MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ನನ್ನ ಹೆಂಡ್ತಿ ಜೊತೆ ಇರೋ ಫೋಟೋ ಹಾಕಲ್ಲ‌ ಅಂತಾರೆ, ದೃಷ್ಟಿ ಬೀಳುತ್ತೆ ಅಂತ ಹಾಕಲ್ಲ: ಗೀತಾ ಧಾರಾವಾಹಿ ನಟ ಧನುಷ್ ಗೌಡ

ನನ್ನ ಹೆಂಡ್ತಿ ಜೊತೆ ಇರೋ ಫೋಟೋ ಹಾಕಲ್ಲ‌ ಅಂತಾರೆ, ದೃಷ್ಟಿ ಬೀಳುತ್ತೆ ಅಂತ ಹಾಕಲ್ಲ: ಗೀತಾ ಧಾರಾವಾಹಿ ನಟ ಧನುಷ್ ಗೌಡ

ಹೆಂಡತಿ ಜೊತೆ ಫೋಟೋ ಪೋಸ್ಟ್ ಮಾಡದಿರುವ ಕಾರಣವನ್ನು ನಟ ಧನುಷ್ ಗೌಡ ಬಹಿರಂಗಪಡಿಸಿದ್ದಾರೆ. ಗೀತಾ ಸೀರಿಯಲ್ ನಟನ ವೈಯಕ್ತಿಕ ಜೀವನ, ಪತ್ನಿ, ಉದ್ಯಮ ಹಾಗೂ ಬಿಗ್ ಬಾಸ್ ಪಯಣದ ಸಂಪೂರ್ಣ ಮಾಹಿತಿ.

2 Min read
Author : Sushma Hegde
Published : Aug 05 2026, 12:09 PM IST
Share this Photo Gallery
  • FB
  • TW
  • Linkdin
  • Whatsapp
15
ಧನುಷ್ ಗೌಡ ಯಾರು?
Image Credit : Asianet News

ಧನುಷ್ ಗೌಡ ಯಾರು?

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ 'ಗೀತಾ' ಧಾರಾವಾಹಿಯಲ್ಲಿ ವಿಜಯ್ ಪಾತ್ರದ ಮೂಲಕ ಧನುಷ್ ಗೌಡ ಜನಪ್ರಿಯತೆ ಪಡೆದಿದ್ದರು. ಬಳಿಕ 'ನೂರು ಜನ್ಮಕೂ' ಧಾರಾವಾಹಿಯಲ್ಲೂ ನಾಯಕನಾಗಿ ಅಭಿನಯಿಸಿ ಗಮನ ಸೆಳೆದರು. ನಟನಾಗಿರುವುದರ ಜೊತೆಗೆ ಧನುಷ್ ಗೌಡ ಯಶಸ್ವಿ ಉದ್ಯಮಿಯೂ ಹೌದು. ಬೆಂಗಳೂರು-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಯ ಚಿಕ್ಕಬಳ್ಳಾಪುರ ಸಮೀಪ ಇರುವ 'ನಹುಶಾ' ರೆಸ್ಟೋರೆಂಟ್‌ಗೆ ಧನುಷ್ ಗೌಡ ಮತ್ತು ಅವರ ಕುಟುಂಬವೇ ಮಾಲೀಕರು. ಇದಲ್ಲದೆ, ಅವರ ಕುಟುಂಬ ಬ್ರಿಕ್ಸ್ ಫ್ಯಾಕ್ಟರಿಯನ್ನೂ ನಡೆಸುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ನಟ ಧನುಷ್ ಗೌಡ ಮಾತು
Image Credit : Asianet News

ನಟ ಧನುಷ್ ಗೌಡ ಮಾತು

ನಾನು ಒಳ್ಳೆ ಸಿನಿಮಾ ಮಾಡಬೇಕು, ಟ್ರಿಪ್ ಮಾಡಬೇಕು, ಫ್ಯಾಮಿಲಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಅಪ್ಪ-ಅಮ್ಮನನ್ನು ವಿದೇಶ ಪ್ರವಾಸಕ್ಕೆ ಕರೆದುಕೊಂಡು ಹೋಗಬೇಕು. ಆದರೆ ನಾನು ನನ್ನ ಹೆಂಡತಿಯ ಜೊತೆಗಿನ ಫೋಟೋ ಹಾಕಿದ್ರೂ ಮಾತಾಡ್ತಾರೆ, ಹಾಕದೇ ಇದ್ದರೂ ಮಾತಾಡ್ತಾರೆ. ಬ್ಯಾಡ್ ಕಾಮೆಂಟ್ ಮಾಡ್ತಾರೆ ಎಂದು ನಟ ಧನುಷ್ ಗೌಡ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಧನುಷ್ ಗೌಡ ಹೇಳುವಂತೆ, ನಾನು ಸೋಷಿಯಲ್ ಮೀಡಿಯಾದಲ್ಲಿ ಹೆಂಡತಿಯ ಜೊತೆಗಿನ ಫೋಟೋ ಹಾಕಿದ ಮರುದಿನವೇ ನಮ್ಮಿಬ್ಬರ ನಡುವೆ ಜಗಳ ಶುರುವಾಗುತ್ತೆ. ದೊಡ್ಡ ದೊಡ್ಡ ಜಗಳವಾಗುತ್ತೆ. ಎರಡು ವಾರಗಳ ನಂತರ ಮತ್ತೆ ಫೋಟೋ ಹಾಕಿದ್ರೂ ಅದೇ ರೀತಿ ಆಗುತ್ತೆ. ನನಗೆ ಇದು ದೃಷ್ಟಿ ಅಂತ ಅನಿಸುತ್ತದೆ. ಅದಕ್ಕೇ ಇನ್‌ಸ್ಟಾಗ್ರಾಂನಲ್ಲಿ ಹೆಂಡತಿಯ ಜೊತೆಗಿನ ಫೋಟೋಗಳನ್ನು ಪೋಸ್ಟ್ ಮಾಡುವುದಿಲ್ಲ. ವೈಯಕ್ತಿಕ ಜೀವನ ವೈಯಕ್ತಿಕವಾಗಿಯೇ ಇರಬೇಕು. ಅದು ಪಬ್ಲಿಕ್ ಪ್ರೊಫೈಲ್ ಅಲ್ಲ. ಪಬ್ಲಿಕ್ ಪ್ರೊಫೈಲ್‌ನಲ್ಲಿ ಇರಬೇಕಾದ ವಿಷಯಗಳನ್ನಷ್ಟೇ ಹಂಚಿಕೊಳ್ಳಬೇಕು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

35
ವಿದ್ಯಾರ್ಹತೆ ಏನು?
Image Credit : Asianet News

ವಿದ್ಯಾರ್ಹತೆ ಏನು?

ಧನುಷ್ ಗೌಡ ಡಿಪ್ಲೊಮಾ ಇನ್ ಎಲೆಕ್ಟ್ರಾನಿಕ್ಸ್ & ಕಮ್ಯೂನಿಕೇಷನ್ ಶಿಕ್ಷಣ ಪಡೆದಿದ್ದಾರೆ. ಮಗ ಎಂಜಿನಿಯರ್ ಆಗಬೇಕು ಎಂಬುದು ಅವರ ತಾಯಿಯ ಕನಸಾಗಿತ್ತು. ಆದರೆ ಡಿಪ್ಲೊಮಾ ಪೂರ್ಣಗೊಳಿಸಿದ ಬಳಿಕ ಅವರು ಮುಂದಿನ ಶಿಕ್ಷಣವನ್ನು ಮುಂದುವರಿಸಲಿಲ್ಲ. ಡಿಪ್ಲೊಮಾದ ವಿಷಯಗಳನ್ನು ಕ್ಲಿಯರ್ ಮಾಡುವಷ್ಟರಲ್ಲಿ ಸಾಕಷ್ಟು ಒತ್ತಡ ಅನುಭವಿಸಿದ್ದಾಗಿ ಅವರು ಹೇಳಿಕೊಂಡಿದ್ದಾರೆ.

