- Home
- Entertainment
- Bigg Boss 13: ಕ್ಯಾಪ್ಟನ್ಸಿ ಹೈಜಾಕ್ ಮಾಡಿ ವಾಪಸ್ ಬಂದ ತಾಂಡವ್ ರಾಮ್; ಒಳ್ಳೆತನ ನಿರೀಕ್ಷಿಸಬೇಡಿ ಅಂದಿದ್ದೇಕೆ?
Bigg Boss 13: ಕ್ಯಾಪ್ಟನ್ಸಿ ಹೈಜಾಕ್ ಮಾಡಿ ವಾಪಸ್ ಬಂದ ತಾಂಡವ್ ರಾಮ್; ಒಳ್ಳೆತನ ನಿರೀಕ್ಷಿಸಬೇಡಿ ಅಂದಿದ್ದೇಕೆ?
ಬಿಗ್ ಬಾಸ್ ಕನ್ನಡ ಸೀಸನ್ 13ರ 3ನೇ ವಾರದಲ್ಲಿ ಎಮರ್ಜೆನ್ಸಿ ಎಕ್ಸಿಟ್ ಆಗಿದ್ದ ನಟ ತಾಂಡವ್ ರಾಮ್, ಇದೀಗ 4ನೇ ವಾರದಲ್ಲಿ ಕ್ಯಾಪ್ಟನ್ಸಿಯನ್ನು ಹೈಜಾಕ್ ಮಾಡುವ ಮೂಲಕ ಭರ್ಜರಿ ಕಮ್‌ಬ್ಯಾಕ್ ಮಾಡಿದ್ದಾರೆ. ಮನೆಯೊಳಗೆ ಕಾಲಿಡುತ್ತಲೇ ‘ನನ್ನಿಂದ ಒಳ್ಳೆತನ ನಿರೀಕ್ಷಿಸಬೇಡಿ’ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಬಿಗ್ ಬಾಸ್ ಕನ್ನಡ ಸೀಸನ್ 13ರ ಮನೆಯಿಂದ, 3ನೇ ವಾರದಲ್ಲಿ ನಡೆದ ಮಿಡ್‌ವೀಕ್ ಎಮರ್ಜೆನ್ಸಿ ಎಕ್ಸಿಟ್ ಪ್ರಕ್ರಿಯೆಯಲ್ಲಿ ಹೊರಬಿದ್ದಿದ್ದ ನಟ ತಾಂಡವ್ ರಾಮ್ ಅವರು, ಇದೀಗ ನಾಲ್ಕನೇ ವಾರದಲ್ಲಿ ಮನೆಯ ಕ್ಯಾಪ್ಟನ್ಸಿಯನ್ನು ಹೈಜಾಕ್ ಮಾಡುವ ಮೂಲಕ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಿದ್ದಾರೆ. ಮನೆಯೊಳಗೆ ಕಾಲಿಡುತ್ತಲೇ ಸಹಸ್ಪರ್ಧಿಗಳಿಗೆ ಅವರು ದೊಡ್ಡ ಎಚ್ಚರಿಕೆಯನ್ನೇ ರವಾನಿಸಿದ್ದಾರೆ.
ಬಿಗ್ ಬಾಸ್ ಕನ್ನಡ ಸೀಸನ್ 13ರಲ್ಲಿ ಈಗಾಗಲೇ ನಾಲ್ಕು ಜನರು ಮನೆಯಿಂದ ಹೊರಹೋಗಿದ್ದು, ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಮನೆಗೆ ಬಂದಿದ್ದಾರೆ. ಬಿಗ್ ಬಾಸ್ ಘೋಷಿಸಿದಂತೆ 3ನೇ ವಾರದಲ್ಲಿ ನಡೆಸಲಾದ ಎಮರ್ಜೆನ್ಸಿ ಎಕ್ಸಿಟ್ ನಾಮಿನೇಷನ್‌ನಲ್ಲಿ, ಕ್ಯಾಪ್ಟನ್ ಸಂಗೀತಾ ಅವರನ್ನು ಹೊರತುಪಡಿಸಿ ಉಳಿದೆಲ್ಲರೂ ನಾಮಿನೇಟ್ ಆಗಿದ್ದರು. ಈ ಪೈಕಿ ಹಲವರು ಸೇವ್ ಆದರೂ, ಅವರ ನಿರ್ಧಾರದ ಮೇರೆಗೆ ತಾಂಡವ್ ರಾಮ್ ಅವರು ಬಿಗ್ ಬಾಸ್ ಮನೆಯಿಂದ ಮಧ್ಯದ ವಾರದಲ್ಲಿಯೇ ಎಮರ್ಜೆನ್ಸಿ ಎಕ್ಸಿಟ್ ಆಗಿದ್ದರು.
