MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಮಗು ಹುಟ್ಟಿ ಮೂರು ತಿಂಗಳು: 25kg ತೂಕ ಇಳಿಸ್ಕೊಂಡ ರಾಮಾಚಾರಿ ಧಾರಾವಾಹಿ ನಟಿ ಐಶ್ವರ್ಯಾ ಸಾಲೀಮಠ

ಮಗು ಹುಟ್ಟಿ ಮೂರು ತಿಂಗಳು: 25kg ತೂಕ ಇಳಿಸ್ಕೊಂಡ ರಾಮಾಚಾರಿ ಧಾರಾವಾಹಿ ನಟಿ ಐಶ್ವರ್ಯಾ ಸಾಲೀಮಠ

ಕನ್ನಡ ಕಿರುತೆರೆಯ ಜನಪ್ರಿಯ ನಟಿ ಐಶ್ವರ್ಯಾ ಸಾಲೀಮಠ ಅವರು ಇದೀಗ ಸುದ್ದಿಯಲ್ಲಿದ್ದಾರೆ. ಅವಳಿ ಮಕ್ಕಳಿಗೆ ಜನ್ಮ ನೀಡಿದ ಕೇವಲ ಮೂರು ತಿಂಗಳಲ್ಲೇ ಬರೋಬ್ಬರಿ 25 ಕೆಜಿ ತೂಕ ಇಳಿಸಿಕೊಂಡಿರುವ ನಟಿ.

3 Min read
Author : Sushma Hegde
Published : Aug 03 2026, 11:26 AM IST
Share this Photo Gallery
  • FB
  • TW
  • Linkdin
  • Whatsapp
15
90 ಕೆಜಿ ಇದ್ದ ತೂಕವನ್ನು ಇದೀಗ 65 ಕೆಜಿಗೆ
Image Credit : Asianet News

90 ಕೆಜಿ ಇದ್ದ ತೂಕವನ್ನು ಇದೀಗ 65 ಕೆಜಿಗೆ

ಕನ್ನಡ ಕಿರುತೆರೆಯ ಜನಪ್ರಿಯ ನಟಿ ಐಶ್ವರ್ಯಾ ಸಾಲೀಮಠ ಅವರು ಇದೀಗ ಸುದ್ದಿಯಲ್ಲಿದ್ದಾರೆ. ಅವಳಿ ಮಕ್ಕಳಿಗೆ ಜನ್ಮ ನೀಡಿದ ಕೇವಲ ಮೂರು ತಿಂಗಳಲ್ಲೇ ಬರೋಬ್ಬರಿ 25 ಕೆಜಿ ತೂಕ ಇಳಿಸಿಕೊಂಡಿರುವ ನಟಿ, ತಮ್ಮ ತೂಕ ಇಳಿಕೆಯ ಸೀಕ್ರೆಟ್‌ ಅನ್ನು ಹಂಚಿಕೊಂಡಿದ್ದಾರೆ. ‘ಅಗ್ನಿಸಾಕ್ಷಿ’, ‘ರಾಮಾಚಾರಿ’, ‘ಸೇವಂತಿ’, ‘ಸರಯೂ’ ಸೇರಿದಂತೆ ಹಲವು ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸಿ ಕಿರುತೆರೆ ಪ್ರೇಕ್ಷಕರ ಮನಗೆದ್ದಿರುವ ಐಶ್ವರ್ಯಾ ಸಾಲೀಮಠ, ಸದ್ಯ ನಟನೆಯಿಂದ ಬ್ರೇಕ್ ಪಡೆದುಕೊಂಡು ಮಕ್ಕಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಅವಳಿ ಮಕ್ಕಳ ತಾಯಿಯಾಗಿರುವ ನಟಿ ತಮ್ಮ ಆರೋಗ್ಯದ ಕಡೆಗೂ ಗಮನ ಹರಿಸುತ್ತಿದ್ದಾರೆ. 90 ಕೆಜಿ ಇದ್ದ ತೂಕವನ್ನು ಇದೀಗ 65 ಕೆಜಿಗೆ ಇಳಿಸಿಕೊಂಡಿರುವುದಾಗಿ ಅವರು ತಿಳಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಅವಳಿ ಮಕ್ಕಳಿಗೆ ತಾಯಿಯಾದ ನಟಿ
Image Credit : Actress aishwarya salimath instagram

