Lakshmi Nivasa ರೋಚಕ ಟ್ವಿಸ್ಟ್: ಲಲಿತಾ ಮ*ರ್ಡರ್? ಸಾಯಿಸೋರು ಜಯಂತನಾ, ಸಂತೋಷನಾ?
ಲಕ್ಷ್ಮೀ ನಿವಾಸ ಧಾರಾವಾಹಿಯು ಯಾರೂ ಊಹಿಸದ ಟ್ವಿಸ್ಟ್ ಪಡೆದುಕೊಂಡಿದೆ. ಜಯಂತ್ ಮತ್ತು ವಿಶ್ವನ ನಡುವಿನ ಸಂಘರ್ಷ ತಾರಕಕ್ಕೇರಿದ್ದು, ಜಾಹ್ನವಿ ಅಣ್ಣ ಸಂತೋಷ್ ಎಲ್ಲವನ್ನೂ ವಿಡಿಯೋ ರೆಕಾರ್ಡ್ ಮಾಡಿಕೊಳ್ಳುತ್ತಿದ್ದಾನೆ. ಈ ನಡುವೆ, ಲಲಿತಾ ಪಾತ್ರ ಅಂತ್ಯವಾಗುವುದು ಖಚಿತವಾಗಿದೆ.

ಯಾರೂ ಊಹಿಸದ ಟ್ವಿಸ್ಟ್
ಲಕ್ಷ್ಮೀ ನಿವಾಸ (Lakshmi Nivasa) ಈಗ ಯಾರೂ ಊಹಿಸದ ಟ್ವಿಸ್ಟ್ ಪಡೆದುಕೊಂಡಿದೆ. ಜಯಂತ್, ಪತ್ನಿ ಜಾಹ್ನವಿಗಾಗಿ ವೆಂಕಿ ಮತ್ತು ಚೆಲುವಿಯನ್ನು ಕಿಡ್ನ್ಯಾಪ್ ಮಾಡಿ, ಜಾಹ್ನವಿಯನ್ನು ಕರೆದುಕೊಂಡು ಬರದಿದ್ರೆ ಇವರಿಬ್ಬರ ಕಥೆ ಮುಗಿಸುವುದಾಗಿ ವಿಶ್ವನಿಗೆ ಧಮ್ಕಿ ಹಾಕಿದ್ದ.
ವಿಶ್ವ ಒಂದು ಹೆಜ್ಜೆ ಮುಂದೆ
ಆದರೆ ವಿಶ್ವ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ, ಜಾಹ್ನವಿಯನ್ನು ಕಟ್ಟಿಹಾಕುವಂತೆ ನಾಟಕ ಮಾಡಿ, ಜಯಂತ್ಗೆ ವಿಡಿಯೋ ಕಾಲ್ನಲ್ಲಿ ಅವರಿಬ್ಬರನ್ನೂ ಬಿಡದಿದ್ದರೆ ಜಾಹ್ನವಿ ಕಥೆ ಮುಗಿಸುವುದಾಗಿ ಹೇಳಿದ.
ವಿಶ್ವನ ಮನೆಗೆ ಬಂದ ಸೈಕೋ
ಇದರಿಂದ ತಲ್ಲಣಗೊಂಡಿರೋ ಜಯಂತ್, ಈಗ ಚಿನ್ನುಮರಿಯನ್ನು ಹುಡುಕಿಕೊಂಡು ನೇರವಾಗಿ ವಿಶ್ವನ ಮನೆಗೆ ಬಂದಿದ್ದಾನೆ. ಆದರೆ ಎಲ್ಲವನ್ನೂ ಬಲ್ಲ ವಿಶ್ವನ ಅಮ್ಮ ಲಲಿತಾ, ಜಯಂತ್ನನ್ನು ಒಳಗೆ ಬಿಡಲಿಲ್ಲ. ನೀನು ಬಂದೇ ಬರ್ತಿಯಾ ಎಂದು ತಿಳಿದಿತ್ತು. ಆದರೆ ನಾನು ಬದುಕಿರುವವರೆಗೂ ಅವಳು ನಿನಗೆ ಸಿಗುವುದಿಲ್ಲ ಎಂದಿದ್ದಾಳೆ.
ವಿಡಿಯೋ ರೆಕಾರ್ಡ್
ಅದೇ ಇನ್ನೊಂದೆಡೆ, ಇದೆಲ್ಲವನ್ನೂ ಜಾಹ್ನವಿ ಅಣ್ಣ ಸಂತೋಷ್ ವಿಡಿಯೋ ರೆಕಾರ್ಡ್ ಮಾಡಿಕೊಳ್ಳುತ್ತಿದ್ದಾರೆ. ಇಷ್ಟೇ ಪ್ರೊಮೋ ಬಿಡುಗಡೆಯಾಗಿದೆ. ಅಲ್ಲಿಗೆ ಲಲಿತಾ ಸಾವು ನಿಶ್ಚಿತವಾಗಿದೆ.
ನಟಿ ವಿಜಯಲಕ್ಷ್ಮಿ ಮಾತು
ಇದಕ್ಕೆ ಕಾರಣವೂ ಇದೆ. ಅದೇನೆಂದರೆ, ಲಲಿತಾ ಪಾತ್ರಧಾರಿಯಾಗಿರುವ ನಟಿ ವಿಜಯಲಕ್ಷ್ಮಿ ಅವರು ತಮ್ಮ ಸೋಷಿಯಲ್ಮೀಡಿಯಾ ಖಾತೆಯಲ್ಲಿ ತಮ್ಮ ಪಾತ್ರವನ್ನು ಅನ್ಯಾಯವಾಗಿ ಸಾಯಿಸಿರುವ ಬಗ್ಗೆ ನೋವು ತೋಡಿಕೊಂಡಿದ್ದರು. ತಮಗೆ ತಿಳಿಸದೇ ಇಡೀ ಸೀರಿಯಲ್ ತಂಡ ಅನ್ಯಾಯ ಮಾಡಿದೆ, ಇದ್ಯಾವ ನ್ಯಾಯ ಎಂದು ತುಂಬಾ ದುಃಖದಿಂದ ನುಡಿದಿದ್ದರು. ಆದ್ದರಿಂದ ಇಲ್ಲಿಗೆ ಅವರ ಪಾತ್ರ ಅಂತ್ಯ ಕಾಣುವುದು ಖಚಿತವಾಗಿದೆ.
ಜಯಂತ್ನೋ ಅಥ್ವಾ ಸಂತೋಷನೊ?
ಆದರೆ ಅವರ ಕೊ*ಲೆ ಮಾಡುವುದು ಜಯಂತ್ನೋ ಅಥ್ವಾ ಸಂತೋಷನೋ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ. ಜಯಂತ್ ಎಂಥ ಸೈಕೋ ಎನ್ನುವುದು ತಿಳಿದಿದೆ. ತನ್ನ ಚಿನ್ನುಮರಿಗಾಗಿ ಆತ ಎಂಥ ಹೇಯ ಕೆಲಸವನ್ನೂ ಮಾಡಬಲ್ಲ. ಆದ್ದರಿಂದ ಲಲಿತಮ್ಮನ ಸಾಯಿಸೋದು ಅವನಿಗೆ ಕಷ್ಟದ ವಿಷಯವೇ ಅಲ್ಲ.
ಸಾಯಿಸೋರು ಯಾರು?
ಅದೇ ಇನ್ನೊಂದೆಡೆ, ಹೇಗಾದರೂ ಮಾಡಿ ಹಣ ಸಂಪಾದನೆ ಮಾಡುವ ನೀಚತನಕ್ಕೆ ಇಳಿದಿರೋ ಸಂತೋಷ್, ಇವೆಲ್ಲಾ ರೆಕಾರ್ಡ್ ಮಾಡಿಕೊಳ್ಳುತ್ತಿದ್ದಾನೆ. ತಾನೇ ಲಲಿತಾಳನ್ನು ಸಾಯಿಸಿ, ಇದನ್ನು ಜಯಂತ್ ತಲೆ ಮೇಲೆ ಕಟ್ಟಿ ಬ್ಲ್ಯಾಕ್ಮೇಲ್ ಮಾಡುವ ಸಾಧ್ಯತೆಯೂ ಇದೆ. ಆದ್ದರಿಂದ ಕೊ*ಲೆ ಮಾಡುವುದು ಯಾರು ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

