- Home
- Entertainment
- TV Talk
- Karna Serial: ನಿತ್ಯಾಳಿಗೆ ರಕ್ತಸ್ರಾವ, ಉಳಿಯೋದೇ ಕಷ್ಟ ಇದೆ! ಕರ್ಣನ ಪ್ಲ್ಯಾನ್ ಉಲ್ಟಾ ಹೊಡೆಯೋದು ಪಕ್ಕಾ!
Karna Serial: ನಿತ್ಯಾಳಿಗೆ ರಕ್ತಸ್ರಾವ, ಉಳಿಯೋದೇ ಕಷ್ಟ ಇದೆ! ಕರ್ಣನ ಪ್ಲ್ಯಾನ್ ಉಲ್ಟಾ ಹೊಡೆಯೋದು ಪಕ್ಕಾ!
Karna Kannada Serial Today Episode: ಕರ್ಣ ಧಾರಾವಾಹಿಯಲ್ಲಿ ಸಂಜಯ್ ಮಾಡಿದ ಕುತಂತ್ರಕ್ಕೆ ನಿತ್ಯಾ ಮಗು ಬಲಿಯಾದಂತಿದೆ. ಹೌದು, ವಾಹಿನಿಯು ಹೊಸ ಪ್ರೋಮೋವನ್ನು ರಿಲೀಸ್ ಮಾಡಿದೆ. ಹಾಗಾದರೆ ಮುಂದೆ ಏನಾಗಬಹುದು? ನಿತ್ಯಾ, ತೇಜಸ್, ನಿಧಿ ಬದುಕು ಏನಾಗಲಿದೆ?

ನಿತ್ಯಾ ರೂಮ್ ಲಾಕ್ ಆಯ್ತು
ಕರ್ಣ ಧಾರಾವಾಹಿಯಲ್ಲಿ ಸಂಜಯ್ ಮೋಸದಿಂದ ನಿತ್ಯಾಗೆ ಜ್ಯೂಸ್ ಕುಡಿಸಿದ್ದಾನೆ. ಆ ಜ್ಯೂಸ್ ಕುಡಿದ ಬಳಿಕ ನಿತ್ಯಾಗೆ ಹೊಟ್ಟೆ ನೋವು ಶುರುವಾಗಿದೆ. ಅವಳ ಫೋನ್‌ನ್ನು ಕೂಡ ಸಂಜಯ್ ಎತ್ತಿಕೊಂಡು ಹೊರಗಡೆ ಇಟ್ಟಿದ್ದಾನೆ. ಆಮೇಲೆ ಅವಳ ರೂಮ್ ಲಾಕ್ ಮಾಡಿದ್ದಾನೆ.
ನಿತ್ಯಾಗೆ ರಕ್ತಸ್ರಾವ
ಇನ್ನೊಂದು ಕಡೆ ನಿಧ ಹಾಗೂ ಕರ್ಣ ಏಕಾಂತದಲ್ಲಿ ಕೂತು, ಮುಂದೆ ಏನು ಮಾಡೋದು ಎಂದು ಮಾತು ಆಡಿದ್ದಾರೆ. ಆಮೇಲೆ ಅವರು ನಿತ್ಯಾ ಇದ್ದ ರೂಮ್‌ನತ್ತ ಬಂದಿದ್ದಾರೆ. ಕಷ್ಟಪಟ್ಟು ರೂಮ್ ಡೋರ್ ಒಪನ್ ಮಾಡಿದ್ದಾರೆ. ಆಮೇಲೆ ಅವರು ರೂಮ್‌ನೊಳಗಡೆ ಹೋದಾಗ ನಿತ್ಯಾಗೆ ರಕ್ತಸ್ರಾವ ಆಗಿರೋದು ಗೊತ್ತಾಗಿದೆ.
ನಿತ್ಯಾ ಮಗು ಉಳಿಯಲಿದೆಯಾ?
ನಿಧಿ ಸಹಾಯದಿಂದ ಕರ್ಣ, ನಿತ್ಯಾಳಿಗೆ ಚಿಕಿತ್ಸೆ ಮಾಡುತ್ತಿದ್ದಾನೆ. ನಿತ್ಯಾಗೆ ಹುಷಾರಿಲ್ಲ ಎಂದು ತೇಜಸ್ ಕೂಡ ಆ ಮನೆಗೆ ಬಂದಿದ್ದಾನೆ. ನಿತ್ಯಾ ಮಗು ಉಳಿಯಲಿದೆಯಾ? ಇಲ್ಲವಾ ಎಂದು ಕಾದು ನೋಡಬೇಕಿದೆ. ಒಟ್ಟಿನಲ್ಲಿ ಮುಂಬರುವ ಎಪಿಸೋಡ್‌ಗಳು ಭಾರೀ ಕುತೂಹಲದಿಂದ ಕೂಡಿದೆ.
ನಿತ್ಯಾ ಮಗು ತೀರಿಕೊಂಡರೆ?
ನಿತ್ಯಾ ಮಗು ತೀರಿಕೊಂಡರೆ ವೀಕ್ಷಕರಿಗೂ ಕೂಡ ಇಷ್ಟ ಆಗೋದಿಲ್ಲ. ಇನ್ನು ನಿತ್ಯಾ, ತೇಜಸ್ ಕೂಡ ಬೇಸರ ಮಾಡಿಕೊಳ್ತಾರೆ. ಇದಕ್ಕೆ ಸಂಜಯ್, ನಯನತಾರಾ ಕಾರಣ ಎಂದು ಗೊತ್ತಾದರೆ ಕರ್ಣ ಮಾತ್ರ ಸುಮ್ಮನೆ ಬಿಡೋದಿಲ್ಲ. ನಿಧಿ ಪೊಲೀಸ್ ಠಾಣೆ ಮೆಟ್ಟಿಲೇರಿದಾಗಲೇ ಕರ್ಣ, ಸಂಜಯ್‌ಗೆ ಹೊಡೆದಿದ್ದನು. ಈ ವಿಷಯ ಗೊತ್ತಾದರೆ, ಈಗ ಅವನು ಸುಮ್ಮನೆ ಬಿಡೋದಿಲ್ಲ ಎಂದು ಕಾಣುತ್ತದೆ.
ಕರ್ಣನ ಪ್ಲ್ಯಾನ್ ಉಲ್ಟಾ ಹೊಡೀತು
ನಿತ್ಯಾ ಹಾಗೂ ತೇಜಸ್ ಮದುವೆ ಮಾಡಿಸಬೇಕು, ಆಮೇಲೆ ನಾನು, ನಿಧಿ ಒಂದಾಗಬೇಕು ಎಂದು ಕರ್ಣ ಪ್ಲ್ಯಾನ್ ಮಾಡಿದ್ದನು. ಆದರೆ ತೇಜಸ್, ನಿತ್ಯಾ ಮದುವೆ ಆಗೋದು ಅಷ್ಟು ಸುಲಭವಿಲ್ಲ, ರಮೇಶ್-ಸಂಜಯ್ ಸೇರಿಕೊಂಡು ಏನಾದರೂ ಪ್ಲ್ಯಾನ್ ಮಾಡುತ್ತಾರೆ. ಅದಂತೂ ಸತ್ಯ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

