- Home
- Entertainment
- TV Talk
- ಅಂದು ಗಿಲ್ಲಿ ನಟ ಮಾಡಿದ ಕೆಲಸಕ್ಕೆ 'ನೀ ಯಾವ ಸೀಮೆ ನಟಿʼ ಅಂತ ಡೈರೆಕ್ಟರ್ ಬೈದ್ರು: ಡಾ ರಾಜ್ ಮೊಮ್ಮಗಳು ಧನ್ಯಾ
ಅಂದು ಗಿಲ್ಲಿ ನಟ ಮಾಡಿದ ಕೆಲಸಕ್ಕೆ 'ನೀ ಯಾವ ಸೀಮೆ ನಟಿʼ ಅಂತ ಡೈರೆಕ್ಟರ್ ಬೈದ್ರು: ಡಾ ರಾಜ್ ಮೊಮ್ಮಗಳು ಧನ್ಯಾ
Bigg Boss Gilli Nata: ಬಿಗ್ ಬಾಸ್ ಕನ್ನಡ ಸೀಸನ್ 12 ಶೋ ವಿಜೇತ ಗಿಲ್ಲಿ ನಟ ಅವರ ಕ್ರೇಜ್ ಬೇರೆಯದೇ ಮಟ್ಟದಲ್ಲಿದೆ. ಹೀಗಿರುವಾಗ ಡಾ ರಾಜ್‌ಕುಮಾರ್ ಮೊಮ್ಮಗಳು, ರಾಮ್ ಕುಮಾರ್ ಮಗಳು ಧನ್ಯಾ ಅವರು ಗಿಲ್ಲಿಯಿಂದ ಬೈಸಿಕೊಂಡ ಘಟನೆಯನ್ನು ನೆನಪು ಮಾಡಿಕೊಂಡಿದ್ದಾರೆ.

ಗಿಲ್ಲಿ ನಟ ಬ್ಯುಸಿ
ಗಿಲ್ಲಿ ನಟ ಅವರು ಬಿಗ್ ಬಾಸ್ ಶೋ ಕಪ್ ಗೆದ್ದಬಳಿಕ ಒಂದು ಸೆಕೆಂಡ್ ಕೂಡ ಫ್ರೀ ಇಲ್ಲ ಎನ್ನೋ ರೀತಿ ಆಗಿದ್ದಾರೆ. ದಿನಕ್ಕೆ ನೂರಾರು ಫೋನ್ ಕಾಲ್‌ಗಳು, ಇವೆಂಟ್‌ಗಳು, ಚಿತ್ರರಂಗ-ರಾಜಕೀಯ ವ್ಯಕ್ತಿಗಳ ಭೇಟಿ ಎಂದು ಬ್ಯುಸಿ ಆಗಿದ್ದಾರೆ.
ಚೌಕಿದಾರ್ ಸಿನಿಮಾ ರಿಲೀಸ್
ಹೀಗಿರುವಾಗ ರಥಾವರ ಸಿನಿಮಾ ಖ್ಯಾತಿಯ ಚಂದ್ರಶೇಖರ್ ಬಂಡಿಯಪ್ಪ ನಿರ್ದೇಶನದ ಚೌಕಿದಾರ್ ಸಿನಿಮಾ ರಿಲೀಸ್‌ಗೆ ರೆಡಿಯಿದೆ. ಈ ಸಿನಿಮಾವು ಇದೇ ತಿಂಗಳ 30ರಂದು ರಿಲೀಸ್ ಆಗಲಿದೆ. ಈ ಚಿತ್ರದಲ್ಲಿ ಗಿಲ್ಲಿ ನಟ ಕೂಡ ಅಭಿನಯಿಸಿದ್ದಾರೆ.
ಗಿಲ್ಲಿ ಕ್ರೇಜ್ ಗೊತ್ತು
ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿರುವ ಧನ್ಯಾ ರಾಮ್‌ಕುಮಾರ್, ಪೃಥ್ವಿ ಅಂಬಾರ್‌ಗೆ ಗಿಲ್ಲಿ ನಟನ ಬಗ್ಗೆ ಪ್ರಶ್ನೆ ಕೇಳಲಾಗಿದೆ. ಆಗ ಪೃಥ್ವಿ ಅಂಬಾರ್ ಅವರು, “ಗಿಲ್ಲಿ ನಟ ಅವರ ಕ್ರೇಜ್ ಬಗ್ಗೆ ಗೊತ್ತಿದೆ. ಅವರು ತುಂಬ ಬ್ಯುಸಿಯಿದ್ದಾರೆ, ಹೀಗಾಗಿ ಸಿನಿಮಾ ಪ್ರಚಾರಕ್ಕೆ ಬಂದಿಲ್ಲ” ಎಂದು ಹೇಳಿದ್ದಾರೆ.
ಡೈರೆಕ್ಟರ್ ಬೈದರು
ಧನ್ಯಾ ಅವರು, “ನಾನು ಈ ಹಿಂದೆಯೇ ಗಿಲ್ಲಿ ನಟನ ಜೊತೆ ಸಿನಿಮಾ ಮಾಡಿದ್ದೆ, ಅವರಿಗೆ ನನಗೆ ಚೆನ್ನಾಗಿ ಗೊತ್ತು. ಈ ಸಿನಿಮಾದಲ್ಲಿ ನಾನು ಹೊಡೆಯುವ ದೃಶ್ಯ ಇತ್ತು. ಗಿಲ್ಲಿ ಅವರು ಕಾಮಿಡಿ ಮಾಡುತ್ತಲೇ ಇದ್ದರು, ನಾನು ಡೈರೆಕ್ಟರ್ ಬಳಿ ಬೈಸಿಕೊಂಡಿದ್ದೆ. ಯಾವ ಸೀಮೆ ನಟಿ ಎಂದು ಹೇಳಿದ್ದರು” ಎಂದು ಹೇಳಿದ್ದಾರೆ.
ಚೌಕಿದಾರ್ ಸಿನಿಮಾದಲ್ಲಿ ಏನಿದೆ?
ಗಿಲ್ಲಿ ನಟ ಬಗ್ಗೆ ನನಗೆ ಹೆಮ್ಮೆಯಿದೆ. ಅವರಿಗೆ ಒಳ್ಳೆಯದಾಗಲಿ ಎಂದು ಧನ್ಯಾ ಹೇಳಿದ್ದಾರೆ. ಚೌಕಿದಾರ್ ಸಿನಿಮಾದಲ್ಲಿ ಧನ್ಯಾ ಅವರು ಗಿಲ್ಲಿ ನಟನಿಗೆ ಹೊಡೆಯುವ ದೃಶ್ಯವಿತ್ತು. ಈ ವಿಡಿಯೋ ಈಗ ವೈರಲ್ ಆಗ್ತಿದೆ. ಅಂದಹಾಗೆ ಚೌಕಿದಾರ್ ಸಿನಿಮಾದಲ್ಲಿ ತಂದೆ ಮತ್ತು ಮಗನ ಬಾಂಧವ್ಯದ ಕಥೆ ಇದೆ. ಫ್ಯಾಮಿಲಿ ಕಂಟೆಂಟ್ ಕೂಡ ಈ ಚಿತ್ರದಲ್ಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

