MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Karna Serial: ಕರ್ಣನಿಗೆ ಲಾರಿಯಿಂದ ಆ್ಯಕ್ಸಿಡೆಂಟ್​- ಶೂಟಿಂಗ್​ ವೇಳೆ ನಡೆದದ್ದೇನು? ವಿಡಿಯೋ ವೈರಲ್​

Karna Serial: ಕರ್ಣನಿಗೆ ಲಾರಿಯಿಂದ ಆ್ಯಕ್ಸಿಡೆಂಟ್​- ಶೂಟಿಂಗ್​ ವೇಳೆ ನಡೆದದ್ದೇನು? ವಿಡಿಯೋ ವೈರಲ್​

ಕರ್ಣ ಸೀರಿಯಲ್‌ನಲ್ಲಿನ ನಾಯಕನ ಅಪಘಾತದ ದೃಶ್ಯವನ್ನು ಹೇಗೆ ಚಿತ್ರೀಕರಿಸಲಾಗಿದೆ ಎಂಬ ವಿಡಿಯೋ ವೈರಲ್ ಆಗಿದೆ. ಲಾರಿ ಗುದ್ದುವ ದೃಶ್ಯದಲ್ಲಿ ನಟ ಕಿರಣ್ ರಾಜ್ ಅವರಿಗೆ ಹಗ್ಗ ಕಟ್ಟಿ ಮೇಲಕ್ಕೆ ಎಳೆಯುವ ಮೂಲಕ, ಸಾಹಸ ದೃಶ್ಯವನ್ನು ಸೆರೆಹಿಡಿಯಲಾಗಿದೆ.

2 Min read
Author : Suchethana D
Published : Aug 16 2026, 01:15 PM IST
Share this Photo Gallery
  • FB
  • TW
  • Linkdin
  • Whatsapp
16
ಕರ್ಣ ಸೀರಿಯಲ್​
Image Credit : shootingcrazy Instagram

ಕರ್ಣ ಸೀರಿಯಲ್​

ಕರ್ಣ ಸೀರಿಯಲ್​ (Karna Serial)ನಲ್ಲಿ ಸದ್ಯ ಕರ್ಣ ತನ್ನ ಮಗ ಎನ್ನುವ ಅರಿವು ಇಲ್ಲದೆಯೇ ರಮೇಶ್​ ಕರ್ಣನ ಅಪಘಾತ ಮಾಡಿಸಿ ಖುಷಿಪಟ್ಟಿದ್ದಾನೆ. ಆದರೆ ಬಳಿಕ ಆತನಿಗೆ ಕರ್ಣನೇ ತನ್ನ ಮಗ ಎನ್ನುವುದು ತಿಳಿದು ಇನ್ನಿಲ್ಲದಂತೆ ಗೋಳಾಡುತ್ತಿದ್ದಾನೆ. ಹಾಗಿದ್ದರೆ ಈ ಅಪಘಾತದ ದೃಶ್ಯಗಳನ್ನು ಹೇಗೆ ಚಿತ್ರೀಕರಣ ಮಾಡಲಾಗಿದೆ ಎನ್ನುವ ವಿಡಿಯೋ ಅನ್ನು, shootingcrazy ಇನ್​ಸ್ಟಾಗ್ರಾಮ್​ನಲ್ಲಿ ಶೇರ್​ ಮಾಡಲಾಗಿದ್ದು ಅದೀಗ ವೈರಲ್​ ಆಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಆ್ಯಕ್ಷನ್​ ದೃಶ್ಯಗಳ ಶೂಟಿಂಗ್​
Image Credit : shootingcrazy Instagram

ಆ್ಯಕ್ಷನ್​ ದೃಶ್ಯಗಳ ಶೂಟಿಂಗ್​

ತೆರೆಯ ಮೇಲೆ ಒಂದು ದೃಶ್ಯವನ್ನು ತೋರಿಸುವಾಗ ಅದರ ಹಿಂದೆ ನಟ-ನಟಿಯರು ಎಷ್ಟೆಲ್ಲಾ ಸರ್ಕಸ್​ ಮಾಡಿರುತ್ತಾರೆ. ಎಷ್ಟೋ ಸಂದರ್ಭದಲ್ಲಿ ಜೀವಕ್ಕೆ ಅಪಾಯ ತಂದುಕೊಂಡಿರುವ ಉದಾಹರಣೆಗಳೂ ಸಾಕಷ್ಟು ಇವೆ. ಅದರಲ್ಲಿಯೂ ಆ್ಯಕ್ಷನ್​ ದೃಶ್ಯಗಳನ್ನು ಮಾಡುವಾಗ ನಟ-ನಟಿಯರಿಗೆ ಗಂಭೀರ ಸ್ವರೂಪದ ಗಾಯಗಳಾಗುವ ಸುದ್ದಿಗಳೂ ಆಗ್ಗಾಗ್ಗೆ ಬರುತ್ತಲೇ ಇರುತ್ತವೆ. ಆದರೆ ಒಂದು ಚಿತ್ರ ಯಶಸ್ಸು ಆಗಬೇಕಾದರೆ ನಟರು ಇವೆಲ್ಲಾ ಮಾಡುವುದು ಅನಿವಾರ್ಯವೇ.

