MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Actors in legal Case: ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡಿ ಕಾನೂನು ಸಂಕಷ್ಟಕ್ಕೆ ಸಿಲುಕಿದ ಕನ್ನಡ ನಟ-ನಟಿಯರು!

Actors in legal Case: ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡಿ ಕಾನೂನು ಸಂಕಷ್ಟಕ್ಕೆ ಸಿಲುಕಿದ ಕನ್ನಡ ನಟ-ನಟಿಯರು!

ಕನ್ನಡ ಚಿತ್ರರಂಗ ಹಾಗೂ ಕಿರುತೆರೆಗಳ ನಟ-ನಟಿಯರು ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮಾಡಿ ಕಾನೂನು ಸಂಕಷ್ಟಕ್ಕೆ ಒಳಗಾದವರು ಇಲ್ಲಿದ್ದಾರೆ ನೋಡಿ. ನವಿಲು ಗರಿ ಬಳಸಿ ನೃತ್ಯ ಮಾಡಿದ ನಿವೇದಿತಾ ಗೌಡ -ಕಿಶನ್ ಬೆಳಗುಲಿ ಸೇರಿ ಹಲವರ ವಿವರ ಇಲ್ಲಿದೆ.

2 Min read
Author : Sathish Kumar KH
Published : Jun 23 2026, 05:14 PM IST
Share this Photo Gallery
  • FB
  • TW
  • Linkdin
  • Whatsapp
18
ಸೋಶಿಯಲ್ ಮೀಡಿಯಾ ರೀಲ್ಸ್‌ನಿಂದ ಕಾನೂನು ಸಂಕಷ್ಟ ಎದುರಿದುತ್ತಿರುವ ನಟ ನಟಿಯರು
Image Credit : Instagram

ಸೋಶಿಯಲ್ ಮೀಡಿಯಾ ರೀಲ್ಸ್‌ನಿಂದ ಕಾನೂನು ಸಂಕಷ್ಟ ಎದುರಿದುತ್ತಿರುವ ನಟ-ನಟಿಯರು

ಇಂದಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಬೇಕೆಂಬ ಹಂಬಲ ಎಲ್ಲರಿಗೂ ಇದೆ. ಆದರೆ, ಈ 'ರೀಲ್ಸ್' ಮತ್ತು ವಿಡಿಯೋಗಳ ಹುಚ್ಚಿನಲ್ಲಿ ಕೆಲವೊಮ್ಮೆ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಿನಿಮಾ ಮತ್ತು ಕಿರುತೆರೆ ನಟ-ನಟಿಯರೇ ಕಾನೂನು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. "ಇದ್ದಕ್ಕಿದ್ದಂತೆ ಇರುವೆ ಬಿಟ್ಟುಕೊಳ್ಳುವುದು" ಎಂಬ ಗಾದೆಯಂತೆ, ಪ್ರಸಿದ್ಧಿಗಾಗಿ ಮಾಡಿದ ವಿಡಿಯೋಗಳು ಇವರನ್ನು ಪೊಲೀಸ್ ಠಾಣೆ ಮತ್ತು ಅರಣ್ಯ ಇಲಾಖೆಯ ಮೆಟ್ಟಿಲೇರಿಸಿವೆ. ಅಂತಹ ಕೆಲವು ಪ್ರಮುಖ ಪ್ರಕರಣಗಳ ವಿವರ ಇಲ್ಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
28
ನಿವೇದಿತಾ ಗೌಡ - ಕಿಶನ್ ಬೆಳಗುಲಿ:
Image Credit : X

ನಿವೇದಿತಾ ಗೌಡ - ಕಿಶನ್ ಬೆಳಗುಲಿ:

