- Home
- Entertainment
- TV Talk
- ನನ್ನ ಮೇಲೆ 88 ಲಕ್ಷ ಸಾಲ- ಹೆಂಡ್ತಿನೇ ಎಲ್ಲಾ ನೋಡಿಕೊಳ್ಳೋದು, Bigg Boss ಅವಿನಾಶ್ ಕಣ್ಣೀರು
ನನ್ನ ಮೇಲೆ 88 ಲಕ್ಷ ಸಾಲ- ಹೆಂಡ್ತಿನೇ ಎಲ್ಲಾ ನೋಡಿಕೊಳ್ಳೋದು, Bigg Boss ಅವಿನಾಶ್ ಕಣ್ಣೀರು
ಬಿಗ್‌ಬಾಸ್ ಕನ್ನಡ ಸೀಸನ್ 13ರಿಂದ ಹೊರಬಂದ ನಟ ಅವಿನಾಶ್ ಶತಮರ್ಷಣ ತಮ್ಮ 88 ಲಕ್ಷ ರೂ. ಸಾಲ ಮತ್ತು ಪತ್ನಿಯ ಬೆಂಬಲದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಬಿಗ್‌ಬಾಸ್ ಮನೆಯ ವಾತಾವರಣ ತಮ್ಮ ಸ್ವಭಾವಕ್ಕೆ ವಿರುದ್ಧವಾಗಿದ್ದರಿಂದ ಇನ್ನು ಮುಂದೆ ಆ ಕಾರ್ಯಕ್ರಮವನ್ನು ನೋಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಬಿಗ್‌ಬಾಸ್ ಅನುಭವ ತೆರೆದಿಟ್ಟ ಅವಿನಾಶ್
ಬಿಗ್‌ಬಾಸ್ ಕನ್ನಡ ಸೀಸನ್ 13ರಿಂದ ಎಲಿಮಿನೇಟ್ ಆದ ಬಳಿಕ ರಂಗಭೂಮಿ ಕಲಾವಿದ ಹಾಗೂ ನಟ ಅವಿನಾಶ್ ಶತಮರ್ಷಣ (avinash shatamarshana) ಅವರು ಕಾರ್ಯಕ್ರಮದಲ್ಲಿನ ತಮ್ಮ ಮೂರು ವಾರಗಳ ಅನುಭವದ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. ಬಿಗ್‌ಬಾಸ್ ಮನೆಯ ಆಟದ ಸ್ವರೂಪ ಹಾಗೂ ಅಲ್ಲಿನ ವಾತಾವರಣ ತಮ್ಮ ಸ್ವಭಾವಕ್ಕೆ ಹೊಂದಿಕೆಯಾಗಲಿಲ್ಲ ಎಂದು ಅವರು ಹೇಳಿದ್ದಾರೆ.
88 ಲಕ್ಷ ರೂಪಾಯಿ ಸಾಲ
ಇದೇ ವೇಳೆ ತಮ್ಮ ಸಾಲದ ಕುರಿತು ಮಾತನಾಡಿರುವ ನಟ, ನನ್ನ ಮೇಲೆ 88 ಲಕ್ಷ ರೂಪಾಯಿ ಸಾಲವಿದೆ. ಒಂದ್ವೇಳೆ ಬಿಗ್ ಬಾಸ್ ಗೆಲುವಿನ ನಗದು ಬಹುಮಾನ ಲಭಿಸಿದ್ದರೆ, ಆ ಪೂರ್ತಿ ಹಣವನ್ನ ನನ್ನ ಸಾಲ ತೀರಿಸಲು ಬಳಸುತ್ತಿದ್ದೆ. ಆದರೆ ಈಗ ಹಾಗಾಗಲಿಲ್ಲ ಎಂದು ನೊಂದು ನುಡಿದಿದ್ದಾರೆ.
ನನ್ನ ಪತ್ನಿಯೇ ಎಲ್ಲವನ್ನೂ ನೋಡಿಕೊಳ್ತಾಳೆ
ʻಬಿಗ್ ಬಾಸ್ʼ ನೀಡುವ ವಿನ್ನರ್ ಹಣಕ್ಕಿಂತಲೂ ಹೆಚ್ಚಿನ ಮೊತ್ತದ ಸಾಲ ತಮ್ಮ ಮೇಲಿದೆ ಎಂದು ಹೇಳಿರುವ ಅವಿನಾಶ್, ಸದ್ಯ ನನ್ನ ಪತ್ನಿಯೇ ಎಲ್ಲವನ್ನೂ ನೋಡಿಕೊಳ್ಳುತ್ತಿದ್ದಾಳೆ. ನನ್ನೆಲ್ಲಾ ಕಂಪ್ಲೀಟ್ ಜವಾಬ್ದಾರಿ ನನ್ನ ಹೆಂಡತಿ ತಗೊಂಡಿದ್ದಾಳೆ ಎಂದು ಇರುವ ವಿಷಯವನ್ನು ತಿಳಿಸಿದ್ದಾರೆ.
ತುಂಬಾ ಎಕ್ಸ್‌ಪೀರಿಮೆಂಟ್ ಮಾಡಿದೆ
ನಾನು ತುಂಬಾ ಎಕ್ಸ್‌ಪೀರಿಮೆಂಟ್ ಮಾಡಿದೆ. ಹೋಟೆಲ್ ಮಾಡಿದೆ. ಹೋಂ ಸ್ಟೇ ಮಾಡಿದೆ. ಯಾವುದೂ ಹೆಚ್ಚು ನನ್ನ ಕೈಹಿಡಿಯಲಿಲ್ಲ. ಮನೆ ಎಲ್ಲಾ ಜವಾಬ್ದಾರಿ ಪತ್ನಿ ನೋಡಿಕೊಳ್ಳುತ್ತಾಳೆ. ಅಂತಹ ಹೆಂಡತಿ ಕೋಟಿಗೋ ಹತ್ತು ಕೋಟಿಗೋ ಒಬ್ಬರಿಗೆ ಸಿಗೋದು. ನಾನು ಅವಳಿಗೆ ಮಾತು ಕೊಟ್ಟಿದ್ದೇನೆ. ಇದು ಒಂದು ವರ್ಷ ನಾನು ಪಿಕಪ್ ಆಗಿ ಮಾರ್ಕೆಟ್‌ಗೆ ಬರ್ತೇನೆ, ಸಂಪಾದನೆ ಮಾಡ್ತೀನಿ ಸಾಲ ತೀರಿಸ್ತೇನೆ ಅಂತ. ಅದನ್ನು ಮಾಡಬೇಕಿದೆ ಎಂದಿದೆ.
ಬಿಗ್‌ಬಾಸ್ ಕಾರ್ಯಕ್ರಮ ನೋಡಲ್ಲ
ಇನ್ನು ಮುಂದೆ ನಾನು ಖಂಡಿತವಾಗಿಯೂ ಬಿಗ್‌ಬಾಸ್ ಕಾರ್ಯಕ್ರಮವನ್ನು ನೋಡುವುದಿಲ್ಲ. ಇಂದಿನವರೆಗೂ ನಾನು ವೀಕ್ಷಕನಾಗಿ ಟಿವಿಯನ್ನೇ ಹಾಕಿ ನೋಡುವ ಅಭ್ಯಾಸ ಹೊಂದಿಲ್ಲ. ಈ ಕಾರ್ಯಕ್ರಮ ಮಾತ್ರವಲ್ಲ, ನಾನು ಧಾರಾವಾಹಿಗಳಲ್ಲಿ ನಟಿಸಿದಾಗಲೂ ಅವುಗಳನ್ನು ನೋಡುತ್ತಿರಲಿಲ್ಲ. ನಾನು ನಟಿಸಿರುವ ಸಿನಿಮಾಗಳನ್ನೂ ಒಂದೆರಡು ಬಾರಿಗಿಂತ ಹೆಚ್ಚು ನೋಡಿರುವುದು ಅಪರೂಪ” ಎಂದು ಹೇಳಿದ್ದಾರೆ.
ಸ್ವಭಾವಕ್ಕೆ ವಿರುದ್ಧ
ಬಿಗ್‌ಬಾಸ್ ಮನೆಯ ವಾತಾವರಣ ತಮ್ಮ ಸಹಜ ಸ್ವಭಾವಕ್ಕೆ ಸಂಪೂರ್ಣ ವಿರುದ್ಧವಾಗಿತ್ತು. “ನಾನು ಬಿಗ್‌ಬಾಸ್ ಮನೆಗೆ ಯಾವುದೇ ರೀತಿಯ ಪೂರ್ವಾಭ್ಯಾಸ ಮಾಡಿಕೊಂಡು ಹೋಗಿರಲಿಲ್ಲ. ಪೂರ್ವಾಭ್ಯಾಸ ಎನ್ನುವುದು ರಂಗಭೂಮಿಯ ನಾಟಕಗಳಿಗೆ, ನೈಜವಾಗಿರುವುದಕ್ಕೆ ಅಲ್ಲ. ನನ್ನ ಸ್ವಭಾವವನ್ನು ನಾನು ಬದಲಿಸಿಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