Related Articles

Related image1
ಶಾರುಖ್​ ಖಾನ್​, ಮೀಟ್​ ಆಗಲು ಡೇಟ್​ ಕೊಟ್ಟಿಲ್ಲವೆಂದು ಹೀಗೆ ಸೇಡು ತೀರಿಸಿಕೊಂಡ್ರಾ ಯಶ್? ರಟ್ಟಾಗೋಯ್ತು ಗುಟ್ಟು
Related image2
Karna Serial: ಅಯ್ಯೋ, ಯಾರಾದ್ರೂ ನನ್ನ ಮಗ ಕರ್ಣನನ್ನು ಕಾಪಾಡಿ; ಸತ್ಯ ತಿಳಿದು ಬಿಕ್ಕಿ ಬಿಕ್ಕಿ ಅತ್ತ ರಮೇಶ್​
36
ಸಿನಿಮಾ ಮಾದರಿಯಲ್ಲಿ ಸೀರಿಯಲ್​
Image Credit : Zee Kannada Instagram

ಸಿನಿಮಾ ಮಾದರಿಯಲ್ಲಿ ಸೀರಿಯಲ್​

ಇಷ್ಟು ಮಾಡಿದ ಮೇಲೂ ಚಿತ್ರ ಯಶಸ್ವಿ ಆಗಿಯೇ ಆಗುತ್ತದೆ ಎಂದೂ ಹೇಳುವುದು ಕಷ್ಟ. ಇದು ಸಿನಿಮಾದ ಮಾತಾದರೆ, ಇಂದು ಸೀರಿಯಲ್​ಗಳೂ ಯಾವ ಸಿನಿಮಾಕ್ಕೂ ಕಮ್ಮಿ ಏನಿಲ್ಲ. ಸಿನಿಮಾಗಳ ಮಾದರಿಯಲ್ಲಿಯೇ ದೃಶ್ಯಗಳ ಶೂಟಿಂಗ್​ ನಡೆಯುತ್ತದೆ. ಅದಕ್ಕೆ ಸಾಕ್ಷಿಯಾಗಿದೆ ಕರ್ಣ ಸೀರಿಯಲ್​.

46
ಅಪಘಾತದ ಚಿತ್ರೀಕರಣ
Image Credit : Instagram

ಅಪಘಾತದ ಚಿತ್ರೀಕರಣ

ಆ್ಯಕ್ಸಿಡೆಂಟ್​ ದೃಶ್ಯವನ್ನು ಮಾಡುವಾಗ, ಕರ್ಣ ಉರ್ಫ್​ ನಟ ಕಿರಣ್​ ರಾಜ್​ ಅವರಿಗೆ ಹಗ್ಗವನ್ನು ಕಟ್ಟಲಾಗಿದೆ. ಅತ್ತ ಕಡೆಯಿಂದ ಲಾರಿ ಬರುವಾಗ, ನಟರನ್ನು ಮೇಲಕ್ಕೆ ಎಳೆಯಲಾಗುತ್ತದೆ. ಆದರೆ ಹಗ್ಗ ಯಾವುದೂ ಆ ಬಳಿಕ ವೀಕ್ಷಕರಿಗೆ ಕಾಣಿಸುವುದಿಲ್ಲ. ಬದಲಿಗೆ ಲಾರಿ ಗುದ್ದಿದಾಗ ನಟರು ಮೇಲಕ್ಕೆ ಹಾರಿ ಬಿದ್ದಂತೆ ಕಾಣಿಸುತ್ತದೆ.

56
ಮೈ ಝುಂ ಎನ್ನುವುದು
Image Credit : Zee Kannada Instagram

ಮೈ ಝುಂ ಎನ್ನುವುದು

ಇದರ ಶೂಟಿಂಗ್​ ವೈರಲ್​ ಆಗಿದೆ. ಶೂಟಿಂಗ್​ ನೋಡಿದರೆ ಮೈ ಝುಂ ಎನ್ನುವುದು ಕೂಡ ದಿಟವೇ. ನಟರು ಎಷ್ಟು ರಿಸ್ಕ್​ ತೆಗೆದುಕೊಳ್ಳಬೇಕು ಎನ್ನುವುದರ ಜೊತೆಜೊತೆಗೇನೇ ಇಂಥ ಶೂಟಿಂಗ್​ ಮಾಡುವಾಗ ತೆರೆಯ ಹಿಂದಿರುವ ಸಿಬ್ಬಂದಿ ಎಷ್ಟು ಜಾಗರೂಕರಾಗಿ ಇರಬೇಕು, ಹೇಗೆ ಅವರು ಇಂಥ ಸನ್ನಿವೇಶಗಳನ್ನು ಹ್ಯಾಂಡಲ್​ ಮಾಡಬೇಕು ಎನ್ನುವ ಬಗ್ಗೆಯೂ ತೋರಿಸುತ್ತದೆ.

66
ತೆರೆಮರೆಯ ಹೀರೋಗಳು
Image Credit : Instagram

ತೆರೆಮರೆಯ ಹೀರೋಗಳು

ಸಾಮಾನ್ಯವಾಗಿ ನಟ,ನಟಿಯರು ತೆರೆಯ ಮೇಲೆ ಕಾಣಿಸುತ್ತಾರೆ. ಅವರನ್ನು ಜನರು ಹೀರೋ ಎಂದು ಆರಾಧಿಸುತ್ತಾರೆ. ಅವರಿಗೆ ದೊಡ್ಡ ಅಭಿಮಾನ ಬಳಗವೇ ಹುಟ್ಟಿಕೊಳ್ಳುತ್ತದೆ. ಆದರೆ ಅವರನ್ನು ತೆರೆಯ ಮೇಲೆ ಈ ರೀತಿಯಾಗಿ ಬಿಂಬಿಸಲು ತೆರೆಯ ಹಿಂದೆ ಸರ್ಕಸ್​ ಮಾಡುವ ಎಲೆಮರೆಯ ಕಾಯಿಗಳು ಹಲವಾರು ಮಂದಿ ಇರುತ್ತಾರೆ. ಆದರೆ ಅವರು ಬೆಳಕಿಗೆ ಬರುವುದಿಲ್ಲ ಅಷ್ಟೇ. ಇಂಥ ಶೂಟಿಂಗ್​ಗಳನ್ನು ನೋಡಿದಾಗ ಅವರ ನಿಜವಾದ ಸಾಹಸ ಏನು ಎನ್ನುವುದು ತಿಳಿಯುತ್ತದೆ..

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಕರ್ಣ ಧಾರಾವಾಹಿ
ಮನರಂಜನಾ ಸುದ್ದಿ
ಟಿವಿ ಶೋ
ಕನ್ನಡ ಧಾರಾವಾಹಿ

Latest Videos
Recommended Stories
Recommended image1
ಆ ಒಂದೇ ಫೋಟೋಶೂಟ್ ಬದಲಿಸಿತು ಅನುಪಮಾ ಗೌಡ ಜೀವನ, 65 ಕೆಜಿಯಿಂದ 50 ಕೆಜಿಗೆ ಇಳಿದ್ರೂ ಖುಷಿ ಇರಲಿಲ್ಲ
Recommended image2
ಆಪ್ ಕೀ ಅದಾಲತ್‌ನಲ್ಲಿ ರಜತ್‌ಗೆ ಕೌಂಟರ್ ಕೊಟ್ಟ ಯಶ್; ಕನ್ನಡಿಗನ ಮಾತಿಗೆ ಇಡೀ ವಿಶ್ವವೇ ಪಿದಾ! ವೈರಲ್‌ ಆದ ರಾಕಿಭಾಯ್ ಆ ಒಂದು ಡೈಲಾಗ್!
Recommended image3
"ಕರ್ಣನ ಬೆನ್ನಲ್ಲೇ ನಿಧಿಗೂ ಆಕ್ಸಿಡೆಂಟ್"? ಭವ್ಯಾ ಗೌಡ ಹಂಚಿಕೊಂಡ ವಿಡಿಯೋ ನೋಡಿ ಶಾಕ್ ಆದ ಫ್ಯಾನ್ಸ್!
Related Stories
Recommended image1
ಶಾರುಖ್​ ಖಾನ್​, ಮೀಟ್​ ಆಗಲು ಡೇಟ್​ ಕೊಟ್ಟಿಲ್ಲವೆಂದು ಹೀಗೆ ಸೇಡು ತೀರಿಸಿಕೊಂಡ್ರಾ ಯಶ್? ರಟ್ಟಾಗೋಯ್ತು ಗುಟ್ಟು
Recommended image2
Karna Serial: ಅಯ್ಯೋ, ಯಾರಾದ್ರೂ ನನ್ನ ಮಗ ಕರ್ಣನನ್ನು ಕಾಪಾಡಿ; ಸತ್ಯ ತಿಳಿದು ಬಿಕ್ಕಿ ಬಿಕ್ಕಿ ಅತ್ತ ರಮೇಶ್​
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved