗಲೇ ಹಲವರು ಕೋಟ್ಯಧಿಪತಿಗಳಾಗಿದ್ದಾರೆ. ಪ್ರತಿ ತಿಂಗಳು ಕೇವಲ ಯುಟ್ಯೂಬ್ನಿಂದಲೇ ಲಕ್ಷ ಲಕ್ಷ ಗಳಿಸುವವರು ಇದ್ದಾರೆ. ಇದೇ ಕಾರಣಕ್ಕೆ ಕೆಲವರು ನೌಕರಿಯನ್ನೂ ಬಿಟ್ಟು ಇದರಿಂದಲೇ ಜೀವನ ಸಾಗಿಸುತ್ತಿದ್ದಾರೆ. ಅದೇ ರೀತಿ ಮಧು ಗೌಡ ಅವರು ಯುಟ್ಯೂಬ್ನಿಂದ ಸಿಕ್ಕಾಪಟ್ಟೆ ಹಣ ಸಂಪಾದನೆ ಮಾಡುತ್ತಿದ್ದಾರೆ ಎಂದು ಅವರ ಐಷಾರಾಮಿ ವಸ್ತುಗಳನ್ನು ನೋಡಿದಾಗಲೇ ಜನರು ಲೆಕ್ಕಾಚಾರ ಹಾಕಿದ್ದರು.
ಆದರೆ ಹಿಂದು ಮಧು ಅವರು ತಾವು ಇಷ್ಟೊಂದು ಆದಾಯ ಗಳಿಸುತ್ತಿಲ್ಲ ಎಂದು ಹೇಳಿದ್ದರು. 'ಯೂಟ್ಯೂಬ್‌ನಿಂದ ಹಣ ಮಾಡುತ್ತಿದ್ದೀರಾ ಇದೇ ನಿಮ್ಮ ದುಡಿಮೆ ಎಂದು ಅನೇಕರು ಹೇಳುತ್ತಾರೆ ಆದರೆ ಇದು ಅಲ್ಲ. ನಮ್ಮ ತಂದೆ ನಮಗೆ ಚೆನ್ನಾಗಿ ಮಾಡಿಟ್ಟಿದ್ದಾರೆ ಸುಮಾರು 12-13 ಮನೆಗಳು ಬಾಡಿಗೆಗೆ ಬಿಟ್ಟಿದ್ದೀವಿ. ಇದರಿಂದ ನಮಗೆ ತಿಂಗಳು ಬಾಡಿಗೆ ಬರುತ್ತದೆ ಹಾಗೂ ಒಂದೆರಡು ಚೀಟಿ ಕಟ್ಟುತ್ತೀನಿ ಅದು ಕೂಡ ನಮಗೆ ಸೇವಿಂಗ್ಸ್ ಆಗುತ್ತದೆ. ಅಣ್ಣ ಸರ್ಕಾರದ ರೋಡ್ ಕಾಂಟ್ರಾಕ್ಟ್ ಕೆಲಸ ಮಾಡಿಸುತ್ತಿದ್ದ ಅದರಿಂದ ವಿಪರೀತ ಓಡಾಡ ಶುರುವಾಯ್ತು ಹೀಗಾಗಿ ಅವನಿಗೆ ಆ ಕೆಲಸ ಮಾಡಬೇಡ ಈಗ ಮದುವೆ ಓಡಾಟ ನೋಡಿಕೊಂಡು ಇರು ಎಂದು ಹೇಳಿದ್ದೀನಿ. ಅವನು ಕೂಡ ಚೀಟಿ ಕಟ್ಟಿದ್ದಾನೆ. ನಾವು ಅನುಕೂಲದಲ್ಲಿ ಇದ್ದೀವಿ' ಎಂದಿದ್ದರು.
ಆದರೆ ಇದೀಗ ಮತ್ತೋರ್ವ ಯುಟ್ಯೂಬರ್ ಪ್ರಶಾಂತ್ ಟಾಕ್ಸ್ ಇನ್ಸ್ಟಾಗ್ರಾಮ್ನಲ್ಲಿ ಮಧು ಗೌಡ ಅವರ ಆದಾಯದ ಬಗ್ಗೆನೇ ಒಂದು ವಿಡಿಯೋ ಮಾಡಿ ಹಾಕಿದ್ದಾರೆ. ಮಧು ಅವರಿಗೆ 7.87 ಲಕ್ಷ ಮಂದಿ ಸಬ್ಸ್ಕ್ರೈಬರ್ಸ್ ಇದ್ದಾರೆ. ಇದುವರೆಗೆ ಇವರು 594 ವಿಡಿಯೋ ಹಾಕಿದ್ದಾರೆ. ಲಾಂಗ್ಫಾರ್ಮ್ ವಿಡಿಯೋಗಳಿಂದಲೇ ಮಧು ಅವರು, 184 ಮಿಲಿಯನ್ ವೀಕ್ಷಣೆ ಪಡೆದಿದ್ದಾರೆ. ಒಂದು ಮಿಲಿಯನ್ ವೀಕ್ಷಣೆಗೆ ಸರಿಸುಮಾರು 60 ಸಾವಿರ ರೂಪಾಯಿ ಸಿಗುತ್ತದೆ ಎಂಬೆಲ್ಲಾ ಲೆಕ್ಕಾಚಾರ ಹಾಕಿರುವ ಪ್ರಶಾಂತ್ ಅವರು, 2022 ಆಗಸ್ಟ್ನಿಂದ ಮಧು ಅವರು ಯುಟ್ಯೂಬ್ ಓಪನ್ ಮಾಡಿದಾಗಿನಿಂದ ಜೂನ್ 17, 2025ರ ವರೆಗೆ 369 ಲಾಂಗ್ ಫಾರ್ಮ್ ವಿಡಿಯೋ ಮಾಡಿದ್ದು, ಇದನ್ನು ಲೆಕ್ಕಾಚಾರ ಹಾಕಿದರೆ ಸುಮಾರು 1 ಕೋಟಿ 10 ಲಕ್ಷದ 53 ಸಾವಿರ ರೂಪಾಯಿ ಪಡೆದುಕೊಂಡಿದ್ದಾರೆ. ಕಳೆದ ಒಂದೇ ಒಂದು ತಿಂಗಳಿನಲ್ಲಿ ಮಧು ಅವರು, 2.70 ಲಕ್ಷ ರೂಪಾಯಿ ಆದಾಯ ಗಳಿಸಿದ್ದಾರೆ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಮಧು ಅವರು ಯುಟ್ಯೂಬ್ನಿಂದಲೇ ಕೋಟ್ಯಧಿಪತಿ ಆಗಿರುವುದು ಖಚಿತ ಎನ್ನುತ್ತಿದ್ದಾರೆ ಅವರ ಫ್ಯಾನ್ಸ್ ಕೂಡ. ಇದು ಕೇವಲ ವಿಡಿಯೋದಿಂದ ಆದರೆ, ಫಾಲೋವರ್ಸ್ ಹೆಚ್ಚಾದಂತೆ ಜಾಹೀರಾತು ಕಂಪೆನಿಗಳು ಸೆಲೆಬ್ರಿಟಿಗಳನ್ನು ತಮ್ಮ ಪ್ರಾಡಕ್ಟ್ ಸೇಲ್ಗೆ ಬಳಸಿಕೊಳ್ಳುವುದು ಇದೆ. ಇದರಿಂದಲೇ ತಿಂಗಳಿಗೆ ಹಲವು ಲಕ್ಷ ರೂಪಾಯಿಗಳನ್ನು ಯುಟ್ಯೂಬರ್ಗಳು ಗಳಿಸುತ್ತಾರೆ.