ನಟಿ ನಿವೇದಿತಾ ಗೌಡ (Actress Niveditha Gowda) ಹಾಗೂ ನಟ ಕಿಶನ್ ಬೆಳಗುಲಿ (Kishan Belaguli) ಅವರು ನವಿಲು ಗರಿಗಳನ್ನು ಮೈಗೆಲ್ಲಾ ಸುತ್ತಿಕೊಂಡು ಓ.., ನವಿಲೇ, ಹೆಣ್ ನವಿಲೇ ಎಂದು ಡ್ಯಾನ್ಸ್ ಮಾಡಿದ್ದರು. ನವಿಲು ಗರಿಗಳನ್ನು (Peacock feathers)ಬಳಸಿ ನೃತ್ಯ ಮಾಡಿದ ಈ ಜೋಡಿಯ ವಿರುದ್ಧ ಇದೀಗ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ (Dinesh Kallahalli) ಅವರು ವಿರುದ್ಧ ಅರಣ್ಯ ಇಲಾಖೆಗೆ (Karnataka Forest Department) ದೂರು ನೀಡಿದ್ದಾರೆ. ರಾಷ್ಟ್ರೀಯ ಪಕ್ಷಿ ನವಿಲು (National Bird Peacock) ಬೇಟೆ ಮತ್ತು ಕೊಲ್ಲುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.

Related Articles

Related image1
ಬಿಗ್ ಬಾಸ್ ಖ್ಯಾತಿಯ ವರ್ತೂರು ಸಂತೋಷ್ ಮನೆಯಲ್ಲಿ ಸಂಭ್ರಮ; ಹಳ್ಳಿಕಾರ್ ಹಸುವಿಗೆ ಅದ್ದೂರಿ ಸೀಮಂತ ಶಾಸ್ತ್ರ!
Related image2
Reels ಲೋಕದಲ್ಲಿ ಕಿಚ್ಚು ಹಚ್ಚಿದ ನಿವೇದಿತಾ ಗೌಡ-ಕಿಶನ್ ಜೋಡಿ: ವೈರಲ್ ಆಯ್ತು ರೊಮ್ಯಾಂಟಿಕ್ ಡ್ಯಾನ್ಸ್!
38
ನಿವೇದಿತಾ ಗೌಡ - ಕಿಶನ್ ಬೆಳಗುಲಿ:
Image Credit : Instagram

ನಿವೇದಿತಾ ಗೌಡ - ಕಿಶನ್ ಬೆಳಗುಲಿ:

ಆದರೂ, ನೂರಾರು ನವಿಲು ಗರಿಗಳಿಂದ ತಯಾರಿಸಿದ ಉಡುಪು ಧರಿಸಿ ಸಾರ್ವಜನಿಕವಾಗಿ ನೃತ್ಯ ಪ್ರದರ್ಶನ ಮಾಡಲಾಗಿದೆ. ಇದು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ (Wildlife Protection Act) ಕಾಯ್ದೆ ಉಲ್ಲಂಘನೆಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ನಟಿ ನಿವೇದಿತಾ ಗೌಡ ಹಾಗೂ ಕಿಶನ್ ಬೆಳಗುಲಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ದಿನೇಶ್ ಕಲ್ಲಹಳ್ಳಿ ಅವರು ದೂರು ನೀಡಿ ಆಗ್ರಹ ಮಾಡಿದ್ದಾರೆ.

48
ವರ್ತೂರು ಸಂತೋಷ್
Image Credit : our own

ವರ್ತೂರು ಸಂತೋಷ್

ಇನ್ನು ಬಿಗ್ ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿ ಹಳ್ಳಿಕಾರ್ ಹಸುಗಳ ಸಂರಕ್ಷಕ ವರ್ತೂರು ಸಂತೋಷ್ (Varthur Santhosh) ಅವರೂ ಕೂಡ ಹುಲಿಯ ಉಗುರಿನ ಪೆಂಡೆಂಟ್ (Tiger) ಮಾಡಿಸಿಕೊಂಡು ಧರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಸಂಕಷ್ಟಕ್ಕೆ ಒಳಗಾಗಿದ್ದರು. ಇವರು ಬಿಗ್ ಬಾಸ್ ಮನೆಯಲ್ಲಿರುವಾಗಲೇ (Bigg Boss home) ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ಬಂಧಸಿದ್ದರು. ಇದಾದ ನಂತರ ಕಾನೂನು ಹೋರಾಟ ಮಾಡಿ, ಜೈಲಿನಿಂದ ಹೊರಬಂದು ಬಿಗ್ ಬಾಸ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

