- Home
- Entertainment
- TV Talk
- ಗಿಲ್ಲಿನಾ ಬಿಟ್ಬಿಡ್ತಾರಾ, ಇಲ್ವಲ್ಲಾ? ವಾಹಿನಿ ವಿರುದ್ಧ ಮಾತನಾಡಿದ್ದರ ಬಗ್ಗೆ Bigg Boss ಜಾಹ್ನವಿ ಸ್ಪಷ್ಟನೆ ಏನು ಕೇಳಿ
ಗಿಲ್ಲಿನಾ ಬಿಟ್ಬಿಡ್ತಾರಾ, ಇಲ್ವಲ್ಲಾ? ವಾಹಿನಿ ವಿರುದ್ಧ ಮಾತನಾಡಿದ್ದರ ಬಗ್ಗೆ Bigg Boss ಜಾಹ್ನವಿ ಸ್ಪಷ್ಟನೆ ಏನು ಕೇಳಿ
ಬಿಗ್ಬಾಸ್ ಮನೆಯಿಂದ ಹೊರಬಂದಿರುವ ಆ್ಯಂಕರ್ ಜಾಹ್ನವಿ, ತಾವು ಫೈನಲಿಸ್ಟ್ ಆಗುವ ನಿರೀಕ್ಷೆಯಲ್ಲಿದ್ದುದಾಗಿ ಹೇಳಿಕೊಂಡಿದ್ದಾರೆ. ಸ್ಪಂದನಾ ಸೋಮಣ್ಣ ಹಾಗೂ ವಾಹಿನಿಯ ಬಗ್ಗೆ ನೀಡಿದ್ದ ವಿವಾದಿತ ಹೇಳಿಕೆ ಕುರಿತು ಇದೀಗ ಸಂದರ್ಶನವೊಂದರಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಫೈನಲ್ ಸ್ಪರ್ಧಿ
ಬಿಗ್ಬಾಸ್ ಮೂಲಕ ಹೈಪ್ ಕ್ರಿಯೇಟ್ ಮಾಡಿದ್ದ ಆ್ಯಂಕರ್ ಜಾಹ್ನವಿ ಬಿಗ್ಬಾಸ್ ಮನೆಯಿಂದ ಹೊರಕ್ಕೆ ಬಂದಿರುವ ಕಾರಣ, ಹಲವಾರು ವಿಷಯಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ತಾವು ಅಂತಿಮ ಸ್ಪರ್ಧಿ ಎಂದು ಅಂದುಕೊಂಡಿದ್ದ ಇವರಿಗೆ ತುಂಬಾ ಶಾಕ್ ಆಗಿದ್ದು, ಆ ಬಗ್ಗೆಯೂ ನೋವಿನಿಂದ ಮಾತನಾಡಿದ್ದಾರೆ.
ವೀಕ್ಷಕರ ಅಸಮಾಧಾನ
ಅಷ್ಟಕ್ಕೂ ಜಾಹ್ನವಿ (Bigg Boss Jhanvi) ಅವರು ಬಿಗ್ಬಾಸ್ ಮನೆಯಲ್ಲಿ ಇದ್ದಾಗ ಕೆಲವು ಕಾರಣಗಳಿಂದ ವೀಕ್ಷಕರ ಅಸಮಾಧಾನಕ್ಕೆ ಕಾರಣವಾಗಿದ್ದು ಇದೆ. ಮಧ್ಯರಾತ್ರಿ ಗೆಜ್ಜೆ ಶಬ್ದ ಮಾಡುವ ಮೂಲಕ ರಕ್ಷಿತಾ ಶೆಟ್ಟಿಗೆ ತೊಂದರೆ ಕೊಟ್ಟಿದ್ದು ಒಂದಾದರೆ, ಅದಕ್ಕಿಂತಲೂ ಅವರಿಗೆ ಉಲ್ಟಾ ಹೊಡೆದದ್ದು ಸ್ಪಂದನಾ ಸೋಮಣ್ಣ ಅವರ ವಿಷಯದಲ್ಲಿ.
ಸ್ಪಂದನಾ ಬಗ್ಗೆ ಮಾತು
ಸ್ಪಂದನಾ ಅವರು ಎಲಿಮಿನೇಟ್ ಆಗಬೇಕಿರುವ ಸ್ಪರ್ಧಿ. ಆದರೆ, ವಾಹಿನಿಯ ಕಡೆಯಿಂದ ಅವರು ಬಂದಿರುವುದರಿಂದ ಅವರು ಹೋಗುತ್ತಿಲ್ಲ. ಬಿಗ್ಬಾಸ್ ಮನೆಯಲ್ಲಿ ಅವರು ಸರಿಯಾಗಿ ಆಡದಿದ್ದರೂ ಇದೇ ಕಾರಣಕ್ಕೆ ಉಳಿದುಕೊಳ್ಳುತ್ತಿದ್ದಾರೆ ಎಂದುಬಿಟ್ಟಿದ್ದರು. ಈ ವಿಷಯದಲ್ಲಿ ಕಿಚ್ಚ ಸುದೀಪ್ (Kichcha Sudeep) ಕೂಡ ಕ್ಲಾಸ್ ತೆಗೆದುಕೊಂಡಿದ್ದರು.
ಜಾಹ್ನವಿ ಸ್ಪಷ್ಟನೆ
ಈ ಬಗ್ಗೆ ಇದೀಗ ಬಾಸ್ ಟಿವಿಗೆ ಕೊಟ್ಟಿರುವ ಸಂದರ್ಶನದಲ್ಲಿ ಆ್ಯಂಕರ್ ಜಾಹ್ನವಿ ಸ್ಪಷ್ಟನೆ ಕೊಟ್ಟಿದ್ದಾರೆ. ನಾನು ಹೇಳಿರುವುದು ಆ ಅರ್ಥದಲ್ಲಿ ಅಲ್ಲವಾಗಿತ್ತು. ನನಗೆ ಏನು ಮಾತನಾಡಬೇಕು, ಏನು ಮಾತನಾಡಬಾರದು ಎನ್ನುವ ಸ್ಪಷ್ಟತೆ ಇದೆ. ಒಳಗೆ ಹೋಗುವಾಗಲೇ ನಾನು ಹೇಗಿರಬೇಕು ಎನ್ನುವ ಸ್ಪಷ್ಟತೆ ಇತ್ತು. ನಾನು ಒಳಗೆ ಹೇಳಿದ್ದರಲ್ಲಿ ಯಾವ ತಪ್ಪು ಕೂಡ ಇಲ್ಲ ಎಂದಿದ್ದಾರೆ.
ಗಿಲ್ಲಿಯನ್ನು ಬಿಡ್ತಾರಾ?
ಗಿಲ್ಲಿ ನಟನಿಗೆ ತುಂಬಾ ಫ್ಯಾನ್ಸ್ ಇದ್ದಾರೆ, ಅವರಿಗೆ ವೋಟ್ ಬರತ್ತೆ ಹಾಗೆಂದು ಅವರನ್ನು ಬಿಟ್ಟುಬಿಡ್ತಾರಾ ಇಲ್ಲವಲ್ಲ, ಹಾಗೆಯೇ ನನಗೂ ಅಭಿಮಾನಿಗಳ ಸಂಖ್ಯೆ ಹೆಚ್ಚಿತ್ತು, ಯುಟ್ಯೂಬರ್ ಆಗಿರೋ ರಕ್ಷಿತಾ ಶೆಟ್ಟಿ ಅವರು ಅವರ ಮಾತಿನಿಂದಲೇ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ಹಾಗೆ ಯಾರನ್ನೂ ಬೇಕಂತಲೇ ಹೊರಕ್ಕೆ ಬಿಡಲು ಆಗುವುದಿಲ್ಲ ಎನ್ನುವುದು ನನಗೆ ಗೊತ್ತು. ಅದೇ ಅರ್ಥದಲ್ಲಿ ನಾನು ಹೇಳಿದ್ದೇ ವಿನಾ ಬೇರೆ ಅರ್ಥ ಇರಲಿಲ್ಲ ಎಂದಿದ್ದಾರೆ.
ವಾಹಿನಿ ಕೆಲಸ ಕೊಟ್ಟಿದೆ
ನಾನು ಯಾವ ತಪ್ಪನ್ನೂ ಮಾತನಾಡಲಿಲ್ಲ. ಅದಕ್ಕೆ ನಾನು ಸ್ಟ್ಯಾಂಡ್ ಆಗಿದ್ದೇನೆ. ವಾಹಿನಿ ನನಗೆ ಕೆಲಸ ಕೊಟ್ಟಿದೆ. ಮೂರು ವರ್ಷ ಅಲ್ಲಿ ಕೆಲಸಮಾಡಿದ್ದೇನೆ. ಅದರ ವಿರುದ್ಧ ಮಾತನಾಡುವಷ್ಟು ದೊಡ್ಡವಳು ನಾನಲ್ಲ. ಹಾಗೆಂದು ನಾನು ಮಾತನಾಡಿದ್ದು ತಪ್ಪಲ್ಲ. ಹೇಗೆ ಮಾತನಾಡಬೇಕು ಎನ್ನುವುದು ನನಗೆ ಚೆನ್ನಾಗಿ ಗೊತ್ತು. ನಾನು ಮಾತನಾಡಿರುವುದಕ್ಕೆ ಈಗಲೂ ಬದ್ಧಳಾಗಿದ್ದೇನೆ ಎಂದಿದ್ದಾರೆ.
ಸುದೀಪ್ ಹೇಳಿದ್ದೇನು?
ವಾಹಿನಿ ಬಗ್ಗೆ ಮಾತನಾಡಿದ್ದ ಜಾಹ್ನವಿ ಅವರನ್ನು ಉದ್ದೇಶಿಸಿ ಸುದೀಪ್ ಅವರು, ನೀವು ಬಿಗ್ಬಾಸ್ಗೆ ಅವಕಾಶ ಬೇಕು ಎಂದು ವಾಹಿನಿ ಬಳಿ ಸಾಕಷ್ಟು ಬಾರಿ ಅಂಗಲಾಚಿ ಅವಕಾಶ ಗಿಟ್ಟಿಸಿಕೊಂಡಿದ್ದೀರಿ, ಮರೆತು ಹೋಯ್ತಾ ಎಂದು ಪ್ರಶ್ನಿಸಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