ಅವಳಿ ಮಕ್ಕಳಿಗೆ ತಾಯಿಯಾದ ನಟಿ

ಕಳೆದ ವರ್ಷ ಡಿಸೆಂಬರ್‌ನಲ್ಲಿ ನಟಿ ಐಶ್ವರ್ಯಾ ಸಾಲೀಮಠ ಮತ್ತು ನಟ ವಿನಯ್ ದಂಪತಿ ಅವಳಿ ಮಕ್ಕಳಿಗೆ ಪೋಷಕರಾದರು. ಮುದ್ದಾದ ಅವಳಿ ಮಕ್ಕಳಿಗೆ ವಜ್ರ ಮತ್ತು ವೈಡೂರ್ಯ ಎಂದು ಹೆಸರು ಇಟ್ಟಿದ್ದಾರೆ. ಮಕ್ಕಳ ಜನನದ ಬಳಿಕ ಬಾಣಂತನದ ಆರೈಕೆಯಲ್ಲಿದ್ದ ಐಶ್ವರ್ಯಾ, ಇದೀಗ ನಿಧಾನವಾಗಿ ತಮ್ಮ ಫಿಟ್‌ನೆಸ್‌ ಕಡೆಗೂ ಗಮನ ಹರಿಸುತ್ತಿದ್ದಾರೆ. ಮಕ್ಕಳಿಗೆ ಜನ್ಮ ನೀಡಿ ಕೇವಲ ಮೂರು ತಿಂಗಳಾಗಿದ್ದು, ಈ ಅವಧಿಯಲ್ಲಿ ತಮ್ಮ ಆಹಾರ ಪದ್ಧತಿಯಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಂಡಿದ್ದಾರೆ. ಆರೋಗ್ಯಕರ ಆಹಾರ ಸೇವನೆ ಹಾಗೂ ಪ್ರತಿದಿನ ವಾಕಿಂಗ್ ಮಾಡುವ ಮೂಲಕ ತೂಕ ಇಳಿಸಿಕೊಂಡಿದ್ದಾರೆ.

90 ಕೆಜಿಯಿಂದ 65 ಕೆಜಿಗೆ

ಐಶ್ವರ್ಯಾ ಸಾಲೀಮಠ ಅವರ ತೂಕ ಇಳಿಕೆಯ ಪ್ರಯಾಣ ಇದೀಗ ಅನೇಕರ ಗಮನ ಸೆಳೆಯುತ್ತಿದೆ. ಅವರ ಪ್ರಕಾರ, ಒಂದು ಹಂತದಲ್ಲಿ 90 ಕೆಜಿ ಇದ್ದ ತೂಕ ಇದೀಗ 65 ಕೆಜಿಗೆ ಇಳಿದಿದೆ. ಅಂದರೆ ಬರೋಬ್ಬರಿ 25 ಕೆಜಿ ತೂಕ ಕಡಿಮೆಯಾಗಿದೆ.

35
ಪ್ರತಿದಿನ ವಾಕಿಂಗ್‌; ಆಹಾರದಲ್ಲಿ ಏನೇನಿದೆ?
Image Credit : instagram

ಪ್ರತಿದಿನ ವಾಕಿಂಗ್‌; ಆಹಾರದಲ್ಲಿ ಏನೇನಿದೆ?

ತಮ್ಮ ಡಯೆಟ್ ಬಗ್ಗೆ ಮಾತನಾಡಿರುವ ಐಶ್ವರ್ಯಾ, ಹಿಂದೆ ಚಪಾತಿ, ಅನ್ನ ಮತ್ತು ಸಾಂಬಾರ್‌ನಂತಹ ಕಾರ್ಬೋಹೈಡ್ರೇಟ್‌ ಹೆಚ್ಚಿರುವ ಆಹಾರವನ್ನು ಹೆಚ್ಚಾಗಿ ಸೇವಿಸುತ್ತಿದ್ದೆ. ಆದರೆ, ಈಗ ಆಹಾರದಲ್ಲಿ ಪ್ರೋಟೀನ್ ಮತ್ತು ಫೈಬರ್‌ಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದೇನೆ ಎಂದು ಹೇಳಿದ್ದಾರೆ. ತಮ್ಮ ಆಹಾರದಲ್ಲಿ ತರಕಾರಿ, ಹಣ್ಣು, ಮೊಟ್ಟೆ, ಪನೀರ್, ಸೊಪ್ಪು ಸೇರಿದಂತೆ ಪೌಷ್ಟಿಕಾಂಶಯುಕ್ತ ಆಹಾರಗಳನ್ನು ಸೇರಿಸಿಕೊಂಡಿದ್ದಾರೆ. ಅವರ ದಿನನಿತ್ಯದ ಆಹಾರದಲ್ಲಿ ಮೊಳಕೆ ಕಾಳಿನ ಪಲ್ಯ, ರಾಗಿ ಮುದ್ದೆ, ಪನೀರ್, ಮಶ್ರೂಮ್, ಸೂಪ್, ಇಡ್ಲಿ, ಮೊಟ್ಟೆ, ಬಾದಾಮಿ, ಚಪಾತಿ, ಸವತೆಕಾಯಿ, ಕ್ಯಾರೆಟ್, ಸೊಪ್ಪು, ದೋಸೆ ಮತ್ತು ಬ್ರೊಕೊಲಿ ಮುಂತಾದವುಗಳು ಸೇರಿವೆ. ಇದರ ಜೊತೆಗೆ ಪ್ರತಿದಿನ ವಾಕಿಂಗ್ ಮಾಡುವುದಕ್ಕೂ ಆದ್ಯತೆ ನೀಡುತ್ತಿದ್ದಾರೆ.

ಜಾಸ್ತಿ ನೀರು

ತೂಕ ಇಳಿಸುವ ಸಂದರ್ಭದಲ್ಲಿ ನೀರು ಕುಡಿಯುವುದಕ್ಕೂ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದೇನೆ ಎಂದು ಐಶ್ವರ್ಯಾ ಹೇಳಿದ್ದಾರೆ. ಈಗ ಕಾರ್ಬೋಹೈಡ್ರೇಟ್ ಕಡಿಮೆ ಮಾಡಿ ಪ್ರೋಟೀನ್ ಮತ್ತು ಫೈಬರ್‌ಗೆ ಹೆಚ್ಚು ಗಮನ ಕೊಡುತ್ತಿದ್ದೇನೆ. ತರಕಾರಿ, ಹಣ್ಣು, ಮೊಟ್ಟೆ, ಪನೀರ್ ಮತ್ತು ಸೊಪ್ಪನ್ನು ಹೆಚ್ಚಾಗಿ ತಿನ್ನುತ್ತೇನೆ. ಎಲ್ಲದಕ್ಕಿಂತ ಹೆಚ್ಚಾಗಿ ಜಾಸ್ತಿ ನೀರು ಕುಡಿಯುತ್ತೇನೆ. ಮನೆಯ ಊಟವನ್ನೇ ತಿಂದು ಸಣ್ಣಗಾಗುತ್ತಿದ್ದೇನೆ ಎಂದು ನಟಿ ಈ ಹಿಂದೆ ಹೇಳಿದ್ದರು. ಅಂದರೆ, ಯಾವುದೇ ಕ್ರ್ಯಾಶ್ ಡಯೆಟ್‌ಗಿಂತ ಆರೋಗ್ಯಕರ ಮನೆಯ ಆಹಾರಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ.

45
ಮಕ್ಕಳ ಆರೋಗ್ಯಕ್ಕಾಗಿ ಚೆನ್ನಾಗಿ ತಿನ್ನಬೇಕು
Image Credit : aishwarya salimath instagram

ಮಕ್ಕಳ ಆರೋಗ್ಯಕ್ಕಾಗಿ ಚೆನ್ನಾಗಿ ತಿನ್ನಬೇಕು

ತೂಕ ಇಳಿಸಿಕೊಳ್ಳುವುದಷ್ಟೇ ತಮ್ಮ ಗುರಿಯಲ್ಲ. ಮಕ್ಕಳ ಆರೋಗ್ಯಕ್ಕಾಗಿ ತಾವು ಆರೋಗ್ಯಕರವಾಗಿ ತಿನ್ನಬೇಕು ಎಂಬುದು ತಮ್ಮ ಮುಖ್ಯ ಉದ್ದೇಶ ಎಂದು ಐಶ್ವರ್ಯಾ ಹೇಳಿದ್ದಾರೆ. ಡಯೆಟ್ ಮತ್ತು ವರ್ಕೌಟ್ ಸರಿಯಾಗಿದ್ದರೆ ಮಾನಸಿಕ ಆರೋಗ್ಯವೂ ಉತ್ತಮವಾಗಿರುತ್ತದೆ. ಸದ್ಯ ತಮಗೆ ಮೂಡ್ ಸ್ವಿಂಗ್ಸ್ ಕೂಡ ಆಗುತ್ತಿಲ್ಲ ಎಂದು ನಟಿ ಹೇಳಿದ್ದಾರೆ. ಅವಳಿ ಮಕ್ಕಳ ಆರೈಕೆಯ ನಡುವೆಯೂ ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸುತ್ತಿರುವ ಐಶ್ವರ್ಯಾ ಅವರ ಫಿಟ್‌ನೆಸ್ ಜರ್ನಿ ಇದೀಗ ಅಭಿಮಾನಿಗಳ ಗಮನ ಸೆಳೆಯುತ್ತಿದೆ.

ವಜ್ರ-ವೈಡೂರ್ಯಗೆ ಸರಳವಾಗಿ ಕಿವಿ ಚುಚ್ಚಿಸುವ ಶಾಸ್ತ್ರ

ಇತ್ತೀಚೆಗೆ ಐಶ್ವರ್ಯಾ ಮತ್ತು ವಿನಯ್ ದಂಪತಿ ತಮ್ಮ ಅವಳಿ ಮಕ್ಕಳಿಗೆ ಸರಳವಾಗಿ ಕಿವಿ ಚುಚ್ಚಿಸುವ ಶಾಸ್ತ್ರವನ್ನೂ ನೆರವೇರಿಸಿದ್ದಾರೆ. ಮಕ್ಕಳಿಗೆ ವಜ್ರ ಮತ್ತು ವೈಡೂರ್ಯ ಎಂದು ಹೆಸರಿಟ್ಟಿರುವ ಈ ಜೋಡಿ, ಸರಳವಾಗಿ ನಡೆದ ಕಾರ್ಯಕ್ರಮದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೂ ಮುನ್ನ ದಂಪತಿ ತಮ್ಮ ಮಕ್ಕಳ ಮುಖವನ್ನು ಮೊದಲ ಬಾರಿಗೆ ಮುದ್ದಾದ ವಿಡಿಯೋ ಮೂಲಕ ಅಭಿಮಾನಿಗಳಿಗೆ ಪರಿಚಯಿಸಿದ್ದರು.

55
ಶೂಟಿಂಗ್‌ನಲ್ಲಿ ಶುರುವಾದ ಸ್ನೇಹ ಪ್ರೀತಿಯಾಯಿತು
Image Credit : aishwarya salimath instagram

ಶೂಟಿಂಗ್‌ನಲ್ಲಿ ಶುರುವಾದ ಸ್ನೇಹ ಪ್ರೀತಿಯಾಯಿತು

ಐಶ್ವರ್ಯಾ ಮತ್ತು ವಿನಯ್ ಅವರ ಪ್ರೇಮಕಥೆಯೂ ಕುತೂಹಲಕಾರಿಯಾಗಿದೆ. ಇಬ್ಬರೂ ‘ಮಹಾಸತಿ’ ಧಾರಾವಾಹಿಯ ಶೂಟಿಂಗ್ ಸಂದರ್ಭದಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದರು. ಈ ಧಾರಾವಾಹಿಯಲ್ಲಿ ವಿನಯ್ ನಾಯಕನಾಗಿ ನಟಿಸಿದ್ದರು. ನಂತರ ಇಬ್ಬರೂ ಬೇರೆ ಬೇರೆ ಧಾರಾವಾಹಿಗಳಲ್ಲಿ ನಟಿಸಿದರೂ, ಅವರ ಸ್ನೇಹ ಮುಂದುವರಿದಿತ್ತು. ನಿಧಾನವಾಗಿ ಇವರಿಬ್ಬರ ಸ್ನೇಹ ಪ್ರೀತಿಗೆ ತಿರುಗಿತು. ಮೂಲತಃ ಉತ್ತರ ಕರ್ನಾಟಕದವರಾದ ಈ ಜೋಡಿ, ಕುಟುಂಬದವರ ಒಪ್ಪಿಗೆ ಪಡೆದು 2022ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಕಿರುತೆರೆಯಲ್ಲಿ ಮಿಂಚಿದ ಐಶ್ವರ್ಯಾ

ಐಶ್ವರ್ಯಾ ಸಾಲೀಮಠ ಅವರು ‘ಅಗ್ನಿಸಾಕ್ಷಿ’, ‘ರಾಮಾಚಾರಿ’, ‘ಸೇವಂತಿ’, ‘ಸರಯೂ’ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇತ್ತ ಅವರ ಪತಿ ವಿನಯ್ ಕೂಡ ಕಿರುತೆರೆ ಮತ್ತು ಹಿರಿತೆರೆಯಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ.ಸದ್ಯ ಐಶ್ವರ್ಯಾ ನಟನೆಯಿಂದ ಕೊಂಚ ದೂರ ಉಳಿದು ಅವಳಿ ಮಕ್ಕಳ ಆರೈಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇದರ ನಡುವೆ 90 ಕೆಜಿಯಿಂದ 65 ಕೆಜಿಗೆ ತೂಕ ಇಳಿಸಿಕೊಂಡಿರುವ ಅವರ ಫಿಟ್‌ನೆಸ್ ಜರ್ನಿ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SH
Sushma Hegde
ಸುವರ್ಣ ನ್ಯೂಸ್ ಸುದ್ದಿ ಮಾಧ್ಯಮದ ಡಿಜಿಟಲ್ ವಿಭಾಗದಲ್ಲಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ದೃಶ್ಯ ಮಾಧ್ಯಮ, ಡಿಜಿಟಲ್‌ ಮಾಧ್ಯಮದಲ್ಲಿ 5 ವರ್ಷ ಕೆಲಸ ಮಾಡಿದ ಅನುಭವವಿದೆ. SDM ಉಜಿರೆಯಲ್ಲಿ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ. ಸುದ್ದಿಲೋಕದಲ್ಲಿ ರಾಜಕೀಯ, ದೇಶ, ಜ್ಯೋತಿಷ್ಯ, ಜೀವನಶೈಲಿ, ವಾಣಿಜ್ಯ, ಕ್ರೈಂ ಸುದ್ದಿಗಳಲ್ಲಿ ಆಸಕ್ತಿ.
ಕನ್ನಡ ಧಾರಾವಾಹಿ
ಮನರಂಜನಾ ಸುದ್ದಿ
ಜೀವನಶೈಲಿ
Latest Videos
Recommended Stories
Recommended image1
‘ಅಣ್ಣಯ್ಯ’ ಶಿವು ಹುಟ್ಟುಹಬ್ಬಕ್ಕೆ Nisha Ravikrishnan ಸ್ಪೆಷಲ್ ವಿಶ್… ಬೇಗ ರಿಯಲ್ ಜೋಡಿಯಾಗಿ ಫ್ಯಾನ್ಸ್ ಹಾರೈಕೆ
Recommended image2
ಕಲಿಯುಗ ಸಿನಿಮಾವೇ ಆಯ್ತು ಲಕ್ಷ್ಮೀನಿವಾಸ; ಶ್ರೀನಿವಾಸನ ಕೈ ಕಟ್, ಜಾನುಗೆ 2ನೇ ಮದುವೆ
Recommended image3
ಹಾಸನ–ಸಕಲೇಶಪುರ ರೈಲು ಮಾರ್ಗದಲ್ಲಿ ಗುಡ್ಡ ಕುಸಿತ; ಬೆಂಗಳೂರು, ಮಂಗಳೂರು, ವಿಜಯಪುರ ಸೇರಿ 6 ರೈಲುಗಳ ಮಾರ್ಗ ಬದಲಾವಣೆ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved