- Home
- Entertainment
- TV Talk
- Karna Serial ನಲ್ಲೂ ಜೋಗಮ್ಮ ಎಂಟ್ರಿ! ಧಾರಾವಾಹಿಗಳಲ್ಲಿ ಜೋಗತ್ತಿಯರಿಗೆ ಏಕಿಷ್ಟು ಡಿಮಾಂಡ್
Karna Serial ನಲ್ಲೂ ಜೋಗಮ್ಮ ಎಂಟ್ರಿ! ಧಾರಾವಾಹಿಗಳಲ್ಲಿ ಜೋಗತ್ತಿಯರಿಗೆ ಏಕಿಷ್ಟು ಡಿಮಾಂಡ್
ಕರ್ಣ ಧಾರಾವಾಹಿಯಲ್ಲಿ ಸೀತಾ ಮತ್ತು ಕರ್ಣ ಎದುರುಬದುರಾಗಿದ್ದರೂ ತಮ್ಮ ನೈಜ ಸಂಬಂಧದ ಅರಿವಿಲ್ಲದೆ ಒದ್ದಾಡುತ್ತಿದ್ದಾರೆ. ನಯನತಾರಾ ನಕಲಿ ಸೀತಾಳನ್ನು ತಂದು ಸಂಚು ರೂಪಿಸುತ್ತಿದ್ದರೆ, ಜೋಗತಿಯೊಬ್ಬಳು ಸೀತಾಗೆ ಮಗ ಸಿಗುವ ಭವಿಷ್ಯ ನುಡಿದಿದ್ದಾಳೆ. ಅಮ್ಮನಿಗೆ ಕರ್ಣ ಊಟ ಮಾಡಿಸುವ ಮೂಲಕ ಬಾಂಧವ್ಯ ಮೂಡಿಸಿದೆ.

ಅಮ್ಮ-ಮಗ ಎದುರು-ಬದುರು
ಕರ್ಣ ಸೀರಿಯಲ್ (Karna Serial)ನಲ್ಲಿ ಈಗ ಕರ್ಣನೇ ಮಗ ಎನ್ನೋದು ಸೀತಾಗೆ ಗೊತ್ತಾಗಬೇಕಿದೆ, ಇದೇ ಭುವನೇಶ್ವರಿನೇ ನನ್ನ ಅಮ್ಮ ಅನ್ನೋದು ಕರ್ಣನಿಗೆ ಗೊತ್ತಾಗಬೇಕಿದೆ. ಇಬ್ಬರೂ ಎದುರು ಬದುರು ಇದ್ದರೂ ಸತ್ಯ ಮಾತ್ರ ಇಬ್ಬರೂ ಅರಿಯುತ್ತಿಲ್ಲ.
ನಯನತಾರಾ ಕಿತಾಪತಿ
ಇದರ ನಡುವೆಯೇ, ನಯನತಾರಾ ಸೀತಾಳ ಬಳಿ ಬಂದು ಕರ್ಣ ಹುಟ್ಟುತ್ತಲೇ ಸುಟ್ಟುಹೋದ ಎಂದು ಸುಳ್ಳು ಹೇಳಿದ್ದರೆ, ಅತ್ತ ನಕಲಿ ಸೀತಾಳನ್ನು ಕರೆದುಕೊಂಡು ಬಂದು ಕರ್ಣನ ಅಮ್ಮ ಎಂದಿದ್ದಾಳೆ.
ನಕಲಿ ಸೀತಾ
ರಮೇಶ್ ಆ ನಕಲಿ ಸೀತಾಳನ್ನು ನೋಡಿ ಕೋಪಗೊಂಡಿದ್ದಾನೆ. ಇದರ ಹಿಂದೆ ಇರುವ ಕೈವಾಡ ನಯನತಾರಾದ್ದು ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ.
ಜೋಗತಿ ಎಂಟ್ರಿ
ಅದೇ ಇನ್ನೊಂದೆಡೆ ಹೆತ್ತ ಮಗುವಿಗಾಗಿ ಸೀತಾ ಕಣ್ಣೀರು ಹಾಕುತ್ತಿದ್ದಾಳೆ. ಅಷ್ಟರಲ್ಲಿಯೇ ಜೋಗತಿ ಪ್ರವೇಶವಾಗಿದೆ. ಇದಾಗಲೇ ಬಹುತೇಕ ಸೀರಿಯಲ್ಗಳಲ್ಲಿ ಕಣಿ ಹೇಳುವವರು ಪ್ರವೇಶವಾಗಿದ್ದು, ಕರ್ಣ ಸೀರಿಯಲ್ನಲ್ಲಿಯೂ ಈಗ ಈಕೆ ಎಂಟ್ರಿಯಾಗಿದೆ.
ಜೋಗತಿ ನುಡಿದ ಭವಿಷ್ಯ
ನಿನ್ನ ಮಗ ಶೀಘ್ರದಲ್ಲಿ ಸಿಕ್ಕೇಸಿಗುತ್ತಾನೆ ಎಂದಿದ್ದಾಳೆ ಜೋಗತಿ. ಅಲ್ಲಿಗೆ ತನ್ನ ಮಗ ಬದುಕಿದ್ದಾನೆ ಎನ್ನುವ ಸಣ್ಣ ಸುಳಿವು ಸೀತಾಳ ಮನಸ್ಸಿನಲ್ಲಿ ಬೇರೂರಿದೆ.
ಅಮ್ಮನಿಗೆ ಊಟ ಮಾಡಿಸಿದ ಕರ್ಣ
ಅದೇ ಇನ್ನೊಂದೆಡೆ, ಭುವನೇಶ್ವರಿಯೇ ತನ್ನ ಅಮ್ಮ ಎಂದು ತಿಳಿಯದಿದ್ದರೂ, ಆಕೆ ಕೂಡ ಮಗನಿಗಾಗಿ ಹುಡುಕಾಟ ನಡೆಸುತ್ತಿರುವುದನ್ನು ಅರಿತಿರುವ ಕರ್ಣ, ಆಕೆಗೆ ಊಟ ಮಾಡಿಸುತ್ತಾನೆ. ಅಲ್ಲಿಗೆ ತಾಯಿ-ಮಗನ ಭೇಟಿಯಾಗಿದೆ. ಆದರೆ ನಿಜ ತಿಳಿಯತ್ತಾ ಎನ್ನುವುದು ಸದ್ಯಕ್ಕೆ ಇರುವ ಕುತೂಹಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

