ಕರ್ಣ ಸೀರಿಯಲ್ ಗೆ ಭರ್ಜರಿ ಟ್ವಿಸ್ಟ್, ಸತ್ಯ ಹುಡುಕಿ ಹೊರಟ ನವ ದಂಪತಿ
ನಿಧಿ – ಕರ್ಣನ ಮದುವೆಯಾದ್ಮೇಲೆ ರೋಮ್ಯಾಂಟಿಕ್ ಸೀನ್ಸ್ ನೋಡೋಕೆ ಸಿಗುತ್ತೆ ಅಂದ್ಕೊಂಡಿದ್ದ ವೀಕ್ಷಕರಿಗೆ ಭರ್ಜರಿ ಟ್ವಿಸ್ಟ್ ಸಿಕ್ಕಿದೆ. ರೋಮ್ಯಾನ್ಸ್ ಜೊತೆ ಹುಟ್ಟು ಸಾವಿನ ಗುಟ್ಟು ಹುಡುಕಲು ಹೊಸ ಜೋಡಿ ಹೊರಟಿದ್ದಾರೆ.

ಜಬರ್ದಸ್ತ್ ಟ್ವಿಸ್ಟ್
ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರುವ ಕರ್ಣ ಸೀರಿಯಲ್ ವೀಕ್ಷಕರ ಎದೆ ಬಡಿತ ಜೋರಾಗಿದೆ. ಕುರ್ಚಿ ತುದಿಯಲ್ಲಿ ಬಂದು ಕುಳಿತು ಸೀರಿಯಲ್ ವೀಕ್ಷಿಸುವಂತಾಗಿದೆ. ಇದಕ್ಕೆಲ್ಲ ಕಾರಣ ಕರ್ಣ ಸೀರಿಯಲ್ ನಲ್ಲಿ ಆಗ್ತಿರುವ ಬದಲಾವಣೆ. ಕರ್ಣ ಸೀರಿಯಲ್ ಭರ್ಜರಿ ಟ್ವಿಸ್ಟ್ ಜೊತೆ ಈ ತಿಂಗಳು ಪ್ರಸಾರ ಆಗಲಿದೆ.
ಹುಟ್ಟು ಸಾವಿನ ಗುಟ್ಟು
ಕರ್ಣ ಸೀರಿಯಲ್ ಬರೀ ನಿಧಿ- ನಿತ್ಯಾ ಹಾಗೂ ಕರ್ಣನ ಲವ್ ಸ್ಟೋರಿ ಮಾತ್ರವಲ್ಲ. ಇಲ್ಲಿ ಸಾಕಷ್ಟು ಗುಟ್ಟುಗಳು ಅಡಗಿವೆ. ನಿಧಿ ಹಾಗೂ ನಿತ್ಯಾಗೆ ಅಪ್ಪ – ಅಮ್ಮನಿಲ್ಲ. ಇಬ್ಬರೂ ಆಕ್ಸಿಡೆಂಟ್ ನಲ್ಲಿ ತೀರಿ ಹೋಗಿದ್ದಾರೆ. ಇತ್ತ ಕರ್ಣ ಅನಾಥ. ಅವನನ್ನು ದತ್ತು ಪಡೆಯಲಾಗಿದೆ. ಆದ್ರೆ ಇದು ಮೇಲ್ನೋಟದ ಸತ್ಯ. ಇದ್ರ ಹಿಂದೆ ದೊಡ್ಡ ಗುಟ್ಟಿದೆ.
