- Home
- Entertainment
- TV Talk
- Karna Serial: ನಡೆದೋಯ್ತಾ ಕರ್ಣ-ನಿಧಿ ಫಸ್ಟ್‌ನೈಟ್? ಹಾಗೆ ಮಾತ್ರ ಮಾಡ್ಬೇಡಿ.. ಕೈ ಮುಗಿದು ಬೇಡ್ಕೊಂಡ ವೀಕ್ಷಕರು
Karna Serial: ನಡೆದೋಯ್ತಾ ಕರ್ಣ-ನಿಧಿ ಫಸ್ಟ್‌ನೈಟ್? ಹಾಗೆ ಮಾತ್ರ ಮಾಡ್ಬೇಡಿ.. ಕೈ ಮುಗಿದು ಬೇಡ್ಕೊಂಡ ವೀಕ್ಷಕರು
Zee Kannada Karna Serial Episode: ಕರ್ಣ ಧಾರಾವಾಹಿಯಲ್ಲಿ ಕರ್ಣ, ನಿಧಿ ಜೀವನದ ಸುತ್ತವೇ ಕಥೆ ಸಾಗುತ್ತಿದೆ. ನಿಧಿ ತಾಳಿ ಶಾಸ್ತ್ರ ಆಗಿದೆ. ಇನ್ನು ನಿಧಿ ತಂದೆ-ತಾಯಿ ಕೊ*ಲೆ ಮಾಡಿದೋರು ಯಾರು ಎಂದು ಕಂಡು ಹಿಡಿಯೋ ಮುನ್ನ ಈಗ ನಿಧಿ-ಕರ್ಣ ಫಸ್ಟ್‌ನೈಟ್ ನಡೆದಿದೆ. ಹಾಗಿದ್ರೆ ವೀಕ್ಷಕರಿಗೆ ಚಿಂತೆ ಯಾಕೆ?

ಪ್ರೋಮೋ ಬಂತು!
“ಬೆಳ್ಳಂ ಬೆಳಿಗ್ಗೆ ಕರ್ಣ ಧಾರಾವಾಹಿಯ ಮುದ್ದು ಜೋಡಿಗಳ ಸಮ್ಮಿಲನ....ಶೃಂಗಾರದಲ್ಲಿ ಕಳೆದೋದ್ರು ಕರ್ಣ - ನಿಧಿ!” ಎಂದು ಟೈಟಲ್ ಕೊಟ್ಟು ಹೊಸ ಪ್ರೋಮೋ ರಿಲೀಸ್ ಆಗಿದೆ. ಈ ಹಿಂದೆಯೇ ಇವರಿಬ್ಬರ ಫಸ್ಟ್‌ನೈಟ್ ಡೆಕೊರೇಶನ್ ಆಗಿತ್ತು, ಆಮೇಲೆ ರಮೇಶ್ ಇವರ ಸುಂದರ ಕ್ಷಣಗಳನ್ನು ಹಾಳು ಮಾಡಿದ್ದ.
ವೀಕ್ಷಕರು ಹೇಳಿದ್ದೇನು?
ಈಗ ಇವರಿಬ್ಬರು ಫಸ್ಟ್ ನೈಟ್ ಮಾಡಿಕೊಂಡಿದ್ದಾರೆ ಎಂಬ ಪ್ರೋಮೋ ರಿಲೀಸ್ ಆಗಿದೆ. ಇದನ್ನು ನೋಡಿ ವೀಕ್ಷಕರು ಕಂಗಾಲಾಗಿದ್ದಾರೆ. ಇದು ನಿಜವೋ? ಇಲ್ಲವೋ ಎಂಬ ಗೊಂದಲ ಕೂಡ ಇದೆ.
ಕರ್ಣ ಸರ್ ಇಷ್ಟೆಲ್ಲಾ ರೋಮ್ಯಾಂಟಿಕ್ ಆಗಿರ್ತಾರೆ ಅಂತ ಊಹೆನು ಮಾಡಿರಲಿಲ್ಲ, ಈ ಸೀನ್ ಎಷ್ಟು ಬೇಗ ನಡೆಯುತ್ತೆ ಅಂತ ನಿರೀಕ್ಷೆಯೇ ಮಾಡಿರಲಿಲ್ಲ ಎಂದು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ಹೊರಹಾಕಿದ್ದಾರೆ.
ವೀಕ್ಷಕರ ಮನವಿ ಏನು?
ಇದೊಂದು ಕನಸು ಅಂತ ಮಾತ್ರ ತೋರಿಸಬೇಡಿ, ಸಾಕಷ್ಟು ಧಾರಾವಾಹಿಗಳಲ್ಲಿ ಕನಸು ಎನ್ನೋ ತರ ತೋರಿಸ್ತಾರೆ, ನೀವು ಹಾಗೆ ಮಾಡ್ಬೇಡಿ ಎಂದು ವೀಕ್ಷಕರು ಮನವಿ ಮಾಡಿದ್ದಾರೆ. ಇವರ ಫಸ್ಟ್‌ನೈಟ್‌ಗೆ ಏನಾದರೂ ಸಮಸ್ಯೆ ತಂದು ಹಾಳು ಮಾಡಬೇಡಿ ಎಂದು ಕೂಡ ಹೇಳಿದ್ದಾರೆ. ಒಟ್ಟಿನಲ್ಲಿ ಇದು ನಿಜವೋ? ಇಲ್ಲವೋ ಎಂಬುದೇ ವೀಕ್ಷಕರಿಗೆ ಪ್ರಶ್ನೆ ಆಗಿದೆ.
ನಿತ್ಯಾ ಸುಳಿವಿಲ್ಲ
ಕರ್ಣ ಧಾರಾವಾಹಿ ಶುರು ಆದಾಗಿನಿಂದ ನಿತ್ಯಾ, ನಿಧಿ, ಕರ್ಣ ಸುತ್ತ ಸೀರಿಯಲ್ ಸಾಗುತ್ತಿತ್ತು. ಕಳೆದ 30 ಎಪಿಸೋಡ್‌ಗಳಿಂದ ನಿತ್ಯಾ ಸುಳಿವೇ ಇಲ್ಲ. ಗರ್ಭಿಣಿಯಾಗಿದ್ದ ನಿತ್ಯಾ ಜೀವನ ಏನಾಯ್ತು ಎನ್ನುವ ಪ್ರಶ್ನೆ ಎದ್ದಿದೆ. ಇದಕ್ಕೆ ಸೀರಿಯಲ್ ಟೀಂ ಉತ್ತರ ಕೊಡಬೇಕಿದೆ.
ತಾರಾಗಣದಲ್ಲಿ ಯಾರಿದ್ದಾರೆ?
ಕರ್ಣ- ಕಿರಣ್ ರಾಜ್
ನಿಧಿ- ಭವ್ಯಾ ಗೌಡ
ನಿತ್ಯಾ- ನಮ್ರತಾ ಗೌಡ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

