- Home
- Entertainment
- TV Talk
- Karna Serial ರೋಚಕ ಟ್ವಿಸ್ಟ್: ರಮೇಶ್ ಎದುರು ಬಂದ ಸೀತಾ! ಕರ್ಣನ ಅಮ್ಮನ ಹುಡುಕಾಟಕ್ಕೆ ಕೊನೆ ಸಿಗತ್ತಾ
Karna Serial ರೋಚಕ ಟ್ವಿಸ್ಟ್: ರಮೇಶ್ ಎದುರು ಬಂದ ಸೀತಾ! ಕರ್ಣನ ಅಮ್ಮನ ಹುಡುಕಾಟಕ್ಕೆ ಕೊನೆ ಸಿಗತ್ತಾ
ಕರ್ಣ ಧಾರಾವಾಹಿಯಲ್ಲಿ ಕರ್ಣ ಮತ್ತು ಸೀತಾ ಪರಸ್ಪರ ಅಮ್ಮ-ಮಗ ಎಂದು ತಿಳಿಯದೆ ಎದುರಾಗಿದ್ದಾರೆ. ನಕಲಿ ಅಮ್ಮನ ಮುಖವಾಡ ಬಯಲಾಗಿದ್ದು, ಕಾರ್ಯಕ್ರಮವೊಂದರಲ್ಲಿ ರಮೇಶ್ ಮತ್ತು ಸೀತಾ ಭೇಟಿಯಾಗಿದ್ದಾರೆ. ರಮೇಶ್ ಸೀತಾಳ ಸತ್ಯವನ್ನು ಬಾಯಿಬಿಡುತ್ತಾನಾ ಎಂಬ ಕುತೂಹಲ ಮೂಡಿದೆ.

ರೋಚಕ ಹಂತ
ಕರ್ಣ ಸೀರಿಯಲ್ (Karna Serial) ಇದೀಗ ರೋಚಕ ಹಂತ ತಲುಪಿದೆ. ಕರ್ಣ ತನ್ನ ಅಮ್ಮನ ಹುಡುಕಾಟದಲ್ಲಿದ್ದರೆ, ಸೀತಾ ಮಗನ ಹುಡುಕಾಟದಲ್ಲಿ ಇದ್ದಾಳೆ.
ನಕಲಿ ಸೀತಾ ಮುಖವಾಡ ಬಯಲು
ಇಬ್ಬರೂ ಸಾಕಷ್ಟು ಬಾರಿ ಎದುರು-ಬದುರಾಗಿದ್ದರೂ ಅಮ್ಮ-ಮಗ ಎನ್ನೋದು ಗೊತ್ತಿಲ್ಲ. ನಯನತಾರಾಳ ಕುತಂತ್ರದಿಂದ ನಕಲಿ ಅಮ್ಮನನ್ನು ಕರ್ಣ ತನ್ನ ಅಮ್ಮ ಎಂದು ತಿಳಿದುಕೊಂಡಿದ್ದ. ಕೊನೆಗೆ ಸತ್ಯ ಗೊತ್ತಾಗಿದೆ.
ಅಮ್ಮನಿಗೆ ಆಹ್ವಾನ
ಅದೇ ಇನ್ನೊಂದೆಡೆ, ಮಕ್ಕಳ ಕಲ್ಯಾಣಕ್ಕೆ ಹೊಸದೊಂದು ಯೋಜನೆ ಉದ್ಘಾಟನೆ ಸಮಾರಂಭಕ್ಕೆ ಕರ್ಣ ಭುವನೇಶ್ವರಿ ಅರ್ಥಾತ್ ಹೆತ್ತ ಅಮ್ಮನನ್ನೇ ಕರೆದಿದ್ದಾನೆ. ಆದರೆ ಆಕೆಯೇ ಸೀತಾ, ತನ್ನ ಅಮ್ಮ ಎನ್ನೋದು ಗೊತ್ತಿಲ್ಲ.
ಪರಸ್ಪರ ಭೇಟಿ
ಇತ್ತ ಮಗನ ಈ ಯೋಜನೆ ಉದ್ಘಾಟನೆ ಕಾರ್ಯಕ್ರಮಕ್ಕೆ ಅಪ್ಪ ರಮೇಶ್ನೂ ಬಂದಿದ್ದಾನೆ. ಅಲ್ಲಿ ಅವನು ಸೀತಾಳನ್ನು ನೋಡಿದ್ದಾನೆ. ಇಬ್ಬರೂ ಪರಸ್ಪರ ಭೇಟಿಯಾಗಿದ್ದಾರೆ.
ಸೀತಾ ಶಾಕ್
ರಮೇಶ್ನನ್ನು ನೋಡಿ ಸೀತಾ ಶಾಕ್ ಆಗಿದ್ದರೆ, ಸೀತಾಳನ್ನು ನೋಡಿ ರಮೇಶ್ಗೆ ಖುಷಿಯಾಗಿದೆ. ಅಲ್ಲಿಗೆ ಅಸಲಿ ಸೀತಾ ಸಿಕ್ಕಂತಾಗಿದೆ.
ವಿಷ್ಯ ರಿವೀಲ್ ಆಗುತ್ತಾ?
ಇವಳೇ ಸೀತಾ ಎನ್ನುವ ವಿಷ್ಯವನ್ನು ರಮೇಶ್ ರಿವೀಲ್ ಮಾಡ್ತಾನಾ? ಕರ್ಣನೇ ತನ್ನ ಮಗ ಎನ್ನುವ ವಿಷ್ಯ ಸೀತಾಗೆ ಗೊತ್ತಾಗತ್ತಾ? ಸದ್ಯ ಇವೆಲ್ಲಕ್ಕೂ ಸೀರಿಯಲ್ ಮುಂದೆ ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.





