- Home
- Entertainment
- TV Talk
- ಕೋಳಿ ಜೊತೆ ಕರ್ಣನ ನಿಧಿ: ಗಂಡನನ್ನು ಬಿಟ್ಟು ಇಲ್ಲೇನು ಮಾಡ್ತಿದ್ಯಾ ಕೇಳಿದ್ದಾರೆ ಫ್ಯಾನ್ಸ್
ಕೋಳಿ ಜೊತೆ ಕರ್ಣನ ನಿಧಿ: ಗಂಡನನ್ನು ಬಿಟ್ಟು ಇಲ್ಲೇನು ಮಾಡ್ತಿದ್ಯಾ ಕೇಳಿದ್ದಾರೆ ಫ್ಯಾನ್ಸ್
ಕರ್ಣ ಸೀರಿಯಲ್ ಖ್ಯಾತಿಯ ನಿಧಿ ಅಲಿಯಾಸ್ ಭವ್ಯಾ ಗೌಡ, ಕೋಳಿಯೊಂದಿಗೆ ಆಟವಾಡುವ ವಿಡಿಯೋದಿಂದ ಸದ್ದು ಮಾಡುತ್ತಿದ್ದಾರೆ. ಕರ್ಣನೊಂದಿಗೆ ಮದುವೆಯಾಗಿ ಸೀರಿಯಲ್‌ನಲ್ಲಿ ಮಿಂಚುತ್ತಿರುವ ಇವರು, ಬಿಗ್‌ಬಾಸ್ ಸ್ಪರ್ಧಿ ಹಾಗೂ 'ಲ್ಯಾಂಡ್‌ಲಾರ್ಡ್' ಚಿತ್ರದ ನಾಯಕಿಯೂ ಹೌದು.

ಕರ್ಣ ಸೀರಿಯಲ್ ನಿಧಿ
ಭವ್ಯಾ ಗೌಡ ಎಂದರೆ ಕೆಲವರಿಗೆ ತಿಳಿಯಲಿಕ್ಕಿಲ್ಲ. ಆದರೆ ಕರ್ಣ ಸೀರಿಯಲ್ (Karna Serial) ನಿಧಿ ಎಂದಾಕ್ಷಣ ಸೀರಿಯಲ್ ಪ್ರಿಯರ ಕಣ್ಣುಗಳು ಅರಳುತ್ತವೆ. ಇತ್ತ ಕರ್ಣ ಸೀರಿಯಲ್‌ನಲ್ಲಿ ಅಂತೂ ಕರ್ಣನ ಜೊತೆ ನಿಧಿಯ ಮದುವೆಯಾಗಿದೆ. ನಿಧಿ ಕನಸು ನನಸಾಗಿದ್ದು ಮಾತ್ರವಲ್ಲದೇ ಇಡೀ ಸಂಸಾರವನ್ನು ನಿಭಾಯಿಸುವ ಶಕ್ತಿಯನ್ನೂ ಹೊಂದಿದ್ದಾಳೆ.
ವೀಕ್ಷಕರು ಖುಷ್
ನಿಧಿ ಮತ್ತು ಕರ್ಣ ಒಂದಾಗಲಿ ಎಂದು ಕನಸು ಕಾಣುತ್ತಿದ್ದ ವೀಕ್ಷಕರಿಗೆ ಇದು ಸಿಕ್ಕಾಪಟ್ಟೆ ಖುಷಿ ಕೊಟ್ಟಿದ್ದು, ಇದೀಗ ಇಬ್ಬರೂ ಸೇರಿ ರಮೇಶನ ಸೊಕ್ಕನ್ನು ಮುರಿಯಬೇಕಿದೆ ಎಂದು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಸೀರಿಯಲ್ ಜನರ ಮೆಚ್ಚುಗೆ ಗಳಿಸುತ್ತಲೇ ಸಾಗಿದೆ. ಕರ್ಣ ಮತ್ತು ನಿಧಿಯ ರೊಮಾನ್ಸ್ ಎಲ್ಲರಿಗೂ ಮೆಚ್ಚುಗೆ ಆಗುತ್ತಿದೆ.
ಕೋಳಿ ಜೊತೆ ಆಟ
ಇದರ ನಡುವೆಯೇ, ನಿಧಿ ಅರ್ಥಾತ್ ಭವ್ಯಾ ಗೌಡ (Bhavya Gowda) ಕೋಳಿಯ ಜೊತೆ ಆಟವಾಡುತ್ತಿರುವ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನು ನೋಡಿ ಫ್ಯಾನ್ಸ್ ಸಿಕ್ಕಾಪಟ್ಟೆ ಖುಷಿ ಪಟ್ಟುಕೊಂಡಿದ್ದಾರೆ. ಕರ್ಣನ ಬಿಟ್ಟು ಕೋಳಿ ಜೊತೆ ಯಾಕಮ್ಮಾ ಎಂದು ನಟಿಯ ಕಾಲೆಳೆಯುತ್ತಿದ್ದಾರೆ.
ನಟಿಯ ಕುರಿತು
ಇನ್ನು ನಟಿ ಭವ್ಯಾ ಗೌಡ (Bhavya Gowda) ಕುರಿತು ಹೇಳುವುದಾದರೆ, ಅವರು ಇದೀಗ ಕರ್ಣ ಸೀರಿಯಲ್ ನಿಧಿ ಪಾತ್ರದ ಮೂಲಕ ಮನೆಮಾತಾಗಿದ್ದಾರೆ. ಇದಕ್ಕೂ ಮುನ್ನ ಅವರು 'ಗೀತಾ' ಸೀರಿಯಲ್‌ನಲ್ಲಿ ನಟಿಸಿದ್ದರು. 'ಬಿಗ್‌ಬಾಸ್ ಕನ್ನಡ ಸೀಸನ್ 11' ನ ಸ್ಪರ್ಧಿಯಾಗಿ ಮನೆಮಾತಾಗಿದ್ದಾರೆ.
ಸ್ಯಾಂಡಲ್ವುಡ್ಗೂ ಎಂಟ್ರಿ
ನಟಿ ಭವ್ಯಾ, ಇದಾಗಲೇ ನಟಿ ಬೆಳ್ಳಿತೆರೆಗೂ ಕಾಲಿಟ್ಟಿದ್ದಾರೆ. 'ಲ್ಯಾಂಡ್‌ಲಾರ್ಡ್' ಚಿತ್ರದಲ್ಲಿ ನಟಿಸಿದ್ದಾರೆ. ದುನಿಯಾ ವಿಜಯ್ ನಿರ್ದೇಶನದ ಚಿತ್ರವಿದು. ಗಗನಸಖಿಯಾಗುವ ಹಂಬಲವಿದ್ದ ನಟಿ, ನಟನಾ ವೃತ್ತಿಗೆ ಕಾಲಿಟ್ಟು ಯಶಸ್ವಿ ನಟಿ ಎನ್ನಿಸಿಕೊಳ್ಳುತ್ತಿದ್ದಾರೆ.
ಬಹು ವರ್ಷಗಳ ಕ್ರಶ್
ಅಷ್ಟಕ್ಕೂ ಭವ್ಯಾ ಅವರ ಲವ್ಸ್ಟೋರಿ ಬಗ್ಗೆ ಇದಾಗಲೇ ರಿವೀಲ್ ಆಗಿದೆ. ಅವರು ಕಳೆದ ಐದು ವರ್ಷದಿಂದ ಒಬ್ಬರೇ ನನಗೆ ಕ್ರಶ್ ಇದ್ದಾರೆ ಎಂದು ಹಿಂದೊಮ್ಮೆ ಹೇಳಿದ್ದರು. ನಿಮಗೆ ಯಾರಾದರೂ ಕ್ರಶ್ ಇದ್ದಾರಾ ಎಂದು ಭವ್ಯಾ ಗೌಡ ಅವರಿಗೆ ಎಷಿಯಾನೆಟ್ ಸುವರ್ಣ ನ್ಯೂಸ್ ಪ್ರಶ್ನೆ ಮಾಡಿತ್ತು, ಆಗಲೇ ಅವರು ಹೌದು, ಕಳೆದ ಐದು ವರ್ಷದಿಂದ ಒಬ್ಬರೇ ನನಗೆ ಕ್ರಶ್ ಇದ್ದಾರೆ ಎಂದು ಹೇಳಿದ್ದರು. ಅವರು ಯಾರು ಎನ್ನುವುದು ಇನ್ನಷ್ಟೇ ರಿವೀಲ್ ಆಗಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

