- Home
- Entertainment
- TV Talk
- ಗಿಲ್ಲಿ ನಟನ ಯಶಸ್ಸಿನ ಹಿಂದಿನ ಕಾಣದ ಕೈ ಯಾರದ್ದು? ನಾವು ಭಾಗ ಆಗೋದಿಲ್ಲ ಎಂದ Bigg Boss Kannada 12 Winner
ಗಿಲ್ಲಿ ನಟನ ಯಶಸ್ಸಿನ ಹಿಂದಿನ ಕಾಣದ ಕೈ ಯಾರದ್ದು? ನಾವು ಭಾಗ ಆಗೋದಿಲ್ಲ ಎಂದ Bigg Boss Kannada 12 Winner
Bigg Boss Kannada Season 12 Winner Gilli Nata: ಬಿಗ್ ಬಾಸ್ ಕನ್ನಡ ಸೀಸನ್ 12 ಶೋವನ್ನು ಗಿಲ್ಲಿ ನಟ ಗೆದ್ದಾಗಿದೆ, ಆದರೆ ಗಿಲ್ಲಿ ನಟ ಅವರು ಮೂರು ತಿಂಗಳು ಒಳಗಡೆ ಇದ್ದಾಗ, ಅವರ ಕುಟುಂಬ, ಸ್ನೇಹಿತರು ದೊಡ್ಡ ಶಕ್ತಿಯಾಗಿ ನಿಂತಿತ್ತು. ಈ ಬಗ್ಗೆ ಗಿಲ್ಲಿ ನಟ ಮಾತನಾಡಿದ್ದಾರೆ.

ಗಿಲ್ಲಿಗೆ ಶಕ್ತಿ ತುಂಬಿದ್ದ ವ್ಯಕ್ತಿ ಯಾರು?
ಗಿಲ್ಲಿ ನಟ ಅವರು ಬಿಗ್ ಬಾಸ್ ಮನೆಯೊಳಗಡೆ ಇದ್ದರು. ಹೊರಗಡೆ ಅಕೌಂಟ್ ಹ್ಯಾಂಡಲ್ ಮಾಡಿಸುವುದರಿಂದ ಹಿಡಿದು, ಬೇರೆ ಎಲ್ಲ ವಿಷಯಗಳನ್ನು ಅವರ ಅಣ್ಣ ನೋಡಿಕೊಳ್ಳುತ್ತಿದ್ದರು.
ಗಿಲ್ಲಿಗೆ ಬಿಡುವಿಲ್ಲ
ಬಿಗ್ ಬಾಸ್ ಮನೆಯಿಂದ ಗಿಲ್ಲಿ ನಟ ಬಂದಕೂಡಲೇ ಅವರಿಗೆ ನೂರಾರು ಫೋನ್ ಕಾಲ್‌ಗಳು ಬರುತ್ತಿದ್ದವು, ಸಂದರ್ಶನಗಳನ್ನು ಕೊಡಬೇಕಿತ್ತು, ರಾಜಕಾರಣಿಗಳ ಮನೆಗೆ ಹೋಗಬೇಕಿತ್ತು, ಇವೆಂಟ್‌ಗಳಲ್ಲಿ ಭಾಗಿ ಆಗಬೇಕಿತ್ತು.
ಮಂಡ್ಯ ತುಂಬ ಮೆರವಣಿಗೆ
ಗಿಲ್ಲಿ ನಟ ಅವರ ಅಣ್ಣ ನರೇಂದ್ರ ಸೂರ್ಯ ಅವರು ಗಿಲ್ಲಿಗೆ ಸಂಬಂಧಪಟ್ಟ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದಾರೆ. ಈಗಲೂ ಕೂಡ ಗಿಲ್ಲಿಗೆ ಅವರು ಬೆಂಬಲಾಗಿ ನಿಂತಿದ್ದಾರೆ. ತೆರೆದ ವಾಹನದಲ್ಲಿ ಗಿಲ್ಲಿ ನಟ ಅವರು ಮೆರವಣಿಗೆ ಹೊರಟಾಗ ಅವರಿಗೆ ನರೇಂದ್ರ ಅವರಿಗೆ ಬೆಂಗಾವಲಾಗಿ ನಿಂತಿದ್ದರು.
ಅಣ್ಣನ ಬಗ್ಗೆ ಗಿಲ್ಲಿ ಹೇಳಿದ್ದೇನು?
ಗಿಲ್ಲಿ ನಟ ಅವರು ಈ ಬಗ್ಗೆ ಮಾತನಾಡಿದ್ದು, “ನನ್ನ ಅಣ್ಣ ನನಗೆ ಯಾವಾಗಲೂ ಬೆಂಬಲವಾಗಿ ನಿಂತಿದ್ದನು. ಇದಕ್ಕೆ ಎಷ್ಟೇ ಥ್ಯಾಂಕ್ಸ್ ಹೇಳಿದರೂ ಸಾಲೋದಿಲ್ಲ” ಎಂದು ಹೇಳಿದ್ದಾರೆ.
ಭಾಗ ಆಗೋದಿಲ್ಲ
“ಮದುವೆಯಾಗಲೀ, ಮಕ್ಕಳಾಗಲೀ, ನಾವು ಆಸ್ತಿ ಸಲುವಾಗಿ ಭಾಗ ಆಗೋದು ಬೇಡ. ನಾವು ಕೊನೆ ತನಕ ಜೊತೆಯಾಗಿ ಇರೋಣ ಎಂದು ನಾನು, ಅಣ್ಣ ಮಾತನಾಡಿಕೊಂಡಿದ್ದೇವೆ” ಎಂದು ಗಿಲ್ಲಿ ನಟ ಅವರು ಮಾಧ್ಯಮದ ಜೊತೆ ಮಾತನಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

