ಕನ್ನಡ ಕಿರುತೆರೆ ನಟ ವಿಕಾಶ್ ಉತ್ತಯ್ಯ ಇತ್ತೀಚೆಗೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ನಟಿ ನಿಶಾ ರವಿಕೃಷ್ಣನ್ ಭಾವನಾತ್ಮಕ ಪೋಸ್ಟ್ ಮಾಡಿದ್ದಾರೆ.
tv-talk Aug 03 2026
Author: Pavna Das Image Credits:Instagram
Kannada
ಸಹ ನಟನಿಗೆ ಅಣ್ಣಯ್ಯ ನಟಿಯ ಸ್ಪೆಷಲ್ ವಿಶ್
ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ವಿಕಾಶ್ ಉತ್ತಯ್ಯ ಎನ್ನುತ್ತಾ ನಿಶಾ, ತಮ್ಮ ‘ಅಣ್ಣಯ್ಯ’ ಸೀರಿಯಲ್ ಸಹ ನಟನಿಗೆ ಸ್ಪೆಷಲ್ ಆಗಿ ವಿಶ್ ಮಾಡಿದ್ದಾರೆ.
Image credits: Instagram
Kannada
ಜೀವನದ ಅತ್ಯಂತ ವಿಶೇಷ ವ್ಯಕ್ತಿ
ನೀವು ನನ್ನ ಸಹನಟ ಮಾತ್ರವಲ್ಲ, ನನ್ನ ಜೀವನದ ಅತ್ಯಂತ ವಿಶೇಷ ವ್ಯಕ್ತಿಗಳಲ್ಲಿ ಒಬ್ಬನಾದ ನಿಮಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಹಾರೈಸಿದ್ದಾರೆ.
Image credits: Instagram
Kannada
ಥ್ಯಾಂಕ್ಯೂ ಹೇಳಿದ ನಟಿ
ನನಗೆ ದಾರಿದೀಪವಾಗಿದ್ದಕ್ಕೆ, ನನ್ನ ಪ್ರತಿಯೊಂದು ಸಮಸ್ಯೆಗೆ ಪರಿಹಾರ ನೀಡಿದ್ದಕ್ಕೆ, ಯಾವಾಗಲೂ ಸರಿಯಾದ ಸಲಹೆ ಕೊಟ್ಟಿದ್ದಕ್ಕೆ ಮತ್ತು ಜೀವನದ ಪ್ರತಿಯೊಂದು ಹೆಜ್ಜೆಯಲ್ಲೂ ನನ್ನ ಜೊತೆ ದೃಢವಾಗಿ ನಿಂತಿದ್ದಕ್ಕೆ ಧನ್ಯವಾದ.
Image credits: Instagram
Kannada
ಮುದ್ದಾಗಿ ಹೇಳಿದ್ದೇನು?
ಇದರ ಜೊತೆಗೆ... ನನ್ನ ಅಂತ್ಯವಿಲ್ಲದ ಎಲ್ಲಾ ಡ್ರಾಮಾಗಳನ್ನೂ ತಾಳ್ಮೆಯಿಂದ ಸಹಿಸಿಕೊಂಡಿದ್ದಕ್ಕೆ ವಿಶೇಷ ಧನ್ಯವಾದಗಳು ಎಂದು ಮುದ್ದಾಗಿ ಥ್ಯಾಂಕ್ಯೂ ತಿಳಿಸಿದ್ದಾ ನಿಶಾ.
Image credits: Instagram
Kannada
ಯಾವಾಗಲೂ ಪ್ರೀತಿಸುತ್ತೇನೆ
ಜೀವನ ಏನೇ ತಂದುಕೊಟ್ಟರೂ, ನನ್ನ ಹೃದಯದ ಆಳದಿಂದ ನಾನು ಯಾವಾಗಲೂ ನಿನ್ನನ್ನು ಪ್ರೀತಿಸುತ್ತೇನೆ ಮತ್ತು ಕಾಳಜಿ ವಹಿಸುತ್ತೇನೆ.
Image credits: Instagram
Kannada
ಶುಭ ಹಾರೈಕೆ
ನಿನ್ನ ಜೀವನದಲ್ಲಿ ಎಂದೆಂದಿಗೂ ಸಂತೋಷ, ಉತ್ತಮ ಆರೋಗ್ಯ, ಯಶಸ್ಸು ಹಾಗೂ ನಿನ್ನ ಮನಸಿನ ಎಲ್ಲಾ ಆಸೆಗಳು ಈಡೇರಲಿ ಎಂದು ಹಾರೈಸುತ್ತೇನೆ. ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು! ಎಂದು ಹಾರೈಸಿದ್ದಾರೆ.
Image credits: Instagram
Kannada
ಫ್ಯಾನ್ಸ್ ಖುಷ್
ಕಿರುತೆರೆಯ ಫೇವರಿಟ್ ಜೋಡಿಯ ಮುದ್ದಾದ ಪೋಸ್ಟ್ ನೋಡಿ ಫ್ಯಾನ್ಸ್ ಖುಷಿಯಾಗಿದ್ದಾರೆ. ರೀಲ್ ಜೋಡಿ ಆದಷ್ಟು ಬೇಗ ರಿಯಲ್ ಜೋಡಿ ಆಗಲಿ ಎಂದು ಶುಭ ಹಾರೈಸಿದ್ದಾರೆ.