- Home
- Entertainment
- ದೇವಾಲಯಕ್ಕೆ ಬಂದಾಗ ಪ್ಲೀಸ್ ನಮ್ಮನ್ನು ವಿಲನ್ ಥರ ನೋಡ್ಬೇಡಿ: ನಟಿ ಅಶ್ವಿನಿ ಗೌಡ ಮನವಿ ಮಾಡಿದ್ಯಾಕೆ
ದೇವಾಲಯಕ್ಕೆ ಬಂದಾಗ ಪ್ಲೀಸ್ ನಮ್ಮನ್ನು ವಿಲನ್ ಥರ ನೋಡ್ಬೇಡಿ: ನಟಿ ಅಶ್ವಿನಿ ಗೌಡ ಮನವಿ ಮಾಡಿದ್ಯಾಕೆ
ಬಿಗ್ ಬಾಸ್ ಖ್ಯಾತಿಯ ನಟಿ ಅಶ್ವಿನಿ ಗೌಡ ಅವರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದಾಗ, ತಮಗೆ ಬೇಗ ದರ್ಶನ ಸಿಕ್ಕಿದ್ದಕ್ಕೆ ಜನರು ತಮ್ಮನ್ನು ವಿಲನ್ ರೀತಿ ನೋಡುವುದಾಗಿ ಬೇಸರ ವ್ಯಕ್ತಪಡಿಸಿದ್ದಾರೆ. ಜನಸಂದಣಿಯನ್ನು ತಪ್ಪಿಸಲು ಆಡಳಿತ ಮಂಡಳಿ ಹೀಗೆ ಮಾಡುತ್ತದೆ ಎಂದಿದ್ದಾರೆ.

ಬಿಗ್ಬಾಸ್ ಬಳಿಕ ಇನ್ನಷ್ಟು ಖ್ಯಾತಿ
ಬಿಗ್ಬಾಸ್ (Bigg Boss) ಖ್ಯಾತಿಯ ಅಶ್ವಿನಿ ಗೌಡ (Ashwini Gowda) ಬಿಗ್ಬಾಸ್ ಷೋ ಬಳಿಕ ಸಾಕಷ್ಟು ಜನಪ್ರಿಯರಾಗಿದ್ದಾರೆ. ಸಹಜವಾಗಿ ಬಿಗ್ಬಾಸ್ ಅವರ ಖ್ಯಾತಿಯನ್ನು ಹೆಚ್ಚಿಸಿದ್ದು, ಅವರಿಗೆ ಅವಕಾಶಗಳ ಮಹಾಪೂರವೇ ಹರಿದು ಬರುತ್ತಿದೆ.
ಅಶ್ವಿನಿ ಗೌಡ ಬೇಸರ
ಇಂತಿಪ್ಪ ಅಶ್ವಿನಿ ಗೌಡ ಇದೀಗ ಅಭಿಮಾನಿಗಳಲ್ಲಿ ಚಿಕ್ಕದೊಂದು ಮನವಿ ಮಾಡಿಕೊಂಡಿದ್ದಾರೆ. ಅದೇನೆಂದರೆ, ಜನರು ತಮ್ಮನ್ನು ವಿಲನ್ ರೀತಿ ನೋಡುತ್ತಾರೆ ಎನ್ನುವುದು, ಅದೂ ದೇವರ ದರ್ಶನಕ್ಕೆ ಬಂದ ಸಮಯದಲ್ಲಿ ಹೀಗೆ ಮಾಡುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.
ವಿವಿಧ ಕಾರಣಕ್ಕೆ ಹೀಗೆ
ಅಷ್ಟಕ್ಕೂ ಜನರು ಚುಚ್ಚುಮಾತು ಆಡಲು ಕಾರಣವೂ ಇದೆ. ಸಹಜವಾಗಿ ಸೆಲೆಬ್ರಿಟಿಗಳು ಬಂದಾಗ ದೇವಸ್ಥಾನಗಳಲ್ಲಿ ಜನರಿಗಿಂತಲೂ ಮುಂಚೆನೇ ಅವರಿಗೆ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಇದಕ್ಕೆ ಹಲವಾರು ಕಾರಣಗಳು ಇರುತ್ತವೆ. ಅವರು ಸೆಲೆಬ್ರಿಟಿ ಎನ್ನುವುದು ಒಂದು ಕಾರಣವಾದರೆ, ಅವರನ್ನು ನೋಡಿದಾಗ ಅಭಿಮಾನಿಗಳು ಫೋಟೋ ಕ್ಲಿಕ್ಕಿಸಿಕೊಳ್ಳುವ ಸಲುವಾಗಿ ಮುಗಿಬಿದ್ದು ಗಲಾಟೆ ಸೃಷ್ಟಿಸುತ್ತಾರೆ ಎನ್ನುವ ಕಾರಣಕ್ಕೆ.
ವಿಲನ್ ಥರ ನೋಡ್ಬೇಡಿ
ಇದೀಗ ಚಾಮುಂಡಿ ಬೆಟ್ಟದ ದೇವಿ ದರ್ಶನದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅಶ್ವಿನಿ ಗೌಡ, ನಮಗೆ ಬೇಗ ದರ್ಶನಕ್ಕೆ ಬಿಡುತ್ತಾರೆ ಎಂದು ಜನರು ನಮ್ಮನ್ನು ವಿಲನ್ ರೀತಿ ನೋಡ್ತಾರೆ, ಪ್ಲೀಸ್ ಹಾಗೆ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಕ್ಯೂ ನಿಂತೇ ಬಂದಿರುತ್ತೇವೆ
ನಿಮ್ಮ ಹಾಗೆ ನಾವೂ ಸರತಿಯಲ್ಲಿ ಕ್ಯೂ ನಿಂತೇ ಬಂದಿರುತ್ತೇವೆ. ಕೊನೆಯ ಕ್ಷಣದಲ್ಲಿ ನಿಮಗೆ ಸ್ವಲ್ಪವೇ ಮೊದಲು ನಮಗೆ ದರ್ಶನಕ್ಕೆ ಅವಕಾಶ ಕಲ್ಪಿಸುತ್ತಾರೆ. ಬಂದ ತಕ್ಷಣ ಅವಕಾಶ ನೀಡಲ್ಲ. ಆದರೂ ಕೆಲವೊಮ್ಮೆ ವಿಲನ್ ರೀತಿ ನೋಡ್ತಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ ನಟಿ.
ಹಲವು ಕಾರಣ ಇವೆ
ನನ್ನಿಂದ ನಿಮಗೇನಾದ್ರೂ ನೋವಾಗಿದ್ದರೆ ದಯವಿಟ್ಟು ಕ್ಷಮಿಸಿ. ನಮ್ಮನ್ನು ಬೇಗ ದರ್ಶನಕ್ಕೆ ಬಿಡಲು ಹಲವು ಕಾರಣವಿದೆ. ಫೋಟೋಗಾಗಿ ಬರುವ ಕಾರಣ ತೊಂದರೆ ಆಗಬಾರದು ಎಂದು ಹೀಗೆ ಮಾಡುತ್ತಾರಷ್ಟೇ. ಆದರೂ ನಾವೆಲ್ಲಾ ಕ್ಯೂನಲ್ಲಿ ನಿಂತೇ ಬಂದಿರುತ್ತೇವೆ ಎಂದಿದ್ದಾರೆ ಅಶ್ವಿನಿ ಗೌಡ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