ತಾಂಡವ್ ರಾಮ್ ಅವರು ಮನೆಯಿಂದ ಹೊರಹೋಗುವಾಗ ಆಪ್ತ ಸ್ನೇಹಿತ ಗಗನ್ ಚಿನ್ನಪ್ಪ, ಕಾವ್ಯಾ ಹಾಗೂ ಸಂಗೀತಾ ಸೇರಿದಂತೆ ಹಲವು ಸ್ಪರ್ಧಿಗಳು ಕಣ್ಣೀರು ಹಾಕಿದ್ದರು. ಅದರಲ್ಲಿಯೂ ಗಗನ್, ತಾಂಡವ್‌ನನ್ನು ಮನೆಗೆ ಕಳಿಸದಂತೆ ಬಿಗ್ ಬಾಸ್ ಬಳಿ ಪರಿಪರಿಯಾಗಿ ಬೇಡಿಕೊಂಡಿದ್ದರು.
3ನೇ ವಾರದ ಕಿಚ್ಚನ ಪಂಚಾಯಿತಿ ವೇಳೆ ಕಾರ್ಯಕ್ರಮದ ನಿರೂಪಕ ಸುದೀಪ್ ಅವರು ತಾಂಡವ್ ರಾಮ್ ಅವರಿಗೆ ಮನೆಯೊಳಗಿನ ವಿಡಿಯೋ ಟ್ರೇಲರ್ ತೋರಿಸಿ ಅವರನ್ನು ಮನೆಗೆ ಕಳಿಸಲು ಮುಂದಾಗಿದ್ದರು.
ಆದರೆ, ಈ ವೇಳೆ ವಿಡಿಯೋ ಟ್ರೇಲರ್ ಅನ್ನು ಅರ್ಧಕ್ಕೆ ನಿಲ್ಲಿಸಿದ ಬಿಗ್ ಬಾಸ್, 'ಇನ್ನೂ ನಿಮ್ಮ ಆಟ ಮುಗಿದಿಲ್ಲ, ನೀವು ಮನೆಯೊಳಗೆ ಹೋಗಿ' ಎಂದು ಅವರನ್ನು ವಾಪಸ್ ಒಳಗೆ ಕಳಿಸಿದ್ದರು. ಅಲ್ಲಿಂದ ಸುಮಾರು ಒಂದು ವಾರಗಳ ಕಾಲ ಬಿಗ್ ಬಾಸ್ ಮನೆಯೊಳಗೆ ಕಾಣಿಸಿಕೊಳ್ಳದ ತಾಂಡವ್ ರಾಮ್, ಇದೀಗ 'ಹೈಜಾಕರ್' ಆಗಿ ವಾಪಸ್ ಬಂದಿದ್ದಾರೆ.
ಈ ಕುರಿತು ಘೋಷಣೆ ಮಾಡಿದ ಬಿಗ್ ಬಾಸ್, "ಒಬ್ಬ ಹೈಜಾಕರ್ ಮನೆಯ ಕ್ಯಾಪ್ಟನ್ಸಿಯನ್ನು ಹೈಜಾಕ್ ಮಾಡಲು ಬಂದಿದ್ದಾರೆ. ನಿಮ್ಮೆಲ್ಲರ ನೂತನ ಕ್ಯಾಪ್ಟನ್ ಆಗಿ ತಾಂಡವ್ ರಾಮ್ ಮನೆಯನ್ನು ಪ್ರವೇಶಿಸುತ್ತಿದ್ದಾರೆ" ಎಂದು ತಿಳಿಸುತ್ತಾರೆ. ಆಗ ಕ್ಯಾಪ್ಟನ್ ರೂಮ್‌ನಲ್ಲಿ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಕುಳಿತಿದ್ದ ತಾಂಡವ್ ರಾಮ್ ಅವರು, ಮಾಸ್ಕ್ ತೆಗೆದು ತಮ್ಮ ಮುಖವನ್ನು ತೋರಿಸುತ್ತಾರೆ.
ಇದಾದ ನಂತರ, "ಯಾಕೋ ಡಲ್ ಆಗಿದ್ದೀರಾ ಮಚ್ಚಾ? ನಾನು ಬಂದಾಯ್ತು. ತುಂಬಾ ಒಳ್ಳೆತನ ತೋರಿಸಿ ನೋವು, ಪೆಟ್ಟು ತಿಂದಿದ್ದೇನೆ, ಅನುಭವಿಸಿದ್ದೇನೆ. ಇನ್ಮೇಲೆ ಆ ಒಳ್ಳೆತನವನ್ನು ನಾನು ಈ ಮನೆಯಲ್ಲಿ ಇರೋವರೆಗೂ ನನ್ನ ಹತ್ತಿರ ಎಕ್ಸ್‌ಪೆಕ್ಟ್ ಮಾಡಬೇಡಿ. ನ್ಯಾಯ, ನ್ಯಾಯ, ನಮ್ಮ ತಾಯಾಣೆ ನ್ಯಾಯ!' ಎಂದು ತಾಂಡವ್ ರಾಮ್ ಗಟ್ಟಿಯಾಗಿ ಘೋಷಣೆ ಮಾಡುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