58
ರಜತ್ ಕಿಶನ್- ವಿನಯ್ ಗೌಡ
Image Credit : Instagram

ರಜತ್ ಕಿಶನ್- ವಿನಯ್ ಗೌಡ

ಕನ್ನಡ ಸಿನಿಮಾ ನಟರು ಹಾಗೂ ಬಿಗ್ ಬಾಸ್ ಸ್ಪರ್ಧಿಗಳೂ ಆಗಿರುವ ನಟ ವಿನಯ್ ಗೌಡ (Actor Vinay Gowda) ಹಾಗೂ ರಜತ್ ಕಿಶನ್ (Rajat Kishan)  ಅಲಿಯಾಸ್ ಬುಜ್ಜಿ ಇಬ್ಬರೂ ರೀಲ್ಸ್ ಮಾಡುವುದಕ್ಕಾಗಿ ಮಚ್ಚುಗಳನ್ನು ಪ್ರದರ್ಶನ ಮಾಡಿದ್ದರು. ಈ ವೇಳೆ ಸಾರ್ವಜನಿಕ ಸ್ಥಳದಲ್ಲಿ ಶಸ್ತ್ರಾಸ್ತ್ರಗಳನ್ನು ಪ್ರದರ್ಶನ ಮಾಡಿ ಬೆದರಿಕೆ ಒಡ್ಡಿದ್ದಾರೆಂದು ಕೇಸ್ ದಾಖಲಾಗಿತ್ತು. ಕೊನೆಗೆ ನಾವು ಬಳಸಿದ ಮಚ್ಚು ಪ್ಲಾಸ್ಟಿಕ್‌ನಿಂದ ಮಾಡಿದ ಮಚ್ಚಿನ ಮಾದರಿಯ ವಸ್ತು ಎಂದು ಪೊಲೀಸ್ ಠಾಣೆಗೆ ಮಚ್ಚು ಒಪ್ಪಿಸಿದ್ದರು.

68
ರಜತ್ ಕಿಶನ್
Image Credit : Asianet News

ರಜತ್ ಕಿಶನ್

ಬಿಗ್ ಬಾಸ್ ಕನ್ನಡ ಮಾಜಿ ಸ್ಪರ್ಧಿ ರಜತ್ ಕಿಶನ್ (Rajath Kishan) ಮಚ್ಚು ಪ್ರದರ್ಶನದ ರೀಲ್ಸ್ ಬಳಿಕ, ಮೈಸೂರಿನಲ್ಲಿ ಪಾರಂಪರಿಕ ಜಿಲ್ಲಾಧಿಕಾರಿ ಕಟ್ಟಡದ (Mysore DC Office) ಮುಂಭಾಗದಲ್ಲಿ ಸಿಗರೇಟ್ ಸೇದುವ ಮೂಲಕ ಮತ್ತೊಮ್ಮೆ ಫಜೀತಿಗೆ ಸಿಲಕುಕಿದ್ದರು. ಆದರೆ, ಈ ಪ್ರಕರಣದ ಅಷ್ಟೊಂದು ಗಂಭೀರತೆ ಪಡೆದುಕೊಳ್ಳಲಿಲ್ಲ.

78
ನಟಿ ಅಶ್ವಿನಿ ಗೌಡ
Image Credit : Instagram

ನಟಿ ಅಶ್ವಿನಿ ಗೌಡ

ಅಶ್ವಿನಿ ಗೌಡ (Actress Ashwini Gowda)ಅವರು ಕೂಡ ಬಿಗ್ ಬಾಸ್ ಮನೆಯಲ್ಲಿ ರಕ್ಷಿತಾ ಶೆಟ್ಟಿ (Rakshita Shetty) ಅವರಿಗೆ ಎಸ್ ಕೆಟಗರಿ ಎಂಬ ಪದವನ್ನು (S Category word) ಬಳಕೆ ಮಾಡಿದ್ದರು. ಈ ಕುರಿತಂತೆ ವಕೀಲ ಪ್ರಶಾಂತ್ ಮೆತಾಲ್ ಎನ್ನುವವರು ಬಿಡದಿ ಠಾಣೆಯಲ್ಲಿ ಬಿಗ್ ಬಾಸ್ ಆಯೋಜಕರು ಹಾಗೂ ಅಶ್ವಿನಿ ಗೌಡ ವಿರುದ್ಧ ಜಾತಿನಿಂದನೆ ಮತ್ತು ಪದ ಬಳಸಿದ್ದಕ್ಕೆ ದೂರು ದಾಖಲಿಸಿದ್ದರು. ಬಿಗ್ ಬಾಸ್ ಮನೆಯಲ್ಲಿ ಮಾತನಾಡಿದ ಪದದಿಂದ ಅವರು ಕಾನೂನು ಸಂಕಷ್ಟಕ್ಕೆ ಒಳಗಾಗಿದ್ದರು

88
ತನಿಷಾ ಕುಪ್ಪಂಡ
Image Credit : others

ತನಿಷಾ ಕುಪ್ಪಂಡ

ಬಿಗ್ ಬಾಸ್ ಸ್ಪರ್ಧಿ ಹಾಗೂ ನಟಿ ತನಿಷಾ ಕುಪ್ಪಂಡ (Tanisha Kuppanda) ವಿರುದ್ಧ ಜಾತಿ ನಿಂದನೆ ಆರೋಪದಡಿ ಕುಂಬಳಗೋಡು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 'ಬಿಗ್ ಬಾಸ್' ಶೋನಲ್ಲಿ ತನಿಷಾ ಕುಪ್ಪಂಡ ಅವರು ಬೋವಿ ಜನಾಂಗದ ಬಗ್ಗೆ ಅವಹೇಳನಕಾರಿ ಪದ ಬಳಕೆ ಮಾಡಿದ್ದಾರೆ ಎಂದು ಆರೋಪಿಸಿ, ಅಖಿಲ ಕರ್ನಾಟಕ ಬೋವಿ ಸಮಾಜದ ರಾಜ್ಯಾಧ್ಯಕ್ಷೆ ಪಿ. ಪದ್ಮಾ ಎಂಬುವರು ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಕುಂಬಳಗೂಡು ಪೊಲೀಸರು ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಸ್ಯಾಂಡಲ್‌ವುಡ್
ಟಿವಿ ಶೋ
ಬಿಗ್ ಬಾಸ್ ಕನ್ನಡ
ನಟಿ
ನಿವೇದಿತಾ ಗೌಡ

Latest Videos
Recommended Stories
Recommended image1
Karna Serial: ನಿಧಿಯ ಮುಟ್ಟಿನ ಸಮಯದಲ್ಲಿ ಪ್ಯಾಡ್​ ತಂದುಕೊಟ್ಟ ಕರ್ಣ: ನೆಟ್ಟಿಗರಿಂದ ಕಮೆಂಟ್ಸ್​ ಸುರಿಮಳೆ
Recommended image2
ಜೈಲಿಗೆ ಹೋಗ್ತಾರಾ Niveditha Gowda, Kishan? ಸೋಶಿಯಲ್‌ ಮೀಡಿಯಾ ನವಿಲುಗಳಿಗೆ ಈಗ ಬಂಧನ ಭೀತಿ
Recommended image3
ಮತ್ತೊಮ್ಮೆ 'ಫ್ಲರ್ಟ್' ಮಾಡಲು ಪ್ಲಾನ್ ಮಾಡಿರೋ ಹ್ಯಾಂಡ್‌ಸಮ್ ಹುಡುಗ ಚಂದನ್ ಕುಮಾರ್!
Related Stories
Recommended image1
ಬಿಗ್ ಬಾಸ್ ಖ್ಯಾತಿಯ ವರ್ತೂರು ಸಂತೋಷ್ ಮನೆಯಲ್ಲಿ ಸಂಭ್ರಮ; ಹಳ್ಳಿಕಾರ್ ಹಸುವಿಗೆ ಅದ್ದೂರಿ ಸೀಮಂತ ಶಾಸ್ತ್ರ!
Recommended image2
Reels ಲೋಕದಲ್ಲಿ ಕಿಚ್ಚು ಹಚ್ಚಿದ ನಿವೇದಿತಾ ಗೌಡ-ಕಿಶನ್ ಜೋಡಿ: ವೈರಲ್ ಆಯ್ತು ರೊಮ್ಯಾಂಟಿಕ್ ಡ್ಯಾನ್ಸ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved