- Home
- Entertainment
- TV Talk
- ಒಂದೇ ಒಂದು ದಿನಕ್ಕೆ ₹24 ಲಕ್ಷ ಬಾಡಿಗೆ! ₹1 ಕೋಟಿ ಖರ್ಚು ಮಾಡಿ ಮದುವೆಯಾದ Gicchi Giligili ಪ್ರಶಾಂತ್ ಕಲಾವಿದ?
ಒಂದೇ ಒಂದು ದಿನಕ್ಕೆ ₹24 ಲಕ್ಷ ಬಾಡಿಗೆ! ₹1 ಕೋಟಿ ಖರ್ಚು ಮಾಡಿ ಮದುವೆಯಾದ Gicchi Giligili ಪ್ರಶಾಂತ್ ಕಲಾವಿದ?
‘Gicchi Giligili’ Show ಖ್ಯಾತಿಯ ಪ್ರಶಾಂತ್ ಕಲಾವಿದ ಅವರು ಕೃತಿ ಗೌಡ ಜೊತೆ ಮದುವೆಯಾಗಿದ್ದರು. ಇವರಿಬ್ಬರು ಪ್ರೀತಿಸಿ ಮದುವೆಯಾಗಿದ್ದಾರೆ. ಈ ಅದ್ದೂರಿ ಮದುವೆ, ಆರತಕ್ಷತೆಗೆ ಚಿತ್ರರಂಗದ ಗಣ್ಯರು ಆಗಮಿಸಿದ್ದರು. ಹಾಗಿದ್ದರೆ ಮದುವೆ ಆರತಕ್ಷತೆಗೆ ಒಂದು ಕೋಟಿ ರೂಪಾಯಿ ಖರ್ಚು ಆಗಿದ್ಯಾ?

ಮದುವೆಗೆ ಒಂದು ಕೋಟಿ ರೂಪಾಯಿ ಖರ್ಚಾಗಿದ್ಯಾ?
ನಿರೂಪಕ ನಿರಂಜನ್ ದೇಶಪಾಂಡೆ ದಂಪತಿ, ಅನುಪಮಾ ಗೌಡ, ನಿವೇದಿತಾ ಗೌಡ ಕೂಡ ಆರತಕ್ಷತೆ, ಮದುವೆಗೆ ಹೋಗಿದ್ದರು. ನಿರಂಜನ್ ಅವರು ಪ್ರಶಾಂತ್‌ರ ಆರತಕ್ಷತೆ Vlog ಮಾಡಿದ್ದಾರೆ. ಈ ಮದುವೆ, ಆರತಕ್ಷತೆಗೆ ಒಂದು ಕೋಟಿ ರೂಪಾಯಿ ಖರ್ಚಾಗಿದೆಯಾ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಿ ಲೆಗೆಸಿಯ ಭವ್ಯ ವೈಭವ
ಹೊಸಕರಹಳ್ಳಿ ಹತ್ತಿರವಿರುವ ಅತ್ಯಂತ ಐಷಾರಾಮಿ ಕಲ್ಯಾಣ ಮಂಟಪ 'ವಿ ಲೆಗೆಸಿ' (V Legacy) ನಲ್ಲಿ ಈ ಮದುವೆ ನಡೆದಿದೆ. ಇದರ ಒಂದು ದಿನದ ಬಾಡಿಗೆನೇ ಬರೋಬ್ಬರಿ 24 ಲಕ್ಷ ರೂಪಾಯಿ ಅಂತೆ! ಇನ್ನು ಡೆಕೋರೇಷನ್, ಊಟ ಎಲ್ಲ ಸೇರಿ ಕೋಟಿಗೂ ಅಧಿಕ ವೆಚ್ಚದ ಭರ್ಜರಿ ಮದುವೆ ಇದು.
ಹಳೇ ಗೆಳೆಯರ ರಿಯೂನಿಯನ್
ಈ ಮದುವೆ ಸಂಭ್ರಮದ ದೊಡ್ಡ ಖುಷಿ ಅಂದ್ರೆ ಧಾರಾವಾಹಿ, ಸಿನಿಮಾ ಕಲಾವಿದರ ಸಂಗಮ. ಭವ್ಯಾ ಗೌಡ, ದೀಕ್ಷಾ, ಅಂಕಿತಾ ಅಮರ್, ತಾಂಡವ್, ವಾಣಿ, ಸೂರಜ್, ತುಕಾಲಿ ಸ್ಟಾರ್ ಸಂತು ಎಲ್ಲರೂ ಈ ಸಂಭ್ರಮದಲ್ಲಿ ಭಾಗಿ ಆಗಿದ್ದಾರೆ.
ಭರ್ಜರಿ ಊಟ ತಿಂಡಿ
ಈ ಮದುವೆಯಲ್ಲಿ ಕುಲಾಫ ಜಾಮೂನ್, ತಿರಾಮಿಸು, ಫಯರ್ ಪಿಜ್ಜಾ ಸೇರಿದಂತೆ ವೆರೈಟಿ ಐಟಂಗಳು ಇದ್ದವಂತೆ.
ಐದು ವರ್ಷದ ಲವ್
ಇವರಿಬ್ಬರು ಐದು ವರ್ಷ ಲವ್ ಮಾಡಿ ಮದುವೆಯಾಗಿದ್ದಾರೆ. "ಕೈ ಹಿಡಿದ ದಿನದಿಂದ… ಕೈ ಬಿಡದ ಜೀವನದವರೆಗೆ. 5 ವರ್ಷದ ಪ್ರೀತಿ, ಇಂದು ಶಾಶ್ವತ ಬಂಧವಾಗಿದೆ" ಎಂದು ಪ್ರಶಾಂತ್ ಕಲಾವಿದ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