ಪತ್ನಿ ಸಂಜನಾ ಜೊತೆ ವೈವಾಹಿಕ ಜೀವನ

ಕಳೆದ ವರ್ಷ ಧನುಷ್ ಗೌಡ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ತಮ್ಮ ಸಂಬಂಧಿಯಾದ ಸಂಜನಾ ಅವರನ್ನು ಏಪ್ರಿಲ್ 26ರಂದು ಅದ್ಧೂರಿಯಾಗಿ ವಿವಾಹವಾದರು. ಆದರೆ ಮದುವೆಯ ನಂತರವೂ ವೈಯಕ್ತಿಕ ಜೀವನವನ್ನು ಸಾರ್ವಜನಿಕವಾಗಿ ಹೆಚ್ಚು ಪ್ರದರ್ಶಿಸದಿರಲು ಅವರು ನಿರ್ಧರಿಸಿದ್ದಾರೆ.

45
ಬಿಗ್ ಬಾಸ್ ಕನ್ನಡ 12ರಲ್ಲಿ ಗಮನಸೆಳೆದ ಸ್ಪರ್ಧಿ
Image Credit : Asianet News

ಬಿಗ್ ಬಾಸ್ ಕನ್ನಡ 12ರಲ್ಲಿ ಗಮನಸೆಳೆದ ಸ್ಪರ್ಧಿ

ಧನುಷ್ ಗೌಡ 'ಬಿಗ್ ಬಾಸ್ ಕನ್ನಡ 12' ಕಾರ್ಯಕ್ರಮದಲ್ಲಿ ಭಾಗವಹಿಸಿ 6ನೇ ಸ್ಥಾನ ಪಡೆದರು. ಟಾಸ್ಕ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಅವರು, ಒಂದು ಸಂದರ್ಭದಲ್ಲಿ ತಮ್ಮ ಕುಟುಂಬದಿಂದ ಬಂದ ಪತ್ರವನ್ನೇ ತ್ಯಾಗ ಮಾಡಿ ಎಲ್ಲರ ಮೆಚ್ಚುಗೆ ಗಳಿಸಿದ್ದರು. ಅವರ ಈ ನಿರ್ಧಾರಕ್ಕೆ ಕಿಚ್ಚ ಸುದೀಪ್ ವಿಶೇಷವಾಗಿ ಚಪ್ಪಾಳೆ ತಟ್ಟಿ ಅಭಿನಂದಿಸಿದ್ದರು. ಬಿಗ್ ಬಾಸ್ ಮನೆಯಿಂದ ಹೊರಬರುವಾಗ ಆ ಚಪ್ಪಾಳೆಯ ಫೋಟೋವನ್ನು ಹಿಡಿದು ಹೊರನಡೆದ ಧನುಷ್ ಗೌಡ ಭಾವುಕರಾಗಿದ್ದರು. ಆ ವೇಳೆ ಅವರ ಪತ್ನಿ ಸಂಜನಾ ಕೂಡ ಕಣ್ಣೀರಿಟ್ಟಿದ್ದರು. ಸದ್ಯ ಧನುಷ್ ಗೌಡ ಅವರ ವೈಯಕ್ತಿಕ ಜೀವನದ ಬಗ್ಗೆ ನೀಡಿರುವ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

55
ಧನುಷ್ ಗೌಡ ಹಿನ್ನೆಲೆ
Image Credit : Asianet News

ಧನುಷ್ ಗೌಡ ಹಿನ್ನೆಲೆ

ಧನುಷ್ ಗೌಡ ಬೆಂಗಳೂರಿನವರೇ ಆಗಿದ್ದು, ಫೆಬ್ರವರಿ 22, 1996ರಂದು ಜನಿಸಿದ್ದಾರೆ. ಬಾಲ್ಯದಿಂದಲೇ ನಟನೆಯ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಅವರು, ಎಂಟನೇ ತರಗತಿಯಲ್ಲಿಯೇ ನಟನಾಗುವ ಕನಸು ಕಂಡಿದ್ದರು. ನಟನಾ ತರಬೇತಿಗಾಗಿ ನಾಗತಿಹಳ್ಳಿ ಚಂದ್ರಶೇಖರ್ ಅವರ ಟೆಂಟ್ ಸಿನಿಮಾದಲ್ಲಿ ಕೆಲಕಾಲ ತರಬೇತಿ ಪಡೆದಿದ್ದರು. ಡಿಪ್ಲೊಮಾ ಶಿಕ್ಷಣ ಮುಗಿದ ಬಳಿಕ ಸುಮಾರು ಮೂರು ವರ್ಷಗಳ ಕಾಲ ಆಡಿಷನ್‌ಗಳಲ್ಲಿ ಭಾಗವಹಿಸುತ್ತಾ ಅವಕಾಶಕ್ಕಾಗಿ ಪ್ರಯತ್ನಿಸಿದರು. ಕೊನೆಗೆ ಆಡಿಷನ್ ಮೂಲಕವೇ 'ಗೀತಾ' ಧಾರಾವಾಹಿಯ ವಿಜಯ್ ಪಾತ್ರಕ್ಕೆ ಆಯ್ಕೆಯಾಗಿ ಕಿರುತೆರೆಯಲ್ಲಿ ಜನಪ್ರಿಯತೆ ಗಳಿಸಿದರು. ನಟನೆಯ ಜೊತೆಗೆ ಧನುಷ್ ಗೌಡ ಯಶಸ್ವಿ ಉದ್ಯಮಿಯೂ ಹೌದು. ಬೆಂಗಳೂರು–ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಯ ಚಿಕ್ಕಬಳ್ಳಾಪುರ ಸಮೀಪ ಇರುವ 'ನಹುಶಾ' ರೆಸ್ಟೋರೆಂಟ್‌ಗೆ ಅವರ ಕುಟುಂಬವೇ ಮಾಲೀಕರು. ಇದಲ್ಲದೆ ಕುಟುಂಬದ ಬ್ರಿಕ್ಸ್ ಫ್ಯಾಕ್ಟರಿಯ ವ್ಯವಹಾರದಲ್ಲೂ ಅವರು ಸಕ್ರಿಯರಾಗಿದ್ದಾರೆ. ಫಿಟ್ನೆಸ್‌ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಧನುಷ್ ಪ್ರತಿದಿನ ವರ್ಕೌಟ್ ಮಾಡುವುದನ್ನು ತಪ್ಪಿಸಿಕೊಳ್ಳುವುದಿಲ್ಲ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SH
Sushma Hegde
ಸುವರ್ಣ ನ್ಯೂಸ್ ಸುದ್ದಿ ಮಾಧ್ಯಮದ ಡಿಜಿಟಲ್ ವಿಭಾಗದಲ್ಲಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ದೃಶ್ಯ ಮಾಧ್ಯಮ, ಡಿಜಿಟಲ್‌ ಮಾಧ್ಯಮದಲ್ಲಿ 5 ವರ್ಷ ಕೆಲಸ ಮಾಡಿದ ಅನುಭವವಿದೆ. SDM ಉಜಿರೆಯಲ್ಲಿ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ. ಸುದ್ದಿಲೋಕದಲ್ಲಿ ರಾಜಕೀಯ, ದೇಶ, ಜ್ಯೋತಿಷ್ಯ, ಜೀವನಶೈಲಿ, ವಾಣಿಜ್ಯ, ಕ್ರೈಂ ಸುದ್ದಿಗಳಲ್ಲಿ ಆಸಕ್ತಿ.
ಕನ್ನಡ ಧಾರಾವಾಹಿ
ಮನರಂಜನಾ ಸುದ್ದಿ
ಟಿವಿ ಶೋ
Latest Videos
Recommended Stories
Recommended image1
Amruthadhaare: ಪ್ರಾಣ ಒತ್ತೆ ಇಟ್ಟಾದ್ರೂ ಭೂಮಿನಾ ಕಾಪಾಡ್ತಾನೆ ಗೌತಮ್ ದಿವಾನ್… ‘Men in Love’ ಅಂದ್ರೆ ಹೀಗೆನೆ ಅಲ್ವಾ?
Recommended image2
ಕೈ ಮೇಲಿನ ಹಚ್ಚೆ ತೋರಿಸಿ ಅಕುಲ್ ಬಾಲಾಜಿ ಭಾವುಕ ; ಆಂಧ್ರ ಹುಡುಗ ಕನ್ನಡಿಗನಾಗಿದ್ದೇಗೆ?
Recommended image3
ಸೀರಿಯಲ್‌ನಲ್ಲಿ ಹೋಮ್ಲಿ ಲುಕ್, ಹೊರಗೆ ಗ್ಲಾಮರಸ್ ಅವತಾರ: ಜ್ಯೋತಿ ಪೂರ್ವಜ್ ಫೋಟೋಸ್ ವೈರಲ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved