- Home
- Entertainment
- TV Talk
- Karna Serial: ತೇಜಸ್ ತಪ್ಪಿಸ್ಕೊಂಡು ಹೊರಬಂದಾಯ್ತು; ಈಗ ಸಮಸ್ಯೆ ಬಗೆಹರಿಯೋದಿಲ್ಲ, ಅಸಲಿಗೆ ಶುರುವಾಗತ್ತೆ
Karna Serial: ತೇಜಸ್ ತಪ್ಪಿಸ್ಕೊಂಡು ಹೊರಬಂದಾಯ್ತು; ಈಗ ಸಮಸ್ಯೆ ಬಗೆಹರಿಯೋದಿಲ್ಲ, ಅಸಲಿಗೆ ಶುರುವಾಗತ್ತೆ
Karna Kannada Serial Today Episode: ಕರ್ಣ ಧಾರಾವಾಹಿಯಲ್ಲಿ ಸಂಜಯ್ ಮಾಡಿದ ಕೆಲಸದಿಂದ ಕರ್ಣ ಹಾಗೂ ನಿತ್ಯಾ ಮದುವೆ ಆಗಲೇಬೇಕಾದ ಪರಿಸ್ಥಿತಿ ಬಂದಿದೆ. ಹೀಗಿರುವಾಗ ತೇಜಸ್ ಆಗಮನವಾಗಿದೆ. ಹೌದು, ನಿಧಿ ಕಣ್ಣಿಗೆ ತೇಜಸ್ ಕಾಣಿಸಿದ್ದಾನೆ.

ಐಸ್‌ಕ್ರೀಂ ಪಾರ್ಲರ್‌ನಲ್ಲಿ ಚರ್ಚೆ
ಮದುವೆ ಎನ್ನೋ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ನಿಧಿ, ನಿತ್ಯಾ, ಕರ್ಣ ಐಸ್‌ಕ್ರೀಂ ಪಾರ್ಲರ್‌ನಲ್ಲಿ ಯೋಚನೆ ಮಾಡುತ್ತಿದ್ದಾರೆ. ಹೇಗೆ ಸಂಜಯ್ ಪ್ಲ್ಯಾನ್ ಹಾಳು ಮಾಡೋದು ಎಂದು ಮತ್ತೊಂದು ಪ್ಲ್ಯಾನ್ ಮಾಡಿದ್ದಾರೆ. ಇದರಿಂದ ಕರ್ಣನ ಮೇಲೆ ಇನ್ನೊಂದಿಷ್ಟು ಆರೋಪ ಬರುವುದು.
ಸುಳ್ಳಿನ ಮದುವೆ
ಪ್ರೀತಿಸಿ ಮದುವೆ ಆಗಬೇಕಿದ್ದ ತೇಜಸ್ ಓಡಿ ಹೋದನು. ನಿತ್ಯಾ ಹಾಗೂ ಕರ್ಣ ಸುಳ್ಳಿನ ಮದುವೆ ಆಗಿದ್ದರು. ನಿತ್ಯಾ ತನಗೆ ತಾನೇ ತಾಳಿ ಕಟ್ಟಿಕೊಂಡಳು. ಈ ವಿಷಯ ನಿಧಿಗೆ ಗೊತ್ತಾಗಿದೆ. ಉಳಿದಂತೆ ಯಾರಿಗೂ ಗೊತ್ತಿಲ್ಲ. ಈ ಸತ್ಯ ಹೊರಬಂದರೆ ಇನ್ನಷ್ಟು ಸಮಸ್ಯೆ ಆಗುವುದು.
ರಮೇಶ್ ಮಹಾ ಸಂಚು
ಇನ್ನೊಂದು ಕಡೆ ಇವರ ಖುಷಿಯನ್ನು ಹಾಳು ಮಾಡಲು ರಮೇಶ್ ಮಹಾ ಸಂಚು ಮಾಡಿದ್ದಾನೆ. ತೇಜಸ್‌ನನ್ನು ಮದುವೆ ಮನೆಯಿಂದ ಕಿಡ್ನ್ಯಾಪ್ ಮಾಡಿಸಿದ್ದ ರಮೇಶ್, ಅವನ ಬಳಿ ಸುಳ್ಳು ವಿಷಯಗಳನ್ನು ಹೇಳಿಸಿದ್ದನು. ತನ್ನನ್ನು ಕಿಡ್ನ್ಯಾಪ್ ಮಾಡಿರೋದು ಕರ್ಣ ಎಂದು ತೇಜಸ್ ನಂಬುವಂತೆ ಮಾಡಿದ್ದೇ ರಮೇಶ್. ಈಗ ತೇಜಸ್ ಎಂಟ್ರಿ ಆದರೆ ಹೇಗಿರುತ್ತದೆ?
ತೇಜಸ್ ಎಂಟ್ರಿಯಾಗಿದೆ
ಸದ್ಯ ವಾಹಿನಿಯು ಪ್ರಸಾರ ಮಾಡಿರುವ ಪ್ರೋಮೋದಲ್ಲಿ ತೇಜಸ್ ಎಂಟ್ರಿಯಾಗಿದೆ. ರಮೇಶ್ ಪ್ಲ್ಯಾನ್ ಮಾಡಿ ತೇಜಸ್‌ನನ್ನು ಎಸ್ಕೇಪ್ ಆಗುವಂತೆ ಮಾಡುತ್ತಾನೆ. ತೇಜಸ್ ಎಸ್ಕೇಪ್ ಆಗಿ ಹೊರಗಡೆ ಬರುತ್ತಾನೆ. ಅಲ್ಲಿ ಅವನನ್ನು ನಿಧಿ ನೋಡುತ್ತಾಳೆ. ಆಗ ತೇಜಸ್, ನಿಧಿ ಮಾತುಕತೆ ಆದಾಗ ಇದೆಲ್ಲ ಮಾಡಿಸಿದ್ದು ಕರ್ಣ ಎಂದರೆ ಏನು ಕತೆ?
ಸಮಸ್ಯೆ ಮತ್ತಷ್ಟು ಜಟಿಲ
ಕರ್ಣ ಹಾಗೂ ನಿತ್ಯಾ ಮದುವೆ ಆಗಿದ್ದಾರೆ ಎಂದು ತೇಜಸ್‌ಗೆ ಗೊತ್ತಾಗಬಹುದು. ನಿತ್ಯಾ ಹೊಟ್ಟೆಯಲ್ಲಿರುವುದು ಕರ್ಣನ ಮಗು ಎಂದು ಅವನು ಅಂದುಕೊಳ್ಳಬಹುದು. ಒಟ್ಟಿನಲ್ಲಿ ಕರ್ಣನ ಮೇಲೆ ನಿತ್ಯಾ, ತೇಜಸ್, ನಿಧಿ ಸಿಟ್ಟಾದರೂ ಆಶ್ಚರ್ಯವಿಲ್ಲ. ತೇಜಸ್ ಸಿಕ್ಕಿದರೆ ಎಲ್ಲ ಸಮಸ್ಯೆ ಬಗೆಹರಿಯುತ್ತದೆ ಎಂದು ಎಲ್ಲರೂ ಅಂದುಕೊಂಡಿದ್ದಾರೆ. ಆದರೆ ಹೀಗೆ ಆಗೋದಿಲ್ಲ, ಸಮಸ್ಯೆ ಮತ್ತಷ್ಟು ಜಟಿಲವಾಗುತ್ತದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

