- Home
- Entertainment
- TV Talk
- ಮುಗಿದ ಅವನು ಮತ್ತು ಶ್ರಾವಣಿಯ ಸಂಸಾರ; 6 ವರ್ಷಗಳ ಹಿಂದೆ ರಾಕೇಶ್ ಜೊತೆ ಅದ್ದೂರಿಯಾಗಿ ನಡೆದಿತ್ತು ನಟಿ ಚೈತ್ರಾ ರೆಡ್ಡಿ ವಿವಾಹ!
ಮುಗಿದ ಅವನು ಮತ್ತು ಶ್ರಾವಣಿಯ ಸಂಸಾರ; 6 ವರ್ಷಗಳ ಹಿಂದೆ ರಾಕೇಶ್ ಜೊತೆ ಅದ್ದೂರಿಯಾಗಿ ನಡೆದಿತ್ತು ನಟಿ ಚೈತ್ರಾ ರೆಡ್ಡಿ ವಿವಾಹ!
'ಅವನು ಮತ್ತು ಶ್ರಾವಣಿ' ಸೀರಿಯಲ್ ಖ್ಯಾತಿಯ ನಟಿ ಚೈತ್ರಾ ರೆಡ್ಡಿ ಅವರು ತಮ್ಮ ಪತಿ, ನಿರ್ಮಾಪಕ ರಾಕೇಶ್ ಸಮುಲ ಅವರಿಂದ ವಿಚ್ಛೇದನ ಪಡೆಯುವ ಹಂತದಲ್ಲಿದ್ದಾರೆ. ಈ ವದಂತಿಗಳಿಗೆ ಪುಷ್ಟಿ ನೀಡುವಂತೆ, ಚೈತ್ರಾ ತಮ್ಮ ಇನ್ಸ್‌ಟಾಗ್ರಾಮ್ ಖಾತೆಯಿಂದ ಪತಿಯೊಂದಿಗಿನ ಎಲ್ಲಾ ಫೋಟೋಗಳನ್ನು ಅಳಿಸಿಹಾಕಿದ್ದಾರೆ.

ಕೆಲ ವರ್ಷಗಳ ಹಿಂದೆ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಿದ್ದ ಅವನು ಮತ್ತು ಶ್ರಾವಣಿ ಸೀರಿಯಲ್‌ನಲ್ಲಿ ಶ್ರಾವಣಿ ಪಾತ್ರದ ಮೂಲಕ ಫೇಮಸ್ ಆಗಿದ್ದ ಚೈತ್ರಾ ರೆಡ್ಡಿ ಅವರ ವಿವಾಹ ಈಗ ವಿಚ್ಛೇದನದ ಹಂತ ತಲುಪಿದೆ. ಆರು ವರ್ಷಗಳ ಹಿಂದೆ ಅದ್ದೂರಿಯಾಗಿ ಇವರ ವಿವಾಹ ನೆರವೇರಿತ್ತು.
ನಿರ್ಮಾಪಕ ಹಾಗೂ ಛಾಯಾಗ್ರಾಹಕ ರಾಕೇಶ್ ಸಮುಲ ಅವರನ್ನು ಪ್ರೀತಿಸಿ ವಿವಾಹವಾಗಿದ್ದ ಚೈತ್ರಾ ರೆಡ್ಡಿ ಈಗ ತಮ್ಮ ಇನ್ಸ್‌ಟಾಗ್ರಾಮ್ ಪೇಜ್‌ನಿಂದ ಅವರಿದ್ದ ಎಲ್ಲಾ ಫೋಟೋಗಳನ್ನ ತೆಗೆದುಹಾಕಿದ್ದು, ಶೀಘ್ರದಲ್ಲಿಯೇ ವಿಚ್ಛೇದನ ಕೂಡ ಪಡೆದುಕೊಳ್ಳಲಿದ್ದಾರೆ ಎನ್ನಲಾಗಿದೆ.
ಆಂಧ್ರ ಮೂಲದವರಾದರೂ ಬೆಂಗಳೂರನ್ನೇ ತಮ್ಮ ಮನೆಯನ್ನಾಗಿಸಿಕೊಂಡಿದ್ದ ಚೈತ್ರಾ ರೆಡ್ಡಿ ಪ್ರಸ್ತುತ ತಮಿಳು ಹಾಗೂ ತೆಲುಗಿ ಸೀರಿಯಲ್‌ನಲ್ಲಿಯೇ ಬ್ಯೂಸಿಯಾಗಿದ್ದಾರೆ. 2020ರ ನವೆಂಬರ್‌ನಲ್ಲಿ ರಾಕೇಶ್ ಅವರನ್ನು ವಿವಾಹವಾಗಿದ್ದರು. ಈ ಸಮಾರಂಭದಲ್ಲಿ ಬ್ಯಾಡ್ಮಿಂಟನ್ ದಿಗ್ಗಜ ಪುಲ್ಲೇಲ ಗೋಪಿಚಂದ್, ಕನ್ನಡದ ನಟ ವಿಜಯ್ ಸೂರ್ಯ ಸೇರಿದಂತೆ ಹಲವರು ಭಾಗಿಯಾಗಿದ್ದರು.
2014 ರಿಂದ 2016ರವರೆಗೆ ಅವನು ಮತ್ತು ಶ್ರಾವಣಿ ಸೀರಿಯಲ್ ಪ್ರಸಾರವಾಗಿತ್ತು. ಅದಾದ ಬಳಿಕ 2019ರಲ್ಲಿ ವಿನೋದ್ ಪ್ರಭಾಕರ್ ಅಭಿನಯದ ರಗಡ್ ಸಿನಿಮಾದಲ್ಲಿ ಹೀರೋಯಿನ್ ಆಗಿಯೂ ಚೈತ್ರಾ ರೆಡ್ಡಿ ನಟಿಸಿದ್ದರು. ಆದರೆ, ಸಿನಿಮಾ ಹಿಟ್ ಆಗದ ಕಾರಣ ಸಂಪೂರ್ಣವಾಗಿ ತೆಲುಗು ಹಾಗೂ ತಮಿಳು ಕಿರುತೆರೆಯತ್ತ ವಾಲಿದ್ದರು.
ತಮ್ಮ ಮದುವೆಯ ಹಿಂದಿನ ದಿನದಂದು, 'ಅಂತೂ ಮದುವೆ ದಿನಾಂಕ ನಿಶ್ಚಯವಾಗಿದೆ. 11 ನವೆಂಬರ್ 2020ರಂದು ಕುಟುಂಬದವರ ಉಪಸ್ಥಿತಿಯೊಂದಿಗೆ ಮದುವೆಯಾಗುತ್ತಿದ್ದೇವೆ. ಅಂತೂ ಪ್ರೀತಿ, ತಾಳ್ಮೆ ಗೆದ್ದಿದೆ' ಎಂದು ಚೈತ್ರಾ ರೆಡ್ಡಿ ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದರು. ಸ್ನೇಹಿತೆಯರ ಜೊತೆ ಬೀಚ್‌ನಲ್ಲಿ ಬ್ಯಾಚುಲರ್ ಪಾರ್ಟಿ ಕೂಡ ಮಾಡಿಕೊಂಡಿದ್ದರು.
ಅದಕ್ಕೂ ಮುನ್ನ ಚೈತ್ರಾ ರೆಡ್ಡಿ ಅವರ ಸಹೋದರಿಯ ಮದುವೆಯಲ್ಲಿ ರಾಕೇಶ್ ಸಮುಲ ಅವರ ಜೊತೆ ಕಾಣಿಸಿಕೊಳ್ಳುವ ಮೂಲಕ ತಮ್ಮ ಲವ್ ಬಹಿರಂಗಪಡಿಸಿದ್ದರು. ರಾಕೇಶ್‌ಗೆ ಜನ್ಮದಿನದ ಶುಭ ಕೋರಿದ್ದ ಚೈತ್ರಾ ರೆಡ್ಡಿ, 'ಹೇ @rakeshsamalafilms ನಿಮಗೆ ಹುಟ್ಟುಹಬ್ಬದ ಶುಭಾಶಯಗಳು ಮತ್ತು ಸಂತೋಷದ ಜೀವನ ಮುಂದೆ ಯಾವಾಗಲೂ ನನ್ನ ಪಕ್ಕದಲ್ಲಿ (ಪಿ.ಎಸ್: ಈ ಫೋಟೋ ನನ್ನ ತಂಗಿಯ ಮದುವೆಯಲ್ಲಿ ತೆಗೆದದ್ದು ನನ್ನದಲ್ಲ) ಆ ಕಪಲ್ ಗೋಲ್ ಮ್ಯಾಚ್ ಮಾಡಲು ನಾವು ನಮ್ಮ ಡ್ರೆಸ್ ಮ್ಯಾಚ್ ಮಾಡಿದ್ದೇವೆ' ಎಂದು ಬರೆದುಕೊಂಡಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

