- Home
- Entertainment
- TV Talk
- Karna Serial: ಯಾರೂ ಊಹಿಸದ ಟ್ವಿಸ್ಟ್! ಅಪ್ಪ ಆಗ್ತಿರೋ ಸತ್ಯ ತಿಳಿದ್ರೂ ಮದ್ವೆಗೆ ನಿರಾಕರಿಸ್ತಾನಾ ತೇಜಸ್?
Karna Serial: ಯಾರೂ ಊಹಿಸದ ಟ್ವಿಸ್ಟ್! ಅಪ್ಪ ಆಗ್ತಿರೋ ಸತ್ಯ ತಿಳಿದ್ರೂ ಮದ್ವೆಗೆ ನಿರಾಕರಿಸ್ತಾನಾ ತೇಜಸ್?
ತೇಜಸ್ ಕಿಡ್ನ್ಯಾಪ್ ಹಿಂದಿನ ಸತ್ಯ ಬಯಲಾಗಿದ್ದು, ಕರ್ಣ ನಿರಪರಾಧಿ ಎಂದು ಸಾಬೀತಾಗಿದೆ. ನಿತ್ಯಾ ಮತ್ತು ತೇಜಸ್ ಮದುವೆ ಮಾಡಿಸಲು ಕರ್ಣ ಮುಂದಾಗಿದ್ದು, ಈ ಪ್ರಸ್ತಾಪ ಕೇಳಿ ತೇಜಸ್ ಶಾಕ್ ಆಗಿದ್ದಾನೆ. ತೆರೆಮರೆಯಲ್ಲಿ ರಮೇಶ್ ನಕ್ಕಿರುವುದು ಕಥೆಗೆ ಹೊಸ ತಿರುವು ನೀಡಿದೆ.

ಕುತೂಹಲದ ಹಂತ
ಕರ್ಣ ಸೀರಿಯಲ್ (Karna Serial Update) ಇದೀಗ ಕುತೂಹಲದ ಹಂತವನ್ನು ತಲುಪಿದೆ. ತೇಜಸ್ ಆಗಮನವಾಗಿದೆ. ಕರ್ಣನೇ ತನ್ನನ್ನು ಕಿಡ್ನ್ಯಾಪ್ ಮಾಡಿದ್ದು ಎಂದು ಅವನು ಅಂದುಕೊಂಡಿದ್ದ. ಏಕೆಂದರೆ ರಮೇಶ್ ಮತ್ತು ಸಂಜಯ್ ಸೇರಿ ಅದೇ ರೀತಿ ಪ್ಲ್ಯಾನ್ ಮಾಡಿದ್ದರು.
ತೆರೆಮರೆಯಲ್ಲಿ
ಇದೀಗ ಕರ್ಣನ ಮೇಲೆಯೇ ತೇಜಸ್ ಆರೋಪ ಹೊರಿಸಿದಾಗ ನಿತ್ಯಾ ಎಲ್ಲಾ ಸತ್ಯವನ್ನೂ ಹೇಳಿದ್ದಾಳೆ. ತಾನು ಗರ್ಭಿಣಿ ಎನ್ನುವ ವಿಷಯವನ್ನು ಕೂಡ ಅವಳು ಬಹಿರಂಗಪಡಿಸಿದ್ದಾಳೆ. ಆದರೆ ಇದನ್ನೆಲ್ಲಾ ಮರೆಯಲ್ಲಿಯೇ ನಿಂತು ರಮೇಶ್, ಸಂಜಯ್ ಗ್ಯಾಂಗ್ ಕೇಳಿಸಿಕೊಂಡಿದೆ.
ಕ್ಷಮೆ ಕೋರಿದ ತೇಜಸ್
ಅಸಲಿ ವಿಷಯ ತಿಳಿಯುತ್ತಲೇ ಕರ್ಣನ ಬಳಿ ಕ್ಷಮೆ ಕೋರಿದ್ದಾನೆ ತೇಜಸ್. ನಿತ್ಯಾಳಿಗೆ ಮಾಡಿರುವ ಸಹಾಯದ ಬಗ್ಗೆ ಅವನು ಕರ್ಣನ ಋಣಿಯಾಗಿದ್ದಾನೆ.
ಮದುವೆ ಮಾಡಿಸೋಣ
ಈಗ ಎಲ್ಲವೂ ಸರಿಯಾಗಿದೆ ಎನ್ನಿಸುತ್ತಿದೆ. ಆದ್ದರಿಂದ ಕರ್ಣ ನಾಳೆ ಎಲ್ಲರೂ ಹೋಗೋಣ. ನಿತ್ಯಾ ಮತ್ತು ತೇಜಸ್ ಮದುವೆ ಮಾಡಿಸೋಣ ಎಂದಿದ್ದಾನೆ. ಅಲ್ಲಿಗೆ ನಿಧಿ ಮತ್ತು ಕರ್ಣ ಒಂದಾಗೋದು ಗ್ಯಾರೆಂಟಿ ಎಂದಾಗಿದೆ.
ತೇಜಸ್ ಶಾಕ್
ಆದರೆ ಇದನ್ನು ಕೇಳುತ್ತಲೇ ತೇಜಸ್ ಶಾಕ್ ಆಗಿದ್ದಾನೆ. ಮಾತ್ರವಲ್ಲದೇ, ಇದನ್ನು ತೆರೆಮರೆಯಲ್ಲಿ ಕೇಳಿಸಿಕೊಳ್ತಿರೋ ರಮೇಶ್ ಮಾತ್ರ ನಕ್ಕಿದ್ದಾನೆ.
ಏನೋ ಎಡವಟ್ಟು!
ಇದರ ಅರ್ಥ ಏನೋ ಎಡವಟ್ಟು ಆದಂತಿದೆ. ತೇಜಸ್ ನಿತ್ಯಾಳ ಜೊತೆ ಮದುವೆಯ ವಿಷಯ ಕೇಳುತ್ತಲೇ ಶಾಕ್ ಆಗಿದ್ದು ಯಾಕೆ? ನಿತ್ಯಾ ಮತ್ತು ತೇಜಸ್ ಮದುವೆ ಸಾಧ್ಯವಿಲ್ಲ ಎನ್ನುವಂತೆ ತೆರೆಮರೆಯಲ್ಲಿದ್ದ ರಮೇಶ್ ವ್ಯಂಗ್ಯವಾಗಿ ನಕ್ಕಿದ್ದು ಏಕೆ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