ಪ್ರೋಮೋದಲ್ಲಿ ಕ್ಲ್ಯೂ
ಜೀ ಕನ್ನಡ ಕರ್ಣ ಸೀರಿಯಲ್ ಪ್ರೋಮೋ ಬಿಡುಗಡೆ ಮಾಡಿದೆ. ಜಬರ್ದಸ್ತ್ ಜೂನ್ ಹೆಸರಿನಲ್ಲಿ ಪ್ರೋಮೋ ಬಿಡುಗಡೆ ಮಾಡಲಾಗಿದೆ. ನಯನತಾರಾ ಮಡಿಲಲ್ಲಿ ದೊಡ್ಡ ಗುಟ್ಟು ಅಡಗಿದೆ. ನಿತ್ಯಾ – ನಿಧಿ ಮನೆಗೆ ಬಂದಾಗ್ಲೇ ರಮೇಶನ ತಂಗಿ ನಯನತಾರಾ ಭಯಗೊಂಡಿದ್ದಳು. ತನ್ನ ಸತ್ಯ ಹೊರಬಿದ್ರೆ ಅಂತ ಆತಂಕಗೊಂಡಿದ್ದಳು. ನಿಧಿ ಹಾಗೂ ನಿತ್ಯಾ ತಂದೆ ಸಾವಿನಲ್ಲೂ ಆಕೆ ಕೈವಾಡವಿದೆ ಎನ್ನುವ ಸುಳಿವನ್ನು ಈ ಹಿಂದೆ ತೋರಿಸಲಾಗಿತ್ತು. ಈಗ ಕರ್ಣನ ಅಮ್ಮ ಬದುಕಿರುವ ಬಗ್ಗೆ ಸುಳಿವು ಸಿಗ್ತಿದೆ.
ಪ್ರೋಮೋ ಮೆಚ್ಚಿಕೊಂಡ ವೀಕ್ಷಕರು
ಒಂದ್ಕಡೆ ನಿಧಿ, ಅಪ್ಪ- ಅಮ್ಮನ ಸಾವಿನ ಸತ್ಯ ಹುಡುಕಿ ಹೊರಟಿದ್ದಾಳೆ. ಇನ್ನೊಂದು ಕಡೆ ಕರ್ಣ, ಅಮ್ಮನ ಹುಡುಕಾಟದಲ್ಲಿದ್ದಾನೆ. ಇಬ್ಬರ ಮಧ್ಯೆ ನಯನತಾರಾ ಟೆನ್ಷನ್ ಜಾಸ್ತಿಯಾಗಿದೆ. ಕರ್ಣನ ಅಮ್ಮ ಬದುಕಿದ್ದಾಳಾ ಎನ್ನುವ ಪ್ರಶ್ನೆ ಆಕೆಯನ್ನು ಕಾಡ್ತಿದೆ. ಇದೆಲ್ಲವನ್ನೂ ಒಂದೇ ಪ್ರೋಮೋದಲ್ಲಿ ಚೊಕ್ಕದಾಗಿ ತೋರಿಸಲಾಗಿದ್ದು, ವೀಕ್ಷಕರಿಗೆ ಪ್ರೋಮೋ ಇಷ್ಟವಾಗಿದೆ.
ವೀಕ್ಷಕರ ಕಮೆಂಟ್
ಪ್ರೋಮೋ ನೋಡಿದ ವೀಕ್ಷಕರು ಖುಷಿಯಾಗಿದ್ದಾರೆ. ಕರ್ಣ ಸೀರಿಯಲ್ ಈಗ ಮತ್ತಷ್ಟು ಇಂಟರೆಸ್ಟಿಂಗ್ ಆಗಲಿದೆ. ಒಂದೊಂದೇ ಸತ್ಯ ಹೊರಗೆ ಬರಲಿದೆ. ನಿಧಿ ಹಾಗೂ ಕರ್ಣ ಸೇರಿ ಎಲ್ಲ ಸತ್ಯವನ್ನು ಹೊರಗೆ ತರಲಿದ್ದಾರೆ. ಎಪಿಸೋಡ್ ನೋಡಲು ನಾವು ಕಾತರರಾಗಿದ್ದೇವೆ ಅಂತ ವೀಕ್ಷಕರು ಕಮೆಂಟ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

