MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಗಾಯಕಿ ಐಶ್ವರ್ಯಗೆ ಗಂಡ ಮನೆಯಲ್ಲಿ ಹೀಗೆ ಕರಿಯೋದಂತೆ! 'ನಮ್ಮ ಕಡೆನೂ ಹೆಂಡ್ತಿಗೆ ಹೀಗೆ ಕರೆಯೋದು' ಅಂದ ಹಾಸನದ ಜನ

ಗಾಯಕಿ ಐಶ್ವರ್ಯಗೆ ಗಂಡ ಮನೆಯಲ್ಲಿ ಹೀಗೆ ಕರಿಯೋದಂತೆ! 'ನಮ್ಮ ಕಡೆನೂ ಹೆಂಡ್ತಿಗೆ ಹೀಗೆ ಕರೆಯೋದು' ಅಂದ ಹಾಸನದ ಜನ

Kannada singer Aishwarya Rangarajan: ಅವಾರ್ಡ್ಸ್‌ ವೇದಿಕೆಯಲ್ಲಿ ಪ್ರಸಿದ್ಧ ಗಾಯಕಿ ಐಶ್ವರ್ಯ ರಂಗರಾಜನ್ ಅವರ ಪತಿ ನೀಡಿದ ಆ ಒಂದು ತಮಾಷೆಯ ಉತ್ತರ, ಇಡೀ ಸಭಿಕರನ್ನು ಬಿದ್ದು ಬಿದ್ದು ನಗುವಂತೆ ಮಾಡಿದೆ! ಹಾಗಾದ್ರೆ, ಐಶ್ವರ್ಯಗೆ ಅವರ ಗಂಡ ಮನೆಯಲ್ಲಿ ಏನೆಂದು ಕರೆಯುತ್ತಾರೆ?

2 Min read
Author : Ashwini HR
Published : Oct 07 2026, 11:37 AM IST
Share this Photo Gallery
  • FB
  • TW
  • Linkdin
  • Whatsapp
16
ನಗೆಗಡಲಲ್ಲಿ ತೇಲಿಸಿದ ತಮಾಷೆಯ ಸಂಭಾಷಣೆ
Image Credit : Social Media

ನಗೆಗಡಲಲ್ಲಿ ತೇಲಿಸಿದ ತಮಾಷೆಯ ಸಂಭಾಷಣೆ

ಇತ್ತೀಚೆಗೆ ನಡೆದ 'ಚಿತ್ತಾರ ಮ್ಯೂಸಿಕ್ ಅವಾರ್ಡ್ಸ್ 2025' ಕಾರ್ಯಕ್ರಮದ ವೇದಿಕೆಯಲ್ಲಿ ಚಂದನವನದ ಪ್ರಸಿದ್ಧ ಗಾಯಕಿ ಐಶ್ವರ್ಯ ರಂಗರಾಜನ್ (Aishwarya Rangarajan) ಹಾಗೂ ಅವರ ಪತಿಯ ನಡುವೆ ನಡೆದ ತಮಾಷೆಯ ಸಂಭಾಷಣೆ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಹೆಸರು ಸ್ವಲ್ಪ ಮರೆತುಹೋಗುತ್ತೆ
Image Credit : Instagram

ಹೆಸರು ಸ್ವಲ್ಪ ಮರೆತುಹೋಗುತ್ತೆ

ಕಾರ್ಯಕ್ರಮದ ವೇಳೆ ನಿರೂಪಕಿ ಅನುಪಮಾ ಗೌಡ, "ಮನೆಯಲ್ಲಿ ಹೆಂಡತಿಯನ್ನು ಏನೆಂದು ಕರೆಯುತ್ತೀರಿ?" ಎಂದು ಪ್ರಶ್ನಿಸಿದಾಗ, ಐಶ್ವರ್ಯ ಅವರ ಪತಿ "ನಾನು ಇವಳೇ ಅಂತಾನೇ ಕರೆಯೋದು, ಯಾಕಂದ್ರೆ ಹೆಸರು ಸ್ವಲ್ಪ ಮರೆತುಹೋಗುತ್ತೆ" ಎಂದು ತಮಾಷೆ ಮಾಡಿದರು. ಪತಿಯ ಈ ಹೇಳಿಕೆ ಕೇಳಿ ಐಶ್ವರ್ಯ ರಂಗರಾಜನ್ ಸೇರಿದಂತೆ ಸಭೆಯಲ್ಲಿದ್ದ ಇಡೀ ಚಿತ್ರರಂಗದ ಗಣ್ಯರು ಜೋರಾಗಿ ನಕ್ಕರು.

Related Articles

Related image1
ಇವರೇ ನೋಡಿ 'ಪ್ಯಾನ್ ಇಂಡಿಯಾ ಆಂಕರ್'.. ರಾಜಮೌಳಿ ಕೂಡ ಪ್ರಶಂಸಿಸಿದ ಆ ಜನಪ್ರಿಯ ನಿರೂಪಕಿ ಯಾರು?
Related image2
ಕಾಶಿನಾಥ್ ಜೊತೆ ನಟಿಸಿ ಕನ್ನಡಿಗರನ್ನು ನಗಿಸಿದ್ದ ಖ್ಯಾತ ನಟಿ ಈಗ ಜೀ ಕನ್ನಡದ ಹೊಸ ಸೀರಿಯಲ್‌ಗೆ ಎಂಟ್ರಿ!
36
ಐಶ್ವರ್ಯ ಹೇಳಿದ್ದೇನು?
Image Credit : our own

ಐಶ್ವರ್ಯ ಹೇಳಿದ್ದೇನು?

ಇದಕ್ಕೆ ಮುದ್ದಾಗಿ ಸ್ಪಷ್ಟನೆ ನೀಡಿದ ಐಶ್ವರ್ಯ, "ನಾವು ಮೊದಲಿನಿಂದಲೂ ಬೆಸ್ಟ್ ಫ್ರೆಂಡ್ಸ್ ಆಗಿದ್ದೆವು. ಆ ಫ್ರೆಂಡ್‌ಶಿಪ್ ದಾಟಿ ಹಸ್ಬೆಂಡ್-ವೈಫ್ ರಿಲೇಶನ್‌ಶಿಪ್‌ಗೆ ಬಂದು 'ಗೃಹಸ್ಥ'ನಾಗಲು ಅವರಿಗೆ ಇನ್ನು ಸ್ವಲ್ಪ ಸಮಯ ಬೇಕಿದೆ" ಎಂದು ನಗುತ್ತಾ ಸಮರ್ಥಿಸಿಕೊಂಡರು.

46
ಮದುವೆಯ ನಂತರದ ಮೊದಲ ಪ್ರಶಸ್ತಿ
Image Credit : our own

ಮದುವೆಯ ನಂತರದ ಮೊದಲ ಪ್ರಶಸ್ತಿ

ಮದುವೆಯ ನಂತರದ ಮೊದಲ ಪ್ರಶಸ್ತಿ
ಸಂಸಾರಿಕ ಜೀವನದ ತಮಾಷೆಯ ಮಾತುಗಳ ನಡುವೆಯೇ ಐಶ್ವರ್ಯ ರಂಗರಾಜನ್ ತಮ್ಮ ಸಂತಸವನ್ನು ಹಂಚಿಕೊಂಡರು. "ಮದುವೆಯಾದ ತಕ್ಷಣವೇ ನನ್ನ ಇಡೀ ಕುಟುಂಬದವರು (ಅಮ್ಮ, ಅಣ್ಣ, ಅತ್ತಿಗೆ) ಮತ್ತು ನನ್ನ ಪತಿಯ ಎದುರಲ್ಲೇ ಪಡೆಯುತ್ತಿರುವ ಮೊದಲ ಪ್ರಶಸ್ತಿ ಇದಾಗಿದ್ದರಿಂದ ಇದು ನನಗೆ ಅತ್ಯಂತ ವಿಶೇಷವಾದದ್ದು" ಎಂದು ಪ್ರಶಸ್ತಿ ಸ್ವೀಕರಿಸಿ ಭಾವುಕರಾದರು.

ವೇದಿಕೆಯ ಮೇಲಿನ ಈ ಕ್ಯೂಟ್ ಹಾಗೂ ಫನ್ನಿ ವಿಡಿಯೋ ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ಅಭಿಮಾನಿಗಳು ದಂಪತಿಯ ಸಂಭಾಷಣೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

56
ರಿಯಾಲಿಟಿ ಶೋಗಳ ಮೂಲಕ ಬೆಳಕಿಗೆ ಬಂದ ಐಶ್ವರ್ಯ
Image Credit : our own

ರಿಯಾಲಿಟಿ ಶೋಗಳ ಮೂಲಕ ಬೆಳಕಿಗೆ ಬಂದ ಐಶ್ವರ್ಯ

ಐಶ್ವರ್ಯ ಅವರು ಚಿಕ್ಕ ವಯಸ್ಸಿನಿಂದಲೇ ಕರ್ನಾಟಕ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ ಮತ್ತು ವೀಣೆ ಅಭ್ಯಾಸ ಮಾಡಿದ್ದು, ವೆಸ್ಟರ್ನ್ ಹಾಗೂ ಭಕ್ತಿಗೀತೆಗಳಲ್ಲೂ ಪರಿಣಿತಿ ಹೊಂದಿದ್ದಾರೆ. ಜೀ ವಾಹಿನಿಯ ಸರಿಗಮಪ ಹಾಗೂ 'ವಾಯ್ಸ್ ಆಫ್ ಬೆಂಗಳೂರು' ಮುಂತಾದ ರಿಯಾಲಿಟಿ ಶೋಗಳ ಮೂಲಕ ಬೆಳಕಿಗೆ ಬಂದರು.

66
ಕನ್ನಡ ಚಿತ್ರರಂಗದ ಅತ್ಯಂತ ಬೇಡಿಕೆಯ ಗಾಯಕಿ
Image Credit : our own

ಕನ್ನಡ ಚಿತ್ರರಂಗದ ಅತ್ಯಂತ ಬೇಡಿಕೆಯ ಗಾಯಕಿ

ಕನ್ನಡ ಚಿತ್ರರಂಗ ಹಾಗೂ ಕಿರುತೆರೆಯಲ್ಲಿ ಅತ್ಯಂತ ಬೇಡಿಕೆಯ ಗಾಯಕಿಯಾಗಿ ಗುರುತಿಸಿಕೊಂಡಿದ್ದು, ಕಲ್ಪನಾ 2, ಹ್ಯಾಪಿ ನ್ಯೂ ಇಯರ್, ದುನಿಯಾ 2, ಕನ್ನಡ ಗೊತ್ತಿಲ್ಲ, ಆದಿಲಕ್ಷ್ಮಿ ಪುರಾಣ ಮುಂತಾದ ಹಿಟ್ ಸಿನಿಮಾಗಳ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಟಿ. ಎನ್. ಸೀತಾರಾಮ್ ಅವರ ಪ್ರಸಿದ್ಧ ಧಾರಾವಾಹಿ ಮಗಳು ಜಾನಕಿಯಲ್ಲೂ ಪ್ರಮುಖ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಜನಿಸಿ ಬೆಳೆದ ಇವರು ಎಂ.ಇ.ಎಸ್ ಪದವಿ ಕಾಲೇಜಿನಲ್ಲಿ ಶಿಕ್ಷಣ ಪೂರ್ಣಗೊಳಿಸಿದ್ದು, ಮಂಗಳೂರು ಮೂಲದ ಸಾಯಿ ಸ್ವರೂಪ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಮನರಂಜನಾ ಸುದ್ದಿ
ಟಿವಿ ಶೋ
 

Latest Videos
Recommended Stories
Recommended image1
ಕಾರ್ತಿಕ್ ಮಹೇಶ್ ಹುಟ್ಟುಹಬ್ಬಕ್ಕೆ ಸ್ಪೆಷಲ್ ವಿಡಿಯೋ ಬಿಟ್ಟ ನಮ್ರತಾ… ಗುಟ್ಟೆಲ್ಲಾ ರಟ್ಟಾಯ್ತು ಎಂದ ಫ್ಯಾನ್ಸ್
Recommended image2
ಬಿಗ್‌ಬಾಸ್ ಮೇಲೆಯೇ ತಾಂಡವ್, ಗಗನ್ ಗಂಭೀರ ಆರೋಪ! ಅವರಿಬ್ಬರಿಗಾಗಿ ಪಕ್ಷಪಾತ ನಡೀತಾ?
Recommended image3
ಬಿಗ್‌ಬಾಸ್ ಮನೆಯಲ್ಲಿ ಆತಂಕ: ಸಂಗೀತಾ ಭಟ್ ಆರೋಗ್ಯದಲ್ಲಿ ತೀವ್ರ ಏರುಪೇರು, ಆಸ್ಪತ್ರೆಗೆ ಶಿಫ್ಟ್!
Related Stories
Recommended image1
ಇವರೇ ನೋಡಿ 'ಪ್ಯಾನ್ ಇಂಡಿಯಾ ಆಂಕರ್'.. ರಾಜಮೌಳಿ ಕೂಡ ಪ್ರಶಂಸಿಸಿದ ಆ ಜನಪ್ರಿಯ ನಿರೂಪಕಿ ಯಾರು?
Recommended image2
ಕಾಶಿನಾಥ್ ಜೊತೆ ನಟಿಸಿ ಕನ್ನಡಿಗರನ್ನು ನಗಿಸಿದ್ದ ಖ್ಯಾತ ನಟಿ ಈಗ ಜೀ ಕನ್ನಡದ ಹೊಸ ಸೀರಿಯಲ್‌ಗೆ ಎಂಟ್ರಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved