- Home
- Entertainment
- TV Talk
- Karna Serial: ಕುತಂತ್ರ ಮಾಡಿದ್ದ ರಮೇಶ್, ಸಂಜಯ್‌ಗೆ ತಿರುಗು ಮಂತ್ರ ಹಾಕಿದ ಕರ್ಣ! ಅಬ್ಬಬ್ಬಾ..ಏನ್ ಟ್ವಿಸ್ಟ್!
Karna Serial: ಕುತಂತ್ರ ಮಾಡಿದ್ದ ರಮೇಶ್, ಸಂಜಯ್‌ಗೆ ತಿರುಗು ಮಂತ್ರ ಹಾಕಿದ ಕರ್ಣ! ಅಬ್ಬಬ್ಬಾ..ಏನ್ ಟ್ವಿಸ್ಟ್!
Karna Kannada Serial Episode: ಕರ್ಣ ಧಾರಾವಾಹಿಯಲ್ಲಿ ತನ್ನ ಆಸ್ತಿಯನ್ನು ಕೊಡು ಎಂದು ಸಂಜಯ್ ಹೇಳುತ್ತಲೇ ಇದ್ದನು. ಇನ್ನೊಂದು ಕಡೆ ರಿಯಾಳನ್ನು ಪ್ರಗ್ನೆಂಟ್ ಮಾಡಿದ್ದ ಸಂಜಯ್ ಈಗ ಮದುವೆ ಕೂಡ ಆಗಿದ್ದಾನೆ. ಹೌದು, ರಿಯಾ, ಸಂಜಯ್ ಮದುವೆ ಆಗಿದೆ. ಈಗ ಇನ್ನೊಂದು ಟ್ವಿಸ್ಟ್ ಕಾದಿದೆ.

ಎಲ್ಲ ಆಸ್ತಿ ಕರ್ಣ ಹೆಸರಿನಲ್ಲಿದೆ
ಸಂಜಯ್‌ಗೆ ಹಣದ ವ್ಯಾಮೋಹ, ಇನ್ನು ರಮೇಶ್‌ಗೂ ಕೂಡ ಹಣದ ಆಸೆ. ಅನಾಥ ಮಗುವಾಗಿದ್ದ ಕರ್ಣನನ್ನು ರಮೇಶ್ ಅಪ್ಪ ತಂದು ಸಾಕಿದ್ದರು. ಆದರೆ ಕರ್ಣನನ್ನು ರಮೇಶ್ ಮಾತ್ರ ಮಗು ಎಂದು ಒಪ್ಪಿಕೊಳ್ಳಲೇ ಇಲ್ಲ. ಇನ್ನು ಎಲ್ಲ ಆಸ್ತಿಯನ್ನು ಕರ್ಣನ ಹೆಸರಿಗೆ ಬರೆಯಲಾಗಿತ್ತು.
ಕರ್ಣನನ್ನು ಮನೆಯಿಂದ ಹೊರಹಾಕಲು ಪ್ಲ್ಯಾನ್
ಈಗ ಕರ್ಣನಿಗೆ ಹೊಸ ಐಡಿಯಾ ಸಿಕ್ಕಿದೆ. ರಿಯಾಳ ಖುಷಿಯನ್ನು ಕಾಪಾಡಬೇಕು ಎಂದು ಅವನು ಪಣ ತೊಟ್ಟಿದ್ದಾನೆ. ಹೀಗಾಗಿ ಅವನು ತನ್ನೆಲ್ಲ ಆಸ್ತಿಯನ್ನು ಸಂಜಯ್ ಹೆಸರಿಗೆ ಬರೆದಿದ್ದಾನೆ. ಆಸ್ತಿ ಎಲ್ಲ ಸಿಕ್ಕಿತು ಎಂದು ಕರ್ಣನನ್ನು ಮನೆಯಿಂದ ಹೊರಹಾಕಲು ಅವನು ನೋಡಿದ್ದನು. ಆದರೆ ಕರ್ಣ ಹೊಸ ಟ್ವಿಸ್ಟ್ ಕೊಟ್ಟಿದ್ದಾನೆ.
ಟ್ವಿಸ್ಟ್ ಕೊಟ್ಟ ಕರ್ಣ
ಸುಮ್ಮನೆ ಕರ್ಣ, ತನ್ನೆಲ್ಲ ಆಸ್ತಿಯನ್ನು ಸಂಜಯ್‌ಗೆ ಕೊಟ್ಟಿಲ್ಲ. ಬದಲಾಗಿ ರಿಯಾಳನ್ನು ಅವನು ಚೆನ್ನಾಗಿ ನೋಡಿಕೊಳ್ಳಬೇಕು, ರಿಯಾ ಜೊತೆಗೆ ಒಂದು ವರ್ಷ ಯಾವುದೇ ಗಲಾಟೆ ಇಲ್ಲದೆ ಚೆನ್ನಾಗಿ ಸಂಸಾರ ಮಾಡಿಕೊಳ್ಳಬೇಕು, ವೈದ್ಯಕೀಯ ವ್ಯಾಸಂಗ ಪೂರ್ಣ ಮಾಡಬೇಕು ಎಂದು ಹೇಳಿದ್ದಾನೆ.
ಮುಂದೆ ಏನ್ ಮಾಡ್ತಾರೆ?
ಈ ಟ್ವಿಸ್ಟ್ ನೋಡಿ ಸಂಜಯ್, ರಮೇಶ್ ಇಬ್ಬರೂ ಹೆದರಿದ್ದಾರೆ. ಮುಂದೆ ಏನು ಮಾಡೋದು ಅಂತ ಇಬ್ಬರೂ ಯೋಚನೆ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಮುಂದೆ ಏನಾಗಲಿದೆ ಎಂದು ಕಾದು ನೋಡಬೇಕಿದೆ.
ಪಾತ್ರಧಾರಿಗಳು
ಕರ್ಣ- ಕಿರಣ್ ರಾಜ್
ರಿಯಾ- ಅಂಕಿತಾ ಜಯರಾಮ್
ರಮೇಶ್- ಅಭಿಜಿತ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

