MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Karna Serial: ದಶಕದ ಬಳಿಕ ಭುವನೇಶ್ವರಿಯಾಗಿ ಎಂಟ್ರಿ ಕೊಟ್ಟ ಕರ್ಣನ ಅಮ್ಮ- ನಟಿ ಜಯಶ್ರೀ ಸ್ಟೋರಿ ಇದು

Karna Serial: ದಶಕದ ಬಳಿಕ ಭುವನೇಶ್ವರಿಯಾಗಿ ಎಂಟ್ರಿ ಕೊಟ್ಟ ಕರ್ಣನ ಅಮ್ಮ- ನಟಿ ಜಯಶ್ರೀ ಸ್ಟೋರಿ ಇದು

'ಕರ್ಣ' ಧಾರಾವಾಹಿಗೆ ನಟಿ ಜಯಶ್ರೀ ಬಿ. ರಾಜ್ ಅವರ ಪ್ರವೇಶವು ಕಥೆಗೆ ರೋಚಕ ತಿರುವನ್ನು ನೀಡಿದೆ. ಅವರು ಕರ್ಣನ ತಾಯಿ ಭುವನೇಶ್ವರಿಯಾಗಿ ಕಾಣಿಸಿಕೊಂಡಿದ್ದು, ಸದ್ಯ ತಾಯಿ-ಮಗನಿಗೆ ತಮ್ಮ ಸಂಬಂಧದ ಅರಿವಿಲ್ಲ. ಈ ಲೇಖನವು ಜಯಶ್ರೀ ಅವರ ಸುದೀರ್ಘ ಕಿರುತೆರೆ ಪಯಣದ ಬಗ್ಗೆ ತಿಳಿಸುತ್ತದೆ.

2 Min read
Author : Suchethana D
Published : Jul 25 2026, 03:28 PM IST
Share this Photo Gallery
  • FB
  • TW
  • Linkdin
  • Whatsapp
17
ಕರ್ಣ ರೋಚಕ ತಿರುವು
Image Credit : Social Media

ಕರ್ಣ ರೋಚಕ ತಿರುವು

ಕರ್ಣ ಸೀರಿಯಲ್​ (karna Serial)ನಲ್ಲಿ ಈಗ ಕರ್ಣನ ಅಮ್ಮ ಭುವನೇಶ್ವರಿಯ ಎಂಟ್ರಿ ಆಗಿದ್ದು, ಸೀರಿಯಲ್​ ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಕರ್ಣ ಮತ್ತು ಭುವನೇಶ್ವರಿ ಇಬ್ಬರಿಗೂ ತಾವು ಅಮ್ಮ-ಮಗ ಎನ್ನುವುದು ತಿಳಿದಿಲ್ಲ. ಸದ್ಯ ಕರ್ಣನ ಪಾಲಿಗೆ ಅಮ್ಮನೇ ವಿಲನ್​ ಆಗಿದ್ದಾಳೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27
ಬೆಳಕಿಗೆ ಬಂದ ಭುವನೇಶ್ವರಿ
Image Credit : our own

ಬೆಳಕಿಗೆ ಬಂದ ಭುವನೇಶ್ವರಿ

ಇಷ್ಟು ದಿನಗಳವರೆಗೆ ಭುವನೇಶ್ವರಿಯನ್ನು ಕತ್ತಲಲ್ಲಿ ಇಡಲಾಗಿತ್ತು. ಇದೀಗ ಆಕೆ ಬೆಳಕಿಗೆ ಬಂದಿದ್ದಾಳೆ. ಅರ್ಥಾತ್​ ಭುವನೇಶ್ವರಿಯ ಪಾತ್ರವನ್ನು ನಟಿ ಜಯಶ್ರೀ ಬಿ. ರಾಜ್‌ ಅವರು ನಿರ್ವಹಿಸುತ್ತಿದ್ದಾರೆ. ಇದಾಗಲೇ ಹಲವಾರು ಸೀರಿಯಲ್​ಗಳಲ್ಲಿ ಗುರುತಿಸಿಕೊಂಡಿರೋ ನಟ ಜಯಶ್ರೀ ಅವರು ಜೀ ಕನ್ನಡದಲ್ಲಿ, 10 ವರ್ಷಗಳ ಹಿಂದೆ ನಾಗಿಣಿ ಸೀರಿಯಲ್​ನಲ್ಲಿ ನಟಿಸಿದ್ದರು. ಅದಾದ ಬಳಿಕ 10 ವರ್ಷಗಳ ನಂತರ ಈಗ ಜೀ ಕನ್ನಡದಲ್ಲಿ ಭುವನೇಶ್ವರಿ ಆಗಿ ಎಂಟ್ರಿಕೊಟ್ಟಿದ್ದಾರೆ.

Related Articles

Related image1
'ಲಕ್ಷ್ಮೀಪುತ್ರ' ಬಿಡುಗಡೆಗೆ ಮುನ್ನ ಭಾವಿ ಪತ್ನಿ ಜೊತೆ ನಟ ಚಿಕ್ಕಣ್ಣ ಟೆಂಪಲ್​ ರನ್​: ಫೋಟೋ ವೈರಲ್​
Related image2
ದೇವಾಲಯಕ್ಕೆ ಬಂದಾಗ ಪ್ಲೀಸ್ ನಮ್ಮನ್ನು ವಿಲನ್​ ಥರ ನೋಡ್ಬೇಡಿ: ನಟಿ ಅಶ್ವಿನಿ ಗೌಡ ಮನವಿ ಮಾಡಿದ್ಯಾಕೆ
37
ಬಹುಮುಖ ಪ್ರತಿಭೆ
Image Credit : our own

ಬಹುಮುಖ ಪ್ರತಿಭೆ

ಅಂದಹಾಗೆ, ಜಯಶ್ರೀ ಬಿ ರಾಜ್ ಹೊಸಬರು ಅಲ್ವೇ ಅಲ್ಲ. ಯಾಕಂದ್ರೆ ಹಲವಾರು ವರ್ಷಗಳಿಂದ ಕಿರುತೆರೆಯಲ್ಲಿ ತಮ್ಮ ನಟನೆ, ನಿರೂಪಣೆ ಮೂಲಕ ರಂಜಿಸಿಕೊಂಡು ಬಂದಿದ್ದಾರೆ ಜಯಶ್ರೀ ರಾಜ್. ಇವರು ನಟಿಯೂ ಹೌದು, ನಿರೂಪಕಿಯೂ ಹೌದು, ನಿರ್ಮಾಪಕಿಯೂ ಹೌದು ಜೊತೆಗೆ ನಿರ್ದೇಶಕಿಯೂ ಹೌದು. ಎಲ್ಲಾ ವಿಧದಲ್ಲೂ ಕನ್ನಡಿಗರ ಮನ ಗೆಲ್ಲುವ ಮೂಲಕ ಇಂದಿಗೂ ಎವರ್ ಗ್ರೀನ್ ಸುಂದರಿಯಾಗಿ ಕಂಗೊಳಿಸ್ತಿದ್ದಾರೆ ಜಯಶ್ರೀ ರಾಜ್ (Jayashree B Raj).

47
ಕನ್ನಡ ಇಂಡಸ್ಟ್ರಿಯಲ್ಲಿ ಬೆಳ್ಳಿ ಹಬ್ಬ
Image Credit : our own

ಕನ್ನಡ ಇಂಡಸ್ಟ್ರಿಯಲ್ಲಿ ಬೆಳ್ಳಿ ಹಬ್ಬ

ನಟಿ ಜಯಶ್ರೀ ರಾಜ್‌ ಅವರು ಕನ್ನಡ ಇಂಡಸ್ಟ್ರಿಯಲ್ಲಿ ಬೆಳ್ಳಿ ಹಬ್ಬ ಆಚರಿಸುತ್ತಿದ್ದಾರೆ. ಈ ಹಿಂದೆ ಟಾಪ್​ ಸೀರಿಯಲ್​ಗಳಲ್ಲಿ ಒಂದು ಎನ್ನಿಸಿದ್ದ, ‘ಮಯಾಮೃಗ’ ಸೀರಿಯಲ್​ನಲ್ಲಿ ಜನಮನ್ನಣೆ ಗಳಿಸಿದ್ದರು. ಇದನ್ನೂ ಮುನ್ನ ‘ಕಥೆಗಾರ’ ಸೀರಿಯಲ್​ನಲ್ಲಿ ನಟಿಸಿದ್ದರು. ಈಗ ಅವರು ಸದ್ಯ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಪ್ರೇಮಕಾವ್ಯ’ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ.

57
ತೆಲುಗಿನಲ್ಲಿಯೂ ಬಿಜಿ
Image Credit : our own

ತೆಲುಗಿನಲ್ಲಿಯೂ ಬಿಜಿ

ಅಷ್ಟಕ್ಕೂ, ಜಯಶ್ರೀ ಅವರು ಕನ್ನಡದ ಜೊತೆಗೆ ತೆಲುಗಿನ ಎರಡು ಸೀರಿಯಲ್ ಗಳಲ್ಲಿ ಬ್ಯುಸಿಯಾಗಿದ್ದಾರೆ. ‘ಪಡಮಟಿ ಸಂಧ್ಯಾರಾಗಂ’ ಮತ್ತು ‘ಮಲ್ಲಿ’ ಎನ್ನುವ ಧಾರವಾಹಿಗಳಲ್ಲಿ ನಟಿಸುತ್ತಿದ್ದು, ಪಡಮಟಿ ಸಂಧ್ಯಾರಾಗಂ ಝೀ ತೆಲುಗಿನ (telugu serials) ಸೂಪರ್ ಹಿಟ್ ಸೀರಿಯಲ್ ಗಳಲ್ಲಿ ಒಂದಾಗಿದೆ. ಸದಾ ಬ್ಯುಸಿಯಾಗಿರೋದಕ್ಕೆ ಇಷ್ಟಪಡುವ ಈ ನಟಿ ಸದ್ಯ ಬೆಂಗಳೂರು, ಹೈದರಾಬಾದ್ ಎಂದು ಶೂಟಿಂಗ್ ಮಾಡೋದ್ರಲ್ಲಿ ಬ್ಯುಸಿಯಾಗಿದ್ದಾರೆ.

67
14ನೇ ವಯಸ್ಸಿನಲ್ಲಿ ನಿರೂಪಕಿಯಾಗಿ ಎಂಟ್ರಿ
Image Credit : our own

14ನೇ ವಯಸ್ಸಿನಲ್ಲಿ ನಿರೂಪಕಿಯಾಗಿ ಎಂಟ್ರಿ

14ನೇ ವಯಸ್ಸಿನಲ್ಲಿ ನಿರೂಪಕಿಯಾಗಿ ಕಾಣಿಸಿಕೊಂಡ ಜಯಶ್ರೀ, ಬಳಿಕ ಟಿ.ಎನ್‌ ಸೀತಾರಾಮ್‌ (T.N Seetharam) ನಿರ್ದೇಶನದ ‘ಕಥೆಗಾರ’ ಸೀರಿಯಲ್ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟರು. ನಂತರ ‘ಮಾಯಾಮೃಗ’, ‘ಜನನಿ’, ‘ಸಮಾಗಮ’, ‘ಸಹನ’, ‘ಭಾರ್ಗವಿ’, ‘ಪುಣ್ಯಕೋಟಿ’, ‘ರಥಸಪ್ತಮಿ’ ಸೇರಿದಂತೆ ಐವತ್ತಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಮೂವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟನೆ ಜತೆಗೆ ‘ಅರಮನೆ’ ಮತ್ತು ‘ಕಸ್ತೂರಿ ನಿವಾಸ’ ಧಾರಾವಾಹಿಗಳ ನಿರ್ಮಾಣ ಕೂಡ ಮಾಡಿದ್ದಾರೆ. ಜೊತೆಗೆ ಬಿಗ್ ಬಾಸ್ ಕನ್ನಡದಲ್ಲೂ (Bigg Boss Kannada) ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದರು. ಇದೆಲ್ಲದಕ್ಕೂ ಇವರಿಗೆ ಬೆನ್ನೆಲುಬಾಗಿ ನಿಂತವರು ಇವರ ಪತಿ ಚಂದ್ರಶೇಖರ್.

77
ಚಂದ್ರಶೇಖರ್​ ಹಿನ್ನೆಲೆ
Image Credit : our own

ಚಂದ್ರಶೇಖರ್​ ಹಿನ್ನೆಲೆ

ಪತಿ ಚಂದ್ರಶೇಖರ್ ಕೂಡ ಒಂದು ಕಾಲದಲ್ಲಿ ಸೀರಿಯಲ್ ಗಳಲ್ಲಿ ಸಹ ನಟನಾಗಿ, ವಿಲನ್ ಆಗಿ ಕಾಣಿಸಿಕೊಂಡವರು. ಸೀರಿಯಲ್ ಮೂಲಕ ಇವರಿಗೆ ಸಿಕ್ಕ ಹೆಸರು ರಾಕೇಶ್ ಚಂದ್ರು, ಸೀರಿಯಲ್ ಒಂದರಲ್ಲಿ ಇವರ ಹೆಸರು ರಾಕೇಶ್ ಆಗಿದ್ದರಿಂದ ಜನ ಅವರನ್ನು ಅದೇ ಹೆಸರಲ್ಲಿ ಗುರುತಿಸಲು ಆರಂಭಿಸಿದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಕರ್ಣ ಧಾರಾವಾಹಿ
ಮನರಂಜನಾ ಸುದ್ದಿ
ಟಿವಿ ಶೋ
ನಟಿ

Latest Videos
Recommended Stories
Recommended image1
Lakshmi Nivasa: ಕಲಿಯುಗ ಸಿನಿಮಾದ ರಾಜೇಶ್‌ ರಂತೆ ಸಾಧನೆ ಮಾಡ್ತಾರಾ ಶ್ರೀನಿವಾಸ್?
Recommended image2
ಕನ್ನಡದ ಕಲ್ಟ್ ಸಿನಿಮಾ ಮನೆಯಲ್ಲೇ ಕುಳಿತು 'ಟಿವಿ'ಯಲ್ಲಿ ನೋಡಿ, ಎಲ್ಲಿ, ಎಷ್ಟು ಗಂಟೆಗೆ? ಈ ಸ್ಟೋರಿ ನೋಡಿ..
Recommended image3
Amruthadhaare: ಶಕುಂತಲಾಗೆ ಒಳಗೊಳಗೆ ತೊಳಲಾಟ; ಜೈದೇವ್‌ ಬೆನ್ನ ಹಿಂದೆಯೇ ಆಪತ್ತು
Related Stories
Recommended image1
'ಲಕ್ಷ್ಮೀಪುತ್ರ' ಬಿಡುಗಡೆಗೆ ಮುನ್ನ ಭಾವಿ ಪತ್ನಿ ಜೊತೆ ನಟ ಚಿಕ್ಕಣ್ಣ ಟೆಂಪಲ್​ ರನ್​: ಫೋಟೋ ವೈರಲ್​
Recommended image2
ದೇವಾಲಯಕ್ಕೆ ಬಂದಾಗ ಪ್ಲೀಸ್ ನಮ್ಮನ್ನು ವಿಲನ್​ ಥರ ನೋಡ್ಬೇಡಿ: ನಟಿ ಅಶ್ವಿನಿ ಗೌಡ ಮನವಿ ಮಾಡಿದ್ಯಾಕೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved