- Home
- Entertainment
- TV Talk
- BBK 12: ಬಿಗ್ ಬಾಸ್‌ನಿಂದ ಕಾಕ್ರೋಚ್ ಸುಧಿ ಹೊರಕ್ಕೆ; ಕಿಚ್ಚ ಸುದೀಪ್ ಮಾತಿನಂತೆ ಒಪನ್ ಆದ ಬಾಗಿಲು
BBK 12: ಬಿಗ್ ಬಾಸ್‌ನಿಂದ ಕಾಕ್ರೋಚ್ ಸುಧಿ ಹೊರಕ್ಕೆ; ಕಿಚ್ಚ ಸುದೀಪ್ ಮಾತಿನಂತೆ ಒಪನ್ ಆದ ಬಾಗಿಲು
ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ವಾರದ ಜೊತೆ ಕಿಚ್ಚನ ಜೊತೆ ಎಪಿಸೋಡ್ ಪ್ರೋಮೋ ರಿಲೀಸ್ ಆಗಿದೆ. ಕಿಚ್ಚ ಸುದೀಪ್ ಅವರು ಕಾಕ್ರೋಚ್ ಸುಧಿಗೆ ಮನೆಯಿಂದ ಹೊರಗಡೆ ಹೋಗಬಹುದು, ಡೋರ್ ಒಪನ್ ಮಾಡಸ್ತೀನಿ ಎಂದು ಹೇಳಿದ್ದಾರೆ.
15

Image Credit : colors kannada facebook
ಈ ವಾರ ಏನೇನು ಆಯ್ತು?
ಈ ವಾರ ಎರಡು ದಿನಗಳ ಕಾಲ ಸ್ಪರ್ಧಿಗಳು ಮನೆಯಿಂದ ಹೊರಗಡೆ ಇದ್ದರು. ಅಸುರ ಟಾಸ್ಕ್ ಮಾತ್ರ ನಡೆದಿತ್ತು. ಮನರಂಜನೆಗಿಂತ ಜಾಸ್ತಿ ಜಗಳವೇ ಜಾಸ್ತಿ ಆಗಿತ್ತು. ಗಿಲ್ಲಿ ನಟ,ಜಾಹ್ನವಿ, ಅಶ್ವಿನಿ ಗೌಡ, ರಕ್ಷಿತಾ, ಕಾವ್ಯ ಶೈವ, ಮಲ್ಲಮ್ಮ ಮಾತುಗಳು ಮಾತ್ರ ಸದ್ದು ಮಾಡಿತ್ತು.
25
Image Credit : colors kannada facebook
ಕಿಚ್ಚ ಸುದೀಪ್ ಪಂಚಾಯಿತಿಯಲ್ಲಿ ನಡಿದಿದ್ದೇನು?
ಕಿಚ್ಚ ಸುದೀಪ್;: ಈ ಬಾರಿ ಅಸುರನ ಆಟ ಹೇಗಿತ್ತು?
ಜಾಹ್ನವಿ: ಕ್ರೌರ್ಯ ಅಟ್ಟಹಾಸ ಮೇಕಪ್‌ಗೆ ಸಿಕ್ಕಿತ್ತು
ರಾಶಿಕಾ ಶೆಟ್ಟಿ-ಜೋಕರ್‌ಥರ ಕಾಣುತ್ತಿತ್ತು
ಕಾಕ್ರೋಚ್ ಸುಧಿ- ಕಾಲಿಗೆ ಒಂದು ಬಿದ್ದಿಲ್ಲ ನಾನು, ಇನ್ನು ಏನು ಮಾಡಬೇಕು? ಇವರ ಹತ್ರ ಇನೇನು ಆಗತ್ತೆ? ಇನ್ನು ಹೇಗೆ ಬದುಕಬೇಕು?
ಕಿಚ್ಚ ಸುದೀಪ್- ಶಫ ಸೀರಿಯಲ್‌ನೆಸ್‌ಅರ್ಥ ಆಗ್ತಿಲ್ಲ, ಕೆಲವೊಂದು ಕಂಟ್ರೋಲ್ ಮಾಡೋಕೆ ಆಗ್ತಿಲ್ಲ ಅಂದರೆ ಬಾಗಿಲು ಒಪನ್‌ಮಾಡಿ, ಈಗಲೇ ಕಳಿಸಿಕೊಡ್ತೀನಿ
35
Image Credit : colors kannada facebook
ವೀಕ್ಷಕರು ಏನು ಹೇಳಿದರು?
- ಅಶ್ವಿನಿ ಪ್ರಿ ಪ್ರಾಡಕ್ಟ್ ಮತ್ತೆ ಕಾರ್ಟೂನ್ ಅಂತ ಪದಗಳನ್ನು ಬಳಸಿದ್ದಾರೆ. ಅಲ್ಲಿ ಇದರ ಬಗ್ಗೆ ಕಿಚ್ಚ ಸರ್ ಮಾತಾಡಲೇಬೇಕು
- ಜಾನ್ವಿ ಅಥವಾ ಅಶ್ವಿನಿ ಈ ವಾರ ಬಿಗ್ ಬಾಸ್ ಮನೆಯಿಂದ ಹೊರಹೋಗಬೇಕು
- ಕೋಕ್ರೋಚ್ ಚೆನ್ನಾಗಿಯೇ ಆಡಿದ್ದಾರೆ
- ದಯವಿಟ್ಟು ಆದಷ್ಟು ಬೇಗನೆ ಈ ಒಂಟಿ ಜಂಟಿ ಕಾನ್ಸೆಪ್ಟ್ ತೆಗಿಯಿರಿ. ಪ್ರತಿ ಸ್ಪರ್ಧಿಗಳ ಸಾಮರ್ಥ್ಯ ಏನು ಎನ್ನೋದು ಗೊತ್ತಾಗಬೇಕು.
- ಅಸುರ ಕಾಲಿಗೆ ಬೀಳುವ ಸನ್ನಿವೇಶ ಬರುತ್ತಾ?
45
Image Credit : colors kannada facebook
ಕಾವ್ಯ ಶೈವ ಬಗ್ಗೆ ವೀಕ್ಷಕರು ಏನಂದ್ರು?
- ದಯವಿಟ್ಟು ಈ ಒಂಟಿ ಜಂಟಿ ಕಾನ್ಸೆಪ್ ನಿಲ್ಲಿಸಿ.
- ಜಾಹ್ನವಿ ಸುಮ್ನೇ ಇರೋದು ಅಲ್ಲಿ. ಆಟ ಆಡಲ್ಲ, ಏನು ಇಲ್ಲ, ಬರಿ ಮಾತೆ ಆಯಿತು!
- ಬಿಗ್ ಬಾಸ್ ಶೋನ ಈ ಸೀಸನ್‌ನಲ್ಲಿ ಧನುಷ್ ಅವರ ವ್ಯಕ್ತಿತ್ವ ಬಹಳ ಇಷ್ಟ ಆಯಿತು. ಎಷ್ಟು ಬೇಕು ಅಷ್ಟು ಮಾತನಾಡುತ್ತಾರೆ, ಆಟ ಅಂತ ಬಂದರೆ ತುಂಬ ಚೆನ್ನಾಗಿ ಆಡುತ್ತಾರೆ. ತಪ್ಪು ಇರುವ ಕಡೆ ಮಾತನಾಡುತ್ತಾರೆ.
- ಅಶ್ವಿನಿ ಗೌಡ ಬಗ್ಗೆ ಮಾತನಾಡುವವರು ಕಾವ್ಯಾ ಶೈವ ಮನೇಲಿ ಏನು ಮಾಡ್ತಾರೆ, ಒಂದು ಟಾಸ್ಕ್ ವಿನ್ ಆಗಿಲ್ಲ , ಸ್ವಲ್ಪ ಫೂಟೇಜ್ ಸಿಗಲಿ ಅಂತ ಗಿಲ್ಲಿ ಜೊತೆ ಜಂಟಿ ಮಾಡಿದ್ದಾರೆ, ಬರೀ ಗಿಲ್ಲಿ ಹಿಂದೆ ತಿರುಗುತ್ತಾಳೆ ಅಷ್ಟೇ.
55
Image Credit : colors kannada facebook
ಯಾವ ವಿಷಯ ಚರ್ಚೆ ಆಗಬೇಕು?
ಕಿಚ್ಚ ಸುದೀಪ್ ಅವರು ಈ ವಾರ ಯಾವ ವಿಷಯವನ್ನು ಮಾತನಾಡಲಿದ್ದಾರೆ ಎಂದು ಕಾದು ನೋಡಬೇಕಿದೆ. ರಕ್ಷಿತಾ ಕೂಗಾಟ, ಮಲ್ಲಮ್ಮ ಅವರು ಕಾವ್ಯ ಶೈವ ವಿರುದ್ಧ ಮಾತನಾಡಿದ್ದು, ಮಂಜುಭಾಷಿಣಿ-ರಕ್ಷಿತಾ ಜಗಳದ ಬಗ್ಗೆ ಮಾತನಾಡಬೇಕಿದೆ.
Latest Videos